Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಸರಣಿ ಹೃದಯಾಘಾತ ಪ್ರಕರಣಗಳು ಸಂಭವಿಸಿದ್ದವು. ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಇಂದು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಸರ್ಕಾರಕ್ಕೆ ಸಲ್ಲಿಸಿದಂತ ವರದಿಯಲ್ಲಿ ಒಟ್ಟು 24 ಸಾವುಗಳಲ್ಲಿ 20 ಜನರು ಮಾತ್ರವೇ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ತಜ್ಞರ ವರದಿಯು ಖಚಿತ ಪಡಿಸಿದೆ. ಹಾಸನ ಹೃದಯಾಘಾತದ ಸರಣಿ ಸಾವಿನ ಸಂಬಂಧ ಸರ್ಕಾರ ರಚಿಸಿದ್ದಂತ ತಜ್ಞರ ಸಮಿತಿಯು, ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತಮ್ಮ ವರದಿಯನ್ನು ಸಲ್ಲಿಸಿದೆ. ತಜ್ಞರು ಸಲ್ಲಿಸಿದಂತ ವರದಿಯನ್ನು ಅವರು ಸ್ವೀಕರಿಸಿದರು. ಹಾಸನ ಜಿಲ್ಲೆಯಲ್ಲಿ ಮೇ-ಜೂನ್ ನಲ್ಲಿ ಒಟ್ಟು 24 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹೀಗೆ ಸಾವನ್ನಪ್ಪಿದ 24 ಮಂದಿಯ ಪೈಕಿ 20 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಹೃದಯಾಘಾತವೇ ಆಗಿಲ್ಲ. ನಾಲ್ವರಲ್ಲಿ ಒಬ್ಬನಿಗೆ ಕಿಡ್ನಿ ಸಮಸ್ಯೆ, ಮತ್ತೊಬ್ಬನಿಗೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದರೇ, ಇನ್ನೊಬ್ಬ ಸೀವಿಯರ್ ಗ್ಯಾಸ್ಟ್ರೋ ಸಮಸ್ಯೆಯ ಕಾರಣ ಬಿಪಿ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. 20…
ಬೆಂಗಳೂರು: ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದ ನಡುವೆ ರೈಲು ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ, ರೈಲ್ವೆ ಮಂಡಳಿ ತಿರುಪತಿ ಮತ್ತು ಚಿಕ್ಕಮಗಳೂರು ನಡುವಿನ ಹೊಸ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇವೆ ಪ್ರಾರಂಭಕ್ಕೆ ಅನುಮೋದನೆ ನೀಡಿದೆ. ಉದ್ಘಾಟನಾ ವಿಶೇಷ ರೈಲು: ಈ ಸೇವೆಯ ಪ್ರಾರಂಭವನ್ನು ಸೂಚಿಸುವಂತೆ, ದಕ್ಷಿಣ ಮಧ್ಯ ರೈಲ್ವೆ ಒಂದು ಬಾರಿ ನಡೆಯುವ ಉದ್ಘಾಟನಾ ವಿಶೇಷ ಎಕ್ಸ್ಪ್ರೆಸ್ ರೈಲನ್ನು ನಡೆಸಲಿದೆ. ರೈಲು ಸಂಖ್ಯೆ 07424 ಚಿಕ್ಕಮಗಳೂರು – ತಿರುಪತಿ ಉದ್ಘಾಟನಾ ವಿಶೇಷ ಎಕ್ಸ್ಪ್ರೆಸ್ ಜುಲೈ 11, 2025 (ಶುಕ್ರವಾರ) ರಂದು ಚಲಿಸಲಿದ್ದು, ಮಧ್ಯಾಹ್ನ 12:00 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 02:30 ಕ್ಕೆ ತಿರುಪತಿಗೆ ತಲುಪಲಿದೆ. ಈ ರೈಲಿಗೆ ಒಟ್ಟು 18 ಎಲ್ ಹೆಚ್ ಬಿ ಕೋಚ್ಗಳು ಇರುತ್ತವೆ. ನಿಯಮಿತ ರೈಲು ಸೇವೆಗಳು: 1. ರೈಲು ಸಂಖ್ಯೆ 17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ 2025 ಜುಲೈ 17 (ಗುರುವಾರ)ರಿಂದ ನಿಯಮಿತ ಸೇವೆ ಪ್ರಾರಂಭವಾಗಲಿದೆ. 2. ರೈಲು ಸಂಖ್ಯೆ 17424…
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ, ಮೈಸೂರು ರಸ್ತೆ ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿದೆ. ಈ ಸಂಬಂಧ ನಡವಳಿಯನ್ನು ಹೊರಡಿಸಿರುವಂತ ರಾಜ್ಯ ಸರ್ಕಾರವು, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಕಡತದಲ್ಲಿನ ಪ್ರಸ್ತಾವನೆಯಲ್ಲಿ ಬೆಂಗಳೂರು ನಗರ ಜಿಲ್ಲೆ, ಮೈಸೂರು ರಸ್ತೆ ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಹುಂಡಿ ಸರ್ಕಾವಣೆ ಸಂದರ್ಭದಲ್ಲಿ ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿರುವ ದೇವಾಲಯದ ಸಿಬ್ಬಂದಿಗಳಿಂದಲೇ ಕಳ್ಳತನವಾಗಿರುವ ದೃಶ್ಯದ ತುಣುಕಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು, ಸದರಿ ದೇವಾಲಯದಲ್ಲಿ ಆಡಳಿತ ನಿರ್ವಹಣೆಯನ್ನು ಅವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ಸದರಿ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 42 ಮತ್ತು 43ರ ಅನ್ವಯ ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಸ್ಪಷ್ಟ ಅಭಿಪ್ರಾಯದ ವರದಿಯನ್ನು ಸಲ್ಲಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ದಿನಾಂಕ:01.10.2024ರಂದು ಜಿಲ್ಲಾಧಿಕಾರಿಯವರನ್ನು ಕೋರಲಾಗಿರುತ್ತದೆ ಎಂದಿದೆ. ಅದರಂತೆ, ಅಪರ…
ಬೆಂಗಳೂರು: ನಾಡಿನ ಮಹಿಳೆಯರ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ, ನಿಮ್ಮ ಸುರಕ್ಷೆ ಮತ್ತು ಘನತೆ ನಮ್ಮ ಸರ್ಕಾರದ ಆಧ್ಯತೆಯಾಗಿದೆ. ನಿಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆಗೆ ನಾವು ಬದ್ಧರಿದ್ದೇವೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಗುಪ್ತವಾಗಿ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರಿಗೆ ಕಿರುಕುಳ ನೀಡುವುದು, ವೀಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿ ಅವರ ಮಾನಹಾನಿ ಮಾಡುವುದು ಮಹಿಳೆಯರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ನಮ್ಮ ಕರ್ನಾಟಕದ ಪರಂಪರೆಯಲ್ಲ ಎಂಬುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ತಕ್ಷಣವೇ ಕೃತ್ಯ ಎಸಗಿದವರನ್ನು ಬಂಧಿಸುವುದು ಸೇರಿದಂತೆ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇದರ ಜೊತೆಗೆ ನಾವು ಇಂತಹ ಕೃತ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಮಹಿಳೆಯರು ಕೀಳುದೃಷ್ಟಿಯ ಅಥವಾ ಯಾವುದೇ ತರನಾದ ಕಿರುಕುಳಗಳ ಭಯವಿಲ್ಲದೆ ಧೈರ್ಯವಾಗಿ ನಡೆಯಲಾರದ ಸ್ಥಿತಿಗೆ…
ಬೆಂಗಳೂರು: ನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ವೇಳೆಯಲ್ಲಿ ಉಂಟಾದ ಅಪಘಾತದಲ್ಲಿ ಲಾರಿ ಹರಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಆದರೇ ಕೂದಲೆಳೆಯ ಅಂತರದಲ್ಲಿ ಒಂದು ವರ್ಷದ ಮಗು, ಸವಾರ ಪಾರಾಗಿದ್ದಾರೆ. ಬೆಂಗಳೂರಿನ ಪೀಣ್ಯ 8ನೇ ಮೈಲಿ ಬಳಿಯಲ್ಲಿ ಈ ದುರ್ಘಟನೆ ನಡೆದಿದೆ. ಬೈಕ್ ಹಿಂಬದಿ ಕುಳಿತಿದ್ದ ಲಕ್ಷ್ಮೀ(30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೀಣ್ಯ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. https://kannadanewsnow.com/kannada/order-to-extend-the-contract-period-for-nhm-employees-kshcoea-organization-appeals-to-the-state-government/ https://kannadanewsnow.com/kannada/important-order-from-the-education-department-to-increase-the-marks-of-sslc-students/
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ, ಮೈಸೂರು ರಸ್ತೆ ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯ ಘೋಷಿತ ಸಂಸ್ಥೆಯನ್ನಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಈ ಸಂಬಂಧ ನಡವಳಿಯನ್ನು ಹೊರಡಿಸಿರುವಂತ ರಾಜ್ಯ ಸರ್ಕಾರವು, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಕಡತದಲ್ಲಿನ ಪ್ರಸ್ತಾವನೆಯಲ್ಲಿ ಬೆಂಗಳೂರು ನಗರ ಜಿಲ್ಲೆ, ಮೈಸೂರು ರಸ್ತೆ ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಹುಂಡಿ ಸರ್ಕಾವಣೆ ಸಂದರ್ಭದಲ್ಲಿ ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿರುವ ದೇವಾಲಯದ ಸಿಬ್ಬಂದಿಗಳಿಂದಲೇ ಕಳ್ಳತನವಾಗಿರುವ ದೃಶ್ಯದ ತುಣುಕಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು, ಸದರಿ ದೇವಾಲಯದಲ್ಲಿ ಆಡಳಿತ ನಿರ್ವಹಣೆಯನ್ನು ಅವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ಸದರಿ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 42 ಮತ್ತು 43ರ ಅನ್ವಯ ಸರ್ಕಾರದ ವಶಕ್ಕೆ ಪಡೆಯುವ ಸಂಬಂಧ ಸ್ಪಷ್ಟ ಅಭಿಪ್ರಾಯದ ವರದಿಯನ್ನು ಸಲ್ಲಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ದಿನಾಂಕ:01.10.2024ರಂದು ಜಿಲ್ಲಾಧಿಕಾರಿಯವರನ್ನು ಕೋರಲಾಗಿರುತ್ತದೆ ಎಂದಿದೆ. ಅದರಂತೆ, ಅಪರ ಜಿಲ್ಲಾಧಿಕಾರಿಗಳು ಮತ್ತು…
ಉತ್ತರ ಕನ್ನಡ: ಜಿಲ್ಲೆಯ ಜಿಲ್ಲಾಸ್ಪತ್ರೆಯ ಸರ್ಜನ್ ಒಬ್ಬರು ಗುತ್ತಿಗೆದಾರರೊಬ್ಬರಿಂದ 30,000 ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉತ್ತರ ಕನ್ನಡದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತಲಕರ ಅವರೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವೈದ್ಯರಾಗಿದ್ದಾರೆ. ಗುತ್ತಿಗೆದಾರ ಮೌಸೀರ್ ಅಹ್ಮದ್ ಶೇಖ್ ಎಂಬುವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ 8 ತಿಂಗಳ ಹಿಂದೆ 3.5 ಲಕ್ಷ ಹಾಸಿಗೆ ಟೆಂಡರ್ ಪಡೆದಿದ್ದರು. ರೋಗಿಗಳ ಹಾಸಿಗೆ ಟೆಂಡರ್ 75,000 ರೂ ಕಮೀಷನ್ ಗಾಗಿ ಒತ್ತಡ ಹಾಕಿದ್ದರು. 3.5 ಲಕ್ಷ ಹಣ ಬಿಡುಗಡೆ ಮಾಡಲು 75,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿನ್ನೆ 75,000 ಲಂಚದ ಹಣದಲ್ಲಿ ಗುತ್ತಿಗೆದಾರ ಮೌಸೀನ್ ಉತ್ತರ ಕನ್ನಡ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಾನಂದಗೆ 20,000 ನೀಡಿದ್ದರು. ಇಂದು ಜಿಲ್ಲಾಸ್ಪತ್ರೆಯ ತಮ್ಮ ಚೇಂಬರ್ ನಲ್ಲಿಯೇ 30,000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ…
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ “ವಿಶೇಷ ತೀವ್ರ ಪರಿಷ್ಕರಣೆ (SIR)”ಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಗುರುವಾರ (ಜುಲೈ 10) ಸುಪ್ರೀಂ ಕೋರ್ಟ್ಗೆ ಭಾರತದ ಚುನಾವಣಾ ಆಯೋಗವು ( Election Commission of India ) ಆಧಾರ್ ಕಾರ್ಡ್ ( Aadhaar card ) ಪೌರತ್ವದ ಪುರಾವೆಯಲ್ಲ ಎಂದು ತಿಳಿಸಿದೆ. 2003 ರ ಮತದಾರರ ಪಟ್ಟಿಯಲ್ಲಿ ಇಲ್ಲದ ಮತದಾರರ ಎಣಿಕೆಗಾಗಿ ಪೌರತ್ವ ದಾಖಲೆಗಳಾಗಿ ECI ನಿರ್ದಿಷ್ಟಪಡಿಸಿದ ಹನ್ನೊಂದು ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಮತ್ತು ಮತದಾರರ ಕಾರ್ಡ್ ಅನ್ನು ECI ಹೊರಗಿಟ್ಟಿರುವುದನ್ನು ಅರ್ಜಿದಾರರು ಪ್ರಶ್ನಿಸಿದರು. ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಆಧಾರ್ ಕಾರ್ಡ್ ಸ್ವೀಕಾರಾರ್ಹ ದಾಖಲೆಯಾಗಿದ್ದರೂ, ಬಿಹಾರ SIR ಗೆ ECI ಅದನ್ನು ಸ್ವೀಕರಿಸುವುದಿಲ್ಲ ಎಂದು ಗಮನಸೆಳೆದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಆಧಾರ್ ಏಕೆ ಸ್ವೀಕಾರಾರ್ಹವಲ್ಲ ಎಂದು ECI ಅನ್ನು ಕೇಳಿತು. ಇದಕ್ಕೆ…
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯ ಹಿತದೃಷ್ಟಿಯಿಂದ ನಿನ್ನೆ ನಡೆದ ಸಭೆಯಲ್ಲಿ ಟೀಕೆಗಳ ಹೊರತಾಗಿ, ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಸಲಹೆಗಳನ್ನು ಗಮನಿಸಿ, ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಆ ಪ್ರಕಾರ ಏನು ಮಾಡಬಹುದು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ತದನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಮಳೆಗಾಲ ಮುಗಿದ ನಂತರ ಎಲ್ಲ ಧಾರ್ಮಿಕ ಮುಖಂಡರನ್ನೊಳಗೊಂಡತೆ ದೊಡ್ಡಮಟ್ಡದ ಸಭೆ ಮಾಡಲು ಸಲಹೆ ಕೊಟ್ಟಿದ್ದಾರೆ. ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡುವುದು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ಕೊಡಲಾಗಿದೆ. ಇದನ್ನು ಮುಂದುವವರಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅನೇಕ ಕ್ರಮಗಳನ್ನು ತೆಗೆದುಕೊಂಡು, ಆ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ. ಈಗಾಗಲೇ ಒಂದಿಷ್ಟು ಬದಲಾವಣೆಗಳನ್ನು ನೋಡಬಹುದು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸೂಕ್ಷ್ಮತೆ ಜಿಲ್ಲೆ ಎನ್ನುವುದು ಬೇಡ. ಕೆಲವು ಘಟನೆಗಳು, ಅಪರಾಧಗಳಿಂದ ಹೀಗೆಲ್ಲ ಆಗುತ್ತಿದೆ ಎಂಬುದನ್ನು…
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India – UIDAI) ಆಧಾರ್ ನೋಂದಣಿ ( Aadhaar registration ) ಮತ್ತು 2025–26ರ ಮೌಲ್ಯಮಾಪನ ವರ್ಷಕ್ಕೆ ಅನ್ವಯವಾಗುವ ಮಾರ್ಪಾಡುಗಳಿಗಾಗಿ ಪರಿಷ್ಕೃತ ಮಾನ್ಯ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಧಾರ್ ಸುತ್ತಲಿನ ಪ್ರಮುಖ ನಿಯಮಗಳಲ್ಲಿ ಒಂದೆಂದರೆ, ಪ್ರತಿಯೊಬ್ಬ ವ್ಯಕ್ತಿಯು ಒಂದೇ ಆಧಾರ್ ಸಂಖ್ಯೆಯನ್ನು ಮಾತ್ರ ಹೊಂದಲು ಅನುಮತಿಸಲಾಗಿದೆ. ಒಬ್ಬ ವ್ಯಕ್ತಿಯು ಬಹು ಆಧಾರ್ ಐಡಿಗಳನ್ನು ಪಡೆದಿರುವ ಸಂದರ್ಭಗಳಲ್ಲಿ – ಬಹುಶಃ ವ್ಯವಸ್ಥೆಯ ದೋಷಗಳು ಅಥವಾ ಪುನರಾವರ್ತಿತ ಅರ್ಜಿಗಳಿಂದಾಗಿ – ಬಯೋಮೆಟ್ರಿಕ್ ವಿವರಗಳೊಂದಿಗೆ ರಚಿಸಲಾದ ಮೊದಲ ಆಧಾರ್ ಮಾತ್ರ ಸಕ್ರಿಯ ಮತ್ತು ಮಾನ್ಯವಾಗಿರುತ್ತದೆ. ಹೆಚ್ಚುವರಿಯಾಗಿ, ಆಧಾರ್ ಸೇವೆಗಳಿಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯನ್ನು ಆಧಾರ್ (ದಾಖಲಾತಿ ಮತ್ತು ನವೀಕರಣ) ಮೊದಲ ತಿದ್ದುಪಡಿ ನಿಯಮಗಳು, 2025 ರ ಪ್ರಕಾರ ಪರಿಷ್ಕರಿಸಲಾಗಿದೆ. ನವೀಕರಿಸಿದ ಮಾರ್ಗಸೂಚಿಗಳು ಈಗ ಗುರುತು, ವಿಳಾಸ, ಜನ್ಮ ದಿನಾಂಕ ಮತ್ತು ಕುಟುಂಬ ಸಂಬಂಧಗಳನ್ನು ಪರಿಶೀಲಿಸಲು ಬಳಸಬಹುದಾದ ದಾಖಲೆಗಳ ಪ್ರಕಾರಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುತ್ತವೆ. ಪರಿಶೀಲನೆಗೆ…