Author: kannadanewsnow09

ಹುಬ್ಬಳ್ಳಿ: “ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ನಂತರ ಸುರ್ಜೆವಾಲ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜತೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಸರ್ಕಾರದ ಹಣದಲ್ಲಿ ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಜನವರಿ 30ರಂದು ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧಿಜಿ ಅವರ ವಿಚಾರಧಾರೆಯ ಹತ್ಯೆಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ. ಬಿಜೆಪಿಯವರು ಬೇಧ ಭಾವ ಮಾಡುತ್ತಾರೆ. ನಾವು ಎಲ್ಲರನ್ನು ಸಮನಾಗಿ ಕಾಣುತ್ತೇವೆ. ಬಿಜೆಪಿ ದಲಿತ, ಶೋಷಿತ, ಆದಿವಾಸಿ, ಬಡವರು, ಮಹಿಳೆಯರು, ಯುವಕರ…

Read More

ಬೆಂಗಳೂರು: ನೀವು ಮನೆಯಲ್ಲಿ ಬಳಸಿದ ನಂತ್ರ ಪ್ಲಾಸ್ಟಿಕ್ ವಸ್ತುಗಳನ್ನು ಸುಡಬೇಡಿ. ಹೀಗೆ ಸುಡುವಾಗ ಅದರಿಂದ ಹೊರ ಬರುವಂತ ಹೊಗೆಯನ್ನು ಸೇರಿಸುವುದರಿಂದ ಕ್ಯಾನ್ಸರ್ ತಂದೊಡ್ಡಬಹುದಂತೆ. ಹೀಗಾಗಿ ಸುಡದಂತೆ ಸರ್ಕಾರ ಮನವಿ ಮಾಡಿದೆ. ಹೌದು ಸುಟ್ಟ ಪ್ಲಾಸ್ಟಿಕ್ ತ್ಯಾಜ್ಯದಿದಂ ಹೊರಬರುವ ವಿಷಕಾರಿ ಅನಿಲವು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯನ್ನು ತಂದೊಡ್ಡಬಹುದಾಗಿದೆ. ಈ ಹಿನ್ನಲೆಯಲ್ಲಿ ಎಚ್ಚರದಿಂದಿರಿ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡದಿರಿ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತಗ್ಗಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. https://twitter.com/KarnatakaVarthe/status/1880485379608084718 https://kannadanewsnow.com/kannada/passengers-watch-out-our-metro-traffic-will-be-disrupted-tomorrow/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/

Read More

ಬೆಂಗಳೂರು: ನಗರದ ನೇರಳೆ ಮಾರ್ಗದಲ್ಲಿ ಹಳಿಗಳ ನಿರ್ವಹಣೆಯ ಕಾರಣದಿಂದಾಗಿ ನಾಳೆ ಸಂಚಾರ ಸ್ಥಗಿತಗೊಳ್ಳುತ್ತಿದೆ. ಈ ಮೂಲಕ ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ನಮ್ಮ ಮೆಟ್ರೋ ನೇರಳ ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಂಪೇಗೌಡ ಮೆಜೆಸ್ಟಿಕ್‌ನಿಂದ ಇಂದಿರಾನಗರದವರೆಗೆ ಜನವರಿ 19 ರಂದು ಬೆಳಗ್ಗೆ 7 ರಿಂದ ಬೆಳಗ್ಗೆ 10ರ ವರೆಗೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ – ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ ಹಾಗೂ ವೈಟ್‌ಫೀಲ್ಡ್‌ – ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 7 ರಿಂದಲೇ ಮೆಟ್ರೋ ಸಂಚಾರ ಇರಲಿದೆ. https://twitter.com/KarnatakaVarthe/status/1880522362875179208 https://kannadanewsnow.com/kannada/e-khata-mandatory-for-registration-of-immovable-properties-just-register-at-home/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/

Read More

ಬೆಂಗಳೂರು: ನಗರದಲ್ಲಿ ಸ್ಥಿರಾಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಈಗ ಕಚೇರಿಗೆ ಹೋಗಿಯೇ ಇ-ಖಾತಾಗೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಜಸ್ಟ್ ಮನೆಯಿಂದಲೇ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಆ ಬಗ್ಗೆ ಮುಂದೆ ಓದಿ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಮಾಹಿತಿ ನೀಡಲಾಗಿದ್ದು, ಕಚೇರಿಗೆ ಅಲೆಯಬೇಕಾಗಿಲ್ಲ. ಅಧಿಕಾರಿಗಳನ್ನು ಭೇಟಿ ಮಾಡಬೇಕಿಲ್ಲ. ಮನೆಯಿಂದಲೇ ಸ್ಥಿರಾಸ್ತಿಗಳ ನೋಂದಣಿಗೆ ಇ-ಖಾತಾಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಅಗತ್ಯ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಿ, ಇ-ಖಾತಾ ಪಡೆದುಕೊಳ್ಳಬಹುದು. ಸಾರ್ವಜನಿಕರು ತಮ್ಮ ಇ-ಖಾತಾವನ್ನು ತಾವೇ ಮುದ್ರಿಸಿಕೊಳ್ಳುವ ಅವಕಾಶ ಕೂಡ ಇದೆ ಅಂತ ಹೇಳಿದೆ. ಬಿಬಿಎಂಪಿಯ ಅಂತಿಮ ಇ-ಖಾತಾ ಪಡೆಯಲು ಬಹು ವಿಧಾನಗಳು: 1. ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳನ್ನು ತಕ್ಷಣವೇ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅಗತ್ಯವಿಲ್ಲದ ನಾಗರಿಕರು ಅಂತಿಮ ಇಖಾತಾ ಪಡೆಯಲು ಆತುರ ಅಗತ್ಯವಿಲ್ಲ. ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿ ಮತ್ತು ನಂತರ ನಿಮ್ಮ ಅನುಕೂಲಕರ ಸಮಯದಲ್ಲಿ ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಆನ್ಲೈನ್ನಲ್ಲಿ ಸಲ್ಲಿಸಿ. ತುರ್ತಾಗಿ…

Read More

ಬೆಂಗಳೂರು: ನಗರದಲ್ಲಿ ತಾನು ಕಳೆದ ಬಾಲ್ಯದ ದಿನಗಳನ್ನು, ಶಾಲಾ ಕಾಲೇಜಿನ ಜೀವನನ್ನು ನಟ ರಜನಿಕಾಂತ್ ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್ ಕಾಲೇಜಿನಲ್ಲಿ ಓದಿದಂತ ಶಾಲಾ ದಿನಗಳನ್ನು ನೆನಪಿಸಿಕೊಂಡು ವೀಡಿಯೋ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಬ್ಯಾಂಕಾಂಕ್ ನಿಂದ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ಎಪಿಎಸ್ ಅಲ್ಯೂಮಿನಿಯ ವೇಳೆಯಲ್ಲಿ ನಾನು ಇರಬೇಕಿತ್ತು. ಆದರೇ ಇಲ್ಲಿ ಶೂಟಿಂಗ್ ಗೆ ಬಂದಿರುವ ಕಾರಣ, ಭಾಗಿಯಾಗೋದಕ್ಕೆ ಸಾಧ್ಯವಾಗಿಲ್ಲ ಅಂತ ವೀಡಿಯೋದಲ್ಲಿ ತಿಳಿಸಿದ್ದಾರೆ. ಎಲ್ಲರಿಗೂ ನಮಸ್ಕಾರ. ಎಪಿಎಸ್ ಹೈಸ್ಕೋಲ್ ನಲ್ಲಿ ಓದಿದೆ ಎನ್ನುವುದೇ ನನಗೆ ಹೆಮ್ಮೆ. ಗಂಗಾಧರೇಶ್ವರ ದೇವಸ್ಥಾನದ ಬಳಿಯಲ್ಲಿ ಪ್ರಾಥಮಿಕ ಶಾಲೆಯನ್ನು ಓದಿದ್ದು. ನಾನೇ ಕ್ಲಾಸಿಗೆ ಫಸ್ಟ್. ಮಾನಿಟರ್ ಕೂಡ ಆಗಿದ್ದೆ. ಪ್ರಾಥಮಿಕ ಶಾಲೆಯಲ್ಲೇ ಶೇ.98 ತೆಗೆದಿದ್ದೆ. ನಮ್ಮ ಅಣ್ಣ ನನ್ನು ಪ್ರೌಢ ಶಾಲೆಗೆ ಇಂಗ್ಲೀಷ್ ಮೀಡಿಯಂಗೆ ಹಾಕಿದರು. ನನಗೆ ಆಗ ಕಷ್ಟ ಆಗಿತ್ತು. 8, 9 ಹೇಗೋ ಪಾಸ್ಟ್ ಮಾಡಿದೆ. ಆದರೇ ಎಸ್ ಎಸ್ ಎಲ್ ಸಿಯಲ್ಲಿ ಫೇಲ್ ಆದೆ ಎಂದರು. ಕೆಮಿಸ್ಟ್ರಿ ಮಿಸ್ ಒಬ್ಬರು ನನಗೆ…

Read More

ವಿಜಯಪುರ: ಜಿಲ್ಲೆಯಲ್ಲಿ ಬುಲೆರೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಡಿಕ್ಕಿಯ ರಭಸಕ್ಕೆ ಬೈಕ್ ಸವಾರರ ರುಂಡ ದೇಹದಿಂದಲೇ ಬೇರ್ಪಟ್ಟಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿಯಲ್ಲಿ ಬುಲೆರೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಜಕ್ಕೇರ ತಾಂಡಾದ ವಜ್ರಮುನಿ ಚೌವ್ಹಾಣ್ ಎಂಬಾತ ರುಂಡವೇ ದೇಹದಿಂದ ಬೇರ್ಪಟ್ಟಿದೆ. ವಿಜಯಪುರಕ್ಕೆ ಕಬ್ಬು ಕಟಾವು ಮಾಡೋದಕ್ಕೆ ತೆರಳುತ್ತಿದ್ದಂತ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಬುಲೆರೋ ವಾಹನ ಡಿಕ್ಕಿಯಾದ ರಭಸಕ್ಕೆ ವಜ್ರಮುನಿ ದೇಹದಿಂದಲೇ ರುಂಡ ಹಾರಿ ಬೇರ್ಪಟ್ಟಿದೆ. ಸ್ಥಳಕ್ಕೆ ಆಗಮಿಸಿದಂತ ಬಸವನಬಾಗೇವಾಡಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/jee-main-session-1-admit-card-released-download-by-following-this-step/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/

Read More

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಜಂಟಿ ಪ್ರವೇಶ ಪರೀಕ್ಷೆ (Joint Entrance Examination -JEE) ಮೇನ್ 2025 ರ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಜೆಇಇ ಮೇನ್ 2025 ಹಾಲ್ ಟಿಕೆಟ್ಗಳನ್ನು ಅಧಿಕೃತ ವೆಬ್ಸೈಟ್ – jeemain.nta.nic.in ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ವರ್ಷ, ಜೆಇಇ ಮೇನ್ 2025 ಸೆಷನ್ 1 ಅನ್ನು 2025 ರ ಜನವರಿ 22 ರಿಂದ 30 ರವರೆಗೆ ನಡೆಸಲಾಗುವುದು. ಅಧಿಕೃತ ಸೂಚನೆ ಮತ್ತು ಹಿಂದಿನ ಎನ್ಟಿಎ ಪ್ರವೃತ್ತಿಯ ಪ್ರಕಾರ, ಪರೀಕ್ಷಾ ದಿನಾಂಕಕ್ಕೆ ಮೂರು ದಿನಗಳ ಮೊದಲು ಹಾಲ್ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅದಕ್ಕೆ ಅನುಗುಣವಾಗಿ ಪ್ರಯಾಣದ ವ್ಯವಸ್ಥೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಲು ಈ ತಿಂಗಳ ಆರಂಭದಲ್ಲಿ ಸಿಟಿ ಸ್ಲಿಪ್ ಅನ್ನು ಬಿಡುಗಡೆ ಮಾಡಲಾಯಿತು. ಜೆಇಇ ಮೇನ್ಸ್ ಪ್ರವೇಶ ಪತ್ರವು ಪರೀಕ್ಷೆಗೆ ಹಾಜರಾಗಲು ಅತ್ಯಗತ್ಯ ದಾಖಲೆಯಾಗಿದೆ ಎಂದು ಅಭ್ಯರ್ಥಿಗಳು ತಿಳಿದಿರಬೇಕು. ಅದಿಲ್ಲದೆ, ಅವರನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.…

Read More

ಬೆಂಗಳೂರು: ಮಾರಾಟ ಪ್ರಮಾಣಪತ್ರ ನೋಂದಣಿಯ ಅನುಸಾರ ಬ್ಯಾಂಕ್ ಹೆಸರಿಗೆ ಇ-ಖಾತಾವನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ. ಬ್ಯಾಂಕ್ ಹೆಸರಿಗೆ ಇ-ಖಾತಾ ಪಡೆದುಕೊಳ್ಳೋದಕ್ಕೆ ಇಚ್ಚಿಸುವವರು https://bbmpeaasthi.karnataka.gov.in ಜಾಣಕ್ಕೆ ಭೇಟಿ ನೀಡಬೇಕು. ಆ ನಂತ್ರ ನಾಗರಿಕ ವಿಧಾನದಲ್ಲಿ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು. ಪಿಐಡಿ ಸಂಖ್ಯೆಯನ್ನು ಆಯ್ಕೆ ಮಾಡಿ, ಅಂದರೆ ಪಿಐಡಿ ಅಥವಾ ಹೆಸರು ಬಳಸಿಕೊಂಡು ಆಯ್ಕೆಗಳ ಆಧಾರದ ಮೇಲೆ ಆಸ್ತಿಯನ್ನು ಗುರುತಿಸಿ ಮತ್ತು ಅರ್ಜಿ ಸಲ್ಲಿಸಲು ಮುಂದುವರೆಯಿರಿ. ತೆರಿಗೆ ಪಾವತಿಸಿದ ರಶೀದಿ ವಿವರ ಒದಗಿಸಿ ಅಂದರೆ ಆಸ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆ ಎಸ್ ಎ ಎಸ್ ಸಂಖ್ಯೆಯನ್ನು ನಮೂದಿಸಬೇಕು. ಈ ಬಳಿಕ ಮಾರಾಟ ಪ್ರಮಾಣಪತ್ರ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ ಮಾರಾಟ ಪ್ರಮಾಣಪತ್ರದ ಆಧಾರದ ಮೇಲೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಹೆಸರನ್ನು ದಾಖಲಿಸಲು Do not have the registered deed ಆಯ್ಕೆ ಮಾಡಿ. ಈ ಎಲ್ಲಾ ಹಂತದ ಬಳಿಕ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ನಿಮ್ಮ…

Read More

ಮುಂಬೈ: ಅಪಾರ್ಮೆಂಟ್ ಗೆ ನುಗ್ಗಿ ಬಾಲಿವುಡ್ ನಟ ಸೈಫ್ ಆಲಿಖಾನ್ ಅವರಿಗೆ ಚಾಕು ಇರಿದು ಗಾಯಗೊಳಿಸಿದ್ದರ ಸಂಬಂಧ ಪೊಲೀಸರು ಓರ್ವ ಶಂಕಿತ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸದ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಓರ್ವ ಶಂಕಿತನನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶಂಕಿತನನ್ನು ಇಂದು ಮುಂಜಾನೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪ್ರಸ್ತುತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. https://kannadanewsnow.com/kannada/cm-siddaramaiah-announces-rs-6-crore-reward-for-olympic-medal-winners/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/

Read More

ಮಂಗಳೂರು: ಒಲಂಪಿಕ್ ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡ್ತೀವಿ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್ ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಕರೆ ನೀಡಿದರು. ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯ್ತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪುನರುಚ್ಚರಿಸಿದರು. ಮುಂದಿನ ಬಜೆಟ್ ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗಧಿ ಮಾಡ್ತೀನಿ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದರು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ2 ರಷ್ಟು ಉದ್ಯೋಗಗಳು ಕ್ರೀಡಾಟುಗಳಿಗೆ ಮೀಸಲು ಇಡಲಾಗುವುದು. ಜೊತೆಗೆ…

Read More