Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಾಳೆ ಹಾಗೂ ನಾಡಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಲ್ಕೋಳ ವಿ.ವಿ. ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ, ಈ ವಿತರಣಾ ಕೇಂದ್ರದಿಂದ ಸರಬರಾಜಾಗುವ ಕೆಳಕಂಡ ಪ್ರದೇಶಗಳಲ್ಲಿ ಜ. 06 ರಂದು ಬೆಳ್ಳಗ್ಗೆ 09-30 ರಿಂದ ಸಂಜೆ 06-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. ಆಲ್ಕೋಳ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸಕ್ರ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪ ನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಶ್ರೀರಾಮನಗರ, ಟಿಪ್ಪುನಗರ, ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ…
ಬೆಂಗಳೂರು: ಯಶವಂತಪುರದಲ್ಲಿ ಇರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (Karnataka Soap and Detergents Limited-KSDL) ಆವರಣದಲ್ಲಿ ಸರಕಾರಿ ಕಚೇರಿಗಳಿಗೆ ಜಾಗ ಒದಗಿಸಲು ಸುಸಜ್ಜಿತ ಸಂಕೀರ್ಣ ನಿರ್ಮಿಸಲಾಗುವುದು. ಮುಂದಿನ 100 ವರ್ಷಗಳ ಅವಧಿಗೆ ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟುಕೊಂಡು ಈ ಕೆಲಸ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ. 100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (KSDL) ಸಿಬ್ಬಂದಿ ವರ್ಗಕ್ಕೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಸಮಗ್ರ ಆರೋಗ್ಯ ತಪಾಸಣೆ ಶಿಬಿರ ಮತ್ತು ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ಆವರಣದಲ್ಲಿ ಹಲವು ಸರಕಾರಿ ಮತ್ತು ಖಾಸಗಿ ಕಂಪನಿಗಳ ಕಚೇರಿಗಳಿಗೆ ಸ್ಥಳಾವಕಾಶ ಕೊಡಲಾಗಿದೆ. ಅದೇ ಮಾದರಿಯನ್ನೂ ಕೆಎಸ್ಡಿಎಲ್ ನಲ್ಲೂ ಅಳವಡಿಸಿಕೊಳ್ಳಲಾಗುವುದು. ಕೆಎಸ್ಡಿಎಲ್ ವತಿಯಿಂದಲೇ…
ನವದೆಹಲಿ: ಒಂಬತ್ತು ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ 60 ರಾಜ್ಯಸಭಾ ಸಂಸದರು ಈ ವರ್ಷ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದು, ಅವರಲ್ಲಿ ಹಲವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಸಚಿವ ಭೂಪೇಂದರ್ ಯಾದವ್, ಆರೋಗ್ಯ ಸಚಿವ ಮನ್ಸುಖ್ ಮದವಿಯಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ 57 ನಾಯಕರು ಏಪ್ರಿಲ್ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ 10, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ 6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 5, ಕರ್ನಾಟಕ ಮತ್ತು ಗುಜರಾತ್ನಲ್ಲಿ ತಲಾ 4, ಒಡಿಶಾ, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ತಲಾ 3, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ತಲಾ 2, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಛತ್ತೀಸ್ಗಢದಲ್ಲಿ ತಲಾ 1 ಹುದ್ದೆಗಳು ಖಾಲಿ ಇವೆ. ನಾಲ್ವರು ನಾಮನಿರ್ದೇಶಿತ ಸದಸ್ಯರು ಜುಲೈನಲ್ಲಿ ನಿವೃತ್ತರಾಗಲಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಮ್ಮ…
BREAKING: ‘ಡಿಕೆ ಶಿವಕುಮಾರ್’ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಕೇಸ್: ಇಂದು ಹೈಕೋರ್ಟ್ ಗೆ ‘CBI ಮನವಿ’ ಸಲ್ಲಿಕೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಹಿಂಪಡೆಯಲಾಗಿತ್ತು. ಅಲ್ಲದೇ ಲೋಕಾಯುಕ್ತ ತನಿಖೆಗೆ ವಹಿಸೋ ನಿರ್ಧಾರವನ್ನು ಕೈಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿಬಿಐ ಇಂದು ಹೈಕೋರ್ಟ್ ಗೆ ತನ್ನ ಮನವಿಯನ್ನು ಪ್ರಕರಮ ಸಂಬಂಧ ಸಲ್ಲಿಸಲಿದೆ. ಈ ಕುರಿತಂತೆ ಇಂದು ಹೈಕೋರ್ಟ್ ನ್ಯಾಯಪೀಠದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರೋ ಅರ್ಜಿಯನ್ನು ಕೂಡ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಲೋಕಾಯುಕ್ತ ತನಿಖೆಗೆ ವಹಿಸುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯ ವೇಳೆಯಲ್ಲೇ ಇಂದು ಹೈಕೋರ್ಟ್ ಗೆ ಸಿಬಿಐ ತನ್ನ ಮನವಿಯನ್ನು ತಲ್ಲಿಸಲಿದೆ. ಇಂದು ಮಧ್ಯಾಹ್ನ 2.30ಕ್ಕೆ ಸಿಬಿಐ ತುರ್ತು ಅರ್ಜಿಯ ವಿಚಾರಣೆಗೆ ಮನವಿ ಮಾಡಲಿದ್ದು, ಸಿಬಿಐ ಮನವಿಯ ಬಳಿಕ ಕೋರ್ಟ್ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಹಿಂಪಡೆದ ನಿರ್ಧಾರವನ್ನು ಸಿಬಿಐ ಹೈಕೋರ್ಟ್ ನಲ್ಲಿ ಪ್ರಶ್ನಿಸಿ…
ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು, ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿಯಲ್ಲಿ ರೈತರು ತೊಡಗಿದ್ದಾರೆ. ಕೆಲವರು 1, 2 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡ್ತಿದ್ರೆ ಮತ್ತೆ ಕೆಲವರು 3 ಅಥವಾ ಅದಕ್ಕಿಂತ ಹೆಚ್ಚು ಎಕರೆ ಸರ್ಕಾರಿ ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದಾರೆ. ಇಂತಹ ರೈತರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ 3 ಎಕರೆಗಿಂತ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡ್ತಿದ್ರೆ ಅಷ್ಟು ಭೂಮಿ ಸಕ್ರಮವಿಲ್ಲ ಅಂತ ರಾಜ್ಯ ಸರ್ಕಾರ ತಿಳಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದು, ಅರಣ್ಯ ಭೂಮಿಯಲ್ಲಿ ಕೃಷಿ ನಡೆಸುತ್ತಿರುವಂತ ರೈತರಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದ್ದ 7 ಸಾವಿರ ರೈತರಿಗೆ ಶೀಘ್ರವೇ ಹಕ್ಕುಪತ್ರ ವಿತರಣೆ ಮಾಡೋದಾಗಿ ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಕೃಷಿ ಮಾಡುತ್ತಿರೋರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ಜನವರಿ ಒಳಗಾಗಿ…
ಬೆಂಗಳೂರು: ನಗರದ ಹೊರ ವಲಯದಲ್ಲಿರುವಂತ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ತೆರಳೋದಕ್ಕೆ ನೇರವಾಗಿ ಬಿಎಂಟಿಸಿ ಬಸ್ ಸೌಲಭ್ಯವಿರಲಿಲ್ಲ. ಇದೀಗ ಜನವರಿ.15ರಿಂದ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಹಂಚಿಕೆ ಮಾಡಲಾಗಿದ್ದು, ಜನವರಿ 15ರಿಂದ ಮುಂಗಡ ಆಸನ ಕಾಯ್ದಿರಿಸಲು ಬಿಎಂಟಿಸಿಯಿಂದ ವಂಡರ್ ಲಾಗೆ ಶುರು ಮಾಡಲಾಗುತ್ತಿದೆ. ವಂಡರ್ ಲಾಗೆ ತೆರಳುವ ಪ್ರಯಾಣಿಕರು ಅವತಾರ್ ತಂತ್ರಾಂಶದಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಲು ಅವಕಾಶ ನೀಡಲಾಗುತ್ತಿದೆ ಅಂತ ತಿಳಿಸಿದೆ. ಬೆಂಗಳೂರು ನಗರದ ವಿವಿಧ ಭಾಗಗಳಿಂದ 4 ಮಾರ್ಗಗಳಲ್ಲಿ 10 ಬಸ್ಸುಗಳು ದಿನಕ್ಕೆ 20 ಟ್ರಿಪ್ ಗಳನ್ನು ಏಕಮುಖವಾಗಿ ಸಂಚರಿಸಲಿವೆ ಅಂತ ಹೇಳಿದೆ. ವಂಡರ್ ಲಾಗೆ ತೆರಳುವ ಪ್ರಯಾಣಿಕರಿಗೆ ಅವತಾರ್ ತಂತ್ರಾಂಶದಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ. ಬೆಂಗಳೂರು ನಗರದ ವಿವಿಧ ಭಾಗಗಳಿಂದ ನಾಲ್ಕು ಮಾರ್ಗಗಳಲ್ಲಿ ವಂಡರ್ ಲಾ ಕಡೆಗೆ 10 ಬಸ್‌ಗಳು ದಿನಕ್ಕೆ 20 ಟ್ರಿಪ್‌ಗಳನ್ನು ಏಕಮುಖವಾಗಿ ನಡೆಸಲಿವೆ. ಜನವರಿ 15ರಿಂದ ಕೆಎಸ್‌ಆರ್‌ಟಿಸಿ ಅವತಾರ್ ತಂತ್ರಾಂಶದಲ್ಲಿ…
ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿಯನ್ನು ರೈತರು ನಡೆಸುತ್ತಿದ್ದಾರೆ. ಈ ಸರ್ಕಾರಿ ಭೂಮಿಗೆ ಸಾಗುವಳಿ ಹಕ್ಕುಪತ್ರವನ್ನು ಇದೇ ಜನವರಿ ತಿಂಗಳಿನಲ್ಲಿ ನೀಡೋದಾಗಿ ಸರ್ಕಾರ ಘೋಷಿಸಿದೆ. ಈ ಮೂಲಕ ಅರಣ್ಯ ಭೂಮಿಯಲ್ಲಿ ಕೃಷಿ ನಡೆಸುತ್ತಿರೋರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಕೃಷಿ ಮಾಡುತ್ತಿರೋರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನವರಿ ಒಳಗಾಗಿ 7 ಸಾವಿರ ರೈತರಿಗೆ ಹಕ್ಕು ಪತ್ರವನ್ನು ನೀಡಲಾಗುತ್ತದೆ ಅಂತ ತಿಳಿಸಿದ್ದಾರೆ. ಇನ್ನೂ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ಅಡಿ ರಾಜ್ಯ ಸರ್ಕಾರದ 46 ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸದೆ ಬಾಕಿ ಇರುವ 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇಕಡ 8ರ ಮೀಸಲಾತಿಯಂತೆ ಮುಂಬಡ್ತಿ ನೀಡಬೇಕಾದ 8,278 ಹುದ್ದೆಗಳನ್ನು ಬಡ್ತಿ ಮೂಲಕ ತುಂಬಿಸಲು ಸರ್ಕಾರದ ವಿವಿಧ ಇಲಾಖೆಗಳು ತಕ್ಷಣ ಪ್ರಕ್ರಿಯೆ ಆರಂಭಿಸಲು ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸೂಚನೆ ನೀಡಿದೆ. ಗುರುವಾರದಂದು ಭಾರತ ಸಂವಿಧಾನದ ಅನುಚ್ಛೇದ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಪ್ರಯುಕ್ತ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಸಚಿವ ಸಂಪುಟ ಉಪಸಮಿತಿ ಸದಸ್ಯರಾದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಇತರರು ಭಾಗವಹಿಸಿದ್ದರು.…
ಇರಾನ್: 2020 ರಲ್ಲಿ ಯುಎಸ್ ಡ್ರೋನ್ನಿಂದ ಕೊಲ್ಲಲ್ಪಟ್ಟ ದಿವಂಗತ ಕಮಾಂಡರ್ ಕಾಸ್ಸೆಮ್ ಸೊಲೈಮಾನಿ ಅವರ ಸ್ಮರಣಾರ್ಥ ಇರಾನ್ನಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 100 ಜನರ ಸಾವಿಗೆ ಕಾರಣವಾದ ಮತ್ತು ಅನೇಕರು ಗಾಯಗೊಂಡ ಎರಡು ಸ್ಫೋಟಗಳ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ಗುರುವಾರ ವಹಿಸಿಕೊಂಡಿದೆ. ಗುಂಪು ತನ್ನ ಸಂಯೋಜಿತ ಟೆಲಿಗ್ರಾಮ್ ಚಾನೆಲ್ಗಳಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಹೌದು 2020 ರಲ್ಲಿ ಯುಎಸ್ ಡ್ರೋನ್ನಿಂದ ಕೊಲ್ಲಲ್ಪಟ್ಟ ಕಮಾಂಡರ್ ಖಾಸಿಮ್ ಸೊಲೈಮಾನಿ ಸ್ಮರಣಾರ್ಥ ಇರಾನ್ನಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 100 ಜನರನ್ನು ಬಲಿ ತೆಗೆದುಕೊಂಡ ಮತ್ತು ಹಲವಾರು ಜನರನ್ನು ಗಾಯಗೊಳಿಸಿದ ಎರಡು ಸ್ಫೋಟಗಳ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ಗುರುವಾರ ವಹಿಸಿಕೊಂಡಿದೆ. https://kannadanewsnow.com/kannada/state-government-nominates-6-members-to-mangalore-university-syndicate-authority/ https://kannadanewsnow.com/kannada/state-kadugolla-welfare-association-expresses-deep-regret-over-incident-of-assault-on-dalit-youth-in-chikmagalur/
ಬೆಂಗಳೂರು: ನಗರದಲ್ಲಿ ಇನ್ನೂ ಬಾಲ್ಯವಿವಾಹ ಜೀವಂತವಾಗಿದೆ. ಅಪ್ರಾಪ್ತೆಯನ್ನು ವಿವಾಹವಾದ ಬಳಿಕ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸೋದಕ್ಕೆ ಪ್ರಯತ್ನ ಪಟ್ಟ ಯುವಕನ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಗೆ ತಾಯಿ ವಿವಾಹ ಮಾಡಿಸಿದ್ದಳು. ದೇವಾಲಯದಲ್ಲಿ 27 ವರ್ಷದ ಯುವಕನೊಂದಿಗೆ ಅಪ್ರಾಪ್ತೆಯನ್ನು ವಿವಾಹ ಮಾಡಿಸಲಾಗಿತ್ತು. ಈ ಬಳಿಕ ಬಾಲಕಿಯೊಂದಿಗೆ ಬಲವಂತವಾಗಿ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದರಿಂದ ಮಾನಸಿಕವಾಗಿ ಘಾಸಿಕೊಂಡ ಅಪ್ರಾಪ್ತ ಬಾಲಕಿ, ಮಕ್ಕಳ ಕಲ್ಯಾಣ ಸಮಿತಿಗೆ ಕರೆ ಮಾಡಿ ಅಪ್ರಾಪ್ತ ವಯಸ್ಸಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿಸಿದ್ದು. ಯುವಕ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸೋದರ ಬಗ್ಗೆ ದೂರು ನೀಡಿದ್ದಳು. ಸ್ಥಳಕ್ಕೆ ಆಗಮಿಸಿದಂತ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಲವಂತವಾಗಿ ಮದುವೆ ಮಾಡಿಸಿದ್ದು, ಯುವಕ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದರ ಬಗ್ಗೆ ಅಲವತ್ತುಕೊಂಡಿದ್ದಾಳೆ. ಈ ಮಾಹಿತಿ ಆಧರಿಸಿ, ಇದೀಗ ಯುವಕನ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. https://kannadanewsnow.com/kannada/ksrtc-bus-overturns-in-hassan-4-passengers-injured-one-in-critical-condition/ https://kannadanewsnow.com/kannada/state-government-nominates-6-members-to-mangalore-university-syndicate-authority/