Author: kannadanewsnow09

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಮಿಶ್ರಿತ ಹಾಲು ವಿತರಣೆ ಮಾಡಲಾಗುತ್ತಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ವಾರದಲ್ಲಿ ಮೂರು ದಿನ ಹಾಲಿಗೆ ನಿರ್ದಿಷ್ಟ ಪ್ರಮಾಣದ ರಾಗಿ ಮಾಲ್ಟ್ ಮಿಶ್ರಣ ಮಾಡಿ ಕೊಡಲಾಗುತ್ತದೆ. ಉಳಿದ ಎರಡು ದಿನಗಳಲ್ಲಿ ಹಾಲನ್ನು ಮಾತ್ರ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡಲಾಗುತ್ತದೆ. ಇನ್ನು ಮುಂದೆ ವಾರದಲ್ಲಿ ಮೂರು ದಿನ ಹಾಲಿಗೆ ನಿರ್ದಿಷ್ಟ ಪ್ರಮಾಣದ ರಾಗಿ ಮಾಲ್ಟ್‌ ಮಿಶ್ರಣ ಮಾಡಿ ಕೊಡಲಾಗುತ್ತದೆ. ಉಳಿದ ಎರಡು ದಿನಗಳಲ್ಲಿ ಹಾಲನ್ನು ಮಾತ್ರ ನೀಡಲಾಗುವುದು ಎಂದಿದ್ದಾರೆ.

Read More

ಬೆಂಗಳೂರು: ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಇನ್ಫೋಸಿಸ್ ಫೌಂಡೇಶನ್ ಸಿ.ಎಸ್.ಆರ್ ಫಂಡ್ ನೆರವಿನೊಂದಿಗೆ ಆರೋಗ್ಯ ಇಲಾಖೆ ನೂತನ ಎರಡು ತಂತ್ರಜ್ಞಾನಗಳನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ನೂತನ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಇನ್ಫೋಸಿಸ್ ಫೌಂಡೇಶನ್ ಹಾಗೂ ಸಿ. ಕ್ಯಾಂಪ್ ನವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಾಯೋಗಿಕವಾಗಿ 3 ಜಿಲ್ಲೆಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಧಾರವಾಡ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ fetal monitoring technology ಮತ್ತು CPAP ತಂತ್ರಜ್ಞಾನಗಳನ್ನ ಅಳವಡಿಸಲಾಗುತ್ತಿದೆ. ಹಂತ ಹಂತವಾಗಿ ನಾಲ್ಕು ವರ್ಷಗಳಲ್ಲಿ ಒಟ್ಟು 8 ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ನೆಡೆಯಲಿದೆ. ಈ ತಂತ್ರಜ್ಞಾನಗಳ ಅಳವಡಿಕೆಗೆ ಇನ್ಫೋಸಿಸ್ ಫೌಂಡೇಶನ್ ಸಿಎಸ್ ಆರ್ ಯೋಜನೆಯಡಿ ಹಣಕಾಸಿನ ನೆರವು ಒದಗಿಸಲು ಮುಂದೆ ಬಂದಿದ್ದು, ಯೋಜನೆ ಅನುಷ್ಠಾನದಲ್ಲಿ ಸಿ – ಕ್ಯಾಂಪ್ ಅಗತ್ಯ ವೇದಿಕೆ ಕಲ್ಪಿಸಿದೆ. ಇನ್ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಇಲಾಖೆ…

Read More

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತ 1000 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಕೆಇಎಯಿಂದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ರಾಜ್ಯದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು ಎಂದಿದೆ. ಹುದ್ದೆಗಳ ವಿವರ – 1000 ಹುದ್ದೆಗಳು ವೇತನ ಶ್ರೇಣಿ – ರೂ.21,400 ರಿಂದ 42,000 ಶೈಕ್ಷಣಿಕ ವಿದ್ಯಾರ್ಹತೆ – ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಿಂಚಣಿ ಸೌಲಭ್ಯ – NPS ವಯೋಮಿತಿ ಸಾಮಾನ್ಯ ವರ್ಗದವರಿಗೆ 35 ವರ್ಷಗಳು. ಪ್ರವರ್ಗ 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು. ಅರ್ಜಿ…

Read More

ಬೆಂಗಳೂರು: 58ನೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಇಸ್ರೋ ಅಧ್ಯಕ್ಷ ಸೋಮನಾಥ್ ಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಇಂತಹ ಗೌರವ ಡಾಕ್ಟರೇಟ್ ಅನ್ನು ಇಂದು ಅವರಿಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ 58ನೇ ಘಟಿಕೋತ್ಸವವನ್ನು ಕೆಲ ದಿನಗಳ ಹಿಂದೆ ನಡೆಸಲಾಗಿತ್ತು. ಅಂದು ಪದವಿ ಪ್ರಮಾಣಪತ್ರ, ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ಆದ್ರೇ ಬೆಂಗಳೂರು ವಿವಿಯ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಭಾಗಿಯಾಗಿ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸೋದಕ್ಕೆ ಸಾಧ್ಯವಾಗಿರಲಿಲ್ಲ. ಇಂದು ರಾಜಭವನದಲ್ಲಿ ರಾಜ್ಯಪಾಲತ ಥಾವರ್ ಚಂದ್ ಗೆಹ್ಲೋಟ್ ಅವರು ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಿದರು. https://kannadanewsnow.com/kannada/delhi-chalo-protest-march-to-be-suspended-for-2-days-announces-farmer-leader-2/ https://kannadanewsnow.com/kannada/good-news-for-job-seekers-kea-invites-applications-for-the-post-of-1000-village-administration-officer/

Read More

ನವದೆಹಲಿ: ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ರೈತ ಮುಖಂಡರೊಬ್ಬರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. “ಖನೌರಿಯಲ್ಲಿ ನಡೆದ ಘಟನೆಯ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ. ದೆಹಲಿಯೆಡೆಗಿನ ನಮ್ಮ ಮೆರವಣಿಗೆಗೆ ಎರಡು ದಿನಗಳ ತಡೆ ಇರುತ್ತದೆ. ನಮ್ಮ ಮುಂದಿನ ಆಂದೋಲನ ಏನು ಎಂಬುದನ್ನು ನಾವು ನಂತರ ಸ್ಪಷ್ಟಪಡಿಸುತ್ತೇವೆ” ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಮುಖ್ಯಸ್ಥ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮತ್ತೊಂದು ಸುತ್ತಿನ ಚರ್ಚೆಗಾಗಿ ಕೇಂದ್ರವು ರೈತರಿಗೆ ಮನವಿ ಮಾಡಿದ ನಂತರ ರೈತರ ಪ್ರಕಟಣೆ ಬಂದಿದೆ. “ರೈತರು ದೇಶಾದ್ಯಂತ ಇದ್ದಾರೆ. ನೀತಿಯನ್ನು ರೂಪಿಸುವಾಗ, ಇಡೀ ದೇಶದ ರೈತರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ” ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಪಿಟಿಐಗೆ ತಿಳಿಸಿದ್ದಾರೆ. ಕೇಂದ್ರದೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ನಂತರ ರೈತ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್: ಅಮೆಜಾನ್ ಮಳೆಕಾಡಿನ ಆಳವನ್ನು ಅನ್ವೇಷಿಸುವ ಸಂಶೋಧಕರು ಬೃಹತ್ ಸರ್ಪವನ್ನು ಕಂಡುಹಿಡಿದಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಅಭೂತಪೂರ್ವ ಆವಿಷ್ಕಾರವು ಅನಕೊಂಡ ಕುಟುಂಬದಲ್ಲಿ ಹೊಸ ದೈತ್ಯನನ್ನು ನಮಗೆ ಪರಿಚಯಿಸುತ್ತದೆ. ಅದರ ಸಂಬಂಧಿಕರ ಪ್ರಸಿದ್ಧ ಗಾತ್ರವನ್ನು ಎರಡು ಪಟ್ಟು ಮೀರಿಸುತ್ತದೆ. ಅಮೆಜಾನ್ ಕಾಡಿನ ಹೃದಯಭಾಗದಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಎಕ್ಸ್ಪೆಡಿಷನ್ ತಂಡವು ನಡೆಸಿದ ವಾಡಿಕೆಯ ವೀಡಿಯೊ ಚಿತ್ರೀಕರಣದ ಸಮಯದಲ್ಲಿ ವಿಸ್ಮಯಕಾರಿ ಮುಖಾಮುಖಿ ಅನಾವರಣಗೊಂಡಿತು. ಸೊಂಪಾದ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಾ ಕ್ಯಾಮೆರಾ ಉರುಳುತ್ತಿದ್ದಂತೆ, ಅದು ಅನಿರೀಕ್ಷಿತವಾಗಿ ಅಮೆಜಾನ್ ನ ನದಿ ಪಾತ್ರದ ಉದ್ದಕ್ಕೂ ವಿಶ್ರಾಂತಿ ಪಡೆಯುತ್ತಿರುವ ಬೃಹತ್ ಗಾತ್ರದ ಮೇಲೆ ಎಡವಿ ಬಿದ್ದಿತು. ಹಾವಿನ ಅಗಾಧ ಉದ್ದವನ್ನು ಪ್ರದರ್ಶಿಸುವ ಸೆರೆಹಿಡಿಯಲಾದ ತುಣುಕುಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಪ್ರೇಕ್ಷಕರನ್ನು ತ್ವರಿತವಾಗಿ ಆಕರ್ಷಿಸಿದವು, ತ್ವರಿತವಾಗಿ ವೈರಲ್ ಆದವು. ದಕ್ಷಿಣ ಹಸಿರು ಅನಕೊಂಡ ಎಂದು ಗುರುತಿಸಲ್ಪಟ್ಟ ಈ ಬೃಹತ್ ಜೀವಿಯು ಜಲಪ್ರದೇಶಗಳಲ್ಲಿ ಅಲೆದಾಡುತ್ತದೆ. ಬೇಟೆ ಮತ್ತು ಪೋಷಣೆಯಲ್ಲಿ ಸುಲಭವಾಗುವಂತೆ ತನ್ನ ಜಲ ಆವಾಸಸ್ಥಾನವನ್ನು ಬಳಸಿಕೊಳ್ಳುತ್ತದೆ ಎಂದು…

Read More

ನವದೆಹಲಿ: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು 2 ದಿನಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂದು ರೈತ ಮುಖಂಡರು ಘೋಷಿಸಿದ್ದಾರೆ. ಈ ಮೂಲಕ ತಾತ್ಕಾಲಿಕವಾಗಿ ದೆಹಲಿ ಚಲೋ ರೈತರ ಪ್ರತಿಭಟನಾ ಮೆರವಣಿಯನ್ನು ಸ್ಥಗಿತಗೊಳಿಸಲಾಗಿದೆ. ರೈತರ ಪ್ರತಿಭಟನೆ ಒಂದೆಡೆ ತೀವ್ರಗೊಳ್ಳುತ್ತಿದ್ದರೇ, ಮತ್ತೊಂದೆಡೆ ಅದು ವಿಕೋಪಕ್ಕೆ ತಿರುಗಿ, ಕಾನೂನು ಕೈಗೆತ್ತಿಕೊಳ್ಳೋ ಹಂತವನ್ನು ತಲುಪಿದೆ. ಇಂದು ರೈತರ ಪ್ರತಿಭಟನೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ 12 ಪೊಲೀಸರಿಗೆ ಗಂಭೀರ ಗಾಯವಾಗಿರೋದಾಗಿ ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಶಾಂತಿ ಮತ್ತು ಸಹಕಾರಕ್ಕಾಗಿ ಅವರು ಮತ್ತಷ್ಟು ಮನವಿ ಮಾಡಿದರು. ಇದಲ್ಲದೆ, ರೈತರು ಪೊಲೀಸರ ಮೇಲೆ ದೊಣ್ಣೆಗಳು, ಗದೆಗಳು ಮತ್ತು ಕಲ್ಲು ತೂರಾಟದಿಂದ ಹಲ್ಲೆ ನಡೆಸಿದ್ದಾರೆ ಎಂದು ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಕಡೆಯಿಂದಲೂ ಪೊಲೀಸರನ್ನು ಸುತ್ತುವರೆದರು ಮತ್ತು ಅದಕ್ಕೆ ಮೆಣಸಿನ ಪುಡಿಯನ್ನು ಸುರಿಯುವ ಮೂಲಕ ಕಸವನ್ನು ಸುಟ್ಟುಹಾಕಿದರು ಎಂದು ವರದಿಯಾಗಿದೆ. ಶಾಂತಿ ಕಾಪಾಡಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಹರಿಯಾಣ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಕೇಂದ್ರದೊಂದಿಗಿನ…

Read More

ನವದೆಹಲಿ: ರೈತರ ಪ್ರತಿಭಟನೆ ಒಂದೆಡೆ ತೀವ್ರಗೊಳ್ಳುತ್ತಿದ್ದರೇ, ಮತ್ತೊಂದೆಡೆ ಅದು ವಿಕೋಪಕ್ಕೆ ತಿರುಗಿ, ಕಾನೂನು ಕೈಗೆತ್ತಿಕೊಳ್ಳೋ ಹಂತವನ್ನು ತಲುಪಿದೆ. ಇಂದು ರೈತರ ಪ್ರತಿಭಟನೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ 12 ಪೊಲೀಸರಿಗೆ ಗಂಭೀರ ಗಾಯವಾಗಿರೋದಾಗಿ ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಶಾಂತಿ ಮತ್ತು ಸಹಕಾರಕ್ಕಾಗಿ ಅವರು ಮತ್ತಷ್ಟು ಮನವಿ ಮಾಡಿದರು. ಇದಲ್ಲದೆ, ರೈತರು ಪೊಲೀಸರ ಮೇಲೆ ದೊಣ್ಣೆಗಳು, ಗದೆಗಳು ಮತ್ತು ಕಲ್ಲು ತೂರಾಟದಿಂದ ಹಲ್ಲೆ ನಡೆಸಿದ್ದಾರೆ ಎಂದು ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನಾಕಾರರು ಎಲ್ಲಾ ಕಡೆಯಿಂದಲೂ ಪೊಲೀಸರನ್ನು ಸುತ್ತುವರೆದರು ಮತ್ತು ಅದಕ್ಕೆ ಮೆಣಸಿನ ಪುಡಿಯನ್ನು ಸುರಿಯುವ ಮೂಲಕ ಕಸವನ್ನು ಸುಟ್ಟುಹಾಕಿದರು ಎಂದು ವರದಿಯಾಗಿದೆ. ಶಾಂತಿ ಕಾಪಾಡಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಹರಿಯಾಣ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಕೇಂದ್ರದೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆಯು ರೈತರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಕಾರಣ ಪ್ರತಿಭಟನಾನಿರತ ರೈತರು ಫೆಬ್ರವರಿ 21 ರಂದು ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಪುನರಾರಂಭಿಸಿದರು. ಶಂಭು ಗಡಿಯಲ್ಲಿ ದೆಹಲಿಗೆ…

Read More

ಬೆಂಗಳೂರು : ರಾಜ್ಯದಲ್ಲಿ ವಿದ್ಯುನ್ಮಾನ ಉಪಕರಣ ತಯಾರಕರಿಗೆ (Extended Producer Responsibility-EPR) ವಿಸ್ತರಿತ ಹೊಣೆಗಾರಿಕೆ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ವಿಕಾಸಸೌಧದಲ್ಲಿಂದು ಇ-ತ್ಯಾಜ್ಯ ಸಂಸ್ಕರಣೆದಾರರು/ ಮರುಬಳಕೆದಾರರ (Refurbishers /Recyclers) ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು ಇ- ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಇರುವುದು ಇದೊಂದೇ ಭೂಮಿ, ಈ ಭೂಮಿಯನ್ನು ತ್ಯಾಜ್ಯದ ಗುಂಡಿ ಮಾಡಬಾರದು, ಇ-ತ್ಯಾಜ್ಯ ಅಪಾಯಕಾರಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು, ಮುಂದಿನ ಪೀಳಿಗೆಯ ಮತ್ತು ಸಮುದಾಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಜಾಗರೂಕತೆಯಿಂದ ಮತ್ತು ವೈಜ್ಞಾನಿಕವಾಗಿ ಇವುಗಳ ಪುನರ್ ಬಳಕೆ ಮತ್ತು ನಿರ್ವಹಣೆ ಮಾಡುವಂತೆ ಸೂಚಿಸಿದರು. ದೇಶದಲ್ಲಿ ವಾರ್ಷಿಕ 3.8 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ಪೈಕಿ ರಾಜ್ಯದಲ್ಲಿ 0.8 ಮಿಲಿಯನ್ ಮೆಟ್ರಿಕ್ ಟನ್ ಅಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ರಾಜ್ಯದಲ್ಲಿ ಒಟ್ಟು 108 ಇ-ತ್ಯಾಜ್ಯ ಸಂಸ್ಕರಣಾ…

Read More

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಂತ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು, ಇಂದು ಭಗವಂತನ ಹೆಸರಿನಲ್ಲಿ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ವಿಧಾನಪರಿಷತ್ ಕಲಾಪ ಆರಂಭಕ್ಕೂ ಮುನ್ನಾ ನೂತನ ಸದಸ್ಯ ಪುಟ್ಟಣ್ಣಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಮಾಣವಚನ ಬೋಧಿಸಿದರು. ಈ ವೇಳೆ ಪುಟ್ಟಣ್ಣ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಬಳಿಕ ಮಾತನಾಡಿದಂತ ಅವರು, ವಿಧಾನಪರಿಷತ್ ಉಪ ಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ ಶಿಕ್ಷಕರ ಕ್ಷೇತ್ರದಲ್ಲಿ ಸೋಲು ಕಂಡಿದೆ. ಮುಂದಿನ ಚುನಾವಣೆಗೂ ಈ ಫಲಿತಾಂಶ ಮಾರ್ಗಸೂಚಿಯಾಗಲಿದೆ ಎಂದರು. ಅಂದಹಾಗೆ ನಿನ್ನೆ ವಿಧಾನಪರಿಷತ್ ಉಪ ಚನಾವಣೆಯ ಮತಏಣಿಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 1506 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ ರಂಗನಾಥ್ ಸೋಲು ಕಂಡಿದ್ದರು. https://kannadanewsnow.com/kannada/bengaluru-mega-job-fair-to-be-held-on-feb-26-27-it-is-mandatory/ https://kannadanewsnow.com/kannada/icc-test-ranking-jaiswal-breaks-into-top-20/

Read More