Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: 2023-24ನೇ ಶೈಕ್ಷಣಿಕ ಸಾಲಿಗೆ 1 ರಿಂದ 4 ಮತ್ತು 06 ರಿಂದ 07ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲೆಯಾದ್ಯಂತ ಏಕರೂಪವಾಗಿ ವಾರ್ಷಿಕ ಪರೀಕ್ಷೆಯನ್ನು ನಿಗಧಿತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು 2023-24ನೇ ಶೈಕ್ಷಣಿಕ ಸಾಲಿಗೆ 1 ರಿಂದ 4 ಮತ್ತು 6 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಏಕರೂಪವಾಗಿ ಜಿಲ್ಲೆಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಅದರಂತೆ ವಾರ್ಷಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿರೋದಾಗಿ ತಿಳಿಸಿದೆ. ಹೀಗಿದೆ ಪ್ರಾಥಮಿಕ ಶಾಲಾ ಪರೀಕ್ಷಾ ವೇಳಾಪಟ್ಟಿ ( 1 ರಿಂದ 4ನೇ ತರಗತಿ) ದಿನಾಂಕ 25-03-2024, ಪ್ರಥಮ ಭಾಷೆ – ಕನ್ನಡ, ಉರ್ದು, ಇಂಗ್ಲೀಷ್ ದಿನಾಂಕ 26-03-2024, ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ ದಿನಾಂಕ 27-03-2024, ಗಣಿತ ದಿನಾಂಕ 28-03-2024, ಪರಿಸದ ಅಧ್ಯಯನ ಈ ಮೇಲ್ಕಂಡ ಪರೀಕ್ಷೆಯ ಬಳಿಕ, ದಿನಾಂಕ 08-04-2024ರಂದು 1 ರಿಂದ 4ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಹೀಗಿದೆ ಪ್ರಾಥಮಿಕ…
ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳು ರೋಗಿಗಳ ಸುಲಿಗೆಗೆ ಇಳಿದಿವೆ. ತಮಗೆ ಇಷ್ಟ ಬಂದಂತೆ ಚಿಕಿತ್ಸಾ ದರವನ್ನು ವಿಧಿಸುತ್ತಿವೆ ಎಂಬುದಾಗಿ ಸಾರ್ವಜನಿಕರಿಂದ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳ ಬೆನ್ನಲ್ಲೇ ಇನ್ಮುಂದೆ ರಾಜ್ಯಾಧ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಬೋರ್ಡ್ ಅಳವಡಿಸೋದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಮಾಡಿದೆ. ರಾಜ್ಯದಲ್ಲಿ ಖಾಸಗೀ ಆಸ್ಪತ್ರೆಗಳಲ್ಲಿ ಅವರದ್ದೇ ದರ್ಬಾರ್. ತಮಗೆ ಇಷ್ಟಬಂದಂತೆ ರೋಗಿಗಳಿಗೆ ಚಿಕಿತ್ಸೆಯ ದರವನ್ನು ವಿಧಿಸಲಾಗುತ್ತಿವೆ. ಈ ದರಪಟ್ಟಿಯಿಂದಾಗಿ ರಾಜ್ಯದಲ್ಲಿನ ಜನರು ಸುಲಿಗೆಗೆ ಒಳಗಾಗಿದ್ದು, ಬಡವರು, ಮಧ್ಯಮ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂಬುದೇ ಸಿಂಹಸ್ವಪ್ನವಾದಂತೆ ಆಗಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ, ಆರೋಗ್ಯ ಇಲಾಖೆಗೆ ಸಾರ್ವಜನಿಕರು ವಿವಿಧ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ಸಲ್ಲಿಸಲಾಗಿತ್ತು. ಈ ದೂರಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಚಿಕಿತ್ಸಾ ದರಪಟ್ಟಿ ಬೋರ್ಡ್ ಹಾಕುವುದನ್ನು ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಲು ಆರೋಗ್ಯ ಇಲಾಖೆಗೆ ಸೂಚಿಸಿದ್ದರು. ಆರೋಗ್ಯ ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆಯಿಂದ ಖಾಸಗಿ…
*ವಸಂತ ಬಿ ಈಶ್ವರಗೆರೆ ಬೆಂಗಳೂರು: ಬಹುತೇಕ ಮಕ್ಕಳಿಗೆ ಬಾಂಬೆ ಮಿಠಾಯಿ ಅಂದ್ರೆ ತುಂಬಾನೇ ಪ್ರೀತಿ. ದಾರಿಯಲ್ಲಿ ಕಂಡ್ರೆ ಸಾಕು ಪೋಷಕರನ್ನು ಕಾಡಿ ಬೇಡಿ ಕೊಡಿಸಿಕೊಂಡು ತಿನ್ನೋ ಮಕ್ಕಳೇ ಜಾಸ್ತಿ. ಆದರೇ ಪೋಷಕರೇ ನೀವು ನಿಮ್ಮ ಮಕ್ಕಳಿಗೆ ಬಾಂಬೆ ಮಿಠಾಯಿ ಕೊಡಿಸ್ತಾ ಇದ್ದೀರಿ ಅಂದ್ರೇ, ಈಗ ಎಚ್ಚರಿಕೆ ವಹಿಸಬೇಕಿದೆ. ಅದು ಯಾಕೆ ಅನ್ನೋ ಶಾಕಿಂಗ್ ನ್ಯೂಸ್ ಮುಂದೆ ಓದಿ. ಗಂಟೆ ಅಲ್ಲಾಡಿಸಿಕೊಂಡು, ಬೀದಿ ಬೀದಿಯಲ್ಲಿ ಸುತ್ತುತ್ತಾ ಮಾರಾಟ ಮಾಡುವಂತ ಬಾಂಬೆ ಮಿಠಾಯಿ ಅರ್ಥಾತ್ ಕ್ಯಾಂಡಿಗೆ ಮಾರು ಹೋಗದ ಮಕ್ಕಳಿಲ್ಲ. ಅದರ ರುಚಿಗೆ ಜೋತು ಬಿದ್ದ ಅನೇಕ ಮಕ್ಕಳು ಗಂಟೆ ಶಬ್ದ ಕೇಳಿದರೇ ಸಾಕು ಪೋಷಕರಿಂದ ಹಣ ಪಡೆದು ಖರೀದಿಸಿ, ಬಾಯಿ ಚಪ್ಪರಿಸಿಕೊಂಡು ತಿಂದು ಬಿಡುತ್ತಾರೆ. ಈ ಮೂಲಕ ಕ್ಯಾಂಡಿಯ ಸ್ವಾದವನ್ನು ಸವಿಯುತ್ತಾರೆ. ತಮಿಳುನಾಡು, ಪುದುಚೇರಿಯಲ್ಲಿ ಕ್ಯಾಂಡಿ ಬ್ಯಾನ್ ಆದರೇ ಮಕ್ಕಳ ಫೇವರಿಟ್ ಬಾಂಬೆ ಮಿಠಾಯಿಯನ್ನು ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳಲ್ಲಿ ಸರ್ಕಾರವು ನಿಷೇಧಿಸಿದೆ. ಇದಕ್ಕೆ ಕಾರಣ ಅದರ ಬಣ್ಣದಲ್ಲಿ ಮಾರಣಾಂತಿಕ ಕ್ಯಾನ್ಸರ್ ಅಂಶ…
ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶರದ್ ಚಂದ್ರ ಪವಾರ್ ಅವರಿಗೆ ಚುನಾವಣಾ ಆಯೋಗ ಗುರುವಾರ ಹೊಸ ಪಕ್ಷದ ಚಿಹ್ನೆಯಾದ ಮ್ಯಾನ್ ಬ್ಲೋಯಿಂಗ್ ತುರ್ಹಾವನ್ನು ಮಂಜೂರು ಮಾಡಿದೆ. ಚುನಾವಣಾ ಆಯೋಗವು ಅಜಿತ್ ಪವಾರ್ ಬಣಕ್ಕೆ ಎನ್ಸಿಪಿ ಹೆಸರು ಮತ್ತು ಚಿಹ್ನೆಯನ್ನು ನೀಡಿದ ಕೆಲವು ದಿನಗಳ ನಂತರ, ಪಕ್ಷದ ಸಂಸ್ಥಾಪಕ ಶರದ್ ಪವಾರ್ ನೇತೃತ್ವದ ಶಿಬಿರವು ಹೊಸ ಚಿಹ್ನೆಯನ್ನು ಸ್ವೀಕರಿಸಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಶಾರದಚಂದ್ರ ಪವಾರ್) ಚಿಹ್ನೆಯು ‘ಮನುಷ್ಯ ಬೀಸುವ ತುರ್ಹಾ’ ಆಗಿದೆ. ‘ತುರ್ಹಾ’ ಎಂಬುದು ಸಾಂಪ್ರದಾಯಿಕ ತುತ್ತೂರಿಯಾಗಿದೆ. ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ಚುನಾವಣಾ ಆಯೋಗದ ನಿರ್ಧಾರವನ್ನು ಫೆಬ್ರವರಿ 7 ರಂದು ಹೊರಡಿಸಲಾಯಿತು. ಮುಂದಿನ ಆದೇಶದವರೆಗೆ ಶರದ್ ಪವಾರ್ ಬಣಕ್ಕೆ ನೀಡಲಾದ ಹೆಸರು ಉಳಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿತು. ಫೆಬ್ರವರಿ 7 ರ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಬಣ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಪೀಠವು ಚಿಹ್ನೆಗಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸುವ ಹಕ್ಕನ್ನು ಎನ್ಸಿಪಿ ಸಂಸ್ಥಾಪಕರಿಗೆ…
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ಹಾಜರಾಗುವಂತ ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿಯಿಂದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನಿಗಮ ಮಾಹಿತಿ ಹಂಚಿಕೊಂಡಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ದಿನಾಂಕ 01-03-2024 ರಿಂದ 22-03-2024ರವರೆಗೆ ನಡೆಯಲಿರುವುದರಿಂದ ಕ.ರಾ.ರ.ಸಾ.ನಿಗಮವು, ದ್ವಿತೀಯ ಪಿಯುಸಿವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ “ದ್ವಿತೀಯ ಪಿಯುಸಿವಾರ್ಷಿಕ ಪರೀಕ್ಷೆ ಪ್ರವೇಶ ಪತ್ರವನ್ನು” ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದೆ.
ಶಿವಮೊಗ್ಗ: ಜಿಲ್ಲೆಯ ಹೊಸನಗರದಲ್ಲಿ ಟಿಪ್ಪರ್ ಲಾರಿಗೆ ಓಮ್ನಿ ಕಾರು ಡಿಕ್ಕಿಯಾದ ಪರಿಣಾಮ, 6 ಜನರು ಗಂಭೀರವಾಗಿ ಗಾಯಗೊಂಡು, 6 ಜನರು ಸಣ್ಣಪುಟ್ಟ ಗಾಯವಾಗಿರೋ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪ ಬಳಿಯಲ್ಲಿ ಟಿಪ್ಪರ್ ಲಾರಿಗೆ ಓಮ್ನಿ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ಓಮ್ನಿಯಲ್ಲಿ ತೆರಳುತ್ತಿದ್ದಂತ 6 ಜನರು ಗಂಭೀರವಾಗಿ ಗಾಯಗೊಂಡಿದ್ದರೇ, ಇನ್ನೂ 6 ಜನರಿಗೆ ಸಣ್ಣಪುಟ್ಟ ಗಾಯವಾಗಿರೋದಾಗಿ ತಿಳಿದು ಬಂದಿದೆ. ಗಾಯಾಳುಗಳು ಎಲ್ಲರೂ ಹೊಸನಗರ ತಾಲೂಕಿನ ಬುಲ್ಡೋಜರ್ ಗುಡ್ಡ ಗ್ರಾಮದವರು. ಗಾಯಾಳುಗಳನ್ನು ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/parents-are-you-giving-bombay-mithai-to-your-children-heres-the-shocking-news/ https://kannadanewsnow.com/kannada/aleart-union-health-ministry-issues-warning-against-antibiotic-tablets/
ಬೆಂಗಳೂರು: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಕರ್ನಾಟಕ ಬಿಜೆಪಿಯಿಂದ ಮಾಡಲಾಗಿದ್ದಂತ ಮಾನಹಾನಿ ಕೇಸ್ ರದ್ದು ಪಡಿಸಲು ಹೈಕೋರ್ಟ್ ನಕಾರ ವ್ಯಕ್ತ ಪಡಿಸಿದೆ. ಈ ಮೂಲಕ ಕರ್ನಾಟಕ ಬಿಜೆಪಿಗೆ ಬಿಗ್ ಶಾಕ್ ನೀಡಲಾಗಿದೆ. 2019ರಲ್ಲಿ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಹಷದ್ ಅವರ ಬಗ್ಗೆ ಕರ್ನಾಟಕ ಬಿಜೆಪಿಯಿಂದ ನಕಲಿ ವೋಟರ್ ಐಡಿ ಕುರಿತಂತೆ ಟ್ವಿಟ್ ಮಾಡಲಾಗಿತ್ತು. ಈ ಟ್ವಿಟ್ ಮೂಲಕ ನನ್ನ ಮಾನಹಾನಿಯಾಗಿದೆ ಎಂಬುದಾಗಿ ಕೇಸ್ ಹಾಕಿದ್ದರು. ಬಿಜೆಪಿ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ದೂರು ನೀಡಿದ್ದರು. ಆದ್ರೇ ಈ ಪ್ರಕರಣ ಪ್ರಶ್ನಿಸಿ ಅಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಂತ ನಳೀನ್ ಕುಮಾರ್ ಕಟೀಲ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠವು, ರಾಜಕೀಯ ಪಕ್ಷದ ವಿರುದ್ಧ ಕೇಸ್ ಮುಂದುವರೆಸಬಹುದು ಎಂಬುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದೆ. ಅಲ್ಲದೇ ಕೇಸ್ ರದ್ದು ಪಡಿಸೋದಕ್ಕೆ ನಕಾರ ವ್ಯಕ್ತಪಡಿಸಿದೆ. https://kannadanewsnow.com/kannada/parents-are-you-giving-bombay-mithai-to-your-children-heres-the-shocking-news/ https://kannadanewsnow.com/kannada/aleart-union-health-ministry-issues-warning-against-antibiotic-tablets/
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಒಗ್ಗಟ್ಟಿನಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು ಗೆಲ್ಲಲೇಬೇಕು ಎಂಬ ಛಲ ದಿಂದ ಕೆಲಸ ಮಾಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಮುದ್ದಹಮುಮೇಗೌಡ ಅವರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮುದ್ದುಹನುಮೇ ಗೌಡರು ಮೂಲತಃ ಕಾಂಗ್ರೆಸ್ ನವರು. ಕಳೆದ ವಿಧಾನಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರ ತಪ್ಪಿನ ಅರಿವಾಗಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ. ತಪ್ಪು ಮಾಡಿದ್ದೇನೆ, ಕ್ಷಮೆ ಇರಲಿ ಎಂದು ಅವರು ಹೇಳಿದ್ದಾರೆ. ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪ ಮುಖ್ಯ. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪಕ್ಷಕ್ಕೆ ಯಾರೇ ಬಂದರೂ, ಬೇರೆ ನಮ್ಮ ಪಕ್ಷದವರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಎಲ್ಲಾ ಜಿಲ್ಲೆಯ…
ಬೆಂಗಳೂರು: ಆಡಳಿತ ಪಕ್ಷದವರು ಸದನದ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಖಂಡಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರಕಾರದ ಕ್ರಮಕ್ಕೆ ಸಭಾಧ್ಯಕ್ಷರು ಕೂಡ ಬೆಂಬಲ ನೀಡಿರುವುದು ದುರದೃಷ್ಟ ಎಂದು ಆಕ್ಷೇಪ ಸೂಚಿಸಿದರು. ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಸರಕಾರವು, ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಮಾಡದ ನಾಲಾಯಕ್ ಸರಕಾರವಾಗಿದೆ ಎಂದು ಅವರು ದೂರಿದರು. ಈ ನಾಲಾಯಕ್ ಕಾಂಗ್ರೆಸ್ ಸರಕಾರಕ್ಕೆ ಗ್ಯಾರಂಟಿಗಳಿಂದ ತಮ್ಮ ಗೆಲುವು ಸಾಧ್ಯವಿಲ್ಲ ಎಂಬ ಅರಿವಾಗಿದೆ. ಅದಕ್ಕಾಗಿಯೇ ಪದೇಪದೇ ನಿರ್ಣಯ ಮಂಡಿಸಿ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತೀವ್ರವಾಗಿ ಖಂಡಿಸಿದರು. ಸದನದ ಗೌರವವನ್ನು ಆಡಳಿತ ಪಕ್ಷವಾದ ಕಾಂಗ್ರೆಸ್ ನಾಶ ಮಾಡುತ್ತಿದೆ. ಬಿಜೆಪಿ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಹಾಗಾಗಿ ನಾವು ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ್ದೇವೆ. ಕಾನೂನು ಸಚಿವರ…
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ಪಕ್ಷಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಸೇರ್ಪಡೆಗೊಂಡಿದ್ದರು. ಇಂತಹ ಅವರು ಮತ್ತೆ ಘರ್ ವಾಪಸಿ ಎನ್ನುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಏನು ಹೇಳಇದ್ರು ಅಂತ ಮುಂದೆ ಓದಿ. ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಗೊಂಡ ನಂತ್ರ ಮಾತನಾಡಿದಂತ ಅವರು, ಮುದ್ದಹನುಮೇಗೌಡರು ಇಂದು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಸೇರಿದ್ದಾರೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರ ಪರವಾಗಿ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಪಕ್ಷದ ಶಿಸ್ತು. ಮುದ್ದಹನುಮೇಗೌಡರ ಪಕ್ಷ ಸೇರ್ಪಡೆ ವಿಚಾರವಾಗಿ ರಾಜಣ್ಣ, ವಾಸು ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ನಮ್ಮ ಜತೆ ಚರ್ಚೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು. ನಮಗೆ ಏನೇ ನೋವಾಗಿದ್ದರು ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಮಹಾತ್ಮಾ ಗಾಂಧಿ ಅವರಿಂದ ನೆಹರೂ ಕುಟುಂಬ ಮಾಡಿರುವ ತ್ಯಾಗದ ಮುಂದೆ ನಮ್ಮ ತ್ಯಾಗ ಗೌಣ. ನೆಹರೂ ಹಾಗೂ…