Subscribe to Updates
Get the latest creative news from FooBar about art, design and business.
Author: kannadanewsnow09
ಸ್ವಿಸ್: ಸ್ವಿಸ್ ನ್ಯಾಯಾಲಯವು ಬ್ರಿಟನ್ನ ಶ್ರೀಮಂತ ಕುಟುಂಬವಾದ ಹಿಂದೂಜಾಸ್ನ ನಾಲ್ವರು ಸದಸ್ಯರನ್ನು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಖುಲಾಸೆಗೊಳಿಸಿದೆ. ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಾದ ಪ್ರಕಾಶ್, ಕಮಲ್, ಅಜಯ್ ಮತ್ತು ನಮ್ರತಾ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಅನೇಕ ಭಾರತೀಯ ಕಾರ್ಮಿಕರನ್ನು ಕಳ್ಳಸಾಗಣೆ ಮಾಡಿದ, ಅವರ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡ ಮತ್ತು ವಿಲ್ಲಾದಲ್ಲಿ ಓವರ್ಟೈಮ್ ಪರಿಹಾರವನ್ನು ಪಡೆಯದೆ 16 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವಂತೆ ಮಾಡಿದ ಆರೋಪ ಅವರ ಮೇಲಿದೆ. ಹಿಂದೂಜಾಸ್ ವಕೀಲರು ಆರೋಪಗಳನ್ನು ನಿರಾಕರಿಸಿದ್ದಾರೆ. ಹಿಂದೂಜಾ ಕುಟುಂಬವು ಬ್ಯಾಂಕಿಂಗ್, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್, ಆಟೋಮೊಬೈಲ್ ಉತ್ಪಾದನೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಗಮನಾರ್ಹ ಹಿಡುವಳಿಗಳನ್ನು ಹೊಂದಿರುವ ಜಾಗತಿಕ ಸಮೂಹದ ಉಸ್ತುವಾರಿ ವಹಿಸಿದೆ. ಲಂಡನ್ ನ ಸಂಡೇ ಟೈಮ್ಸ್ ಈ ಕುಟುಂಬವನ್ನು ಬ್ರಿಟನ್ ನ ಅತ್ಯಂತ ಶ್ರೀಮಂತ ಕುಟುಂಬವೆಂದು ಹೆಸರಿಸಿದೆ, ಇದು ಇತ್ತೀಚೆಗೆ ಅವರ ನಿವ್ವಳ ಮೌಲ್ಯವನ್ನು 37 ಬಿಲಿಯನ್ ಪೌಂಡ್ ಅಥವಾ 47 ಬಿಲಿಯನ್ ಡಾಲರ್ ಎಂದು ಲೆಕ್ಕಹಾಕಿದೆ. ಸ್ವಿಸ್ ಮಾಧ್ಯಮಗಳ…
ಬೆಂಗಳೂರು: ಕಲ್ಯಾಣ ಕರ್ನಾಟಕ ಜನತೆಗೆ ಸಾರಿಗೆ ಸೌಲಭ್ಯ ಒದಗಿಸೋದಕ್ಕೆ ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಹೊಸ ಬಸ್ ವ್ಯವಸ್ಥೆ ಮಾಡಿದ್ದರು. ಜೊತೆಗೆ ಹೊಸದಾಗಿ ಬಸ್ ಖರೀದಿ ನಿರ್ಧಾರ ಕೈಗೊಂಡಿದ್ದರು. ಈ ಬೆನ್ನಲ್ಲೇ ಸಮಗ್ರ ಸಾರಿಗೆ ಸೌಲಭ್ಯಗಳ ಅಭಿವೃದ್ಧಿಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಅದೇನು ಅಂತ ಮುಂದೆ ಓದಿ. ಮುಖ್ಯಮಂತ್ರಿಗಳ ಅನುದಾನ/ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಸಂಸ್ಥೆಯ ಅನುದಾನದ ಅಡಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಗತ್ಯ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ದಿನಾಂಕ 20-06-2024 ರಂದು ನಡೆದ ಕೆಕೆ ಆರ್ ಟಿ ಸಿ ಯ ಮಂಡಳಿ ಸಭೆಯಲ್ಲಿ ಮಾನ್ಯ ಸಾರಿಗೆ ಸಚಿವರು ಹಾಗೂ ಅಧ್ಯಕ್ಷರು ಕೆ ಕೆ ಆರ್ ಟಿ ಸಿ ರವರು, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಹೊಸ ಬಸ್ಸುಗಳು, ಡಿಜಿಟಲ್ ಟಿಕೇಟ್ ಯಂತ್ರಗಳು (ಅ್ಯಡ್ರಾಯಡ್ ಆದಾರಿತ) ಹಾಗೂ ಹಲವು ಬಸ್ ನಿಲ್ದಾಣಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಕಕರಸಾ ನಿಗಮಕ್ಕೆ 2024 -2025 ಸಾಲಿನಲ್ಲಿ…
ಶಿವಮೊಗ್ಗ: ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಶಾಸಕರಿಗೆ ಬೆಂಬಲವನ್ನು ತಾಳಗುಪ್ಪ ಹೋಬಳಿಯ ಸೈದೂರು ವ್ಯವಸಾಯ ಸೇವಾ ಸಂಘದ ಪ್ರಮುಖರು ಘೋಷಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ರಾಮಪ್ಪ ಸೈದೂರು ಅವರು, ಸೈದೂರು ವ್ಯವಸಾಯ ಸೇವಾ ಸಂಘದ ಪ್ರಮುಖರೆಲ್ಲರೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಇವರೊಂದಿಗೆ ಹಿರೆನೆಲ್ಲೂರು ರವಿ ತಾಳಗುಪ್ಪ, ಮಂಜುನಾಥ ಶಿರವಂತೆ, ಗಣಪತಿ ಬರದವಳ್ಳಿ, ಕಾರ್ಗಲ್ ವೆಂಕಟರಮಣ, ಸೈದೂರು ಬಸವರಾಜ್ ಕುಗ್ವೆ ಅವರು ಕೂಡ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. https://youtu.be/Ttz2bd8aNN4?si=8vkD-l1Fky7PSqAm ಅಂದಹಾಗೆ ಎರಡು ದಿನಗಳ ಹಿಂದೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತ ವೇಳೆಯಲ್ಲಿ ಈ ಮುಖಂಡರು ಶಾಸಕರೊಂದಿಗೆ ಉಪಸ್ಥಿತರಾಗಿದ್ದರು. ಈ ಸಂದರ್ಭದಲ್ಲೇ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.…
ನವದೆಹಲಿ: ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು ಜೂನ್-2024 ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ಈಗಾಗಲೇ ನೀಟ್ ಪರೀಕ್ಷಾ ಅಕ್ರಮದ ನಂತ್ರ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಎನ್ ಟಿಎಯಿಂದ ಜಂಟಿ ಸಿಎಸ್ಐಆರ್ ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನ್ 25 ರಿಂದ 27 ರವರೆಗೆ ನಿಗದಿಯಾಗಿದ್ದ ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು “ಅನಿವಾರ್ಯ ಸಂದರ್ಭಗಳು” ಮತ್ತು ಲಾಜಿಸ್ಟಿಕ್ ಸಮಸ್ಯೆಗಳಿಂದಾಗಿ ಮುಂದೂಡಿದೆ. ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಅಧಿಕೃತ ಎನ್ಟಿಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. https://twitter.com/THE_SQUADR0N/status/1804177054331502842 https://kannadanewsnow.com/kannada/if-your-basic-salary-is-rs-12000-do-you-know-how-many-lakhs-of-pf-will-come-after-retirement/ https://kannadanewsnow.com/kannada/98-indians-not-68-died-during-haj-pilgrimage-mea/
ನವದೆಹಲಿ: ನೀಟ್-ಯುಜಿ 2024 ಪರೀಕ್ಷೆಯ ( NEET-UG 2024 Exam ) ಜುಲೈ 6 ರಿಂದ ಪ್ರಾರಂಭವಾಗಲಿರುವ ಕೌನ್ಸೆಲಿಂಗ್ ದಿನಾಂಕವನ್ನು ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ಆದೇಶದಲ್ಲಿ ನಿರಾಕರಿಸಿದೆ. ಮೇ 5 ರಂದು ಪರೀಕ್ಷೆಯನ್ನು ನಡೆಸುವಲ್ಲಿನ ಅಕ್ರಮಗಳ ಬಗ್ಗೆ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency -NTA), ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದೆ ಮತ್ತು ಆಯಾ ಉತ್ತರಗಳನ್ನು ಕೋರಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ನೇತೃತ್ವದ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ರಜಾಕಾಲದ ಪೀಠವು ನೀಟ್ ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮೂರು ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿತು. ಪ್ರಶ್ನೆ ಪತ್ರಿಕೆ ಸೋರಿಕೆ, ನೀಟ್-ಯುಜಿ 2024 ಪರೀಕ್ಷೆ ರದ್ದತಿ ಮತ್ತು ಕೌನ್ಸೆಲಿಂಗ್ ಮತ್ತು ಇದೇ ರೀತಿಯ ಇತರ ಪ್ರಾರ್ಥನೆಗಳ ಬಗ್ಗೆ ಸಿಬಿಐ (ಸಿಬಿಐ) ತನಿಖೆ ನಡೆಸಬೇಕೆಂದು ಕೋರಿ ಹಿತೇನ್ ಸಿಂಗ್…
ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ, ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಕುಟುಂಬಕ್ಕೆ ಮತ್ತೊಂದು ಶಾಕ್ ನೀಡಲಾಗಿದೆ. ಅದೇ ವಿಧಾನ ಪರಿಷತ್ ಸದಸ್ಯ ಡಾ.ಸೂರತ್ ರೇವಣ್ಣ ವಿರುದ್ಧ ಜೆಡಿಎಸ್ ಕಾರ್ಯಕರ್ತನೊಬ್ಬ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಈ ಕುರಿತಂತೆ ಸಂತ್ರಸ್ತರೊಬ್ಬರು ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್, ಡಿಜಿ ಮತ್ತು ಐಜಿಪಿ ಹಾಗೂ ಹಾಸನ ಎಸ್ಪಿಗೆ ದೂರು ನೀಡಿದ್ದಾರೆ. ಅದರಲ್ಲಿ ಜೂನ್.16ರಂದು ಸೂರಜ್ ರೇವಣ್ಣ ಅವರು ತಮ್ಮ ಪಕ್ಷದ ಕಾರ್ಯಕರ್ತನನ್ನು ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು, ಬಲವಂತವಾಗಿ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಜೆಡಿಎಸ್ ಕಾರ್ಯಕರ್ತರೊಬ್ಬರು ಸಲ್ಲಿಸಿದಂತ ದೂರಿನ ಹಿನ್ನಲೆಯಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ನಂತ್ರ ಈಗ ಸೂರಜ್ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ. https://kannadanewsnow.com/kannada/98-indians-not-68-died-during-haj-pilgrimage-mea/…
ಬೆಂಗಳೂರು : “ಮುಂದಿನ ಒಂದು ವಾರದೊಳಗೆ ಜಾಹೀರಾತು ನೀತಿಯ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು “ಕರಡು ಪ್ರತಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಜಾಹೀರಾತು ನೀತಿ ಬಾಕಿ ಉಳಿದಿತ್ತು. ಪ್ರಸ್ತುತ ಸಂಘ, ಸಂಸ್ಥೆಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದರು. 60 ಅಡಿಗಿಂತ ಹೆಚ್ಚು ಅಗಲ ಇರುವ ರಸ್ತೆಗಳಲ್ಲಿ ‘ಗ್ರೂಪ್ ಪ್ಯಾಕೇಜ್’ ತಯಾರಿಸಿ ಅವಕಾಶ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹಿರಾತು ನೀಡಲು ಅವಕಾಶ ನೀಡಲಾಗುವುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದು. ಕಟ್ಟಡಗಳ ವಿಸ್ತೀರ್ಣ, ಎತ್ತರಕ್ಕೆ ತಕ್ಕಂತೆ ಯೂನಿಫಾರ್ಮಿಟಿ ತರಲಾಗುವುದು. ಮನಬಂದಂತೆ ಹಾಕಲು ಅವಕಾಶವಿಲ್ಲ. ಫಲಕಗಳನ್ನು ಮಾಡಲು ಯಾವ ಗುಣಮಟ್ಟದ ವಸ್ತು ಬಳಸಬೇಕು ಎಂದು…
ಬೆಂಗಳೂರು: ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ ಇಂಡಿಯಾ, ರಿವರ್ ಮೊಬಿಲಿಟಿ, ವೆಗಾ ಆಟೊ ಆ್ಯಕ್ಸೆಸರೀಸ್, ಮಿರ್ರಾ ಆ್ಯಂಡ್ ಮಿರ್ರಾ ಇಂಡಸ್ಟ್ರೀಸ್, ಸೇರಿದಂತೆ ಒಟ್ಟಾರೆ 64 ಯೋಜನೆಗಳ ₹3,587 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಶುಕ್ರವಾರ ನಡೆದ 146 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅನುಮೋದನೆ ಪಡೆದ ಯೋಜನೆಗಳಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ಹಾಲು ಉತ್ಪಾದನಾ ಘಟಕಗಳು ಸೇರಿವೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀಡಿರುವ ಅನುಮೋದನೆಗಳಿಂದ ರಾಜ್ಯದಲ್ಲಿ 13,896 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಹಾವೇರಿ, ಗದಗ, ಮೈಸೂರು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ದೊರೆಯಲಿರುವುದರ ಜೊತೆಗೆ ಹೊಸ…
ಹುಣ್ಣಿಮೆ ವಿಶೇಷ ಮತ್ತು ಶುಕ್ರವಾರದ ಹುಣ್ಣಿಮೆ ತುಂಬಾ ವಿಶೇಷವಾಗಿದೆ. ಸಕಲ ದೇವತೆಗಳ ಕೃಪೆಗೆ ಪಾತ್ರರಾಗಲು ಹುಣ್ಣಿಮೆಯಂದು ದೇವತಾರಾಧನೆ ಬಹಳ ಮುಖ್ಯ. ದೇವಸ್ಥಾನಕ್ಕೆ ಹೋಗಿ ಮನೆಯಲ್ಲಿ ಪೂಜೆ ಮಾಡಲು ಸಾಧ್ಯವಾಗದವರು ದೀಪವನ್ನು ಹಚ್ಚಿ ಮಹಾಲಕ್ಷ್ಮಿಯ ಹಾಡುಗಳು ಮತ್ತು ಮಂತ್ರಗಳನ್ನು ಪಠಿಸಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ…
ಬೆಂಗಳೂರು: ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಭಾರೀ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು. ಖನಿಜ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಸದಸ್ಯರ ಜತೆ ನಡೆದ ಸಭೆಯಲ್ಲಿ ಸಚಿವರು ಈ ಘೋಷಣೆ ಮಾಡಿದರು. ದಲಿತ ಉದ್ದಿಮೆದಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಈ ಸಮಿತಿ ಮಾಡಲಿದೆ ಎಂದು ಅವರು ಹೇಳಿದರು. ನಿಯಮಗಳ ಪ್ರಕಾರ ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ದಿಮೆದಾರರಿಗೆ ಶೇಕಡ 24.10ರಷ್ಟು ಕೈಗಾರಿಕಾ ನಿವೇಶನ ಗಳನ್ನು ಹಂಚಲು ಸರಕಾರ ಬದ್ಧವಾಗಿದೆ. ಇದರಂತೆ, ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನೂ 391 ಎಕರೆಯಷ್ಟು ಜಾಗವನ್ನು ಪರಿಶಿಷ್ಟರಿಗೆ ಹಂಚುವುದು ಬಾಕಿ ಇದನ್ನು ಆದಷ್ಟು ಬೇಗ ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳಿದರು.…