Author: kannadanewsnow09

ಬೆಂಗಳೂರು: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸುವ ಕುಸುಮ್-ಸಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 11 ರಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕುಸುಮ್- ಸಿ ಯೋಜನೆಯ ಉದ್ಘಾಟನೆ ಕುರಿತ ಕರ್ಟನ್ ರೈಸರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೂನ್ 11, ಬುಧವಾರ ಬೆಳಗ್ಗೆ 10.30 ಗಂಟೆಗೆ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣೆ ಸಚಿವರಾದ ಪ್ರಲ್ಹಾದ್ ಜೋಶಿ, ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀಪಾದ್‌ ಯೆಸ್ಸೋ ನಾಯಕ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಡಾ.ಎಂ.ಸಿ.ಸುಧಾಕರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ,” ಎಂದರು. “ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ಕುಸುಮ್-ಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನೀರಾವರಿಗೆ ವಿದ್ಯುತ್ ಪೂರೈಸುವ ಫೀಡರ್‌ಗಳ ಬಳಿ ಸೋಲಾರ್ ಘಟಕಗಳನ್ನು…

Read More

ಬೆಂಗಳೂರು: ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆಯಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದಂತ ಪ್ರಕರಣ ಸಂಬಂಧ ನಿಖಿಲ್ ಸೋಸಲೆ ಎಂಬುವರನ್ನು ಬಂಧಿಸಲಾಗಿತ್ತು. ಈ ಬಂಧನ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ಬಂಧನಕ್ಕೆ ಒಳಗಾದವರ ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಿದೆ. ಇಂದು ಸಿಸಿಬಿಯು ಅಕ್ರಮವಾಗಿ ತಮ್ಮನ್ನು ಬಂಧಿಸಲಾಗಿದೆ ಎಂಬುದಾಗಿ ಆರ್ ಸಿ ಬಿ ಮ್ಯಾನೇಜರ್ ನಿಖಿಲ್ ಸೋಸಲೆ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ನಿಖಿಲ್ ಸೋಸಲೆ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ಅವರು ವಾದಿಸಿದರು. ರಾಜ್ಯ ಸರ್ಕಾರ ಸಿಸಿಬಿಯಿಂದ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ದುರಂತ ಪ್ರಕರಣದಲ್ಲಿ ತಮ್ಮ ಕಕ್ಷಿದಾರರನ್ನು ಬಂಧಿಸಲಾಗಿದ. ಇದು ಕಾನೂನು ಉಲ್ಲಂಘಿಸಿ ಬಂಧಿಸಿದಂತ ಬಂಧನವಾಗಿದೆ. ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು ನೀಡುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ವೇಳೆ ಹೈಕೋರ್ಟ್ ನಿಖಿಲ್ ಸೋಸಲೆಯನ್ನು ಬಂಧಿಸುವಂತ ಅಧಿಕಾರ ಸಿಸಿಬಿಗೆ ಇತ್ತೆ ಎಂಬುದಾಗಿ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದಂತ…

Read More

ಬೆಂಗಳೂರು: ಸಾರಿಗೆ ಇಲಾಖೆಗೆ ಶುಲ್ಕ, ತೆರಿಗೆ ಮತ್ತು ದಂಡದ ರೂಪದಲ್ಲಿ ಜಮೆ ಆಗಬೇಕಿದ್ದಂತ ಮೊತ್ತವನ್ನು ಕಟ್ಟದೇ ಕರ್ತವ್ಯ ಲೋಪವೆಸಗಿದಂತ ದ್ವಿತೀಯ ದರ್ಜೆ ಸಹಾಯಕನನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರು ನಡವಳಿಯನ್ನು ಹೊರಡಿಸಿದ್ದು, ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಛೇರಿಯ ಖಜಾನೆ ವಿಭಾಗದಲ್ಲಿ ದೈನಂದಿನ ಸಂಗ್ರಹವಾಗುವ ಶುಲ್ಕ, ತೆರಿಗೆ ಮತ್ತು ದಂಡಗಳ ಮೊತ್ತವನ್ನು ಅದೇ ದಿನ ಅಥವಾ ಕೆಲಸದ ಅವಧಿಯ ನಂತರದ ದಿನದಂದು ಸರ್ಕಾರದ ಖಜಾನೆಗೆ ಕೆ-2 ಚಲನ್ ಮುಖಾಂತರ ಪಾವತಿಸುವುದು KFC & KTC ಕಾಯ್ದೆಯನ್ವಯ ಕಡ್ಡಾಯವಾಗಿರುತ್ತದೆ. ಆದರೆ 2025ರ ಮೇ ತಿಂಗಳ ದಿನಾಂಕ: 21, 26 ರಿಂದ 31 ರ ಅವಧಿಯ ಒಟ್ಟು 7 ಕರ್ತವ್ಯ ದಿನಗಳ ಖಜಾನೆ ವಸೂಲಾತಿಯ ಒಟ್ಟು ರೂ.16,72,518/- ಸರ್ಕಾರಕ್ಕೆ ಸಂದಾಯ ಮಾಡಿರೋದಿಲ್ಲ. ಒಟ್ಟು 7 ದಿನಗಳ ಖಜಾನೆ ಸಂಗ್ರಹಣೆ ಮೊತ್ತ ರೂ. 16,72,518/- ನ್ನು ಸರ್ಕಾರಕ್ಕೆ ಪಾವತಿಸದೇ ತಾತ್ಕಾಲಿಕವಾಗಿ ಸರ್ಕಾರದ ರಾಜನ್ಯವು ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು…

Read More

ನವದೆಹಲಿ: ಸ್ವಾಯತ್ತ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಭಾರತವು ಸೋಮವಾರ ಎತ್ತರದ ಭೂಪ್ರದೇಶದಲ್ಲಿ ಕೃತಕ ಬುದ್ಧಿಮತ್ತೆ-ಸಕ್ರಿಯಗೊಳಿಸಿದ ಲೈಟ್ ಮೆಷಿನ್ ಗನ್ (LMG) ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಡೆಹ್ರಾಡೂನ್ ಮೂಲದ ರಕ್ಷಣಾ ಸಂಸ್ಥೆ BSS ಮೆಟೀರಿಯಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದ, AI-ಚಾಲಿತ ನೆಗೆವ್ LMG ಅನ್ನು ಭಾರತೀಯ ಸೇನೆಯ ಸಹಯೋಗದೊಂದಿಗೆ 14,000 ಅಡಿ ಎತ್ತರದಲ್ಲಿ ಪ್ರಯೋಗಗಳಿಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯು ಸವಾಲಿನ ಪರ್ವತ ಪರಿಸರದಲ್ಲಿ ಗುರಿಗಳನ್ನು ಸ್ವಾಯತ್ತವಾಗಿ ಗುರುತಿಸುವ ಮತ್ತು ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇದು ಭಾರತದ ಕಠಿಣ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆಗಳಿಗೆ ನಿರ್ಣಾಯಕ ಪ್ರಯೋಜನವಾಗಿದೆ. ಕಾರ್ಯಕ್ಷಮತೆ ಮತ್ತು ನಿಖರತೆಯ ಮೇಲೆ ಕೇಂದ್ರೀಕರಿಸಿದ ಪ್ರಯೋಗಗಳು, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್ ಭಾರತ್’ ಉಪಕ್ರಮಗಳ ಅಡಿಯಲ್ಲಿ ಸ್ಥಳೀಯ ನಾವೀನ್ಯತೆಯ ಮೂಲಕ ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ವಿಶಾಲವಾದ ಪ್ರಯತ್ನದ ಭಾಗವಾಗಿದೆ. BSS ಮೆಟೀರಿಯಲ್ ಪ್ರಕಾರ, AI-ಸಂಯೋಜಿತ ವ್ಯವಸ್ಥೆಯು ಪ್ರಯೋಗಗಳ ಉದ್ದಕ್ಕೂ ಸ್ಥಿರವಾದ ಗುರಿ ಸ್ವಾಧೀನ, ಹೊಂದಾಣಿಕೆಯ ಬೆಂಕಿ ನಿಯಂತ್ರಣ ಮತ್ತು…

Read More

ನವದೆಹಲಿ: ಸೌದಿ ಅರೇಬಿಯಾಕ್ಕೆ ಭಾರತೀಯರು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ ಎಂಬ ವರದಿಗಳು ತಪ್ಪು ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ. ಸೌದಿ ಸರ್ಕಾರ ಈ ವಿಷಯದ ಬಗ್ಗೆ ಯಾವುದೇ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ಅವರು ಹೇಳಿದರು. ಸೌದಿ ಸರ್ಕಾರವು ಆ ದೇಶಕ್ಕೆ ಪ್ರಯಾಣಿಸುವ ಭಾರತೀಯರ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ಕೆಲವು ವರದಿಗಳು ಹೇಳಿಕೊಂಡ ನಂತರ ಈ ಸ್ಪಷ್ಟೀಕರಣ ಬಂದಿದೆ. “ಪ್ರಾಯೋಗಿಕವಾಗಿ, ಹಜ್ ಋತುವಿನಲ್ಲಿ, ಹಜ್ ಮುಕ್ತಾಯದೊಂದಿಗೆ ಕೊನೆಗೊಳ್ಳುವ ಈ ಋತುವಿನಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಅಲ್ಪಾವಧಿಯ ವೀಸಾಗಳ ಮೇಲೆ ತಾತ್ಕಾಲಿಕ ನಿರ್ಬಂಧಗಳಿವೆ” ಎಂದು ಮೂಲವೊಂದು ತಿಳಿಸಿದೆ. https://kannadanewsnow.com/kannada/complete-ban-on-the-use-of-plastic-including-water-bottles-in-the-states-muzarai-temples/ https://kannadanewsnow.com/kannada/second-puc-exam-3-starts-from-june-9-free-travel-allowed-on-bmtc-buses/

Read More

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಆಗಸ್ಟ್.15ರಿಂದ ನೀರಿನ ಬಾಟಲಿ ಸೇರಿದಂತ ಎಲ್ಲಾ ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇಂದು ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಜರಾಯಿ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ ಆಗಸ್ಟ್.15ರಿಂದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸುತ್ತಿರುವುದಾಗಿ ಹೇಳಿದರು. ಆಗಸ್ಟ್.15ರಿಂದ ಮುಜರಾಯಿ ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು 2 ತಿಂಗಳ ಸಮಯಾವಕಾಶ ನೀಡಲಾಗಿದೆ. ಈಗಾಗಲೇ ಪ್ಲಾಸ್ಟಿಕ್ ವಸ್ತುಗಳನ್ನು ದೇವಾಲಯಗಳಲ್ಲಿ ಖರೀದಿಸಿದ್ದರೇ ಬಳಕೆ ಮಾಡಬಹುದು. 2 ತಿಂಗಳ ಬಳಿಕ ಮಾಡುವಂತಿಲ್ಲ ಎಂಬುದಾಗಿ ಹೇಳಿದರು. https://kannadanewsnow.com/kannada/second-puc-exam-3-starts-from-june-9-free-travel-allowed-on-bmtc-buses/ https://kannadanewsnow.com/kannada/explosion-reported-aboard-singapore-flagged-container-ship-off-kerala-coast/

Read More

ನವದೆಹಲಿ: INSACOG ದತ್ತಾಂಶದ ಪ್ರಕಾರ, ಭಾರತದಲ್ಲಿ ಇಲ್ಲಿಯವರೆಗೆ ಹೊಸದಾಗಿ ಹೊರಹೊಮ್ಮುತ್ತಿರುವ ಕೋವಿಡ್-19 ರೂಪಾಂತರ XFG ಯ ಸುಮಾರು 163 ಪ್ರಕರಣಗಳು ಪತ್ತೆಯಾಗಿವೆ. ಮರುಸಂಯೋಜಿತ XFG ರೂಪಾಂತರವು ನಾಲ್ಕು ಪ್ರಮುಖ ಸ್ಪೈಕ್ ರೂಪಾಂತರಗಳನ್ನು ಹೊಂದಿದೆ. ಕೆನಡಾದಲ್ಲಿ ಅದರ ಆರಂಭಿಕ ಪತ್ತೆಯ ನಂತರ ವೇಗವಾಗಿ ಜಾಗತಿಕವಾಗಿ ಹರಡಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನ ಲೇಖನವೊಂದು ತಿಳಿಸಿದೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನ ಮಾಹಿತಿಯ ಪ್ರಕಾರ, ಕೋವಿಡ್-19-ಉಂಟುಮಾಡುವ ವೈರಸ್‌ನ XFG ರೂಪಾಂತರವು ಒಟ್ಟು 163 ಮಾದರಿಗಳಲ್ಲಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು (89), ನಂತರ ತಮಿಳುನಾಡು (16), ಕೇರಳ (15), ಗುಜರಾತ್ (11), ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ (ತಲಾ ಆರು) ಪ್ರಕರಣಗಳು ವರದಿಯಾಗಿವೆ. ಮೇ ತಿಂಗಳಲ್ಲಿ, XFG ರೂಪಾಂತರದೊಂದಿಗೆ 159 ಮಾದರಿಗಳು ಪತ್ತೆಯಾಗಿದ್ದರೆ, ಏಪ್ರಿಲ್‌ನಲ್ಲಿ ಈ ರೂಪಾಂತರಕ್ಕಾಗಿ ಎರಡು ಮಾದರಿಗಳನ್ನು ಮತ್ತು ಜೂನ್‌ನಲ್ಲಿ ಎರಡು ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಡೇಟಾ ತೋರಿಸುತ್ತದೆ. ಭಾನುವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ…

Read More

ನವದೆಹಲಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ತಹವ್ವೂರ್ ರಾಣಾಗೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಕೋರ್ಟ್ ಅನುಮತಿ ನೀಡಿದೆ. ಈ ಕುರಿತಂತೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಕುಟುಂಬಸ್ಥರಿಗೆ ಕರೆ ಮಾಡಿ ಪೋನ್ ಮೂಲಕ ಮಾತನಾಡಲು ಉಗ್ರ ಉಗ್ರ ತಹವ್ವೂರ್ ರಾಣಾಗೆ ಅವಕಾಶ ನೀಡಿದೆ. ಒಮ್ಮೆ ಮಾತ್ರ ಕರೆ ಮಾಡಿ ಮಾತನಾಡಲು ಕೋರ್ಟ್ ಅವಕಾಶ ನೀಡಿದೆ. ಉಗ್ರ ಉಗ್ರ ತಹವ್ವೂರ್ ರಾಣಾ ಮಾತನಾಡುವಾಗ ಜೈಲಾಧಿಕಾರಿ ಸಹ ಇರುವಂತೆ ಷರತ್ತು ವಿಧಿಸಲಾಗಿದೆ. ಸದ್ಯ ಉಗ್ರ ರಾಣಾ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. https://kannadanewsnow.com/kannada/heavy-rain-in-various-parts-of-bengaluru-metropolis/ https://kannadanewsnow.com/kannada/explosion-reported-aboard-singapore-flagged-container-ship-off-kerala-coast/

Read More

ಬೆಂಗಳೂರು: ನಗರದಲ್ಲಿ ಮಳೆ ಆರಂಭಗೊಂಡಿದೆ. ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ. ಬೆಂಗಳೂರಿನ ಶಾಂತಿನಗರ, ಕಬ್ಬನ್ ಪಾರ್ಕ್, ಲಾಲ್ ಬಾಗ್, ರಿಚ್ಮಂಡ್ ಸರ್ಕಲ್, ಎಂ.ಜಿ ರೋಡ್, ಟೌನ್ ಹಾನ್, ಕೆ ಆರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಪರದಾಡುವಂತೆ ಆಗಿದೆ. https://kannadanewsnow.com/kannada/june-14-is-the-deadline-for-free-aadhar-card-renewal-follow-this-step-update/ https://kannadanewsnow.com/kannada/explosion-reported-aboard-singapore-flagged-container-ship-off-kerala-coast/

Read More

ಬೆಂಗಳೂರು: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್‍ಸೈಟ್ http://sevasindhu.karnataka.gov.in ಮುಖಾಂತರ ಗ್ರಾಮಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಜುಲೈ 4 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ http://ambigaradevelopment.karnataka.gov.in ಅಥವಾ ದೂ.ಸಂ: 08192-230934 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ. ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ ದಾವಣಗೆರೆ (ಕರ್ನಾಟಕ ವಾರ್ತೆ)ಜೂನ್ 6: ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ವೆಬ್‍ಸೈಟ್ www.kaushalkar.com ಮುಖಾಂತರ ಗ್ರಾಮಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಜೂನ್ 30 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.kadd.karnataka.gov.in…

Read More