Author: kannadanewsnow09

ಪಣಜಿ: ಮೈಂಡ್ಫುಲ್ ಎಐ ಲ್ಯಾಬ್ನ ಸ್ಥಾಪಕಿ ಮತ್ತು ಸಿಇಒ ಮತ್ತು ಬೆಂಗಳೂರು ನಿವಾಸಿ ಸುಚನಾ ಸೇಠ್ (39) ಉತ್ತರ ಗೋವಾದ ಕರಾವಳಿ ಪ್ರದೇಶದಲ್ಲಿರುವ ಕ್ಯಾಂಡೋಲಿಮ್ನ ಹೋಟೆಲ್ನಲ್ಲಿ ತನ್ನ 4 ವರ್ಷದ ಮಗನನ್ನು ಕೊಲೆ ಮಾಡಿದ್ದಾರೆ. ಇಬ್ಬರೂ ಮಗುವಿನ ವಶಕ್ಕಾಗಿ ಹೋರಾಡುತ್ತಿದ್ದರು. ಹುಡುಗನನ್ನು ಉಸಿರುಗಟ್ಟಿಸಿ ಮತ್ತು ಕೆಲವು ಚೂಪಾದ ವಸ್ತುವನ್ನು ಬಳಸಿ ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದಲ್ಲಿ ಇದೀಗ ಕೋರ್ಟ್ ಬಂಧಿತ ಆರೋಪಿ ಸುಚನಾಗೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಚಿತ್ರದುರ್ಗದ ಐಮಂಗಳ ಪೊಲೀಸರಿಂದ ಸ್ವಂತ ಮಗನನ್ನೇ ಕೊಂದಂತ ಮೈಂಡ್ಬುಲ್ ಎಐ ಲ್ಯಾಬ್ ನ ಸಿಇಓ ಸುಚನಾ ಸೇಠ್ ಅನ್ನು ಬಂಧಿಸಲಾಗಿತ್ತು. ಆ ಬಳಿಕ ಗೋವಾ ಪೊಲೀಸರಿಗೆ ಆಕೆಯನ್ನು ಹಸ್ತಾಂತರಿಸಲಾಗಿತ್ತು. ಇಂದು ಗೋವಾ ಪೊಲೀಸರು ಸುಚನಾ ಅವರನ್ನು ಮಾಪುಸಾ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದಂತ ಕೋರ್ಟ್ ಮುಂದೆ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಸ್ವಂತ ಮಗನನ್ನೇ ಕೊಂದ ಸಿಇಓ ಸುಚನಾ…

Read More

ಬೆಂಗಳೂರು: ರಾಜ್ಯ ಜೆಡಿಎಸ್ ನಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ಗರಿಗೆದರಿದೆ. ಲೋಕಸಭಾ ಚುನಾವಣೆ ಸಂಬಂಧ ಈಗಾಗಲೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವಂತ ಜೆಡಿಎಸ್, ಕ್ಷೇತ್ರಗಳಲ್ಲಿ ಈಗಿನಿಂದಲೇ ಗೆಲ್ಲೋದಕ್ಕೆ ಪ್ಲಾನ್ ಮಾಡುತ್ತಿದೆ. ಇದಕ್ಕಾಗಿ ಇಂದಿನಿಂದ 2 ದಿನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ಪಾಲಿಟಿಕ್ಸ್ ಆರಂಭಿಸುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದಲ್ಲಿರುವಂತ ರೆಸಾರ್ಟ್ ಒಂದರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು, ಮುಂಡರ ಸಭೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದಿನಿಂದ ಎರಡು ದಿನ ಮಾಡುತ್ತಿದ್ದಾರೆ. ಇಂದು ಸಂಜೆಯ ವೇಳೆಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರೊಂದಿಗೆ ರೆಸಾರ್ಟ್ ಗೆ ತೆರಳುತ್ತಿರೋ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ಅಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವ ರೀತಿಯಾಗಿ ಚುನಾವಣೆ ಎದುರಿಸಬೇಕು. ಕಾಂಗ್ರೆಸ್ ಪೈಪೋಟಿಯ ನಡುವೆ ಕ್ಷೇತ್ರವನ್ನು ಹೇಗೆ ಕೆದ್ದುಕೊಳ್ಳಬೇಕು ಎನ್ನುವ ಬಗ್ಗೆ ಎರಡು ದಿನ…

Read More

ಬೆಂಗಳೂರು: ಕನ್ನಡ ನಾಮಫಲಕ ಹಾಕೋ ಸಂಬಂಧ ವಾಣಿಜ್ಯ ಮಳಿಗೆಗಳ ಮುಂದಿದ್ದಂತ ಬೋರ್ಡ್ ಹೊಡೆದು ಹಾಕಿದ ಪ್ರಕರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ ಬಳಿಕ ಬಿಡುಗಡೆಯಾಗಿದ್ರು. ಆದ್ರೇ ಇದೀಗ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಮತ್ತೆ ಕರವೇ ಅಧ್ಯಕ್ಷ ಜೈಲುಪಾಲಾಗಿದ್ದಾರೆ. 2017ರಲ್ಲಿ ನಡೆದಂತ ಪ್ರಕರಣ ಸಂಬಂಧ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಸಲ್ಲಿಸಲಾಗಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. ಈ ಹಿನ್ನಲೆಯಲ್ಲಿ ಆದೇಶ ನಾಳೆಗೆ ಕಾಯ್ದಿರಿಸಿದ ಕಾರಣ ಮತ್ತೆ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಅಂದಹಾಗೇ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು 2017ರ ಕೇಸ್ ನಲ್ಲಿ ಬಂಧಿಸಲಾಗಿತ್ತು. ಬಂಧನದ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನೆಡೆಸಿದ್ದಂತ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಮತ್ತೆ ಪರಪ್ಪನಹ ಅಗ್ರಹಾರ ಜೈಲಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಶಿಫ್ಟ್ ಆಗಿದ್ದಾರೆ. ಈ ಮೂಲಕ…

Read More

ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಈಗಾಗಲೇ ಬೆಂಗಳೂರಿನ ಪೀಣ್ಯ ಪ್ಲೈ ಓವರ್ ಕ್ಲೋಸ್ ಮಾಡಲಾಗಿತ್ತು. ಈಗ ಮತ್ತೆ ನಾಲ್ಕು ದಿನ ಜನವರಿ.16ರಿಂದ ಕ್ಲೋಸ್ ಆಗಲಿದೆ. ಈ ಮೂಲಕ ಬಂದ್ ಮಾಡಲಾಗುತ್ತಿದೆ. ಈ ಕುರಿತಂತೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದು ಜನವರಿ 16ರಿಂದ 19ರವರೆಗೆ ಪೀಣ್ಯ ಮೇಲ್ ಸೇತುವೆಯನ್ನು ಕ್ಲೋಸ್ ಮಾಡಲಾಗುತ್ತಿದೆ. ವಾಹನ ಸವಾರರು ಸರ್ವೀಸ್ ರಸ್ತೆಯನ್ನು ಬಳಸುವಂತೆ ಮನವಿ ಮಾಡಿದೆ. ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಬಂದ್ ಆಗಲಿದೆ. ಲೋಡ್ ಟೆಸ್ಟಿಂಗ್ ಹಿನ್ನಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಹೀಗಾಗಿ ವಾಹನ ಸವಾರರು ಸಹಕರಿಸುವಂತೆ ಮನವಿ ಮಾಡಿದೆ. https://kannadanewsnow.com/kannada/manual-scavenging-high-court/ https://kannadanewsnow.com/kannada/breaking-break-6-0-magnitude-earthquake-hits-japan-raises-concerns/

Read More

ಬೆಂಗಳೂರು : ಅಲ್ಪಸಂಖ್ಯಾತರ ಸಮುದಾಯದ 2.50 ಲಕ್ಷ ವಿದ್ಯಾರ್ಥಿಗಳಿಗೆ 2023-24 ಸಾಲಿನ 170.7 ಕೋಟಿ ರೂ. ವಿದ್ಯಾರ್ಥಿ ವೇತನ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಬಿಡುಗಡೆ ಮಾಡಿದರು. ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಹಾಗೂ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ಸೌಲಭ್ಯದ ಆರ್ಥಿಕ ನೆರವು ಬಿಡುಗಡೆಗೆ ಚಾಲನೆ ನೀಡಿ , ಇದೇ ಸಂದರ್ಭದಲ್ಲಿ ಇಲಾಖೆಯ ನೂತನ ಡೈರಿ, ಕ್ಯಾಲೆಂಡರ್ ಬಿಡುಗಡೆ ಮಾಡಿದರು. 1 ರಿಂದ 8 ನೇ ತರಗತಿ ವರೆಗಿನ 2, 35, 661 ವಿದ್ಯಾರ್ಥಿಗಳಿಗೆ 1 ಸಾವಿರ ರೂ. ನಿಂದ 3,500 ರೂ. ವರೆಗೆ 90.30 ಕೋಟಿ ರೂ., ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ 280 ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ನಂತೆ 25.27 ಕೋಟಿ ರೂ., ಪಿಎಚ್ ಡಿ, ಎಂ ಫಿಲ್ ವ್ಯಾಸಂಗ ಮಾಡುವ 308 ವಿದ್ಯಾರ್ಥಿಗಳಿಗೆ ಮಾಸಿಕ 10…

Read More

ಗದಗ: ಜಿಲ್ಲೆಯ ಲಕ್ಷ್ಮೇಶ್ವರದ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ಬೃಹತ್ ಗ್ರಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದರು. ಇಂತಹ ಮೃತರಿಗೆ ರಾಜ್ಯ ಸರ್ಕಾರದಿಂದ 2 ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ಪರಿಹಾರ ಕೊಡೋದಲ್ಲ ಜೊತೆಗೆ 2 ಎಕರೆ ಜಮೀನು ಕೊಟ್ಟು ಮೃತರ ಪುತ್ಥಳಿಯನ್ನು ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸೊರಣಗಿ ಗ್ರಾಮಸ್ಥರು ಮೃತ ಯಶ್ ಅಭಿಮಾನಿಗಳಿಗೆ 2 ಲಕ್ಷ ಪರಿಹಾರವನ್ನು ಕೊಟ್ಟರೆ ಮಾತ್ರ ಸಾಲದು, ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ 2 ಎಕರೆ ಜಮೀನು ನೀಡಬೇಕು. ಘಟನಾ ಸ್ಥಳದಲ್ಲಿ ಮೃತರ ಪುತ್ಥಳಿ ನಿರ್ಮಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ. ಅಂದಹಾಗೇ ನಿನ್ನೆ ಲಕ್ಷ್ಮೇಶ್ವರದ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬ ಹಿನ್ನಲೆಯಲ್ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ, ವಿದ್ಯುತ್ ಸ್ಪರ್ಶದಿಂದ ಹನುಮಂತ ಹರಿಜನ್(24), ಮುರಳಿ ನಡುವಿನಮನಿ(20) ಹಾಗೂ ನವೀನ್ ಗಾಜಿ (20) ಎಂಬುವರು ಸಾವನ್ನಪ್ಪಿದ್ದರು. ಇದಲ್ಲದೇ ಪ್ರಕಾಶ್, ಮಂಜುನಾಥ್ ಹಾಗೂ ಹನುಮಂತ ಗಂಭೀರವಾಗಿ ಗಾಯಗೊಂಡಿದ್ದರು.…

Read More

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಕೆಲವೆಡೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆ, ಹಣ ಜಪ್ತಿ ಮಾಡಿದ್ರೇ, ಮತ್ತೆ ಕೆಲವೆಡೆ ಒಡವೆ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಇದರ ನಡುವೆ ಗ್ರಾಮ ಪಂಚಾಯ್ತಿ ಸದಸ್ಯನ ಮನೆಯಲ್ಲಿ ಫಾರಿನ್ ಬ್ರ್ಯಾಂಡ್ ಎಣ್ಣೆ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಸಿ.ಹೆಚ್ ಸುರೇಶ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಇಂದು ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ಸೀಗೇನಹಳ್ಳಿ ಮನೆಯ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಯ ವೇಳೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸಿ.ಹೆಚ್ ಸುರೇಶ್ ನಿವಾಸದಲ್ಲಿ 500 ರೂ ಕಂತೆ ಕಂತೆ ನೋಟುಗಳು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಇನ್ನೂ ಇದಷ್ಟೇ ಅಲ್ಲದೇ ಬೆಂಗಳೂರು ದಕ್ಷಿಣ ತಾಲೂಕು ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿ…

Read More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಜರ್ಮನ್ ಫುಟ್ಬಾಲ್ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಫ್ರಾಂಜ್ ಬೆಕೆನ್ಬೌರ್ ತಮ್ಮ 78 ನೇ ವಯಸ್ಸಿನಲ್ಲಿ ನಿಧನರಾದರು. ‘ಡೆರ್ ಕೈಸರ್’ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಬೆಕೆನ್ಬೌರ್, 1974 ರಲ್ಲಿ ಆಟಗಾರನಾಗಿ ಮತ್ತು 1990 ರಲ್ಲಿ ವ್ಯವಸ್ಥಾಪಕರಾಗಿ ಪಶ್ಚಿಮ ಜರ್ಮನಿಯೊಂದಿಗೆ ವಿಶ್ವಕಪ್ ಗೆದ್ದರು. ಕ್ಲಬ್ ಮಟ್ಟದಲ್ಲಿ, ಮಾಜಿ ಡಿಫೆಂಡರ್ ಅನ್ನು ಬೇಯರ್ನ್ ಮ್ಯೂನಿಚ್ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಅವರು 1974-76 ರಲ್ಲಿ ಜರ್ಮನ್ ದೈತ್ಯರೊಂದಿಗೆ ಸತತ ಮೂರು ಯುರೋಪಿಯನ್ ಕಪ್ಗಳನ್ನು ಗೆದ್ದಿದ್ದಾರೆ ಮತ್ತು ನಾಲ್ಕು ಬುಂಡೆಸ್ಲಿಗಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇಂತಹ ಅವರು ಇದೀಗ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.

Read More

ನವದೆಹಲಿ: ಟಾಟಾ ಗ್ರೂಪ್ನ ಆತಿಥ್ಯ ವಿಭಾಗದ ಭಾಗವಾಗಿರುವ ಇಂಡಿಯನ್ ಹೋಟೆಲ್ಸ್ ಕಂಪನಿ (ಐಎಚ್ಸಿಎಲ್) ಇತ್ತೀಚೆಗೆ ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಸುಹೇಲಿ ಮತ್ತು ಕಡ್ಮತ್ ದ್ವೀಪಗಳಲ್ಲಿ ಎರಡು ತಾಜ್-ಬ್ರಾಂಡ್ ರೆಸಾರ್ಟ್ಗಳಿಗಾಗಿ ಒಪ್ಪಂದಗಳಿಗೆ ಸಹಿ ಹಾಕಿದೆ. 2026 ರಲ್ಲಿ ತೆರೆಯಲು ಸಜ್ಜಾಗಿರುವ ಈ ರೆಸಾರ್ಟ್ಗಳು ಸುಸ್ಥಿರತೆ ಮತ್ತು ಸೂಕ್ಷ್ಮ ದ್ವೀಪ ಪರಿಸರ ವ್ಯವಸ್ಥೆಯ ಸಂರಕ್ಷಣೆಗೆ ಬದ್ಧತೆಯನ್ನು ಒತ್ತಿಹೇಳುತ್ತವೆ. ಭಾರತದ ಅತಿದೊಡ್ಡ ಆತಿಥ್ಯ ಕಂಪನಿಯಾಗಿ, ಐಎಚ್ಸಿಎಲ್ ಈ ಸಹಿಗಳನ್ನು ತನ್ನ ನವೀನ ಮತ್ತು ಪ್ರವರ್ತಕ ಮನೋಭಾವಕ್ಕೆ ಸಾಕ್ಷಿಯಾಗಿ ನೋಡುತ್ತದೆ. ರಾಜಸ್ಥಾನ, ಕೇರಳ, ಗೋವಾ ಮತ್ತು ಅಂಡಮಾನ್ ನಂತಹ ತಾಣಗಳ ಜಾಗತಿಕ ಜನಪ್ರಿಯತೆಗೆ ಯಶಸ್ವಿಯಾಗಿ ಕೊಡುಗೆ ನೀಡಿದ ನಂತರ, ಕಂಪನಿಯು ಈಗ ಪ್ರಯಾಣಿಕರಿಗೆ ವಿಶಿಷ್ಟ ಮತ್ತು ಪರಿಸರ ಪ್ರಜ್ಞೆಯ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಕಾರ್ಯತಂತ್ರದ ನಡೆ ಈ ಕಾರ್ಯತಂತ್ರದ ಕ್ರಮವು ಲಕ್ಷದ್ವೀಪವನ್ನು ಭಾರತೀಯ ಪ್ರವಾಸಿಗರಿಗೆ ಪ್ರಮುಖ ರಜಾ ತಾಣವಾಗಿ ಉತ್ತೇಜಿಸಲು, ವಿಶೇಷವಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ…

Read More

ಬಾಂಗ್ಲಾದೇಶ: ರಾಜ್ಯದ ಪ್ರಧಾನ ಮಂತ್ರಿ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾ ಅವರು ಸಂಸತ್ತಿನಲ್ಲಿ ಕನಿಷ್ಠ 60 ಪ್ರತಿಶತದಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಐದನೇ ಅವಧಿಗೆ ಅವಿರೋಧವಾಗಿ ಮುನ್ನಡೆ ಸಾಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಟ್ಟು 300 ಸ್ಥಾನಗಳಲ್ಲಿ 225 ಸ್ಥಾನಗಳನ್ನು ಘೋಷಿಸಿದ ಮುಕ್ಕಾಲು ಭಾಗ ಫಲಿತಾಂಶಗಳಲ್ಲಿ, ಹಸೀನಾ ಅವರ ಅವಾಮಿ ಲೀಗ್ 172 ಮತ್ತು ಅವರ ಮಿತ್ರ ಪಕ್ಷ ಜತಿಯಾ ಪಕ್ಷ ಇನ್ನೂ ಎಂಟು ಸ್ಥಾನಗಳನ್ನು ಗೆದ್ದಿದೆ ಎಂದು ದೇಶದ ಅತಿದೊಡ್ಡ ಖಾಸಗಿ ಸುದ್ದಿ ಪ್ರಸಾರಕ ಸೊಮೊಯ್ ಟಿವಿ ಸಂಗ್ರಹಿಸಿದ ಫಲಿತಾಂಶಗಳು ತಿಳಿಸಿವೆ. ಮತ ಎಣಿಕೆ ಮುಂದುವರೆದಿದೆ.

Read More