Subscribe to Updates
Get the latest creative news from FooBar about art, design and business.
Author: kannadanewsnow09
ತುಮಕೂರು: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ ಎನ್ನುವಂತೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದಂತ ಗ್ಯಾಂಗ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ಮ್ಯಾನೇಜರ್, ನರ್ಸ್, ಫಾರ್ಮಸಿಸ್ಟ್ ಗಳೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದದ್ದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ 6 ಆರೋಪಿಗಳನ್ನು ಗುಬ್ಬಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೌದು ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ, ಮಾರಾಟ ಮಾಡುವಂತ ಗ್ಯಾಂಗ್ ಅನ್ನು ಗುಪ್ಪಿ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ. 11 ತಿಂಗಳ ರಾಕಿ ಎನ್ನುವಂತ ಮಗುವನ್ನು ಅಪಹರಣದ ಬೆನ್ನತ್ತಿದಂತ ಪೊಲೀಸರಿಗೆ, ಮಕ್ಕಳನ್ನು ಕಿಡ್ನ್ಯಾಪ್ ಮಾಡಿ, ಮಾರಾಟ ಮಾಡುವಂತ ಜಾಲವೇ ಪತ್ತೆಯಾಗಿದೆ. ಒಂದೇ ಗ್ಯಾಂಗ್ ನಿಂದ ಬರೋಬ್ಬರಿ 9 ಮಕ್ಕಳನ್ನು ಮಾರಾಟ ಮಾಡಿರೋದಾಗಿ ತಿಳಿದು ಬಂದಿದೆ. ಮಕ್ಕಳನ್ನು ಮಾರಾಟ ಮಾಡೋದಕ್ಕೆ ಅವಿವಾಹಿತೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಅಕ್ರಮ ಸಂಬಂಧದ ಮೂಲಕ ಗರ್ಭಧರಿಸುವಂತೆ ಮಾಡುತ್ತಿದ್ದಂತ ಗ್ಯಾಂಗ್ ಅವರಿಗೆ ಹುಟ್ಟಿದಂತ ಮಗುವನ್ನು ಮಕ್ಕಳು ಇಲ್ಲದವರಿಗೆ ಮಾರಾಟ ಮಾಡುತ್ತಿತ್ತಂತೆ. ಸದ್ಯ ಮಾರಾಟ ಮಾಡಲಾಗಿದ್ದಂತ 9 ಮಂದಿಯ ಪೈಕಿ…
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 12 ಕ್ಷೇತ್ರಗಳಿಗೆ ಜೂನ್ 28 ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ರ ವರೆಗೆ ಮತದಾನ ನೆಡೆಯಲಿದೆ. 2028-29 ನೇ ಸಾಲಿನ 05 ವರ್ಷಗಳ ಅವಧಿಯಲ್ಲಿನ ಚುನಾವಣೆಗೆ ಉದೇದುವಾರಿಕೆ ವಾಪಸ್ಸು ಪಡೆದ ನಂತರ ಅಂತಿವಾಗಿ ಚುನಾವಣಾ ಕಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಒಟ್ಟು 27 ಅಭ್ಯರ್ಥಿಗಳು ಅಂತಿಮ ಉಳಿದಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾರೆಲ್ಲ ಕಣದಲ್ಲಿ ಇದ್ದಾರೆ.? ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ, ಶಿವನಂಜಪ್ಪ.ಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ, ಸಿ.ಹನುಮಂತಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್, ಕೆ.ಎಸ್.ಶಿವಕುಮಾರ್, ಪ್ರಾ ಕೃ ಪ ಸ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ…
ಶಿವಮೊಗ್ಗ: ರಂಗಭೂಮಿ ಎನ್ನುವ ಪದದಲ್ಲಿ ಭೂಮಿ ಎನ್ನುವ ಪದವಿದೆ. ಭೂಮಿ ಎಂದರೆ ಹೆಣ್ಣು, ಫಲವತ್ತತೆ. ಹೀಗಾಗಿ ಹೆಣ್ಣು ರಂಗಭೂಮಿಯ ಅವಿಭಾಜ್ಯ ಅಂಗವೆಂದು ಖ್ಯಾತ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅಭಿಪ್ರಾಯ ಪಟ್ಟರು. ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ಮತ್ತು ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿದ್ದ ರಂಗಭೂಮಿ ಮತ್ತು ಮಹಿಳೆ ಎಂಬ ವಿಶೇಷ ಉಪನ್ಯಾಸ ನೀಡುತ್ತಾ ಹೇಳಿದರು. ಗಂಡಾಳ್ವಿಕೆಯ ನೆಲೆಯಲ್ಲಿ ರಂಗಭೂಮಿ ಚಟುವಟಿಕೆ ನಡೆಯುತ್ತಿದ್ದ ಕಾಲಘಟ್ಟದಲ್ಲಿ ಹಲವು ಮಹಿಳಾ ಹೋರಾಟಗಾರರು, ಬರಹಗಾರರು ಸೌಂದರ್ಯ ಸ್ಪರ್ಧೆಯ ಸಮಯದಲ್ಲಿ ಸಿಡಿದು ವಿರೋಧಿಸಿದರು ಎಂದರು. ರಂಗಭೂಮಿ ಸಾಹಿತ್ಯ, ಪ್ರದರ್ಶನ ಮತ್ತು ತಾಂತ್ರಿಕ ಅಂಶವನ್ನು ಒಳಗೊಂಡಿರುತ್ತದೆ. ಇಲ್ಲಿ ಆಡುವವರು, ನೋಡುವವರು ಇರಬೇಕು. ಕೆಲವು ಮನುಷ್ಯರು ಹಲವು ಮನುಷ್ಯರ ಜೊತೆಗೆ ಮನುಷ್ಯರ ಕಥೆಗಳನ್ನ ಹೇಳುತ್ತಾರೆ. ಇವರು ರಂಗಭೂಮಿ ಜಗತ್ತಿನ ಎಲ್ಲ ಅವಸ್ಥೆಗಳನ್ನು ನೋಡಲು ಇರುವ ಒಂದು ಜಾತ್ಯಾತೀತ ಸ್ಪೇಸ್. ನಾಲ್ಕು ವೇದಗಳು ಜನ ಸಮಾನ್ಯರಿಗೆ ಅರ್ಥವಾಗದೆ ಇರುವ ಕಾರಣಕ್ಕೆ ನಾಟ್ಯವೇದದ ಹುಟ್ಟಿಗೆ ಕಾರಣವಾಯಿತು.…
ನವದೆಹಲಿ: ಇಂದು ಸಿಬಿಐ ಅಧಿಕಾರಿಗಳು ತಿಹಾರ್ ಜೈಲಿನಲ್ಲಿ ಇರುವಂತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತು. ಆ ಬಳಿಕ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನಂತ್ರ, ಸಿಬಿಐ ಅಧಿಕಾರಿಗಳು ಸಿಎಂ ಅರವಿದ್ ಕೇಂಜ್ರಿವಾಲ್ ಅವರನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ. ಇಂದು ತಿಹಾರ್ ಜೈಲಿನಿಂದಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವಂತ ಸಿಬಿಐ ಅಧಿಕಾರಿಗಳು, ನಾಳೆ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಅಂದಹಾಗೇ ಈಗಾಗಲೇ ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ. ಇಂದು ಮತ್ತೆ ಸಿಬಿಐ ವಿಚಾರಣೆಯ ನಂತ್ರ, ತಿಹಾರ್ ಜೈಲಿನಿಂದಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. https://twitter.com/ANI/status/1805644274584965497 https://kannadanewsnow.com/kannada/state-government-issues-guidelines-for-transfer-of-government-employees-for-the-year-2024-25/ https://kannadanewsnow.com/kannada/anganwadi-workers-permanent-this-is-congress-govts-6th-guarantee-mla-belur-gopalakrishna/
ಸಿಕ್ಕೀಂ: ಸಿಕ್ಕಿಂನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಭಾರತೀಯ ಫುಟ್ಬಾಲ್ ಐಕಾನ್ ಬೈಚುಂಗ್ ಭುಟಿಯಾ ಮಂಗಳವಾರ ರಾಜಕೀಯವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್ಡಿಎಫ್) ಉಪಾಧ್ಯಕ್ಷ ಬೈಚುಂಗ್ ಅವರು ಬರ್ಫಂಗ್ ಕ್ಷೇತ್ರದಲ್ಲಿ ಎಸ್ಕೆಎಂನ ರಿಕ್ಷಲ್ ದೋರ್ಜಿ ಭುಟಿಯಾ ವಿರುದ್ಧ ಸೋತಿದ್ದಾರೆ. 2014 ರಲ್ಲಿ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಅವರನ್ನು ಡಾರ್ಜಿಲಿಂಗ್ ಲೋಕಸಭಾ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದಾಗ ಅವರು ರಾಜಕೀಯಕ್ಕೆ ಸೇರಿದರು. 2018 ರಲ್ಲಿ, ಅವರು ಹಮ್ರೊ ಸಿಕ್ಕಿಂ ಪಕ್ಷವನ್ನು ರಚಿಸುವ ಮೂಲಕ ತಮ್ಮ ರಾಜ್ಯದ ರಾಜಕೀಯ ರಂಗಕ್ಕೆ ಧುಮುಕಿದರು. ಕಳೆದ ವರ್ಷ ಅವರು ತಮ್ಮ ಪಕ್ಷವನ್ನು ಪವನ್ ಚಾಮ್ಲಿಂಗ್ ನೇತೃತ್ವದ ಎಸ್ಡಿಎಫ್ನೊಂದಿಗೆ ವಿಲೀನಗೊಳಿಸಿದ್ದರು. “ಮೊದಲನೆಯದಾಗಿ, ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಪಿಎಸ್ ತಮಾಂಗ್ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಅನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಸಿಕ್ಕಿಂನ ಜನರು ಅವರಿಗೆ ಅದ್ಭುತ ಜನಾದೇಶವನ್ನು ನೀಡಿದ್ದಾರೆ ಮತ್ತು ಎಸ್ಕೆಎಂ ಸರ್ಕಾರವು ಅವರ ಭರವಸೆಗಳನ್ನು ಈಡೇರಿಸಲು ಮತ್ತು ಸಿಕ್ಕಿಂ…
ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಭೆಯ ನಂತರ ಪ್ರಕಟಿಸಿದರು. “ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡುವ ನಿರ್ಧಾರವನ್ನು ತಿಳಿಸುವ ಮೂಲಕ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಪತ್ರ ಬರೆದಿದ್ದೇನೆ” ಎಂದು ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ‘ಜೈ ಸಂವಿಧಾನ್’ (ಸಂವಿಧಾನಕ್ಕೆ ಜೈ) ಕರೆ ನೀಡಿದ ರಾಹುಲ್ ಗಾಂಧಿ 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂವಿಧಾನದ ಕೈಯಲ್ಲಿ, ಅನೇಕ ವಿರೋಧ ಪಕ್ಷದ ಸಂಸದರು ಸೋಮವಾರ ಲೋಕಸಭೆಗೆ ಮೆರವಣಿಗೆಯೊಂದಿಗೆ ಸಂಸತ್ತಿನಲ್ಲಿ ತಮ್ಮ ಚುನಾವಣಾ ಪುನರುಜ್ಜೀವನದ ಹೇಳಿಕೆಯಲ್ಲಿ 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನ ಕೆಳಮನೆಯ ಮೊದಲ ಅಧಿವೇಶನದ ಎರಡನೇ ದಿನವಾದ ಮಂಗಳವಾರ 18 ನೇ ಲೋಕಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಪುನರಾರಂಭವಾಯಿತು.…
ಬೆಂಗಳೂರು : ನಂದಿನಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚು ಮಾಡಿ ಅದಕ್ಕೆ ತಗುಲುವ ವೆಚ್ಚ 2.00 ರೂ.ಗಾಳನ್ನು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದರು. ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸರ್ಕಾರ ಜನರಿಗೆ ಕೊಟ್ಟಿರುವ ಗ್ಯಾರಂಟಿ ಭಾಗ್ಯ ಎಂದು ಹಾಲಿನ ದರ ಏರಿಕೆ ಬಗ್ಗೆ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾಸ್ವಾಮಿ ಅವರು ಮಾಡಿರುವ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿ ನಾಳೆ ಈ ಬಗ್ಗೆ ಜಾಹೀರಾತು ನೀಡಲಾಗುತ್ತಿದೆ. ಬೆಲೆ ಏರಿಕೆ ಮಾಡಿಲ್ಲ. ಹಾಲಿನ ಪ್ರಮಾಣ ಹೆಚ್ಚು ಮಾಡಿ ಅದಕ್ಕೆ ತಗುಲುವ ವೆಚ್ಚದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದರು. ಹಾಲಿನ ಉತ್ಪಾದನೆ ಜಾಸ್ತಿಯಾಗಿದ್ದು ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚು ಹಾಲು ನೀಡಿ ದರ ಹೆಚ್ಚಿಸಲಾಗಿದೆ ಎಂದರು. ಕುರಿಗಾಹಿಗಳು ಕುರಿತ ಬಜೆಟ್ ಘೋಷಣೆಗಳಿಗೆ ಸರ್ಕಾರಿ ಆದೇಶ ಕುರಿಗಾಹಿಗಳು ಬಂದೂಕು ಪರವಾನಗಿ, ಸಂಚಾರಿ ಕುರಿಗಾಹಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ, ಆಸ್ಪತ್ರೆಗಳಲ್ಲಿ ಔಷಧಿ, ಚಿಕಿತ್ಸೆ ದೊರೆಯಬೇಕು.…
ಹಾಸನ: ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇಂದು ಹಾಸನ ಜಿಲ್ಲೆಯ ಹೊಳೇನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾ.ಸೂರಜ್ ರೇವಣ್ಣ ವಿರುದ್ಧ 3 ವರ್ಷಗಳ ಹಿಂದೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಹೊಳೆನರಸೀಪುರ ಮೂಲದ ಯುವಕನೊಬ್ಬ ನೀಡಿದಂತ ದೂರಿನ ಹಿನ್ನಲೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377, 342, 506ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ. https://kannadanewsnow.com/kannada/state-government-issues-guidelines-for-transfer-of-government-employees-for-the-year-2024-25/ https://kannadanewsnow.com/kannada/anganwadi-workers-permanent-this-is-congress-govts-6th-guarantee-mla-belur-gopalakrishna/
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ನಿಗದಿ ಪಡಿಸಲಾಗಿದ್ದಂತ ಪಿಜಿಸಿಇಟಿ-2024ರ ಪರೀಕ್ಷೆಯನ್ನು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮುಂದೂಡಿಕೆ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ಕೆಇಎ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆಲವು ವಿಶ್ವವಿದ್ಯಾಲಯಗಳು 2024 ರ ಜುಲೈ 5 ಮತ್ತು 10 ರಿಂದ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಪ್ರಾರಂಭಿಸುತ್ತಿರುವುದರಿಂದ 2024 ರ ಜುಲೈ 13 ಮತ್ತು 14 ರಂದು ನಡೆಯಬೇಕಿದ್ದ ಪಿಜಿಸಿಇಟಿ -2024 ಪರೀಕ್ಷೆಯನ್ನು ಮುಂದೂಡುವಂತೆ ಅನೇಕ ವಿದ್ಯಾರ್ಥಿಗಳು ಕೆಇಎಗೆ ವಿನಂತಿಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಇಎ 2024ರ ಜುಲೈ 13 ಮತ್ತು 14ರಂದು ನಡೆಯಬೇಕಿದ್ದ ಪಿಜಿಸಿಇಟಿ-2024 ಪರೀಕ್ಷೆಯನ್ನು ಮುಂದೂಡಿದ್ದು, ಪರಿಷ್ಕೃತ ದಿನಾಂಕಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಅಂತ ತಿಳಿಸಿದೆ. ಇದಲ್ಲದೆ, ಎಂಬಿಎ, ಎಂಸಿಎ, ಎಂಇ / M.Tech/M.Tech, M.ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕಾಗಿ ಪಿಜಿಸಿಇಟಿ -2024 ಗೆ ನೋಂದಾಯಿಸಲು ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 26-06-2024 ರಂದು ಬೆಳಿಗ್ಗೆ 11.00…
ಶಿವಮೊಗ್ಗ: ರೈತರು ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುತ್ತದೆ. ರೈತರು ಸರ್ಕಾರದ ಯಾವುದೇ ಸೌಲಭ್ಯದ ಫಲಾನುಭವಿಯಾಗಲು ರೈತರು ತಮ್ಮ ಆರ್ಟಿಸಿ ಗೆ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ಈ ಕುರಿತು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು ಇದನ್ನು ರೈತರು ತಮ್ಮ ಮೊಬೈಲ್ ಮೂಲಕ ಅಥವಾ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಸದರಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿರುತ್ತದೆ. ಆರ್ಟಿಸಿ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಕ್ಕೆ ತೊಂದರೆ ಉಂಟಾಗಲಿದೆ. ಆರ್ಟಿಸಿ ಗೆ ಆಧಾರ್ ಜೋಡಣೆ ಮಾಡುವುದರಿಂದ ಜಮೀನಿನ ದಾಖಲೆ ಮತ್ತಷ್ಟು ಸುರಕ್ಷಿತವಾಗಿರುತ್ತದೆ. ಭೂ ದಾಖಲೆ ಪಡೆಯುವುದು ಸುಲಭ. ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಕೆ ಸರಳವಾಗುತ್ತದೆ. ಖಾತಾ ವಿವಾದವನ್ನು ತಪ್ಪಿಸಲು ಅನುಕೂಲ, ಸಾಲ ಪ್ರಕ್ತಿಯೆ ಸುಲಭ ಹಾಗೂ ಜಮೀನು ಮಾರಾಟ ಸಮಯದಲ್ಲಿ ಹೆಚ್ಚಿನ ಪಾರದರ್ಶಕತೆ ಇರುತ್ತದೆ ಆದ್ದರಿಂದ ತಮ್ಮ ಆರ್ಟಿಸಿ ಗೆ ಆಧಾರ್ ಜೋಡಣೆ…