Author: kannadanewsnow09

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಮರಳಿ ಕಾಡಿಗಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲು ಆದೇಶಿದ್ದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಈ ಪಡೆಗೆ 48 ಸಿಬ್ಬಂದಿ ನಿಯೋಜನೆಗೆ ಅನುಮೋದನೆ ನೀಡಿದ್ದಾರೆ. ಈ ಕಾರ್ಯಪಡೆಯ ನೇತೃತ್ವವನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಹಿಸಲಿದ್ದು, ಪಡೆಯಲ್ಲಿ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯಾಧಿಕಾರಿ, ಒಬ್ಬರು ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿ ಹಾಗೂ 8 ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿ ಇರಲಿದ್ದಾರೆ. ಈ ಆನೆ ಕಾರ್ಯಪಡೆಯು ಕಾಡಾನೆಗಳು ಓಡಾಡುವ ವಸತಿ ಪ್ರದೇಶ, ರೈತರ ತೋಟ, ಜಮೀನಿನ ಬಳಿ ಗಸ್ತು ತಿರುಗಲಿದ್ದು, ಆನೆಗಳು ಕಂಡು ಬಂದಲ್ಲಿ ಕಾಡಿಗೆ ಮರಳಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಿದೆ ಮತ್ತು ಆನೆಗಳ ಚಲನವಲನದ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಆ ಮೂಲಕ ಸಾರ್ವಜನಿಕರಿಗೆ ಮುನ್ನಚ್ಚರಿಕೆ ಸಂದೇಶ…

Read More

ನವದೆಹಲಿ: ಪಾಕಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಮಹಿಳಾ ಏಕದಿನ ವಿಶ್ವಕಪ್ 2025 ಪಂದ್ಯವನ್ನು ಮೊದಲ ಇನ್ನಿಂಗ್ಸ್ ಮಧ್ಯದಲ್ಲಿ ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಆರ್ ಪ್ರೇಮದಾಸ ಕ್ರೀಡಾಂಗಣದ ಕ್ರೀಸ್‌ನಲ್ಲಿ ಹಲವಾರು ಪತಂಗಗಳು ಮತ್ತು ನೊಣಗಳು ಇದ್ದ ಕಾರಣ ಎರಡೂ ತಂಡಗಳ ನಡುವಿನ ಹೈ-ಆಕ್ಟೇನ್ ಘರ್ಷಣೆಯನ್ನು ಮೊದಲ ಇನ್ನಿಂಗ್ಸ್‌ನಲ್ಲಿ ನಿಲ್ಲಿಸಲಾಯಿತು. ನೊಣಗಳು ಆಟಗಾರರನ್ನು ಸ್ವಲ್ಪ ಸಮಯದವರೆಗೆ ತೊಂದರೆಗೊಳಿಸಿದವು, ಆದರೆ ಅವರು ಆಟವಾಡಬೇಕಾಯಿತು, ಆದರೆ ಅವರ ಬಳಿ ಯಾವುದೇ ಪರಿಹಾರವಿಲ್ಲ. ಏತನ್ಮಧ್ಯೆ, 34 ನೇ ಓವರ್ ನಂತರ ಗ್ರೌಂಡ್‌ಸ್ಟಾಫ್ ಸದಸ್ಯರು ನೊಣಗಳನ್ನು ತೊಡೆದುಹಾಕಲು ಬಗ್ ಸ್ಪ್ರೇ ಅನ್ನು ತಂದರು. ಆಟವು ಸುಮಾರು 15 ನಿಮಿಷಗಳ ಕಾಲ ಸ್ಥಗಿತಗೊಂಡಿದ್ದರಿಂದ ಆಟಗಾರರು ಮೈದಾನದಿಂದ ಹೊರನಡೆದರು. ಇದಕ್ಕೂ ಮೊದಲು, ಪಾಕಿಸ್ತಾನ ತಂಡದ ಸದಸ್ಯರೊಬ್ಬರು ಫ್ಲೈ ಸ್ಪ್ರೇ ಅನ್ನು ಹೊರತಂದರು, ಮತ್ತು ಆಟಗಾರರು ಅದನ್ನು ಮೇಲೆ ಸಿಂಪಡಿಸಿದರು, ಆದರೆ ಅವರಿಂದ ಯಾವುದೇ ವಿರಾಮ ಸಿಗಲಿಲ್ಲ. ವಿರಾಮದ ಸಮಯದಲ್ಲಿ, ಭಾರತೀಯ ಮಹಿಳೆಯರು 154/4 ರೊಂದಿಗೆ ಸಂಕಷ್ಟದ…

Read More

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಹೋಬಳಿಯಲ್ಲಿ ಆರ್.ಎಂ ಷಣ್ಮುಖ ಎಂಬುವರು ಒತ್ತುವರಿ ಮಾಡಿಕೊಂಡಿದ್ದಂತ 6 ಎಕರೆ 24 ಗುಂಟೆ ಅರಣ್ಯ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಪಡೆಯುವಲ್ಲಿ ಸಾಗರದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸಾಗರದ ಅರಣ್ಯಾಧಿಕಾರಿಗಳ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿ 6 ಎಕರೆ 24 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ, ಮರಳಿ ಇಲಾಖೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಗರ ವಿಭಾಗ ವ್ಯಾಪ್ತಿಗೆ ಬರುವ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಮಲಂದೂರು ಗ್ರಾಮದ ಸ.ನಂ 157 ರಲ್ಲಿ ಆರ್.ಎಂ ಷಣ್ಮುಖ ಬಿನ್ ಮಂಜಪ್ಪ ಗೌಡ ಇವರು ಮಲಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ 6-24 ಎ/ಗುಂ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುತ್ತಾರೆ. ಸದರಿಯವರು ಶರಾವತಿ ಮುಳುಗಡೆ ಸಂತ್ರಸ್ತರ ಯೋಜನೆಯಡಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಇವರು ಜಮೀನುಗಳನ್ನು ಮಂಜೂರಾತಿ ಪಡೆದಿದ್ದು, ಇದರೊಂದಿಗೆ ಹಿಡುವಳಿ ಜಮೀನುಗಳನ್ನು…

Read More

ಬೆಂಗಳೂರು: ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಲಿಡ್ಕರ್ ಮಾರಾಟ ಮಳಿಗೆಗಳಲ್ಲಿ ಚರ್ಮದ ಉತ್ಪನ್ನಗಳ ಮೇಲೆ 20% ರಿಯಾಯಿತಿ ನೀಡಲಾಗುತ್ತಿದೆ. ಉನ್ನತ ಗುಣಮಟ್ಟದ ಶೂ, ಬ್ಯಾಗ್‌, ಬೆಲ್ಟ್‌ ಮತ್ತು ಪರ್ಸ್‌ಗಳಂತಹ ವಿವಿಧ ಅಸಲಿ ಚರ್ಮದ ಉತ್ಪನ್ನಗಳು ಸದ್ಯ ವಿಶೇಷ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿವೆ. ಹಬ್ಬಗಳ ಸಂಭ್ರಮದ ಜೊತೆಗೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಮ್ಮ ದೇಶದ ಕರಕುಶಲತೆ ಮತ್ತು ಸೃಜನಶೀಲತೆಯನ್ನು ಒಳಗೊಂಡಿರುವ ಉದ್ಯಮ ಮತ್ತು ಸ್ಥಳೀಯ ಚರ್ಮ ಕುಶಲಕರ್ಮಿಗಳ ಬದುಕಿಗೆ ಬೆಂಬಲ ನೀಡಿ ಎಂದು ಕೋರಿದೆ. ಭಾರತೀಯ ಕೌಶಲ್ಯದ ಗೌರವ ಮತ್ತು ಗುಣಮಟ್ಟವನ್ನು ಪ್ರತಿಬಿಂಬಿಸುವ ಲಿಡ್ಕರ್ ಉತ್ಪನ್ನಗಳು ದೀರ್ಘಕಾಲ ಬಾಳಿಕೆ ಮತ್ತು ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯವಿವೆ. ಸ್ವದೇಶಿ ಉತ್ಪನ್ನಗಳನ್ನು ಬಳಸಿ, ದೇಶದ ಆರ್ಥಿಕತೆಯನ್ನು ಸದೃಢ ಪಡಿಸಿ ಮತ್ತು ಭವಿಷ್ಯವನ್ನು ಮತ್ತಷ್ಟು ಬಲಪಡಿಸಿ ಎಂದು ಮನವಿ ಮಾಡಿದೆ. ಆಫರ್ ಅಕ್ಟೋಬರ್ 18ರವರೆಗೆ ಮಾತ್ರ ಲಭ್ಯ. ವೆಬ್‌ಸೈಟ್ ಲಿಂಕ್: https://shop.lidkar.com https://twitter.com/SWDGoK/status/1974752853748228477

Read More

ಬೆಂಗಳೂರು: ನಗರದಲ್ಲಿ ಕನ್ನಡಪರ ಸಂಘಟನೆಯಿಂದ ಆನ್ ಲೈನ್ ಗೇಮಿಂಗ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಕನ್ನಡ ಪರ ಸಂಘಟನೆಯ ಕಾರ್ಯಕರ್ತರಿಂದ ನಡೆಸಿದಂತ ದಾಳಿಯಲ್ಲಿ ಆನ್ ಲೈನ್ ಗೇಮಿಂಗ್ ಕಂಪನಿಯನ್ನು ಧ್ವಂಸಗೊಳಿಸಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಇರುವಂತ ಗೋಲ್ಡನ್ ಏಸಸ್ ಪೋಕರ್ ಆನ್ ಲೈನ್ ಗೇಮಿಂಗ್ ಕಂಪನಿಯ ಮೇಲೆ ನಮ್ಮ ಕರ್ನಾಟಕ ಸೇನೆಯಿಂದ ದಾಳಿಯನ್ನು ನಡೆಸಲಾಗಿದೆ. ಗ್ರಾಹಕರು ಆನ್ ಲೈನ್ ಬೆಟ್ಟಿಂಗ್ ಆಡುತ್ತಿದ್ದಾಗಲೇ ದಾಳಿ ನಡೆಸಿ ಕಂಪನಿಯನ್ನು ಧ್ವಂಸ ಮಾಡಲಾಗಿದೆ. ಗೋಲ್ಡನ್ ಏಸಸ್ ಪೋಕರ್ ಕಂಪನಿಯಲ್ಲಿದ್ದಂತ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತಿ ಭಾನುವಾರ ಅಕ್ರಮವಾಗಿ ಆನ್ ಲೈನ್ ಗೇಮ್ ನಡೆಸುತ್ತಿದ್ದಂತ ಆರೋಪ ಕೇಳಿ ಬಂದಿದೆ. ಕನ್ನಡಪರ ಸಂಘಟನೆಗಳಿಂದ ದಾಳಿ ನಡೆಸುತ್ತಿದ್ದಂತೆ ಗ್ರಾಹಕರು ಓಡಿ ಹೋಗಿದ್ದಾರೆ.

Read More

ಬಿಹಾರ ವಿಧಾನಸಭೆಗೆ ಚುನಾವಣೆಗಳನ್ನು ನವೆಂಬರ್ 22 ರ ಮೊದಲು ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಶನಿವಾರ ದೃಢಪಡಿಸಿದ್ದಾರೆ., ಅಂದರೆ ಪ್ರಸ್ತುತ ವಿಧಾನಸಭೆಯ ಅವಧಿ ಕೊನೆಗೊಳ್ಳುವ ದಿನಾಂಕ ಇದು. ಚುನಾವಣಾ ಆಯೋಗದ ಎರಡು ದಿನಗಳ ಭೇಟಿಯ ಕೊನೆಯಲ್ಲಿ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್, ಆಯೋಗವು ಹಲವಾರು ಸುಧಾರಣೆಗಳು ಮತ್ತು ವ್ಯವಸ್ಥಾಪನಾ ಬದಲಾವಣೆಗಳನ್ನು ಪರಿಚಯಿಸುತ್ತಿದೆ ಎಂದು ಹೇಳಿದರು. “ಈ ಚುನಾವಣೆಗಳು ನವೆಂಬರ್ 22 ರ ಮೊದಲು ಪೂರ್ಣಗೊಳ್ಳುತ್ತವೆ” ಎಂದು ಸಿಇಸಿ ಹೇಳಿದರು, ರಾಜ್ಯದಲ್ಲಿ ಮುಕ್ತ, ನ್ಯಾಯಯುತ ಮತ್ತು ಸಕಾಲಿಕ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಪೂರ್ಣ ಆಯೋಗವು ಸಿದ್ಧತೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಿದೆ ಎಂದು ಹೇಳಿದರು. https://twitter.com/ANI/status/1974761694506156234

Read More

ಕೈವ್: ರಷ್ಯಾ ಭಾನುವಾರ ರಾತ್ರಿ ಉಕ್ರೇನ್ ಮೇಲೆ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಮಾರ್ಗದರ್ಶಿ ವೈಮಾನಿಕ ಬಾಂಬ್‌ಗಳನ್ನು ಹಾರಿಸಿದ ನಂತರ ಕನಿಷ್ಠ ಐದು ನಾಗರಿಕರು ಪ್ರಾಣ ಕಳೆದುಕೊಂಡರು, ಇತರ 10 ಜನರು ಗಾಯಗೊಂಡರು. ದಾಳಿಯನ್ನು ಖಂಡಿಸಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಲ್ವಿವ್, ಇವಾನೋ-ಫ್ರಾಂಕಿವ್ಸ್ಕ್, ಜಪೋರಿಝಿಯಾ, ಚೆರ್ನಿಹಿವ್, ಸುಮಿ, ಖಾರ್ಕಿವ್, ಖೆರ್ಸನ್, ಒಡೆಸಾ ಮತ್ತು ಕಿರೊವೊಹ್ರಾದ್‌ನಂತಹ ಪ್ರದೇಶಗಳನ್ನು ಗುರಿಯಾಗಿಸಿಕೊಂಡು 50 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಸುಮಾರು 500 ದಾಳಿ ಡ್ರೋನ್‌ಗಳನ್ನು ಹಾರಿಸಿದೆ ಎಂದು ಹೇಳಿದರು. ಮೃತರಿಗೆ ಗೌರವ ಸಲ್ಲಿಸಿದ ಝೆಲೆನ್ಸ್ಕಿ, ಪೀಡಿತ ಪ್ರದೇಶಗಳಲ್ಲಿ ಈ ದಾಳಿಯ ಪರಿಣಾಮಗಳನ್ನು ತೊಡೆದುಹಾಕಲು ತಮ್ಮ ಸರ್ಕಾರ “ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು. ಉಕ್ರೇನ್‌ನಲ್ಲಿನ ಯುದ್ಧವು ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಅನ್ನು ಒತ್ತಾಯಿಸಿದರು. ಇಂದು, ರಷ್ಯನ್ನರು ಮತ್ತೊಮ್ಮೆ ನಮ್ಮ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ – ನಮ್ಮ ಜನರಿಗೆ ಸಾಮಾನ್ಯ…

Read More

ಬೆಂಗಳೂರು: ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ “ಬಸವ ಮೆಟ್ರೋ” ಎಂದು ಘೋಷಿಸಿ ಬಿಡುತ್ತಿದ್ದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ವಿಶ್ವಗುರು ಬಸವಣ್ಣ ಅವರನ್ನು “ಕರ್ನಾಟಕ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿದ್ಯದಲ್ಲಿ ಸಮುದಾಯದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿಯ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ. ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದರು. ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ…

Read More

ಬೆಂಗಳೂರು: ನಗರದಲ್ಲಿ ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಕಾ ಚೆಕ್ ಪಾಯಿಂಟ್ ನಿಂದಾಗಿ ನಿಯಮ ಉಲ್ಲಂಘನೆ ಹಾಗೂ ಸೂಕ್ತ ದಾಖಲೆಗಳಿಲ್ಲದ 250 ವಾಹನಗಳ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್ 3, 4ರಂದು ಬೆಂಗಳೂರು ನಗರದಾಧ್ಯಂತ ಪ್ರದೇಶ ಆದಿಪತ್ಯ ಕಾರ್ಯಾಚರಣೆ ಹಾಗೂ ನಾಕಾ ಚೆಕ್ ಪಾಯಿಂಟ್ ಗಳ ಕರ್ತವ್ಯಕ್ಕೆ ಸುಮಾರು 1000 ಅಧಿಕಾರಿಗಳು, ಸ್ಬಬಂದಿಗಳನ್ನು ನೇಮಿಸಲಾಗಿತ್ತು ಎಂದಿದೆ. ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 5000ಕ್ಕೂ ಹೆಚ್ಚು ವಾಹನಗಳ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಹಾಗೂ ಸೂಕ್ತ ದಾಖಲೆಗಳಿಲ್ಲದ ಕಾರಣ 250 ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಹೇಳಿದೆ. ಇನ್ನೂ ಈ ಕಾರ್ಯಾಚರಣೆಯಲ್ಲಿ ಒಟ್ಟು 11 ಕಳವು ವಾಹನಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆಯಲಾಗಿದೆ. ಅಲ್ಲದೇ ನಾರ್ಕೋಟಿಕ್ಸ್ ಸಂಬಂಧ 16 ಪ್ರಕರಣಗಳನ್ನು ದಾಖಲಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ…

Read More

ಹಿಮಾಚಲ ಪ್ರದೇಶ: ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. “ಡಾರ್ಜಿಲಿಂಗ್‌ನಲ್ಲಿ ಸೇತುವೆ ಅಪಘಾತದಿಂದ ಉಂಟಾದ ಜೀವಹಾನಿಯಿಂದ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ” ಎಂದು ಮೋದಿ X ನಲ್ಲಿ ಹೇಳಿದ್ದಾರೆ. https://twitter.com/narendramodi/status/1974774223659749377 “ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಪ್ರಧಾನಿ ಹೇಳಿದರು. ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಶನಿವಾರ ನಿರಂತರ ಭಾರೀ ಮಳೆಯಿಂದಾಗಿ ಹಲವಾರು ಭೂಕುಸಿತಗಳು ಸಂಭವಿಸಿ, ಮನೆಗಳು ಕೊಚ್ಚಿಹೋಗಿವೆ, ರಸ್ತೆಗಳಿಗೆ ಹಾನಿಯಾಗಿದೆ ಮತ್ತು ಹಲವಾರು ದೂರದ ಹಳ್ಳಿಗಳು ಸಂಪರ್ಕ ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.…

Read More