Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ: ಜಿಲ್ಲೆಯಲ್ಲಿ ಹೊಟ್ಟೆ ಕಿಚ್ಚಿಗೆ ಬೆಳಎದು ನಿಂತಿದ್ದಂತ ಅಡಿಕೆ ಹಾಗೂ ತೆಂಗು ಸಸಿಗಳನ್ನೇ ಕಿಡಿಗೇಡಿಗಳು ಕಡಿದು ಹಾಕಿರೋ ಘಟನೆ ನಡೆದಿದೆ. ಈಗ ದುಷ್ಕರ್ಮಿಗಳ ಕಿಡಿಗೇಡಿ ಕೃತ್ಯಕ್ಕೆ ಅನ್ನದಾತ ಆಘಾತಕ್ಕೆ ಒಳಗಾಗಿದ್ದಾನೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಚಿಕ್ಕನಹಳ್ಳಿ ಗ್ರಾಮದಲ್ಲಿ ಹೊಟ್ಟೆಕಿಚ್ಚಿಗೆ ಬೆಳೆದು ನಿಂತ ಅಡಿಕೆ ಮತ್ತು ತೆಂಗು ಸಸಿಗಳಿಗೆ ಮಚ್ಚು ಬೀಸಲಾಗಿದೆ. ಆಳೆತ್ತರ ಬೆಳೆದ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ನಾಗಮಂಗಲ ತಾಲ್ಲೂಕಿನ ದೊಡ್ಡಚಿಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ್ ಎಂಬ ರೈತನ ಜಮೀನಿನಲ್ಲಿ ಕೃತ್ಯ ಎಸಗಲಾಗಿದೆ. 2 ತೆಂಗಿನ ಗಿಡ 39 ಅಡಿಕೆ ಸಸಿಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ರೈತ ಶ್ರೀನಿವಾಸ್ ಸಹೋದರ ಕೃಷ್ಣೇಗೌಡರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ. ವರದಿ: ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/dont-fall-into-the-trap-of-offers-play-smart-stay-safe-govt-warns-gaming-lovers/ https://kannadanewsnow.com/kannada/big-news-another-good-news-for-state-government-employees-govt-orders-increase-in-in-charge-allowance/
ಬೆಂಗಳೂರು: ರಾಜ್ಯದ 13 ಸಾವಿರ ಸರ್ಕಾರಿ ನೌಕರರಿಗೆ ಒಪಿಎಸ್ ಗ್ಯಾರಂಟಿಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಮಾಡಿದ್ದು, ಸುಮಾರು 13 ಸಾವಿರ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿದ್ದೇವೆ. ಇದರಿಂದಾಗಿ ಅಷ್ಟೂ ನೌಕರರ ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ ಎಂದು ಭಾವಿಸಿದ್ದೇನೆ ಅಂತ ಹೇಳಿದ್ದಾರೆ. 2006 ಏಪ್ರಿಲ್ 4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ನೇಮಕಾತಿ ಆದೇಶ ಪಡೆದಿದ್ದ 11,366 ನೌಕರರನ್ನು ರಾಜ್ಯ ಸರ್ಕಾರ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್) ಸೇರಿಸಿ ಆದೇಶ ಹೊರಡಿಸಿದೆ ಎಂದಿದ್ದಾರೆ. ಹಾಗೆಯೇ ಏಪ್ರಿಲ್ 1, 2006ರ ಪೂರ್ವದಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ, ನಂತರ ಇತರೆ ಇಲಾಖೆಯ ಬೇರೆ ಹುದ್ದೆಗಳಿಗೆ ಮರು ಆಯ್ಕೆಯಾದವರೂ ಹಳೇ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅವಕಾಶ ನೀಡಿದೆ. ಇದರಿಂದ ಸುಮಾರು…
ಬೆಂಗಳೂರು: ನಗರದಲ್ಲಿನ ಪ್ರೀ ಸ್ಕೂಲ್ ಒಂದರಲ್ಲಿ ನಡೆದಂತ ನಿರ್ಲಕ್ಷ್ಯ ಘಟನೆಯಿಂದಾಗಿ 4 ವರ್ಷದ ಪುಟ್ಟ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವಂತೆ ಆಗಿತ್ತು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಬೆಂಗಳೂರಿನ ಹೆಣ್ಣೂರಿನ ಚೆಲ್ಲಕೆರೆಯಲ್ಲಿನ ಡೆಲ್ಲಿ ಪ್ರೀ ಸ್ಕೂಲ್ ನಲ್ಲಿ 4 ವರ್ಷದ ಜಿನಾ ಓದುತ್ತಿದ್ದಳು. ಜನವರಿ.22ರಂದು 3ನೇ ಮಹಡಿಯಿಂದ ಬಿದ್ದಿದ್ದಂತ ಜಿನಾಗೆ ತಲೆಗೆ ತೀವ್ರವಾಗಿ ಪೆಟ್ಟಾಗಿ ಗಾಯ ಕೂಡ ಆಗಿತ್ತು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ 4 ವರ್ಷದ ಜಿನಾ ಸ್ಥಿತಿ ಚಿಂತಾಜನಕವಾಗಿರೋದಾಗಿ ನಿನ್ನೆ ತಿಳಿದು ಬಂದಿತ್ತು. ಇದೀಗ 4 ವರ್ಷದ ಪುಟ್ಟ ಬಾಲಕಿ ಜಿನಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂದಹಾಗೇ ಜಿನಾ ಇಷ್ಟು ತೀವ್ರವಾಗಿ ಗಾಯಗೊಂಡರೂ ಹೆಣ್ಣೂರು ಠಾಣೆಯ ಪೊಲೀಸರು ಮಾತ್ರ ಎಫ್ಐಆರ್ ದಾಖಲಿಸಿ, ಪ್ರೀ ಸ್ಕೂಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋ ಬದಲಾಗಿ, ಎನ್…
ಬೆಂಗಳೂರು: ನಾಳೆ ಗಣರಾಜ್ಯೋತ್ಸವವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಡಾ.ಬಿಆರ್ ಅಂಬೇಡ್ಕರ್ ಪೋಟೋ ಇಡೋದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಜನವರಿ.26ರಂದು ರಾಜ್ಯದ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದ್ದಾರೆ. https://kannadanewsnow.com/kannada/state-govt-to-give-makmal-cap-to-employees-in-the-name-of-ops-former-cm-hdk/ https://kannadanewsnow.com/kannada/karnataka-budget-2019-governor-to-address-joint-house-on-feb-12/
ಬೆಂಗಳೂರು: ಕರ್ನಾಟಕ ಬಜೆಟ್ ಅನ್ನು ಮಂಡಿಸೋದಕ್ಕೆ ಬಜೆಟ್ ಅಧಿವೇಶನ ಆರಂಭಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ.12ರಂದು ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹದಿಮೂರನೇ ವಿಧಾನಸಭೆಯ ಮೂರನೇ ಅಧಿವೇಶನವು ದಿನಾಂಕ 12-02-2024ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ ಎಂದಿದ್ದಾರೆ. ಫೆಬ್ರವರಿ.12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಮಂಡಲದ ಉಭಯ ಸನದಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ರಾಜ್ಯಪಾಲರ ಭಾಷಣದ ಬಳಿಕ ಫೆಬ್ರವರಿ.16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಚೊಚ್ಚಲ ರಾಜ್ಯ ಬಜೆಟ್ 2024-25 ಅನ್ನು ಮಂಡಿಸಲಿದ್ದಾರೆ. ಈ ಮೂಲಕ ಕರ್ನಾಟಕ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆದಂತೆ ಆಗಿದೆ. https://kannadanewsnow.com/kannada/state-govt-to-give-makmal-cap-to-employees-in-the-name-of-ops-former-cm-hdk/ https://kannadanewsnow.com/kannada/dont-fall-into-the-trap-of-offers-play-smart-stay-safe-govt-warns-gaming-lovers/
ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕೆಲ ರೈಲುಗಳನ್ನು ಪ್ರಾಯೋಗಿಕವಾಗಿ ನಿಲುಗಡೆ ಮುಂದುವರೆಸಲಾಗಿದೆ. ಇನ್ನೂ ವಿಶೇಷ ರೈಲುಗಳ ಸಂಚಾರವನ್ನು ಮುಂದುವರೆಸಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ. I.ರೈಲುಗಳ ಪ್ರಾಯೋಗಿಕ ನಿಲುಗಡೆ ಮುಂದುವರಿಕೆ ಈ ಕೆಳಗೆ ತಿಳಿಸಲಾದ ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಮುಂದಿನ ಆದೇಶದವರೆಗೆ ನಿಲುಗಡೆಯನ್ನು ಮುಂದುವರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ: 1. ರೈಲು ಸಂಖ್ಯೆ 16527 ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲನ್ನು ಆಗಸ್ಟ್ 15, 2023 ರಿಂದ ಈಗಾಗಲೇ ಪರಪನಂಗಡಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ. 2. ರೈಲು ಸಂಖ್ಯೆ 16528 ಕಣ್ಣೂರು-ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಆಗಸ್ಟ್ 15, 2023 ರಿಂದ ಈಗಾಗಲೇ ಪರಪನಂಗಡಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ. 3. ರೈಲು ಸಂಖ್ಯೆ 22677 ಯಶವಂತಪುರ-ಕೊಚುವೇಲಿ ಎಕ್ಸ್ಪ್ರೆಸ್…
ಈ ಭೂಮಿಯ ಮೇಲೆ ಜನರು ಹೆಚ್ಚಾಗಿ ಹೆದರುವ ದೇವರು ಅಂದರೆ ಶನಿದೇವ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಶನಿ ದೇವರು ಮಾನವ ಮಾಡುವ ಪಾಪ ಕರ್ಮಗಳಿಗೆ ಅಂಗವಾಗಿ ಅವರು ಪುಣ್ಯ ಮತ್ತು ಶಿಕ್ಷೆಯನ್ನ ಕೊಡುವ ಕಾರಣ ಜನರು ತಪ್ಪು ಮಾಡುವ ಮುನ್ನ ಒಮ್ಮೆ ಶನಿ ದೇವರನ್ನ ಜ್ಞಾಪಕ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಶನಿ ದೇವರ ದೃಷ್ಟಿಯಿಂದ ಪಾರಾಗಲು ಜನರು ಶನಿ ದೇವರ ವೃತ ಮತ್ತು ಎಳ್ಳೆಣ್ಣೆಯ ದೀಪವನ್ನ ಶನಿ ದೇವರಿಗೆ ಹಚ್ಚುವುದರ ಮೂಲಕ ಶನಿಯ ಆರಾಧನೆಯನ್ನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಪಂಡಿತರು ಮತ್ತು ಶಾಸ್ತ್ರ ಹೇಳುವ ಪ್ರಕಾರ ಮಾನವನ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಶನಿ ದೇವರ ಕೃಪೆ ಅವರ ಮೇಲೆ ಇದೆ ಅನ್ನುವ ಸೂಚನೆ ಆದಾಗಿದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ನಮ್ಮ ಶರೀರದಲ್ಲಿ ಯಾವ ಲಕ್ಷಣಗಳು ಕಂಡುಬಂದರೆ ನಮಗೆ ಶನಿ ದೇವರ ಕೃಪೆ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ…
ಬೆಂಗಳೂರು: ವನ್ಯಜೀವಿ ಪದಾರ್ಥಗಳನ್ನು ಇಟ್ಟುಕೊಳ್ಳೋದು ಅಪರಾಧ. ಹೀಗಿದ್ದೂ ಗೊತ್ತಿಲ್ಲದೇ ಮನೆಯಲ್ಲಿ ಇಟ್ಟಿಕೊಂಡಿರೋರು ವಾಪಾಸ್ ಮಾಡೋದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ನೀವು ಮನೆಯಲ್ಲಿ ವನ್ಯಜೀವಿ ಪದಾರ್ಥ ಇಟ್ಟುಕೊಂಡಿದ್ರೇ ಸರ್ಕಾರ ನೀಡಿರುವಂತ ವಿಧಾನದಂತೆ ವಾಪಾಸ್ ನೀಡಿದ್ರೆ ನಿಮ್ಮ ವಿರುದ್ಧ ಕೇಸ್ ಆಗೋದಿಲ್ಲ. ಅದು ಹೇಗೆ ಅಂತ ಮುಂದೆ ಓದಿ. ಈ ಕುರಿತಂತೆ ರಾಜ್ಯ ಅರಣ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಅರಣ್ಯ ಇಲಾಖೆಯು, ವನ್ಯಜೀವಿ, ಅಘೋಷಿತ ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಏ.11 ರೊಳಗೆ ಅಧ್ಯರ್ಪಿಸಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದೆ. ಈ ವಸ್ತುಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ವಲಯ ಅರಣ್ಯಾಧಿಕಾರಿಗಳು(ಪ್ರಾದೇಶಿಕ/ವನ್ಯಜೀವಿ), ಅಥವಾ ಹತ್ತಿರದ ಪೊಲೀಸ್ ಠಾಣೆ ಮುಖ್ಯಸ್ಥರುಗಳಲ್ಲಿ ನಮೂನೆ-1ನ್ನು ಪಡೆದು ರೂ.100/-ಗಳ ಛಾಪಾ ಕಾಗದದಲ್ಲಿ ಅಫಿಡವಿಟ್ ಮುದ್ರಿಸಿ ನೋಟರಿ ಮಾಡಿಸಿ ಅಧ್ಯರ್ಪಿಸುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಯಾವುದೇ ಅರಣ್ಯ ಇಲಾಖೆಯ ಕಚೇರಿಗೆ…
ಬೆಂಗಳೂರು: ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದರು. ಆದ್ರೇ ಮುಂಬರುವಂತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸೋ ಸುಳಿವನ್ನು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದಾರೆ. ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ಜೊತೆಗೆ ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ವರಿಷ್ಠರ ಮಾತಿಗೆ ಸುಮಲತಾ ಒಪ್ಪಿಗೆ ಕೂಡ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಘೋಷಣೆಯಾಗಲಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ನಡುವೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಸಂಸದೆ ಸುಮಲತಾ ಅಂಬರೀಶ್ ಅವರು, ಈವರೆಗೆ ಎಲ್ಲಿಯೂ ನನ್ನ ಬಗ್ಗೆ ಕಳಂಕವಾಗಲೀ, ಕಪ್ಪು ಚುಕ್ಕೆಯಾಗಲೀ ಇಲ್ಲ. ಪಾರ್ಲಿಮೆಂಟ್ ನಲ್ಲಿ ಮಾತನಾಡಿರುವುದು ಎಲ್ಲಿರೂ ಗೊತ್ತಿದೆ. ಮಂಡ್ಯ ಸೀಟು ಬಿಜೆಪಿನೇ ಉಳಿಸಿಕೊಳ್ಳುತ್ತಿದೆ ಅನ್ನಿಸುತ್ತೆ ಎಂದು ಹೇಳುವ ಮೂಲಕ, ಬಿಜೆಪಿಯಿಂದ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಇದೇ…
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪ್ರಕರಣಗಳನ್ನು ತಡೆಯೋದಕ್ಕೆ ಪೊಲೀಸ್ ಇಲಾಖೆ ಈಗ ಮಹತ್ವದ ಕ್ರಮ ವಹಿಸಿದೆ. ಅದಕ್ಕಾಗಿ ರಾಜ್ಯದ ಎಲ್ಲಾ ಪೊಲೀಸರಿಗೂ ತರಬೇತಿಯನ್ನು ನೀಡಲಾಗುತ್ತಿದೆ. ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಭೆ ಬಳಿಕ ಮಾತನಾಡಿದಂತ ಡಿಜಿಐಜಿಪಿ ಅಲೋಕ್ ಮೋಹನ್ ಅವರು, ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ರಿವ್ಯೂ ಮಾಡ್ತಾ ಇದ್ದಿನಿ. ಸೈಬರ್ ಕ್ರೈಮ್, ಬೀಟ್ ಸಿಸ್ಟಮ್, ಕೆಲ ಪ್ರಕರಣಗಳ ತನಿಖೆ ಮಾಹಿತಿ ಪಡೆಯಲಾಗಿದೆ ಎಂದರು. ಸೈಬರ್ ಕ್ರೈಮ್ ಪ್ರಕರಣಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದಿದ್ದೇನೆ. ಸೈಬರ್ ಕ್ರೈಮ್ ತನಿಖಾ ವಿಧಾನ ಬಗ್ಗೆ ಎಲ್ಲಾರಿಗೂ ತರಬೇರಿ ನೀಡಬೇಕು. ಜಿಲ್ಲೆಗಳಲ್ಲಿ, ಮತ್ತು ಸಿಐಡಿ ಕಚೇರಿಯಲ್ಲಿ ಸೈಬರ್ ಕ್ರೈಮ್ ತನಿಖೆ ತರಬೇತಿ ನೀಡುತ್ತಿದ್ದೇವೆ. ಡ್ರಗ್ಸ್ ಮುಕ್ತ ಮಾಡಬೇಕು ಅಂತ ಹೇಳಿದ್ದಿನಿ. ಬೆಂಗಳೂರು ನಗರದಲ್ಲಿ 100 ಕೋಟಿಗೂ ಹೆಚ್ಚು ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ನಾನು ಎಲ್ಲಾ ಕಡೆ ಸಭೆ ಮಾಡ್ತಾ ಇದ್ದಿನಿ. ಜಿಲ್ಲೆಗಳಲ್ಲಿ, ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ಮಾಡ್ತಾ ಇದ್ದಿನಿ. ಬೆಂಗಳೂರಿನಲ್ಲಿ ಕುಳಿತುಕೊಂಡು ಕೆಲಸ…