Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ 26.72% ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇಂದು ಜಮ್ಮು-ಕಾಶ್ಮೀರ ರಾಜ್ಯಕ್ಕೆ ಮೊದಲ ಹಂತದಲ್ಲಿ 27 ಜಿಲ್ಲೆಗಳಿಗೆ ಮತದಾನ ನಡೆಯುತ್ತಿದೆ. 10 ವರ್ಷಗಳ ನಂತ್ರ ನಡೆಯುತ್ತಿರುವಂತ ಮತದಾನದಲ್ಲಿ ಜನರು ಹುರುಪಿನಿಂದಲೇ ಭಾಗಿಯಾಗಿದ್ದಾರೆ. ಹೀಗಿದೆ ಶೇಕಡಾ ಮತದಾನದ ಪ್ರಮಾಣ ಅನಂತ್ನಾಗ್- 25.55% ದೋಡಾ – 32.30% ಕಿಶ್ತ್ವಾರ್ – 32.69% ಕುಲ್ಗಾಮ್ – 25.95% ಪುಲ್ವಾಮಾ – 20.37% ರಂಬನ್ – 31.25% ಶೋಪಿಯಾನ್ – 25.96% https://twitter.com/ANI/status/1836288550213685620 https://kannadanewsnow.com/kannada/new-covid-19-strain-detected-in-high-spread-xec-concerns-27-countries-including-uk-us/ https://kannadanewsnow.com/kannada/sensex-nifty-hit-all-time-highs/
ಎಕ್ಸ್ಇಸಿ ಎಂದು ಕರೆಯಲ್ಪಡುವ ಕೋವಿಡ್ -19 ರ “ಹೆಚ್ಚು ಸಾಂಕ್ರಾಮಿಕ” ರೂಪಾಂತರವು ಯುರೋಪಿನಾದ್ಯಂತ ಹೆಚ್ಚು ವೇಗವಾಗಿ ಹರಡುತ್ತಿದೆ ಮತ್ತು ಶೀಘ್ರದಲ್ಲೇ ಪ್ರಬಲ ತಳಿಯಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಬಿಬಿಸಿ ಪ್ರಕಾರ, ಹೊಸ ರೂಪಾಂತರವನ್ನು ಮೊದಲು ಜೂನ್ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಯಿತು. ಅಂದಿನಿಂದ, ಎಕ್ಸ್ಇಸಿ ರೂಪಾಂತರವು ಯುಕೆ, ಯುಎಸ್, ಡೆನ್ಮಾರ್ಕ್ ಮತ್ತು ಇತರ ಹಲವಾರು ದೇಶಗಳಲ್ಲಿ ಹೊರಹೊಮ್ಮಿದೆ. ಒಮೈಕ್ರಾನ್ ರೂಪಾಂತರದ ಉಪವರ್ಗವಾದ ಹೊಸ ರೂಪಾಂತರವು ಈ ಶರತ್ಕಾಲದಲ್ಲಿ ಹರಡಲು ಸಹಾಯ ಮಾಡುವ ಕೆಲವು ಹೊಸ ರೂಪಾಂತರಗಳನ್ನು ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ಆದಾಗ್ಯೂ ಲಸಿಕೆಗಳು ಇನ್ನೂ ತೀವ್ರವಾದ ಪ್ರಕರಣಗಳನ್ನು ತಡೆಗಟ್ಟಲು ಸಹಾಯ ಮಾಡಬೇಕು. ಎಕ್ಸ್ಇಸಿ ರೂಪಾಂತರವು ಹಿಂದಿನ ಒಮೈಕ್ರಾನ್ ಉಪರೂಪಾಂತರಗಳಾದ ಕೆಎಸ್ .1.1 ಮತ್ತು ಕೆಪಿ .3.3 ರ ಹೈಬ್ರಿಡ್ ಆಗಿದ್ದು, ಇದು ಪ್ರಸ್ತುತ ಯುರೋಪ್ನಲ್ಲಿ ಪ್ರಬಲವಾಗಿದೆ. ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್, ಪೋರ್ಚುಗಲ್ ಮತ್ತು ಚೀನಾ ಸೇರಿದಂತೆ 27 ದೇಶಗಳ 500 ಮಾದರಿಗಳು ಎಕ್ಸ್ಇಸಿಯನ್ನು ಹೊಂದಿರುವುದು ಕಂಡುಬಂದಿದೆ ಎಂದು ದಿ ಇಂಡಿಪೆಂಡೆಂಟ್ ವರದಿ…
ಬೆಂಗಳೂರು: ಗ್ರಾಹಕರಿಗೆ ತಮ್ಮದೇ ಆದಂತ ಆಯ್ಕೆಯ ಸ್ವಾತಂತ್ರ್ಯವಿದೆ. ಅವರು ಯಾವುದೇ ಅಂಗಡಿಗೆ ಹೋಗಿ ಖರೀದಿಸುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೇ ತಮ್ಮ ಅಂಗಡಿಯನ್ನು ಬಿಟ್ಟು ಪಕ್ಕದ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋದ್ರು ಅಂತ ಅಕ್ಕ-ಪಕ್ಕದ ಬಟ್ಟೆ ಅಂಗಡಿ ಮಾಲೀಕರು ಗಲಾಟೆ ಮಾಡಿಕೊಂಡು ಇಬ್ಬರ ಮೇಲೆ 6 ಮಂದಿ ಹಲ್ಲೆ ಮಾಡಿರುವಂತ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ. ಬೆಂಗಳೂರಿನ ಚಿಕ್ಕಪೇಟೆ ವ್ಯಾಪ್ತಿಯ ಪ್ಲಾಜಾದಲ್ಲಿನ ಬಟ್ಟೆ ಅಂಗಡಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಟ್ಟೆ ಅಂಗಡಿಯ ಮಾಲೀಕರ ನಡುವೆ ಮಾರಾಮಾರಿಯೇ ನಡೆದಿದೆ. ಈ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ. ಗ್ರಾಹಕರೊಬ್ಬರು ಸೀರೆ ಖರೀದಿಸೋದಕ್ಕೆ ಚಿಕ್ಕಪೇಟೆ ಬಳಿಯ ಫ್ಲಾಜಾಗೆ ತೆರಳಿದ್ದರು. ಆದರೇ ಅಲ್ಲಿ ಸರಿಯಿಲ್ಲ ಅನ್ನೋ ಕಾರಣಕ್ಕೆ ಪಕ್ಕದ ಬಟ್ಟೆ ಅಂಗಡಿಗೆ ತೆರಳಿದ್ದಾರೆ. ಈ ವಿಚಾರವಾಗಿಯೇ ಅಕ್ಕ-ಪಕ್ಕದ ಬಟ್ಟೆ ಅಂಗಡಿ ಮಾಲೀಕರ ನಡುವೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೇರಿ ತಂದೆ-ಮಗನ ಮೇಲೆ 6 ಮಂದಿಯಿಂದ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್.16ರಂದು ನಡೆದಿರುವಂತ ಘಟನೆ…
ಬೆಂಗಳೂರು: ಮೈಸೂರು ದಸರಾ ಉತ್ಸವ ಅದ್ಧೂರಿ ಆಚರಣೆ ಹೆಸರಿನಲ್ಲಿ ಹಗರಣಕ್ಕೆ ವೇದಿಕೆಯಾಗದಿರಲಿ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಸಲಹೆ ಮಾಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನಾಡಹಬ್ಬ ಮೈಸೂರು ದಸರಾ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅದ್ಧೂರಿ ದಸರಾ, ಕಾಂಗ್ರೆಸ್ ಸರ್ಕಾರದದ ಮತ್ತೊಂದು ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಎನ್ನುವುದೇ ಕನ್ನಡಿಗರ ಆಶಯವನ್ನು ವ್ಯಕ್ತ ಪಡಿಸಿದ್ದಾರೆ. ಕಳೆದ ವರ್ಷ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಅವರ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷವಾದರೂ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿಸದೆ ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಈ ವರ್ಷವೂ ಮತ್ತೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕನ್ನಡಿಗರ ಮಾನ ಕಳಿಯುತ್ತೋ ಕಾದು ನೋಡಬೇಕು ಎಂದಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂದರೆ ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ…
ನವದೆಹಲಿ: ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಕಾಲಕಾಲಕ್ಕೆ ಯೋಜನೆಗಳನ್ನು ಪ್ರಾರಂಭಿಸುತ್ತಲೇ ಇರುತ್ತದೆ. ಭಾರತವು ಕೃಷಿ ದೇಶವಾಗಿದೆ. ಭಾರತ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಅಂತಹ ಒಂದು ಕೇಂದ್ರ ಸರ್ಕಾರದ ಯೋಜನೆ ಪಿಎಂ ಕಿಸಾನ್ ಮಾನ್ಧನ್ ಯೋಜನೆ. ಈ ಯೋಜನೆಯಲ್ಲಿ ರೈತರಿಗೆ ಪಿಂಚಣಿ ನೀಡಲು ಅವಕಾಶವಿದೆ. ಪ್ರತಿ ತಿಂಗಳು ರೈತರಿಗೆ ರೂ.3,000 ಈ ಯೋಜನೆಯಡಿ ಸಿಗಲಿದೆ. ಹಾಗಾದ್ರೆ ಅರ್ಜಿ ಸಲ್ಲಿಕೆ ಹೇಗೆ.? ಅಗತ್ಯ ದಾಖಲೆಗಳು ಯಾವುವು ಸೇರಿ ಇತರೆ ಮಾಹಿತಿ ಮುಂದಿದೆ ಓದಿ. 60 ವರ್ಷಗಳ ನಂತರ ರೈತರಿಗೆ ಪ್ರತಿ ತಿಂಗಳು 3000 ರೂ. ಭಾರತದಲ್ಲಿ ಅನೇಕ ರೈತರಿದ್ದಾರೆ. ಅವರ ಆದಾಯವು ತುಂಬಾ ಕಡಿಮೆ ಮತ್ತು ಅವರಿಗೆ ಕೃಷಿಗೆ ಹೆಚ್ಚು ಭೂಮಿ ಇಲ್ಲ. ಅಂತಹ ರೈತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯ ಮೂಲಕ ವೃದ್ಧಾಪ್ಯದಲ್ಲಿ ಅವರಿಗೆ ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಭಾರತ ಸರ್ಕಾರದ ಕಿಸಾನ್ ಮಾನ್ಧನ್ ಯೋಜನೆಯಡಿ, ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 3000 ರೂ.ಗಳ ಪಿಂಚಣಿ…
ನವದೆಹಲಿ: ಬಡ್ಡಿದರಗಳ ಬಗ್ಗೆ ಬಹುನಿರೀಕ್ಷಿತ ಯುಎಸ್ ಫೆಡ್ ನಿರ್ಧಾರಕ್ಕೆ ಮುಂಚಿತವಾಗಿ ಎರಡು ಪ್ರಮುಖ ಈಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ಜಾಗತಿಕ ಮಾರುಕಟ್ಟೆಯ ಮಂದಗತಿಯ ಪ್ರವೃತ್ತಿಗಳ ನಡುವೆ ಸೂಚ್ಯಂಕಗಳು ಫ್ಲಾಟ್ ಆಗಿ ವಹಿವಾಟು ನಡೆಸುತ್ತಿವೆ. ಬೆಳಿಗ್ಗೆ 10:45 ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ 187 ಪಾಯಿಂಟ್ಸ್ ಏರಿಕೆಗೊಂಡು 83,267 ಕ್ಕೆ ತಲುಪಿದೆ. ಮತ್ತೊಂದೆಡೆ, ಎನ್ಎಸ್ಇ ನಿಫ್ಟಿ 50 56 ಪಾಯಿಂಟ್ಸ್ ಏರಿಕೆಗೊಂಡು 25,475 ಕ್ಕೆ ವಹಿವಾಟು ನಡೆಸುತ್ತಿದೆ. ಸ್ಟಾಕ್ ಅಪ್ ಡೇಟ್ 30 ಷೇರುಗಳ ಸೆನ್ಸೆಕ್ಸ್ ಪ್ಲಾಟ್ ಫಾರ್ಮ್ ನಲ್ಲಿ, ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಎಲ್ &ಟಿ, ಎಂ & ಎಂ, ನೆಸ್ಲೆ ಆರಂಭಿಕ ಲಾಭ ಗಳಿಸಿದವು. ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಿಸಿಎಸ್, ಎಚ್ಸಿಎಲ್ಟೆಕ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿದವು. ಒಟ್ಟು 1753 ಷೇರುಗಳು ಲಾಭ ಗಳಿಸಿದವು, 1,313 ಷೇರುಗಳು…
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಂತ ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೋಡಳ್ಳಿ ಶಿವರಾಮ್ ಇನ್ನಿಲ್ಲವಾಗಿದ್ದಾರೆ. ಈ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ಕಳೆದ ರಾತ್ರಿ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ವಿಜೇತ ಕನ್ನಡದ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಕೋಡಳ್ಳಿ ಶಿವರಾಮ್ ಅವರು ವಿಧಿವಶರಾಗಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಅಂದಹಾಗೇ ಕೋಡಳ್ಳಿ ಶಿವರಾಮ್ ಅವರು ಕನ್ನಡದ ಚಲನಚಿತ್ರಗಳಾದಂತ ಗ್ರಹಣ, ಬೆಳ್ಳಿ ಬೆಳಕು ಸೇರಿದಂತೆ ಇತರೆ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಇಂತಹ ಸ್ಯಾಂಡಲ್ ವುಡ್ ನಿರ್ದೇಶಕ, ನಿರ್ಮಾಪಕ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. ಕಳೆದ ರಾತ್ರಿ ನಿಧನರಾದಂತ ಸ್ಯಾಂಡಲ್ ವುಡ್ ನಿರ್ದೇಶಕ, ನಿರ್ಮಾಪಕ ಕೋಡಳ್ಳಿ ಶಿವರಾಮ್ ಅವರ ಅಂತ್ಯಕ್ರಿಯೆಯನ್ನು ಇಂದು ಕುಟುಂಬಸ್ಥರು ನೆರೆವೇರಿಸಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/bengaluru-man-stabbed-to-death-in-park-says-woman/ https://kannadanewsnow.com/kannada/actor-darshans-cell-in-ballari-jail-to-be-equipped-with-tvs-only-government-channels-allowed-to-be-watched/
ಬಳ್ಳಾರಿ: ನಗರದಲ್ಲಿನ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಇರಿಸಲಾಗಿದೆ. ಅವರ ಕೊಠಡಿಗೆ ಜೈಲು ಅಧಿಕಾರಿಗಳು ಟಿವಿಯನ್ನು ಅಳವಡಿಸಿದ್ದು, ಕೇವಲ ಸರ್ಕಾರಿ ಚಾನಲ್ ಗಳನ್ನು ವೀಕ್ಷಿಸಲು ಮಾತ್ರವೇ ಅವಕಾಶ ನೀಡಲಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಂತ ಅವರಿಗೆ ರಾಜಾತಿಥ್ಯವನ್ನು ಜೈಲು ಅಧಿಕಾರಿಗಳು ನೀಡಿದ್ದು ಪೋಟೋ, ವೀಡಿಯೋ ಸಹಿತ ಬಹಿರಂಗಗೊಂಡಿತ್ತು. ಹೀಗಾಗಿ ಅಲ್ಲಿಂದ ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿರುವಂತ ನಟ ದರ್ಶನ್ ಅವರು ತಮ್ಮ ಸೆಲ್ ನಲ್ಲಿ ಟಿವಿ ಅಳವಡಿಸುವಂತೆ ಜೈಲು ಅಧಿಕಾರಿಗಳನ್ನು ಕೋರಿದ್ದರು. ತಮ್ಮ ಬಗೆಗಿನ ಪ್ರಕರಣದ ಮಾಹಿತಿ ತಿಳಿಯಬೇಕಿದೆ. ಟಿವಿ ಅಳವಡಿಸುವಂತೆ ಅಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಈಗ ನಟ ದರ್ಶನ್ ಸೆಲ್ ಗೆ ಟಿವಿ ಅಳವಡಿಸಲಾಗಿದೆ. ಆದರೇ ಖಾಸಗಿ ಚಾನಲ್ ವೀಕ್ಷಣೆಯ ಸೌಲಭ್ಯ ಒದಗಿಸಿಲ್ಲ. ಕೇವಲ ಡಿಡಿ ಚಂದನ ಸೇರಿದಂತೆ ಇತರೆ ಸರ್ಕಾರಿ ಚಾನಲ್ ವೀಕ್ಷಿಸಲು ಅವಕಾಶ…
ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ಎನ್ನುವಂತೆ ವೃದ್ಧನೊಬ್ಬನನ್ನು ಪ್ರೀತಿಸುವುದಾಗಿ ಕರೆಸಿಕೊಂಡ ಯುವತಿಯೊಬ್ಬಳು, ಆತನ ಸ್ನೇಹಿತನನ್ನು ಕರೆಸಿ ಚಾಕುವಿನಿಂದ ಇರಿಸಿ ಕೊಲೆಗೆ ಯತ್ನಿಸಿದಂತ ಘಟನೆ ಬಿಟಿಎಂ ಲೇಔಟ್ ನ ಪಾರ್ಕ್ ಒಂದರಲ್ಲಿ ನಡೆದಿದೆ. ಜಯನಗರದಲ್ಲಿ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡು ಹಿತೇಂದ್ರ ಎಂಬ ವೃದ್ಧ ವ್ಯಾಪಾರ ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ಕೆಲಸಕ್ಕೆ ಇದ್ದಂತ ಯುವತಿಯೊಬ್ಬಳು 2-3 ತಿಂಗಳು ಕೆಲಸ ಮಾಡಿ ಆ ಬಳಿಕ ಕೆಲಸ ಬಿಟ್ಟಿದ್ದಳು. ಕಳೆದ ಸೆ.14ರಂದು ಯುವತಿಗೆ ಕರೆ ಮಾಡಿದ್ದಂತ ವೃದ್ಧ ಹಿತೇಂದ್ರ ಮಾತನಾಡುವುದಿದೆ, ಪಾರ್ಕ್ ಗೆ ಬರುವಂತೆ ತಿಳಿಸಿದ್ದನು. ಅದಕ್ಕೆ ಒಪ್ಪಿಕೊಂಡು ಯುವತಿ ಬಿಟಿಎಂ ಲೇಔಟ್ ನಲ್ಲಿರುವಂತ ಪಾರ್ಕ್ ಒಂದಕ್ಕೆ ಬಂದಿದ್ದರು. ಪಾರ್ಕ್ ನಲ್ಲಿ ವೃದ್ಧ ಹಿತೇಂದ್ರ ಯುವತಿಗೆ ತನ್ನ ಪ್ರೀತಿಯ ನಿವೇಧನೆಯನ್ನು ತಿಳಿಸಿದ್ದನು. ಇದಕ್ಕೆ ಯುವತಿ ಕೂಡ ಒಪ್ಪಿಗೆ ಸೂಚಿಸಿದ್ದಳಂತೆ. ಈ ಬಳಿಕ ಮಾರನೇ ದಿನ ಅಂಕಲ್ ಮಾತನಾಡಬೇಕು ಬನ್ನಿ ಅಂತ ಹಿತೇಂದ್ರನನ್ನು ಪಾರ್ಕ್ ಗೆ ಯುವತಿ ಕರೆಸಿಕೊಂಡಿದ್ದಾಳೆ. ಬಿಟಿಎಂ ಲೇಔಟ್ ನಲ್ಲಿನ ಪಾರ್ಕ್ ಗೆ ಬಂದಂತ…
ಕೆಎನ್ಎನ್ ಡಿಜಿಟಲ್ ಡೆಸ್ಕ್: ಮಂಕಿಪಾಕ್ಸ್ (Mpox) ಮತ್ತು ವೈರಲ್ ಸಾಂಕ್ರಾಮಿಕ ರೋಗಗಳ ಬಗ್ಗೆ ಆಯುರ್ವೇದ ಏನು ಹೇಳುತ್ತೆ ಎನ್ನುವಂತ ಸಂಪೂರ್ಣ ಮಾಹಿತಿಯನ್ನು ಡಾ.ಅನಿಲ್ ಕುಮಾರ್ ಶೆಟ್ಟಿ.ವೈ ನೀಡಿದ್ದಾರೆ. ಮುಂದಿದೆ ಓದಿ. ಜ್ವರ, ಕುಷ್ಠ, ಶೋಷ, ಷೋಥ, ವ್ರಣ ಮುಂತಾದ ಸಾಂಕ್ರಾಮಿಕ ರೋಗಗಳ(Infections) ಬಗ್ಗೆ ಆಯುರ್ವೇದವು ಉಲ್ಲೇಖಿಸಿದ್ದರೂ ಸಹ, ಸೋಂಕನ್ನು ಗುರುತಿಸಲು ಮತ್ತು ನಿರ್ವಹಿಸಲು ಯಾವುದೇ ಏಕರೂಪದ ಚಿಕಿತ್ಸಾ ಪ್ರೋಟೋಕಾಲ್ ಇಲ್ಲ. ಆಯುರ್ವೇದವು ಆತಿಥೇಯರ(ರೋಗಿಯ) ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತದೆಯೇ ಹೊರತು ರೋಗವನ್ನಲ್ಲ(Prevention is better than Cure). ಆಯುರ್ವೇದವು ಟೈಫಾಯಿಡ್, ಕ್ಷಯ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದೆ ಆದರೆ ರೋಗವನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಆಯುರ್ವೇದವು ತನ್ನದೇ ಆದ ಚಿಕಿತ್ಸಾ ತತ್ವಗಳನ್ನು ಹೊಂದಿದೆ. ಸೋಂಕುಗಳನ್ನು(Infections) ರೋಗದ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ ಮತ್ತು ನಿರ್ವಹಣೆಯು ಸಂಪೂರ್ಣವಾಗಿ ದೋಷ, ದುಷ್ಯ(Vitiation), ಅಗ್ನಿ(Digestive Fire) ಮತ್ತು ಸ್ರೋತಸ್(Bodily Channels) ಗಳನ್ನು ಆಧರಿಸಿದೆ. WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ mpox ಬಗ್ಗೆ ತಿಳಿದುಕೊಳ್ಳಬೇಕಾದ 10…