Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೇ ಬಿಜೆಪಿಯಿಂದ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ನಿನ್ನೆಯಷ್ಟೇ ಕಾಂಗ್ರೆಸ್ ನಿಂದ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿತ್ತು. ಈ ಬೆನ್ನಲ್ಲೇ ಬಿಜೆಪಿಯಿಂದ ರಾಜ್ಯ ಉಸ್ತುವಾರಿಗಳನ್ನು ಮಾಡಿ ನೇಮಕ ಮಾಡಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದ್ದು, ಲೋಕಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಿದೆ. ಅದರ ಸಲುವಾಗಿ ರಾಜ್ಯ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಇನ್ನೂ ವಿವಿಧ ರಾಜ್ಯಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿದಂತೆ ಕರ್ನಾಟಕ ಉಸ್ತುವಾರಿಗಳಾಗಿ ರಾಧಾ ಮೋಹನ್ ದಾಸ್ ಹಾಗೂ ಸುಧಾಕರರೆಡ್ಡಿ ನೇಮಕ ಮಾಡಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮಹತ್ವದ ಹೊಣೆಗಾರಿಕೆಯನ್ನು ನೀಡಲಾಗಿದೆ. https://kannadanewsnow.com/kannada/bank-holidays-in-february-2024-bank-customers-note-here-is-the-list-of-bank-holidays-for-the-month-of-february/ https://kannadanewsnow.com/kannada/bihar-political-development-nitish-kumar-likely-to-resign-as-bihar-cm-at-7-pm-today/
ಬಿಹಾರ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಉಂಟಾಗಿದೆ. ಇಂದು ಸಂಜೆ 7 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವಂತ ನಿತೀಶ್ ಕುಮಾರ್ ಅವರು, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಸಂಜೆ 7 ಗಂಟೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿರುವಂತ ನಿತೀಶ್ ಕುಮಾರ್, ನಾಳೆ ಮತ್ತೆ ಜೆಡಿಯು ಹಾಗೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸೋ ಸಾಧಅಯತೆ ಇದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವಂತ ನಿತೀಶ್ ಕುಮಾರ್, ಈಗ ಜೆಡಿಯು ಹಾಗೂ ಬಿಜೆಪಿಯೊಂದಿಗೆ ಸರ್ಕಾರ ರಚಿಸಿ, ಸಿಎಂ ಪಟ್ಟಕ್ಕೆ ಏರೋ ಎಲ್ಲಾ ಸಾಧ್ಯತೆ ಇದೆ. ಆ ಬಗ್ಗೆ ಕೆಲವೇ ಕ್ಷಣಗಳಲ್ಲಿ ಅಂತಿಮ ಅಧಿಕೃತ ಮಾಹಿತಿ ಹೊರ ಬೀಳಲಿದೆ. https://kannadanewsnow.com/kannada/pg-owners-note-adherence-to-these-guidelines-is-mandatory-warns-bengaluru-police/ https://kannadanewsnow.com/kannada/need-to-be-active-to-stay-mentally-and-physically-healthy-siddaramaiah/
ಬೆಂಗಳೂರು : ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಶ್ವವಾಣಿ ಕನ್ನಡ ಪತ್ರಿಕೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಅಂತರ್ ಮುದ್ರಣ ಮಾಧ್ಯಮ ವಿ ವಿ ಕಪ್* 2024 ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಹೆಚ್ಚು ಜನಪ್ರಿಯವಾದ ಪಂದ್ಯ ಹಾಗೂ ಹೆಚ್ಚು ಶ್ರೀಮಂತ ಪಂದ್ಯವೆಂದು ಕ್ರಿಕೆಟ್ ಖ್ಯಾತಿ ಪಡೆದಿದೆ. ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆ ಅಗತ್ಯ ಬೊಜ್ಜು ಬೆಳೆಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು. ಸೋಲು ಗೆಲುವು ಸಹಜ ಸೋಲು ಗೆಲುವು ಯಾವುದೇ ಪಂದ್ಯದಲ್ಲಿ ಸಹಜ. ಗೆದ್ದವರಿಗೂ, ಸೋತವರಿಗೂ ಶುಭಾಶಯ ಹೇಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಆರು ತಂಡಗಳಿಗೂ ಅಭಿನಂದಿಸಿದರು. ಕ್ರಿಕೆಟ್ ವೀಕ್ಷಕ ನಾನು ಕ್ರಿಕೆಟ್ ಆಡುವುದಿಲ್ಲ. ಆದರೆ ಕ್ರಿಕೆಟ್ ವೀಕ್ಷಕ. ಟೆಸ್ಟ್ ಪಂದ್ಯಾವಳಿಯನ್ನು ನೋಡಿ ಅಭ್ಯಾಸವಿದೆ ಎಂದರು. ಸಮಯವಿದ್ದರೆ ಬೆಂಗಳೂರಿನಲ್ಲಿ ಕ್ರಿಕೆಟ್ ನೋಡುತ್ತೇನೆ ಎಂದರು. ವಿಶ್ವೇಶ್ವರ ಭಟ್ ಅವರು ಸ್ವಂತ ಪತ್ರಿಕೆ ಪ್ರಾರಂಭಿಸಿ ಒಂಭತ್ತು ವರ್ಷಗಳಾಗಿವೆ. ಅದರ…
ಗದಗ: ಈ ವರ್ಷದಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಪ್ರಧಾನಿಗಳಿಬ್ಬರು ಸಾವಿಗೀಡಾಗುವ ಲಕ್ಷಣಗಳಿವೆ ಎಂಬುದಾಗಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದಂತ ಅವರು, 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟ, ಅಣುಬಾಂಬ್ ಸ್ಪೋಟದಂತಹ ಸನ್ನಿವೇಶ, ಯುದ್ಧ ಭೀಟಿ ಉಂಟಾಗಲಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂಬುದಾಗಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಸಂಕ್ರಾಂತಿ ನಂತ್ರ ಹಾಗೂ ಯುಗಾದಿ ನಂತ್ರ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ನಂತ್ರ ವ್ಯಾಪಾರ, ವಾಣಿಜ್ಯ, ಯುಗಾದಿ ನಂತ್ರ ದೇಶದ ಸಮಗ್ರ ಮಳೆ, ಬೆಳೆ, ಜರು, ರಾಜರು ಇತ್ಯಾದಿಗಳ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಪ್ರಶಸ್ತವಲ್ಲ ಎಂದರು. https://kannadanewsnow.com/kannada/bank-holidays-in-february-2024-bank-customers-note-here-is-the-list-of-bank-holidays-for-the-month-of-february/ https://kannadanewsnow.com/kannada/pg-owners-note-adherence-to-these-guidelines-is-mandatory-warns-bengaluru-police/
ಬೆಂಗಳೂರು: ರಾದ್ಯದಲ್ಲಿ ದಶಕಗಳಿಂದ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿವೆ. ಇಂತಹ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಕೂಡಲೇ ಅನಧಿಕೃತ ಶಾಲೆಗಳನ್ನು ಮುಚ್ಚುವಂತೆ ಮತ್ತೊಮ್ಮೆ ಖಡಕ್ ಆದೇಶ ಹೊರಡಿಸಿದೆ. 2022-23ರ ಶೈಕ್ಷಣಿಕ ವರ್ಷದಲ್ಲಿ 1,316 ಶಾಲೆಗಳನ್ನು ಅನಧಿಕೃತ ಎಂದು ಶಿಕ್ಷಣ ಇಲಾಖೆ ಗುರುತಿಸಿತ್ತು. ಈಗ ಈ ಸಂಖ್ಯೆ 1,695ಕ್ಕೆ ಏರಿಕೆಯಾಗಿದೆ. ಈ ಪೈಕಿ 63 ರಾಜ್ಯ ಅಥವಾ ಕೇಂದ್ರ ಮಂಡಳಿಯ ಸಂಬಂಧವಿಲ್ಲದೇ ಕಾರ್ಯನಿರ್ವಹಿಸುತ್ತಿವೆ. ಇನ್ನೂ 620 ಶಾಲೆಗಳು ಅನುಮತಿಯಿಲ್ಲದೇ ಹೆಚ್ಚುವರಿ ವಿಭಾಗಗಳನ್ನು ಆರಂಭಿಸಿದ್ದಾವೆ. 74 ಶಾಲೆಗಳು ಅನುಮದೋನೆ ಇಲ್ಲದೇ ಉನ್ನತ ಶ್ರೇಣಿಗಳನ್ನು ಪ್ರಾರಂಭಿಸಿವೆ. ಒಟ್ಟು 95 ಶಾಲೆಗಳು ರಾಜ್ಯ ಮಂಡಳಿಯ ಪಠ್ಯಕ್ರಮ ನೀಡಲು ಅನುಮತಿ ಹೊಂದಿದ್ದರೂ, ಮತ್ತೊಂದು ಬೋರ್ಡ್ ಪಠ್ಯಕ್ರಮವನ್ನು ನೀಡುವ ಮೂಲಕ ಪೋಷಕರು ಮತ್ತು ಮಕ್ಕಳನ್ನು ವಂಚಿಸುತ್ತಿರೋದಾಗಿ ಕಂಡು ಬಂದಿದೆ. ಶಾಲಾ ಮಕ್ಕಳ ಪೋಷಕರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ರಾಜ್ಯದಲ್ಲಿನ 294 ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದು, ಶಿಕ್ಷಣ ನೀಡುತ್ತಿರೋದು ಮಾತ್ರ ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಆಗಿದ್ದಾವೆ.…
ಹಾಸನ: ಜಿಲ್ಲೆಯಲ್ಲಿ ಇಂದು ನಡೆದಂತ ಗಣರಾಜ್ಯೋತ್ಸವದ ನಿಮಿತ್ತದ ಸಾಂಸ್ಕೃತಿಕ ಕಾರ್ಯಕ್ರಮದ ನೃತ್ಯ ಪ್ರದರ್ಶನದ ವೇಳೆಯಲ್ಲಿ ಕಮಲದ ಹೂವನ್ನು ಶಾಲಾ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದಾರೆ. ಹೀಗೆ ಪ್ರದರ್ಶನ ಮಾಡುತ್ತಲೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನ ಕಂಡಂತ ಶಾಸಕ ಶಿವಲಿಂಗೇಗೌಡ ಅವರು ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಗರಂ ಆದಂತ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆಯ ಶಾಲೆಯೊಂದರದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶನವೊಂದರಲ್ಲಿ ಭಾರತದ ರಾಷ್ಟ್ರೀಯ ಹೂ ಕಮಲದ ಚಿತ್ರವನ್ನು ಪ್ರದರ್ಶಿಸಿದ್ದಾರೆ. ಈ ಕಮಲದ ಹೂ ಕಂಡಂತ ಶಾಸಕ ಶಿವಲಿಂಗೇಗೌಡ ಅವರು, ತಹಶೀಲ್ದಾರ್ ಸಂತೋಷ್ ಹಾಗೂ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ. ಶಾಲಾ ಶಿಕ್ಷಕಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಲಾ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಂತ ಶಾಸಕ ಶಿವಲಿಂಗೇಗೌಡ ಅವರು ಕಮಲ ಯಾವ ಪಕ್ಷದ ಚಿನ್ಹೆ? ಯಾವ ಸೀಮೆ ನಾಗರಿಕರು ನೀವು.? ಮಕ್ಕಳನ್ನು ಹೇಗೆ ಉದ್ದಾರ ಮಾಡ್ತೀರಿ ಎಂಬುದಾಗಿ ಗರಂ ಆದ್ರು. ಆಗ ಕಮಲ ಒಂದು ಪಕ್ಷದ…
ಬೆಂಗಳೂರು: ರಾಜ್ಯದ ಮಧುಮೇಹಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳೆ ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾಳೆ ಸಂಜೆ 5 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವಂತ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಚಿತ ಡಯಾಲಿಸಿಸ್ ಸೇವೆಗಳಿಗೆ ಉದ್ಘಾಟನೆ ಮಾಡಲಿದ್ದಾರೆ ಎಂದಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭಾಗಿಯಾಗಲಿದ್ದಾರೆ. ಅಧ್ಯಕ್ಷತೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಹಿಸಿದ್ರೇ, ಮುಖ್ಯ ಅತಿಥಿಗಳಾಗಿ ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್, ಬಿಎಸ್ ಸುರೇಶ್ ಕೂಡ ಹಾಜರಿರಲಿದ್ದಾರೆ. ಜೊತೆಗೆ ವಿಪಕ್ಷ ನಾಯಕ ಆರ್ ಅಶೋಕ್ ಭಾಗವಹಿಸಲಿದ್ದಾರೆ. ಅಂದಹಾಗೇ 219 ಡಯಾಲಿಸಿಸ್ ಕೇಂದ್ರಗಳು, 800 ಡಯಾಲಿಸಿಸ್ ಯಂತ್ರಗಳನ್ನು ಒಳಗೊಂಡಿದೆ. ಇವುಗಳಿಗೆ ವಾರ್ಷಿಕ ಯೋಜನಾ ವೆಚ್ಚ…
ಬೆಂಗಳೂರು: ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯಲ್ಲಿ 900ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ನಗರದ ಅರಮನೆ ಮೈದಾನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಸಭೆ ನಡೆಯಲಿದೆ. ರಾಜ್ಯದಲ್ಲಿರುವ ಬಡವರು, ರೈತರು ಮತ್ತು ದಲಿತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು. ಬಡವರ ವಿರೋಧಿ ಸರಕಾರದ ಬಗ್ಗೆ ಜನರಿಗೆ ಸತ್ಯಾಂಶಗಳನ್ನು ತಲುಪಿಸಬೇಕು ಎಂದು ಯೋಜಿಸಿದ್ದೇವೆ ಎಂದರು. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಕಾರ್ಯಕ್ರಮಗಳಿಂದ ದೇಶಾದ್ಯಂತ ಜನತೆ ಮೋದಿಜೀ ಪರವಾಗಿದ್ದಾರೆ. ಕೇಂದ್ರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಉದ್ದೇಶಿಸಲಾಗಿದೆ. ಮೋದಿಜೀ ಅವರ ಜನಪ್ರಿಯತೆಯನ್ನು ಮತವನ್ನಾಗಿ ಪರಿವರ್ತಿಸಿ ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲು ಎಂದು ಸಾಬೀತು ಪಡಿಸುತ್ತೇವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಎಲ್ಲ ವಿಷಯಗಳ ಸಮಾಲೋಚನೆ ಮಾಡಿ, ಮುಂದಿನ ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರವನ್ನು, ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು…
ಇಂದು ಪ್ರತಿಯೊಬ್ಬ ಮನುಷ್ಯನೂ ಪ್ರತಿದಿನ ಕೊರಗುವ ಒಂದು ಮಾತು ಏನೆಂದರೆ ನಾನೇನು ಪಾಪ ಮಾಡಿದ್ದೇನೆ ಎಂದರೆ ಈ ಜನ್ಮದಲ್ಲಿ ತುಂಬಾ ಕಷ್ಟ ಪಡುತ್ತಿದ್ದೇನೆ. ಸುಸ್ಥಿತಿಯಲ್ಲಿರುವವರಿಂದ ಹಿಡಿದು ದೀನದಲಿತರ ತನಕ ಎಲ್ಲರೂ ಇದನ್ನೇ ಹೇಳುತ್ತಾರೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ…
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಇದರ ಸಲುವಾಗಿ ಕೆಪಿಸಿಸಿ ಸಂವಹನ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬೂತ್ ಲೆವೆಲ್ ಏಜೆಂಟರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲು ಹಾಗೂ ನಿಗದಿತ ಸಮಯದೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು, ಕೆಪಿಸಿಸಿ, ಡಿಸಿಸಿ, ಬಿಸಿಸಿ ಮುಖಂಡರುಗಳೊಂದಿಗೆ ಸಮನ್ವಯತೆ ಸಾಧಿಸಲು ಕೆಪಿಸಿಸಿಯಿಂದ ಈ ಕೆಳಕಂಡ ಬಿಎಲ್ಎ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಹೀಗಿದೆ ಕೆಪಿಸಿಸಿ ಸಂವಹನ ಸಮಿತಿ ಬಿಎಲ್ಎ ಪಟ್ಟಿ ಪಿಸಿ ಮೋಹನ್, ಉಪಾಧ್ಯಕ್ಷರು, ಕೆಪಿಸಿಸಿ – ಅಧ್ಯಕ್ಷರು, ಬೆಂಗಳೂರು ವಿಭಾಗದ ಉಸ್ತುವಾರಿಗಳು ಪಿ.ಆರ್ ರಮೇಶ್, ಉಪಾಧ್ಯಕ್ಷರು, ಕೆಪಿಸಿಸಿ – ಅಧ್ಯಕ್ಷರು, ಗುಲ್ಪರ್ಗ ವಿಭಾಗ ಉಸ್ತುವಾರಿಗಳು ವೀರಕುಮಾರ್ ಪಾಟೀಲ್, ಉಪಾಧ್ಯಕ್ಷರು, ಕೆಪಿಸಿಸಿ – ಅಧ್ಯಕ್ಷರು ಬೆಳಗಾವಿ ವಿಭಾಗ ಉಸ್ತುವಾರಿಗಳು ಐವಾನ್…