Subscribe to Updates
Get the latest creative news from FooBar about art, design and business.
Author: kannadanewsnow09
ಗೃಹಶೋಭಿತ ಮಹಿಳೆಯರಿಗೆ ಕಿವಿ ಮಾತು: *ಸಂಜೆ ದೀಪ ಹೊತ್ತಿಸಿದ ಮೇಲೆ ಗೃಹದ ಕಸ ಗುಡಿಸ ಬೇಡಿ. * ರಾತ್ರಿ ಮಲಗುವ ಮುಂಚೆ ಕಸ ಗುಡಿಸಿದ್ದರೆ ಹೊರ ಹಾಕ ಬೇಡಿ. ಬೆಳಗಿನ ಜಾವ ಹೊರ ಹಾಕಿ. *ಬಾಗಿಲ ಹೊಸ್ತಿಲ ಮೇಲೆ ನಿಲ್ಲ ಬೇಡಿ ಮತ್ತು ಕುಳಿತು ಕೊಳ್ಳ ಬೇಡಿ. *ಸಂಜೆ ದೀಪವನ್ನು ಹೊತ್ತಿಸುವ ವೇಳೆ ಮುಂಬಾಗಿಲನ್ನು ತೆರೆದಿರಿಸಿ. ಹಿಂಬಾಗಿಲಿನ ಕದ ಮುಚ್ಚಿರಲಿ. *ಪೊರಕೆಯ ತುದಿ ಭಾಗವನ್ನು ಮೇಲೆ ಮಾಡಿ ನಿಲ್ಲಿಸ ಬೇಡಿ. ಮೊರ, ಪೊರಕೆಯನ್ನು ಕಾಲಿನಿಂದ ಒದೆಯ ಬೇಡಿ. *ಹೊರ ಬಾಗಿಲ ಹೊಸ್ತಿಲಲ್ಲಿಯೇ ಮತ್ತು ಅದರ ಬಳಿ ಪಾದರಕ್ಷೆಗಳನ್ನು ಬಿಡ ಬೇಡಿ. *ರಂಗೋಲಿ ಹಾಕದೆ ಬರೇ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಅಶುಭ ಸೂಚಕ. *ಗೃಹದ ಗೋಡೆ, ದೇವರ ಮನೆ ಇತ್ಯಾದಿ ಸ್ಥಳಗಳ ಮೇಲೆ ಶಾಯಿ (ಇಂಕ್) ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿ ಬರೆಯ ಬೇಡಿ. *ಮಹಿಳೆಯರು ನಡೆಯುವಾಗ ಕಾಲಿನ ಶಬ್ಧ ಸಾಧ್ಯವಾದಷ್ಟು ಕಡಿಮೆಯಾಗಿರಲಿ. * ಮಂಗಳ, ಶುಕ್ರವಾರಗಳಂದು ಅವ್ಯಾಚ ಶಬ್ಧಗಳಿಂದ…
ವಿಜಯಪುರ: ಇಲ್ಲಿನ ಹೊರವಲಯದ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುವುದು. ಇದರಿಂದ 400 ಮಂದಿಗೆ ಉದ್ಯೋಗ ಸಿಗಲಿದೆ. ಜತೆಗೆ ಬೆಂಗಳೂರಿನಲ್ಲೂ ಕೆಎಸ್ಡಿಎಲ್ ಕಾರ್ಖಾನೆ ವಿಸ್ತರಣೆ ಮತ್ತು ಆಧುನೀಕರಣ ನಡೆಯುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶನಿವಾರ ಹೇಳಿದ್ದಾರೆ. ಇಲ್ಲಿ ಕೆಎಸ್ಡಿಎಲ್ ಏರ್ಪಡಿಸಿರುವ ಸಾಬೂನು ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದಕ್ಕೂ ಮೊದಲು ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮಾತನಾಡಿ, ವಿಜಯಪುರದಲ್ಲಿ ಕೂಡ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವರು, ತಮ್ಮ ಯೋಜನೆಯನ್ನು ಪ್ರಕಟಿಸಿದರು. ಶಾಸಕ ಬಸವರಾಜ ಯತ್ನಾಳ ಕೂಡ ಸಚಿವರು ಇದುವರೆಗೆ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು. ವಿಜಯಪುರದ ಸಾಬೂನು ಘಟಕದಿಂದ ಉತ್ತರ ಕರ್ನಾಟಕ ಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರ ಕ್ಕೂ ಇಲ್ಲಿಂದಲೇ ಸರಬರಾಜು ಮಾಡುವ ಕೆಲಸ ಮಾಡಲಾಗುವುದು ಎಂದು…
ಬೆಂಗಳೂರು: ಬಾಬಾ ಸಾಹೇಬರನ್ನು ಅವಮಾನಿಸಿದ ಬಿಜೆಪಿ ಈಗ ತಾನು ದಲಿತ ಪರ ಎಂದು ತೋರಿಸಿಕೊಳ್ಳಲು #ToolKit ತಯಾರಿ ಮಾಡಿರುವುದು ಕುಚೋದ್ಯದ ಸಂಗತಿ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಿಜೆಪಿ ತಾನು ದಲಿತ ಪರ ಎಂದು ಬೋರ್ಡ್ ಹಾಕಿಕೊಳ್ಳುವುದು, ಕಳ್ಳ ನರಿಯೊಂದು ಸನ್ಯಾಸಿಯ ವೇಷ ಹಾಕಿದಂತೆ! ಬಿಜೆಪಿಯ ಈ ಹೊಸ #ToolKit ದೇಶಾದ್ಯಂತ ಸಂವಿಧಾನ ಹಾಗೂ ಅಂಬೇಡ್ಕರ್ ರವರ ಅನುಯಾಯಿಗಳ ಪ್ರತಿರೋಧದಿಂದ ಬಿಜೆಪಿ ಬೆಚ್ಚಿ ಬಿದ್ದಿರುವುದಕ್ಕೆ ಸಾಕ್ಷೀಕರಿಸುತ್ತದೆ ಎಂಬುದಾಗಿ ಕಿಡಿಕಾರಿದ್ದಾರೆ. – ಸಂವಿಧಾನ ಬದಲಿಸುತ್ತೇವೆ ಎಂದವರು ಈಗ ಸಂವಿಧಾನ ಪೀಠಿಕೆ ಪಠಣ ಮಾಡುವುದನ್ನು ನಂಬಬೇಕೇ? – ಮನುಸ್ಮೃತಿಯ ವಕ್ತಾರರು ದಲಿತರನ್ನು ಮನೆಗೆ ಕರೆದು ಊಟ ಹಾಕುವುದು ಬೂಟಾಟಿಕೆಯಲ್ಲವೇ? – ಸಂವಿಧಾನವನ್ನು ತಿರಸ್ಕರಿಸಿ ಮನುಸ್ಮೃತಿಯನ್ನು ಪ್ರತಿಪಾದಿಸಿದ್ದ RSSನ ಸಂಜಾತರು “ಸಂವಿಧಾನ್ ಸಮ್ಮಾನ್” ಕಾರ್ಯಕ್ರಮ ಮಾಡುವುದು ಸದಾರಮೆ ನಾಟಕವಲ್ಲವೇ? – ಜಿಲ್ಲಾ & ತಾಲೂಕು ಪಂಚಾಯತ್ ಚುನಾವಣೆ ಮುಗಿಯುವವರೆಗೂ ಸಂವಿಧಾನ್ ಸಮ್ಮಾನ್ ಕಾರ್ಯಕ್ರಮ ನಡೆಸುತ್ತಾರಂತೆ! ಈ…
ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿ (BHEL) ಶನಿವಾರ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಉಪ ರಾಷ್ಟ್ರಪತಿಯೊಬ್ಬರು ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ವಿವಿಧ ವಿಭಾಗಗಳಿಗೆ ತೆರಳಿ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಜತೆ ಸಂವಾದ ನಡೆಸಿದರು. ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಧರ್ಮಪತ್ನಿ ಸುದೇಶ್ ಧನಕರ್ ಅವರೊಂದಿಗೆ ಕಾರ್ಖಾನೆಗೆ ಶನಿವಾರ ಭೇಟಿ ನೀಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳು ಉಪ ರಾಷ್ಟ್ರಪತಿಗಳ ಜತೆಯಲ್ಲಿದ್ದರು. ಕಾರ್ಖಾನೆಗೆ ಭೇಟಿ ನೀಡಿದ ಉಪ ರಾಷ್ಟ್ರಪತಿಗಳನ್ನು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಬರಮಾಡಿಕೊಂಡರು. ವಿಕಸಿತ ಭಾರತ್ ಕನಸಿಗೆ ಬಿಹೆಚ್ ಇಎಲ್ ಕೊಡುಗೆ: HDK ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ…
ಬೆಂಗಳೂರು: ನಗರದಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ ನಡೆದಿದೆ. ವಾರದ ಹಿಂದೆ ನಡೆದಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರು ಟಚ್ ಆಗಿದ್ದಕ್ಕೆ ಕಿರಿಕ್ ತೆಗೆದು ಕಾರಿನ ಗ್ಲಾಸನ್ನೇ ಬೈಕ್ ಸವಾರನೊಬ್ಬ ಹೊಡೆದು ಹಾಕಿದ್ದಾನೆ. ಬೆಂಗಳೂರಿನ ಹಲಸೂರು ಬಳಿಯಲ್ಲಿ ಕಾರು ಟಚ್ ಆಗಿದ್ದಕ್ಕೆ ರೋಡ್ ರೇಜ್ ಮಾಡಿರುವಂತ ಪ್ರಕರಣವೊಂದು ನಡೆದಿದೆ. ಕಾರು ಟಚ್ ಆಗಿದ್ದಕ್ಕೆ ಕಿರಿಕ್ ತೆಗೆದಂತ ಯುವಕನೊಬ್ಬ, ಕಾರಿನ ಗ್ಲಾಸ್ ಹೊಡೆದು ಹಲ್ಲೆ ಮಾಡಲು ಮುಂದಾಗಿರುವಂತ ಘಟನೆ ನಡೆದಿದೆ. ಕಾರು ಟಚ್ ಆಗಿದ್ದಕ್ಕೆ ಸಾರಿ, ನಮ್ಮದೇ ತಪ್ಪಿದೆ ಅಂತ 5 ಸಾವಿರ ಹಣ ಕೊಟ್ಟರು ಬಿಡದ ಯುವಕ, ಕಾರು ಟಚ್ ಮಾಡಿದ್ದಕ್ಕೆ ಕಾರಿನ ಗ್ಲಾಸನ್ನೇ ಸಂಪೂರ್ಣ ಹೊಡೆದು ಹಾಕಿ ಅಲ್ಲಿಂದ ತೆರಳಿರೋದಾಗಿ ತಿಳಿದು ಬಂದಿದೆ. ವಾರದ ಹಿಂದಿನ ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೋಡ್ ರೇಜ್ ಮಾಡಿದಾತನ ಮೇಲೆ ಕೇಸ್ ಹಾಕಿ, ಬಂಧಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. https://kannadanewsnow.com/kannada/farmer-attempts-suicide-by-consuming-poison-in-front-of-officials-who-came-to-clear-encroachments-on-government-land/ https://kannadanewsnow.com/kannada/breaking-11-dysp-civil-transfer-orders-issued-by-state-government-dysp-transfer/
ತುಮಕೂರು: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿದ್ದರೂ, ಅದು ಸರ್ಕಾರಿ ಭೂಮಿ ಒತ್ತುವರಿ ಜಾಗ ಎಂಬುದಾಗಿ ತೆರವುಗೊಳಿಸೋದಕ್ಕೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆಯಲ್ಲಿ ಅಧಿಕಾರಿಗಳ ಮುಂದೆಯೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಶಿರಾದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಲ್ಲಿಗೋನಹಳ್ಳಿಯ ಸರ್ವೆ ನಂ.118ನ ಜಮೀನಿನಲ್ಲಿ ರೈತ ಕಾಂತರಾಜು 60 ರಿಂದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಈ ಭೂಮಿ ಸರ್ಕಾರಿ ಸ್ವತ್ತಾಗಿದ್ದು, ತೆರವುಗೊಳಿಸೋದಕ್ಕೆ ಶಿರಾ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪೊಲೀಸರ ಜೊತೆಗೂಡಿ ಮುಂದಾಗಿದ್ದರು. ಈ ವೇಳೆಯಲ್ಲಿ ರೈತ ಕಾಂತರಾಜು ಯಾವುದೇ ನೋಟಿಸ್ ನೀಡದೇ ತಮ್ಮ ಜಮೀನು ತೆರವುಗೊಳಿಸೋದಕ್ಕೆ ಬಂದಿದ್ದೀರಿ. ಇದು ಕಾನೂನು ಕ್ರಮದ ಸರಿಯಾದ ನಿರ್ಧಾರವಲ್ಲ. ಇದನ್ನು 60-70 ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬಂದಿದ್ದೇವೆ. ಈ ಭೂಮಿಯಲ್ಲಿನ ಕೃಷಿಯ ಆದಾಯವನ್ನೇ ನಂಬಿಕೊಂಡು ಬದುಕುತ್ತಿರುವಂತ ಕುಟುಂಬವಾಗಿದೆ ಎಂಬುದಾಗಿ ಹೇಳಿದರೂ ಅಧಿಕಾರಿಗಳು ಕರಗಲಿಲ್ಲ. ರೈತ ಕಾಂತರಾಜು ಒತ್ತುವರಿ ಜಮೀನು ತೆರವುಗೊಳಿಸೋದಕ್ಕೆ ಮುಂದಾದ ವೇಳೆಯಲ್ಲಿ ಅವರ ಮುಂದೆಯೇ…
ಬೆಂಗಳೂರು: ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, ಸರ್ಕಾರ ಕೂಡಲೇ ಈ ಕ್ರಮ ಕೈಗೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರೂ ಅತ್ತ ಗಮನ ಹರಿಸದ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇನ್ನು 24 ಗಂಟೆಯೊಳಗೆ ಭತ್ತ ಮತ್ತು ತೊಗರಿ ಖರೀದಿ ಕೇಂದ್ರಗಳನ್ನು ತೆರೆದು, ಖರೀದಿ ಆರಂಭಿಸದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿನ್ನರ್ ಸಭೆಗಳು, ಔತಣಕೂಟಗಳು, ರಾಜಕೀಯ ಮೇಲಾಟಗಳಲ್ಲೇ ನಿರತರಾಗಿದ್ದಾರೆ. ಈ ಕೆಲಸಗಳು ಮುಗಿದಿದ್ದರೆ ಸ್ವಲ್ಪ ರೈತರ ಸಮಸ್ಯೆಗಳತ್ತ ಗಮನ ಹರಿಸುವ ದೊಡ್ಡ ಮನಸ್ಸು ಮಾಡಬೇಕು. ಬಿಡುವು ಇಲ್ಲದಿದ್ದರೆ ಕನಿಷ್ಠ ಪಕ್ಷ ಕೃಷಿ…
ಚಿತ್ರದುರ್ಗ: ನಕ್ಸಲರು ಶರಣಾದುದಲ್ಲ; ಸರಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. 20-25 ವರ್ಷಗಳಿಂದ ಯಾರಿಗೂ ಸಿಗದೇ ಇರುವವರು ಇವತ್ತು ನಿಮ್ಮ ಕೈಗೆ ಹೇಗೆ ಸಿಕ್ಕಿದರು? ವಿಕ್ರಂ ಗೌಡ ಸಾವಾದ ತಕ್ಷಣ ಉಳಿದವರೆಲ್ಲರಿಗೆ ಭಯ ಬಂತೇ? ಇದರ ಹಿಂದೆ ಒಂದು ಪಿತೂರಿ ಇದೆ ಎಂದು ಆರೋಪಿಸಿದರು. ನಕ್ಸಲರು ಬರಿಗೈಯಲ್ಲಿ ಬಂದಿದ್ದಾರೆ. ಶಸ್ತ್ರಾಸ್ತ್ರಗಳು ಎಲ್ಲಿ ಹೋದವು? ಇವರು ಇಷ್ಟೇನಾ? ಇನ್ನೂ ಇದ್ದಾರಾ? ಅಥವಾ ಶಸ್ತ್ರಾಸ್ತ್ರಗಳನ್ನು ಅವರಿಗೆ ಕೊಟ್ಟು ಬಂದಿದ್ದಾರಾ?- ಈ ಥರ ಎಲ್ಲ ಪ್ರಶ್ನೆಗಳಿವೆ ಎಂದು ತಿಳಿಸಿದರು. ಕೋರ್ಟ್ ಅಥವಾ ಪೊಲೀಸರ ಮುಂದೆ ಅವರನ್ನು ಶರಣಾಗಲು ಸೂಚಿಸಬೇಕಿತ್ತು. ಮುಖ್ಯಮಂತ್ರಿಗಳ ಮುಂದೆ ಶರಣಾಗತಿ ಮಾಡಲು ಅವರಿಗೂ ಇವರಿಗೂ ಸಂಬಂಧ ಇತ್ತೇ ಎಂದು ಕೇಳಿದರು. ಈ ಸರಕಾರ ಸಂಪೂರ್ಣವಾಗಿ ಭ್ರಷ್ಟರ ರಕ್ಷಣೆ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಇವರೂ ಇದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ;…
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 830 ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯಯುಕ್ತರಾದ ಶ್ರೀ ಮುನೀಶ್ ಮೌದ್ಗಿಲ್ ರವರು ತಿಳಿಸಿದರು. ಪಾಲಿಕೆಯ 8 ವಲಯಗಳಲ್ಲಿ ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಈ ಪೈಕಿ ಆಯಾ ವಲಯಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತ್ವರಿತಗತಿಯಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮವಹಿಸಲಾಗುತ್ತಿದೆ. ಅದರಂತೆ, ಎಲ್ಲಾ ಪರಿಷ್ಕರಣೆ ಪ್ರಕರಣಗಳಲ್ಲಿ, ಆಸ್ತಿಗಳಿಗೆ ಬೀಗಮುದ್ರೆ, ಮುಟ್ಟುಗೋಲು ಮತ್ತು ಜಪ್ತಿ ಮಾರಾಟವನ್ನು ಬಳಸಿಕೊಂಡು ವಸೂಲಾತಿ ಮಾಡಬೇಕಿದೆ. ಈ ಸಂಬಂಧ 1ನೇ ಜನವರಿ 2025 ರಿಂದ 9ನೇ ಜನವರಿ 2025 ರವರೆಗೆ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಂತಹ 830 ವಸತಿಯೇತರ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ ಎಲ್ಲಾ 08 ವಲಯಗಳು ಸೇರಿದಂತೆ 182 ವಸತಿಯೇತರ ಕಟ್ಟಡಗಳಿಗೆ…
ಮಗ ಮಾತ್ರ ಮಾತು ಕೇಳುವುದಿಲ್ಲವೇ? ಮಾತು ಕೇಳದ ಹೆಣ್ಣು ಮಕ್ಕಳೂ ಇದ್ದಾರೆ. ಏನ್ ಮಾಡೋದು. ಈಗಿನ ಕಾಲದಲ್ಲಿ ಮಕ್ಕಳಿರುವವರ ವಿರುದ್ಧ ಮಾತನಾಡುವುದು ಫ್ಯಾಶನ್ ಆಗಿಬಿಟ್ಟಿದೆ. ನಿಮ್ಮ ಮನೆಯಲ್ಲಿ ನಿಮ್ಮ ಮಗ ಅಥವಾ ಮಗಳು ಯಾರೇ ಇರಲಿ, ನೀವು ಈ ಪರಿಹಾರವನ್ನು ಮಾಡಬಹುದು. ನೀವು ಈ ದೇವಾಲಯಕ್ಕೆ ಭೇಟಿ ನೀಡಬಹುದು. ಇದೇ ವೇಳೆ ನನ್ನ ಮಗು ದಾರಿ ತಪ್ಪುತ್ತದೆ. ಅಡ್ಮಿಷನ್ ಚೆನ್ನಾಗಿಲ್ಲ, ಅಭ್ಯಾಸ ಚೆನ್ನಾಗಿಲ್ಲ, ಓದುವುದರಲ್ಲಿ ಆಸಕ್ತಿ ಇಲ್ಲ, ಅಪ್ಪ-ಅಮ್ಮ ಹೇಳುವ ಒಳ್ಳೆ ಮಾತು ಕೇಳೋಕೆ ಮನಸ್ಸಿಲ್ಲ, ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಇಲ್ಲಿದೆ ಸರಳ ಆಧ್ಯಾತ್ಮಿಕ ಉಪಾಸನೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ…










