Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಮುಂದುವರೆದಿದೆ. ಇಂದು ಹೊಸದಾಗಿ 57 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 542 ಮಂದಿಯನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 57 ಜನರಿಗೆ ಕೋವಿಡ್ ಪಾಸಿಟಿವ್ ಅಂತ ವರದಿಯಿಂದ ತಿಳಿದು ಬಂದಿದೆ ಎಂದು ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 133 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸದ್ಯ 366 ಸಕ್ರೀಯ ಸೋಂಕಿತರಿದ್ದಾರೆ. ಇವರಲ್ಲಿ 353 ಮಂದಿ ಹೋಂ ಐಸೋಲೇಷನ್ ನಲ್ಲಿ 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ. https://twitter.com/DHFWKA/status/1931365195462615458
ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವ ಆಚರಣೆಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ನಂತ್ರ, ಇಂದು ಕೆ ಎಸ್ ಸಿ ಎಯಿಂದ ತುರ್ತು ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕಾಲ್ತುಳಿತ ದುರಂತದ ಹೊಣೆಹೊತ್ತು ರಾಜೀನಾಮೆ ನೀಡಿದ್ದಂತ ಕಾರ್ಯದರ್ಶಿ, ಖಜಾಂಚಿಯ ರಾಜೀನಾಮೆಯನ್ನು ಅಂಗೀಕರಿಸಿದಂತ ನಿರ್ಧಾರ ಕೈಗೊಳ್ಳಲಾಗಿದೆ. ಇಂದಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೆ ಎಸ್ ಸಿ ಎ ಅಧ್ಯಕ್ಷ ರಘುರಾಮ್ ಭಟ್ ಅವರು, ಇಂದು ತುರ್ತು ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ ನೀಡಿದ್ದರ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಶಂಕರ್ ಹಾಗೂ ಜೈರಾಮ್ ಅವರ ರಾಜೀನಾಮೆ ಅಂಗೀಕರಿಸಲಾಗಿದೆ ಎಂದರು. ಕೆ ಎಸ್ ಸಿ ಎ ಕಾರ್ಯದರ್ಶಿ ಶಂಕರ್ ಹಾಗೂ ಖಜಾಂಚಿ ಜೈರಾಮ್ ಅವರ ರಾಜೀನಾಮೆ ಅಂಗೀಕರಿಸಲಾಗಿದ್ದು, ರಾಜೀನಾಮೆ ನೀಡಿದವರ ಜಾಗಕ್ಕೆ ಯಾರನ್ನೂ ಆಯ್ಕೆ ಮಾಡಿಲ್ಲ. ಪ್ರಕರಣ ತನಿಖಾ ಹಂತದಲ್ಲಿದೆ. ಹೀಗಾಗಿ ಹೆಚ್ಚು ಮಾತನಾಡಲ್ಲ. ಸಿಐಡಿ ತನಿಖೆಗೆ ನಾವು ಸಹಕಾರ ನೀಡುತ್ತೇವೆ ಎಂದರು. https://kannadanewsnow.com/kannada/strict-monitoring-is-necessary-for-street-food-and-hotel-food-for-public-health-safety-minister-sharan-prakash-patil/ https://kannadanewsnow.com/kannada/when-raj-kumar-passed-away-4-people-were-shot-did-kumaraswamy-resign-then-gopalakrishna-belur-questioning/
ಬೆಂಗಳೂರು : ಆಹಾರದ ಗುಣಮಟ್ಟದ ಮೇಲೆ ಕಠಿಣ ನಿಯಂತ್ರಣ ಅಗತ್ಯವಿದೆ. ಬೀದಿಬದಿ ಮತ್ತು ಹೋಟೆಲ್ ಆಹಾರದ ಗುಣಮಟ್ಟವನ್ನು ರಾಜ್ಯ ಮತ್ತು ಕೇಂದ್ರ ಆಹಾರ ಮತ್ತು ಔಷಧ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದು ಅತ್ಯಗತ್ಯ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಮ್ಹಾನ್ಸ್ನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಇಲಾಖೆಯ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರ ಸಮ್ಮುಖದಲ್ಲಿ ಭಾಷಣ ಮಾಡಿದ ಸಚಿವ ಡಾ. ಪಾಟೀಲ್, ಅನೈರ್ಮಲ್ಯ ಮತ್ತು ಕಲಬೆರಕೆ ಆಹಾರದಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳನ್ನು ತಡೆಗಟ್ಟಬೇಕಾಗಿದೆ ಎಂದರು. “ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟವಾಗುವ ಕಡಿಮೆ ಗುಣಮಟ್ಟದ ಆಹಾರದಿಂದ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಸುರಕ್ಷತೆಯನ್ನು…
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದ್ದಾರೆ. ಹೆಬ್ಬಾಳ ಕ್ಷೇತ್ರದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ಕೋರಿ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರು ಈ ಬಾರಿ ಮುಖ್ಯಮಂತ್ರಿ ಆದ ನಂತರ ದೇವಾಲಯಗಳು ಮತ್ತು ಮಸೀದಿ ಸೇರಿದಂತೆ ಎಲ್ಲಾ ಧರ್ಮದ ಪ್ರಾರ್ಥನಾ ಮಂದಿರಗಳ ಶ್ರೇಯೋಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದರು. ಈ ಮೂಲಕ ನಮ್ಮ ಸರ್ಕಾರ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವ ಮತ್ತು ಗೌರವ ಕೊಡುವ ಕೆಲಸ ಮಾಡುತ್ತಿದೆ ಎಂದು ಸುರೇಶ್ ಹೇಳಿದರು. ಸಮಾಜದಲ್ಲಿ ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಇದ್ದಾಗ ಮಾತ್ರ ರಾಜ್ಯ, ದೇಶ ಮತ್ತು ಮಾನವ ಸಂಕುಲ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ. ತ್ಯಾಗದ ಸಂಕೇತವಾದ ಬಕ್ರೀದ್ ಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲರೂ ಸಮಾಜದ ಒಳಿತಿಗಾಗಿ ಸಂಕಲ್ಪ ಮಾಡೋಣ ಎಂದು ಅವರು ಕರೆ…
ಮಂಡ್ಯ : ದೇವಾಲಯದಲ್ಲಿ ಕಳ್ಳತನ ಮಾಡಲು ಬಂದಿದ್ದ ಮುಸುಕುಧಾರಿಯೊಬ್ಬ ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ. ಮುಸುಕುಧಾರಿಯೊಬ್ಬ ಕದಲೂರು ಗ್ರಾಮದ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ಗುರುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ದೇವಾಲಯದ ಸುತ್ತ ಗಮನಿಸಿದ್ದಾನೆ. ಆದರೆ, ಕೊನೆ ಕ್ಷಣದಲ್ಲಿ ಕಳ್ಳತನಕ್ಕೆ ಹೆದರಿ ದೇವರಿಗೆ ಕೈ ಮುಗಿದು ತೆರಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರದಿ : ಗಿರೀಶ್ ರಾಜ್, ಮಂಡ್ಯ
ಬೆಂಗಳೂರು: “ನನ್ನ ಮೇಲೆ ಅಸೂಯೆಪಡುವುದರಿಂದ, ನನ್ನನ್ನು ಟೀಕೆ ಮಾಡುವುದರಿಂದ, ನನ್ನನ್ನು ಬಯ್ಯುವುದರಿಂದ ಕುಮಾರಸ್ವಾಮಿ ಅವರಿಗೆ ಖುಷಿಯಾಗಿ, ಅವರ ಆರೋಗ್ಯ ಸುಧಾರಣೆ ಆಗುವುದಾದರೆ ಅವರು ನನ್ನ ನಿಂದನೆ ಮುಂದುವರೆಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು. “ನಾನು ಕುಮಾರಸ್ವಾಮಿ ಅವರನ್ನು ಗಮನಿಸುತ್ತಿದ್ದೇನೆ. ಅವರು ತಮ್ಮ ಖುಷಿಗೆ ಮಾತಾಡುತ್ತಿದ್ದಾರೆ. ಅವರು ಏನಾದರೂ ಮಾತನಾಡಲಿ. ಇದರಿಂದ ಅವರಿಗೆ ಖುಷಿಯಾಗಿ ಆರೋಗ್ಯ ಸುಧಾರಣೆ ಆಗುವುದಾದರೆ ಆಗಲಿ. ಅವರ ಆರೋಗ್ಯ ಸುಧಾರಣೆಯಾಗುವುದು ನನಗೆ ಮುಖ್ಯ” ಎಂದು ಹೇಳಿದರು. https://kannadanewsnow.com/kannada/good-news-for-the-beneficiaries-of-the-states-bhagyalakshmi-scheme-the-maturity-amount-has-been-approved/ https://kannadanewsnow.com/kannada/calamitous-disaster-where-is-rahul-gandhi-who-pokes-his-nose-into-everything-now-shobha-karandlaje-questions/
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬೆಂಗಳೂರು ಕೇಂದ್ರ ಯೋಜನೆಯ ವ್ಯಾಪ್ತಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ಒಟ್ಟು 1470 ಫಲಾನುಭವಿಗಳು ನೋಂದಣಿಯಾಗಿದ್ದು, 18 ವರ್ಷ ಪೂರ್ಣಗೊಂಡಿರುವ ಫಲಾನುಭವಿಗಳಿಗೆ ಎಲ್.ಐ.ಸಿ ಯಿಂದ ಪರಿಪಕ್ವ ಮೊತ್ತ ಮಂಜೂರಾಗಿದ್ದು ಎಲ್ಲಾ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಕೇಂದ್ರ ಇಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ಕೇಂದ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/bengalurus-disaster-should-make-a1-cm-a2-dycm-and-a3-home-minister-araga-jnanendra-insists/ https://kannadanewsnow.com/kannada/calamitous-disaster-where-is-rahul-gandhi-who-pokes-his-nose-into-everything-now-shobha-karandlaje-questions/ https://kannadanewsnow.com/kannada/when-raj-kumar-passed-away-4-people-were-shot-did-kumaraswamy-resign-then-gopalakrishna-belur-questioning/
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಉಂಟಾದಂತ ಕಾಲ್ತುಳಿತ ದುರಂತದ ಸಾವಿಗೆ ರಾಜ್ಯ ಸರ್ಕಾರವೇ ಕಾರಣ. ಎ1 ಸಿಎಂ, ಎ2 ಡಿಸಿಎಂ, ಎ3 ಗೃಹ ಸಚಿವರನ್ನು ಮಾಡಬೇಕು ಎಂಬುದಾಗಿ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ. ಇಂದು ಬೆಂಗಳೂರಿನ ಕೆಕೆ ಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಲ್ತುಳಿತ ಪ್ರಕರಣದ ಸಾವಿಗೆ ಸರ್ಕಾರ ಕಾರಣ. ಎ-1ಸಿಎಂ ,ಎ-2ಡಿಸಿಎಂ,ಎ-3 ಗೃಹಸಚಿವರನ್ನ ಮಾಡಬೇಕು. ರಾಜ್ಯಾಪಾಲರು ಸಿಎಂ ಡಿಸಿಎಂ ಇದ್ದ ಕಾರ್ಯಕ್ರಮ. ಆದರೆ ಅಲ್ಲಿ ಪ್ರೊಟೋಕಾಲ್ ಇರಲಿಲ್ಲ. ಸೆಲ್ಪಿ ತೆಗೆದುಕೊಳ್ಳುವಲ್ಲಿ ಇವರು ಬ್ಯುಸಿ ಆಗಿದ್ರು. ರಾಜೀನಾಮೆ ಕೊಟ್ಟು ಜನರ ಕ್ಷಮೆ ಕೇಳಬೇಕಿತ್ತು ಎಂದರು. ಅಧಿಕಾರಿಗಳು ಬಂದೊಬಸ್ತ್ ಮಾಡಲು ಸಾಧ್ಯವಿಲ್ಲವೆಂದಿದ್ದಾರೆ. ಆದರೂ ಇವರು ಕಾರ್ಯಕ್ರಮ ಮಾಡಿದ್ದಾರೆ. ಪೆಹಲ್ಗಾಮ್ ಬಗ್ಗೆ ಏನ್ ಹೇಳಿದ್ರಿ. ಭದ್ರತಾ ಲೋಪ ಎಂದಿದ್ದರು. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬಾರದಿತ್ತು. ಈ ಕಾರ್ಯಕ್ರಮ ಮುಂದೂಡುವ ಅವಕಾಶ ಇಲ್ಲಿತ್ತು. ಈ ಕಾರ್ಯಕ್ರಮಕ್ಕೆ ನೀವೇ ಕರೆದಿದ್ದು. ಗೃಹ ಮಂತ್ರಿಯನ್ನ ನೆಗ್ಲೇಟ್ ಮಾಡಿದ್ದಾರೆ. ಅವರವರ ರಾಜಕೀಯಕ್ಕೆ ಜನ ಬಲಿಯಾಗಿದ್ದಾರೆ. ನನ್ನನ್ನ ಕೇಳದೆ ಏನು ಮಾಡಬಾರದು ಅನ್ನೋ ಮನಸ್ಥಿತಿ ಎಂಬುದಾಗಿ ಕೈ ನಾಯಕರ ವಿರುದ್ಧ ಅರಗ ಜ್ಙಾನೇಂದ್ರ…
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ಉಂಟಾಗಿ 11 ಆರ್ ಸಿ ಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆಯ ಬಗ್ಗೆ ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂಬುದಾಗಿ ಬಿಸಿಸಿಐ ಮೊದಲ ಪ್ರತಿಕ್ರಿಯೆ ನೀಡಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಖಾಸಗಿ ವ್ಯವಹಾರವಾಗಿದೆ. ಆದರೇ ಭಾರತದಲ್ಲಿ ಕ್ರಿಕೆಟಿಗೆ ಬಿಸಿಸಿಐ ಜವಾಬ್ದಾರರಾಗಿದ್ದೇವೆ. ಕೆಲವು ಹಂತದಲ್ಲಿ ಬಿಸಿಸಿಐ ಏನನ್ನಾದ್ರೂ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆರ್ ಸಿ ಬಿ ವಿಜಯೋತ್ಸವದ ಸಂಭ್ರಮಾಚರಣೆಗೆ ಮಾರ್ಗಸೂಚಿ ಪರಿಚಯಿಸಲು ಬಿಸಿಸಿಐ ಯೋಚಿಸುತ್ತಿದೆ ಎಂಬುದಾಗಿ ಹೇಳಿದ್ದಾರೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆ ದುರಂತ ಘಟನೆಯಾಗಿ ಮಾರ್ಪಟ್ಟ ನಂತರ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ಸಿಬಿ 6 ರನ್ಗಳಿಂದ ಸೋಲಿಸಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿ…
1)ಸಾಲ ಲಕ್ಷ ಕೋಟಿ ಇರಲಿ ಎಲೆ ಲವಂಗ ಏಲಕ್ಕಿಯ ಪ್ರಯೋಗ ಮಾಡಿದರೆ ಸಾಲತಿರುವುದು 2)ಪಕ್ಕಾ ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ ಸಾಲ ಇಲ್ಲದ ಜೀವನ ಅತಿ ಸುಂದರ ಜೀವನ ಎನ್ನಬಹುದು ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ತೀರಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತಿದೆ ಎಂದರೆ ತಗೊಂಡ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ…













