Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇವೇಳೆ ಸತೀಶ್ ರೆಡ್ಡಿ ಇಷ್ಟೆಲ್ಲ ಗೂಂಡಾವರ್ತಿ ಮಾಡಿದ್ದು, ಅವರನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು. ಸರಕಾರ ಯಾಕೆ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ನಾಯಕರು ಮತ್ತು ಶಾಸಕರನ್ನು ಬಂಧಿಸಬೇಕೇ ಹೊರತು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜೀವ ಬಲಿ ಪಡೆದ ಹೊಸ ವರ್ಷದ ಮೊದಲ ದಿನವಾಗಿದೆ. ಗೂಂಡಾ ರಾಜ್ಯದ ಸಂದೇಶ ಇದೆಂದು ತಿಳಿಸಿದರು. ಶಾಸಕ ಮತ್ತು ಅವರ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಬೇಕಿತ್ತು. ಆದರೆ, ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ದೂರು ದಾಖಲಿಸುವ ಪ್ರಯತ್ನ ನಡೆದಿದೆ. ಅವರು ಯಾವ ರೀತಿ ಇದರಲ್ಲಿ ಭಾಗಿ ಆಗಿದ್ದಾರೆ? ಗುಂಡು ಹಾರಿಸಿದ್ದು ಯಾರು? ಎಂದು ಕೇಳಿದರು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇವೇಳೆ ಸತೀಶ್ ರೆಡ್ಡಿ ಇಷ್ಟೆಲ್ಲ ಗೂಂಡಾವರ್ತಿ ಮಾಡಿದ್ದು, ಅವರನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು. ಸರಕಾರ ಯಾಕೆ…
ಬೆಂಗಳೂರು: ಕೇರಳ ಮುಖ್ಯಮಂತ್ರಿಗೂ ಕರ್ನಾಟಕಕ್ಕೂ ಏನು ಸಂಬಂಧ ಇದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಹೆಬ್ಬಾಳ ಮೇಲ್ಸೇತುವೆಯ ನೂತನ ಲೂಪ್ ಉದ್ಘಾಟನೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಗಿಲು ನಿರಾಶ್ರಿತರ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಪರೋಕ್ಷವಾಗಿ ಈ ಆಕ್ರೋಶ ಹೊರಹಾಕಿದರು. ಕೇರಳ ರಾಜ್ಯದಲ್ಲಿ ಇರುವಷ್ಟು ಅರಾಜಕತೆ, ಕಾರ್ಮಿಕರ ಸಮಸ್ಯೆಗಳು ಸೇರಿದಂತೆ ಸಮಸ್ಯೆಗಳ ಸರಮಾಲೆಯೇ ಇದೆ. ಅಲ್ಲಿ ಹಾಸಿ ಹೊದ್ದುಕೊಳ್ಳುವಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ನಮ್ಮ ರಾಜ್ಯದ ವಿಚಾರದ ಬಗ್ಗೆ ಅವರು ಮಾತನಾಡುವುದು ಸರಿಯಲ್ಲ. ಕೇರಳದಲ್ಲಿರುವಂತಹ ಅರಾಜಕತೆ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂದು ಸಚಿವರು ತೀವ್ರ ವಾಗ್ದಾಳಿ ನಡೆಸಿದರು. ಕೋಗಿಲು ವಿವಾದಿತ ಸ್ಥಳದಲ್ಲಿ ಎಷ್ಟು ಜನ ಮೂಲನಿವಾಸಿಗಳು, ಎಷ್ಟು ಜನ ವಲಸಿಗರು ಇದ್ದಾರೆ ಎಂಬುದನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಇಲ್ಲಿ 90 ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ…
ನವದೆಹಲಿ: ಡಿಸೆಂಬರ್ 31, ಹೊಸ ವರ್ಷದ ಮುನ್ನಾದಿನ, ಪ್ರೀತಿಪಾತ್ರರೊಂದಿಗೆ ಹೊಸ ವರ್ಷವನ್ನು ಆಚರಿಸಲು ಮತ್ತು ಸ್ವಾಗತಿಸೋಕು ಕಾಮನ್. ಆದರೇ 25 ವರ್ಷದ ವಿವಾಹಿತ ಮಹಿಳೆಯೊಬ್ಬರು ತಮ್ಮ 44 ವರ್ಷದ ವಿವಾಹಿತ ಪ್ರೇಮಿಯನ್ನು ಹೊಸ ವರ್ಷದ ಸಿಹಿತಿಂಡಿಗಳನ್ನು ನೀಡಲು ತನ್ನ ಮನೆಗೆ ಆಹ್ವಾನಿಸಿದರು. ಆದರೆ ಮಹಿಳೆ ಚಾಕುವಿನಿಂದ ಆತನ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಿದ್ದರಿಂದ ಆ ವ್ಯಕ್ತಿಗೆ ತೀವ್ರ ಗಾಯಗೊಳಿಸಿರುವಂತ ಆಘಾತಕಾರಿ ಘಟನೆ ನಡೆದಿದೆ. ಆ ವ್ಯಕ್ತಿ ಪ್ರಸ್ತುತ ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಮಹಿಳೆ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ. ಹೀಗೆ ಮಾಡಲು ಕಾರಣವೇನು? ಆರಂಭಿಕ ತನಿಖೆಯಲ್ಲಿ ಇಬ್ಬರ ನಡುವೆ ಸಂಬಂಧವಿದೆ ಎಂದು ತಿಳಿದುಬಂದಿದೆ – ಆರೋಪಿ ಮಹಿಳೆ ತನ್ನ ಪ್ರಿಯಕರನ ಸಹೋದರಿಯ ಅತ್ತಿಗೆ ಎಂದು ವರದಿಯಾಗಿದೆ. ಮತ್ತು ಇಬ್ಬರೂ ಕಳೆದ ಆರರಿಂದ ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮಹಿಳೆ ತನ್ನ ಹೆಂಡತಿಯನ್ನು ಬಿಟ್ಟು ಮದುವೆಯಾಗುವಂತೆ ಪುರುಷನ ಮೇಲೆ ಒತ್ತಡ ಹೇರುತ್ತಿದ್ದಳು ಎಂದು ವರದಿಯಾಗಿದೆ. ಇದು ಅವರ ನಡುವೆ…
ಬೆಂಗಳೂರು: ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೆಲವೊಂದು ವರ್ಗದ ನಿವೇಶನಗಳಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಸ್ವಾಧೀನಾನುಭವ, ಅಧಿಭೋಗ ಪ್ರಮಾಣ ಪತ್ರ ( Occupancy Certificate) ಪಡೆಯುವುದರಿಂದ ವಿನಾಯ್ತಿ ನೀಡಿ ಸರ್ಕಾರ ಅಧಿಕೃತ ಆದೇಶ ಮಾಡಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಕಟ್ಟಡಗಳಿಗೆ ಅಥವಾ ಅಸ್ತಿತ್ವದಲ್ಲಿನ ಕಟ್ಟಡಗಳ ಬದಲಾವಣೆಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಪೂರ್ಣಗೊಂಡ ನಂತರ ಪ್ರಾಧಿಕಾರಕ್ಕೆ ಅರ್ಹನಾದ ವಾಸ್ತುಶಿಲ್ಪಿ/ಪಟ್ಟಿಯಲ್ಲಿನ (empanelled) ಇಂಜಿನಿಯರ್/ ಮೇಲ್ವಿಚಾರಕರಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರವನ್ನು ಪಡೆದ ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಸ್ವಾಧೀನ/ಅಧಿಭೋಗದಾರಿಕೆ ಪಮಾಣ ಪತ್ರ ವಿತರಿಸುವ ಪೂರ್ವದಲ್ಲಿ ಪ್ರಾರಂಭಿಕ ಪ್ರಮಾಣ ಪತ್ರ ಮತ್ತು ಗ್ರಾಮ ಪಂಚಾಯತಿಯಿಂದ ವಿತರಣೆ ಮಾಡಲಾದ ಲೈಸನ್ಸ್ ಅನುಮೋದಿಸಲಾದ ಕಟ್ಟಡ ನಕ್ಷೆ ಹಾಗೂ ಅಂದಾಜು ಪಟ್ಟಿಗಳಂತೆ ಕಟ್ಟಡ ನಿರ್ಮಾಣವಾಗಿರುವ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಗಳೊಂದಿಗೆ ಜಂಟಿಯಾಗಿ ಪರಿಶೀಲಿಸಿ, ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ…
ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ..!! ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ.. ಮಂತ್ರಾಲಯಕ್ಕೆ ಹೋಗುವ ಯೋಜನೆಯಾಗಲಿ ಯೋಚನೆಯಾಗಲಿ ನನಗಿರಲಿಲ್ಲ.. ನಿಜ ಹೇಳಬೇಕೆಂದರೆ ಮುಂಚೆ ರಾಘವೇಂದ್ರ ಸ್ವಾಮಿಗಳ ಮೇಲೆ ಅಷ್ಟು ಭಕ್ತಿಯೂ ನನಗಿರಲಿಲ್ಲ.. ಕಾರಣ ನಿಜಕ್ಕೂ ನನಗೆ ಗೊತ್ತಿಲ್ಲ.. ಆದರೆ ಏನೋ ತಿಳಿಯದು ಅಷ್ಟು ಭಕ್ತಿ ಬರುತ್ತಿರಲಿಲ್ಲ.. ಕೆಲ ತಿಂಗಳ ಹಿಂದೆ ಉಡುಗೊರೆಯಾಗಿ ಕೊಟ್ಟ ರಾಘವೇಂದ್ರ ಸ್ವಾಮಿಗಳ ಮೂರ್ತಿಯೊಂದು ಮನೆಗೆ ಬಂತು.. ದೇವರ ಮನೆಯಲ್ಲಿ ಇಟ್ಟು ಪೂಜಿಸಲು ಶುರು ಮಾಡಿದೆ.. ಪೂಜೆ ಮಾಡುವ ಸಮಯದಲ್ಲಿ ಏನಾದರು ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಪ್ಪ ತಂದೆ ಎಂದು ಭಕ್ತಿಯಿಂದ ಒಮ್ಮೆ ಕೇಳಿಕೊಂಡೆ ಅಷ್ಟೇ ನೋಡಿ.. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ…
ನವದೆಹಲಿ : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ನೀವು ಇದನ್ನು ಸಿಗರೇಟ್ ಪ್ಯಾಕೆಟ್’ಗಳಲ್ಲಿ ಓದಿರಬಹುದು. ಆದ್ರೆ, ಈಗ, ಹೊಸ ಸುದ್ದಿ ಏನೆಂದರೆ ಸಿಗರೇಟ್ ಸೇದುವುದು ಹಾನಿಕಾರಕ ಮಾತ್ರವಲ್ಲ ಬಡತನಕ್ಕೆ ಕಾರಣವಾಗಬಹುದು. ಹೌದು, ಸಿಗರೇಟ್ ದುಬಾರಿಯಾಗಲಿದೆ. 2026ರಲ್ಲಿ ಸಿಗರೇಟ್ ಬೆಲೆಯಲ್ಲಿ ಅನಿರೀಕ್ಷಿತ ಏರಿಕೆ ಕಂಡು ಬರಬಹುದು. ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಬಹುದೆಂದರೆ ಒಂದೇ ಸಿಗರೇಟಿನ ಬೆಲೆ 72 ರೂಪಾಯಿಗಳಿಗೆ ಏರಬಹುದು. ಸಂಸತ್ತು ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಅನುಮೋದಿಸಿದೆ. ರಾಜ್ಯಸಭೆಯಲ್ಲಿ ಅಂಗೀಕಾರವಾದ ನಂತರ, ಮಸೂದೆಯನ್ನ ಲೋಕಸಭೆಗೆ ಹಿಂತಿರುಗಿಸಲಾಗಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಡಿಸಿದ ಈ ಮಸೂದೆಯು ಸಿಗರೇಟ್ ಸೇರಿದಂತೆ ಎಲ್ಲಾ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್’ನಲ್ಲಿ ಗಮನಾರ್ಹ ಹೆಚ್ಚಳಕ್ಕೆ ಅವಕಾಶ ನೀಡುತ್ತದೆ. ಬೆಲೆ ಏರಿಕೆಯು ಯುವಕರು ಮತ್ತು ವಿದ್ಯಾರ್ಥಿಗಳು ಸಿಗರೇಟ್’ಗಳನ್ನು ತ್ಯಜಿಸಲು, ಧೂಮಪಾನಿಗಳನ್ನು ಧೂಮಪಾನ ಬಿಡಲು ಮತ್ತು ಆರೋಗ್ಯ ವೆಚ್ಚಗಳನ್ನ ಕಡಿಮೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಸರ್ಕಾರ ನಂಬುತ್ತದೆ. ಸಿಗರೇಟಿಗೆ 54 ರೂ.…
ಬೆಂಗಳೂರು: ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಕೆ ಎಸ್ ಆರ್ ಟಿ ಸಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ, ಇಂದಿನಿಂದ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಕುರಿತಂತೆ ಕೆ ಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಸರ್ಕಾರವು ಆದೇಶ ಸಂಖ್ಯೆ: ಟಿಡಿ 45 ಟಿಸಿಎಸ್ 2020, ದಿನಾಂಕ:09-03-2021, ಟಿಡಿ 45 ಟಿಸಿಎಸ್ 2020, ದಿನಾಂಕ:23-03-2021 ಹಾಗೂ ಟಿಡಿ 45 ಟಿಸಿಎಸ್ 2020, ದಿನಾಂಕ:18-01-2025 ರನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂ.ಮ.ಸಾ.ನಿಗಮ, ಕ.ಕ.ರ.ಸಾ.ನಿಗಮ ಮತ್ತು ವಾ.ಕ.ರ.ಸಾ.ನಿಗಮಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದಿದೆ. ತತ್ಸಂಬಂದ, ಕ.ರಾ.ರ.ಸಾ.ನಿಗಮವು ಸುತ್ತೋಲೆ ಸಂಖ್ಯೆ:1690 ದಿನಾಂಕ:26-03-2021 ಮತ್ತು ಸುತ್ತೋಲೆ ಸಂಖ್ಯೆ: 1736 ದಿನಾಂಕ: 18.06.2025 ರಲ್ಲಿ ವರ್ಗಾವಣೆ ನಿರ್ದೇಶನಗಳನ್ನು ನೀಡಲಾಗಿದ್ದು, 2026ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ದಿನಾಂಕ: 01-01-2026ರ ಇಂದಿನಿಂದ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 12 ಐಎಎಸ್, 48 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ಶಿವಮೊಗ್ಗ ಡಿಸಿಯಾಗಿದ್ದಂತ ಗುರುದತ್ತ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಎಸ್ಪಿಯಾಗಿದ್ದಂತ ಮಿಥುನ್ ಕುಮಾರ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ. ಇನ್ನೂ ಸಾಗರದ ಎಎಸ್ಪಿಯಾಗಿದ್ದಂತ ಯತೀಶ್ ಅವರನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಕೋಲಾರದ ಎಸ್ಪಿಯಾಗಿದ್ದಂತ ನಿಖಿಲ್ ಅವರನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಹೀಗಿದೆ 12 ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಹೀಗಿದೆ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
ಶಿವಮೊಗ್ಗ: ಎನ್ ಪಿ ಎಸ್ ರದ್ದುಗೊಳಿಸಬೇಕು. ಓಪಿಎಸ್ ಜಾರಿಗೊಳಿಸಬೇಕು ಎಂಬುದು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿಯೂ ಕ್ರಮವಹಿಸಿದೆ. ಒಂದು ವೇಳೆ ಜಾರಿಗೊಳಿಸದೇ ಹೋದರೇ ಓಪಿಎಸ್ ಜಾರಿಗೆ, ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡುವುದಕ್ಕೆ ಹೋರಾಟ ರೂಪಿಸಲಿದೆ ಎಂಬುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು. ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದಂತ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಸರ್ಕಾರಿ ನೌಕರರು ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಭಾಷೆ ಬಳಸಲು ಹಿಂದೆಮುಂದೆ ಆಗಬಹುದು. ಆದರೆ ಸರ್ಕಾರಿ ನೌಕರರ ಕನ್ನಡಾಭಿಮಾನ ಸದಾ ಸ್ಮರಣೀಯವಾದದ್ದು. ಸಾಗರದಲ್ಲಿ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದರು. ಮಲೆನಾಡಿನಲ್ಲಿ ಕನ್ನಡ ಭಾಷೆಗೆ ಉತ್ತಮ ನೆಲೆಯಿದೆ. ಗಡಿಭಾಗದ ಪ್ರದೇಶಗಳಲ್ಲಿ ವಿವಿಧ ಭಾಷೆಗಳ ಹಾವಳಿಯಿಂದಾಗಿ ಕನ್ನಡಕ್ಕೆ ಹಿನ್ನಡೆಯಾಗಿದೆ. ಮಲೆನಾಡಿನಾದ್ಯಂತ ಕನ್ನಡ ನೆಲ, ಜಲ, ಭಾಷೆ ಕುರಿತು ಅಭಿಮಾನವಿದೆ. ಇಂತಹ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ…
ನವದೆಹಲಿ: 2025 ವರ್ಷ ಕೊನೆಗೊಂಡು, ಜನವರಿ 1 2026 ಆರಂಭಗೊಂಡಿದೆ. ಇಂದಿನ ಹೊಸ ವರ್ಷದ ಆರಂಭದೊಂದಿಗೆ, ಅನೇಕ ಪ್ರಮುಖ ಆರ್ಥಿಕ ನಿಯಮಗಳು ಸಹ ಬದಲಾಗುತ್ತಿವೆ, ಇದು ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. LPG ಗ್ಯಾಸ್ ಬೆಲೆಗಳಿಂದ ಪ್ಯಾನ್, ಆಧಾರ್ ಮತ್ತು ಹೊಸ ವೇತನ ಆಯೋಗದವರೆಗೆ ಜನವರಿ 1 ರಿಂದ ಹಲವಾರು ನಿಯಮಗಳು ಬದಲಾಗುತ್ತಿವೆ. ಈ ನಿಯಮಗಳ ಬಗ್ಗೆ ಮತ್ತು ಅವು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ. 1 ಪ್ಯಾನ್-ಆಧಾರ್ ಲಿಂಕ್ ಮಾಡುವಿಕೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡುವ ಗಡುವು ಡಿಸೆಂಬರ್ನಲ್ಲಿ ಕೊನೆಗೊಳ್ಳುತ್ತಿದೆ. ಅವುಗಳನ್ನು ಲಿಂಕ್ ಮಾಡದಿದ್ದರೆ, ಜನವರಿ 1 ರಿಂದ ಅವು ನಿಷ್ಕ್ರಿಯವಾಗುತ್ತವೆ, ಇದು ನಿಮಗೆ ITR ಮರುಪಾವತಿಗಳು, ರಶೀದಿಗಳು ಮತ್ತು ಬ್ಯಾಂಕಿಂಗ್ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುತ್ತದೆ. ಇದಲ್ಲದೆ, ನಿಷ್ಕ್ರಿಯಗೊಳಿಸಿದ ಪ್ಯಾನ್ ಹಲವಾರು ಸರ್ಕಾರಿ ಯೋಜನೆಗಳ ಪ್ರಯೋಜನಗಳಿಂದ ನಿಮ್ಮನ್ನು ವಂಚಿತಗೊಳಿಸಬಹುದು. 2 UPI, ಸಿಮ್…














