Subscribe to Updates
Get the latest creative news from FooBar about art, design and business.
Author: kannadanewsnow07
ನ್ಯೂಯಾರ್ಕ್: ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (ಜೆಡಬ್ಲ್ಯೂಎಸ್ಟಿ) ಅಭೂತಪೂರ್ವ ಆವಿಷ್ಕಾರವನ್ನು ಮಾಡಿದ್ದು, ‘ಸೂಪರ್ ಜೂಪಿಟರ್’ ಎಂಬ ಅತ್ಯಂತ ಶೀತ ಗ್ರಹವನ್ನು ಗುರುತಿಸಿದೆ. ಈ ಹೊಸ ಎಕ್ಸೋಪ್ಲಾನೆಟ್ ಅನ್ನು ‘ಎಪ್ಸಿಲಾನ್ ಇಂಡಿ ಅಬ್’ ಎಂದು ಹೆಸರಿಸಲಾಗಿದೆ ಮತ್ತು ಇದನ್ನು ಭೂಮಿಗೆ ಹತ್ತಿರವಿರುವ 12 ನೇ ಎಕ್ಸೋಪ್ಲಾನೆಟ್ ಎಂದು ಕರೆಯಲಾಗುತ್ತದೆ. ಇದರ ವಿಶೇಷತೆಯೆಂದರೆ ಅದರ ದೊಡ್ಡ ಗಾತ್ರ ಮತ್ತು ಅತ್ಯಂತ ಶೀತ ತಾಪಮಾನವಾಗಿದೆ ಅಂತ ತಿಳಿಸಿದೆ. ಎಪ್ಸಿಲಾನ್ ಇಂಡಿ ಎಬಿ ನ ವೈಶಿಷ್ಟ್ಯಗಳು: ಎಪ್ಸಿಲಾನ್ ಇಂಡಿ ಎಬಿ ಗುರುಗ್ರಹದಷ್ಟೇ ವ್ಯಾಸವನ್ನು ಹೊಂದಿದೆ, ಆದರೆ ಅದರ ದ್ರವ್ಯರಾಶಿ ಸುಮಾರು ಆರು ಪಟ್ಟು ಹೆಚ್ಚಾಗಿದೆ. ಈ ಗ್ರಹದ ಕಕ್ಷೆಯ ಲಕ್ಷಣಗಳು ವಿಶೇಷವಾಗಿ ಗಮನಾರ್ಹವಾಗಿವೆ; ಇದು ತನ್ನ ಆತಿಥೇಯ ನಕ್ಷತ್ರದ ಸುತ್ತಲೂ ಸಂಪೂರ್ಣ ತಿರುಗುವಿಕೆಯಲ್ಲಿ 100 ರಿಂದ 250 ವರ್ಷಗಳವರೆಗೆ ಕಳೆಯುತ್ತದೆ. ಈ ಅಸಾಧಾರಣ ದೀರ್ಘ ಕಕ್ಷೆಯ ಅವಧಿಯು ಇತರ ಎಕ್ಸೋಪ್ಲಾನೆಟ್ ಗಳಿಗಿಂತ ಹೆಚ್ಚು ದೀರ್ಘವಾಗಿರುತ್ತದೆ, ಅವುಗಳ ಕಕ್ಷೆಯ ಚಕ್ರಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ ಎನ್ನಲಾಗಿದೆ. ಎಪ್ಸಿಲಾನ್ ಇಂಡಿ…
ನವದೆಹಲಿ: ಪ್ರತಿ ವರ್ಷ ಭಾರತದಿಂದ ಸಾವಿರಾರು ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುವ ಕನಸಿನೊಂದಿಗೆ ಬರುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ, ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳ ಕನಸು ಅವರಿಗೆ ಮಾರಕವಾಗಿದೆ. ಪ್ರತಿ ವರ್ಷ ಅನೇಕ ಕಾರಣಗಳಿಂದಾಗಿ ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಸಾವುಗಳು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇರಳ ಸಂಸದ ಕೋಡಿಕುನ್ನಿಲ್ ಸುರೇಶ್ ಅವರು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಕಳೆದ 5 ವರ್ಷಗಳಲ್ಲಿ, ನೈಸರ್ಗಿಕ ಕಾರಣಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ 633 ಘಟನೆಗಳು ನಡೆದಿವೆ ಎಂದು ಹೇಳಿದರು. ಕೆನಡಾದ ನಂತರ, ಯುಎಸ್ (108), ಯುಕೆ (58), ಆಸ್ಟ್ರೇಲಿಯಾ (57), ರಷ್ಯಾ (37) ಮತ್ತು ಜರ್ಮನಿ (24) ನಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ. ನೆರೆಯ…
ಹಾವೇರಿ: ಛತ್ರಿ ಹಿಡಿದು ಕೆಲಸ ಮಾಡಿದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮಾಡಿರುವ ಘಟನೆ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕಟ್ಟಡದ ನೆಲ ಮಹಡಿವರೆಗೆ ಕೂಡ ಮಳೆ ಸೋರುತ್ತಿದ್ದು, ಇದರಿಂದ ನೌಕರರು ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಇದಲ್ಲದೇ ಕಚೇರಿಯ ಕಡತಗಳನ್ನು ನೌಕರರು ರಕ್ಷಿಸಿಕೊಳ್ಳಲು ಪರದಾಡಬೇಕಾದ ಸನ್ನಿವೇಶ ಕಂಡು ಬಂದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆದಾಯ, ಜಾತಿ, ಆಸ್ತಿ ಪತ್ರಗಳು ಹಾಗೂ ಕಚೇರಿ ಪ್ರತಿಗಳು ಒದೆಯಾಗಿದ್ದು, ಕಚೇರಿಯ ಸನ್ನಿವೇಶಕ್ಕೆ ಕೈನ್ನಡಿಯಾಗಿದೆ. ಈ ಹಿಂದೆ ಕಚೇರಿಯಲ್ಲಿ ಅಳವಡಿಕೆ ಮಾಡಿದ್ದ ಸೋಲಾರ್ ಪ್ಯಾನಲ್ ಸಂದರ್ಭದಲ್ಲಿ ಆಗಿದ್ದ ಎಡವಯಟ್ಟು ಕಚೇರಿಯ ಮಾಳಿಗೆ ಸೋರುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಅಧಿಕಾರಿಗಳು ಸರಿಯಾಗಿ ಮೇಲ್ಚಾವಣಿಯನ್ನು ದುರಸ್ತಿ ಮಾಡುವಂತೆ ಸೂಚನೆ ನೀಡಿದ್ದರು ಕೂಡ ಇಲ್ಲಿ ತನಕ ಯಾವುದೇ ಕಾರ್ಯಕ್ಕೆ ಮುಂದಾಗದೇ ಇರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಸರ್ಕಾರಿ ಕಚೇರಿಯ ಪರಿಸ್ಥಿತಿ ಹೀಗಾದ್ರೆ, ಬೇರೆಯದ್ದು ಏನು ಕತೆ ಅಂತ ಸಾರ್ವಜನಿಕರು ಆಕ್ರೋಶ…
ನವದೆಹಲಿ: ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವುದನ್ನು ಕಡ್ಡಾಯಗೊಳಿಸಲಾಗುತ್ತದೆಯೇ? ಕೇಂದ್ರ ಸರ್ಕಾರವು ಅಂತಹ ಯಾವುದೇ ಕಾನೂನನ್ನು ತರುತ್ತಿದೆಯೇ? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಲೋಕಸಭೆ ಅಧಿವೇಶನದಲ್ಲಿ ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಮಯದಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು. ಆದಾಗ್ಯೂ, ಋತುಚಕ್ರದ ನೈರ್ಮಲ್ಯವನ್ನು ಉತ್ತೇಜಿಸುವತ್ತ ಸರ್ಕಾರ ಗಮನ ಹರಿಸಿದೆ ಅಂತ ಕೂಡ ಹೇಳಿದ್ದಾರೆ . ಮುಟ್ಟಿನ ರಜೆಯ ವಿಷಯದ ಬಗ್ಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅನ್ನಪೂರ್ಣ ದೇವಿ, ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸುವ ಯೋಜನೆಯಡಿ, 10-19 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರು ಪ್ರಯೋಜನ ಪಡೆಯಬಹುದು. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಮೂಲಕ ಸಬ್ಸಿಡಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ನಡೆಯುತ್ತಿದೆ. ಅಲ್ಲದೆ,…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಇವತ್ತಿನ ಸಂಚಿಕೆಯಲ್ಲಿ ಶನಿದೋಷ ಇದ್ದಲ್ಲಿ ಅದರ ನಿವಾರಣೆಗೆ ಏನು ಮಾಡಬೇಕೆಂಬುದನ್ನೇ ಇಲ್ಲಿ ತಿಳಿಸಿ ಕೊಡುತ್ತೇವೆ. ಸನಾತನ ಧರ್ಮದಲ್ಲಿ ನಿಸರ್ಗವನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ.ಹಾಗಾಗಿ, ಅನೇಕ ರೀತಿಯ ಮರಗಳನ್ನು ಮತ್ತು ಗಿಡಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುವ ಸಂಪ್ರದಾಯವಿದೆ. ಹೆಚ್ಚಾಗಿ ನಾವು ತುಳಸಿ ಗಿಡವನ್ನು ಮತ್ತು ಅರಳಿ ಮರವನ್ನು ಪೂಜಿಸಲಾಗುತ್ತದೆ. ನಾವಿಂದು ಅರಳಿ ಮರದ ಪೂಜೆಯ ವಿಧಾನ ಮತ್ತು ಅದರ ಪ್ರಯೋಜನದ ಕುರಿತು ತಿಳಿದುಕೊಳ್ಳೋಣ. ಅರಳಿ ಮರದ ಪ್ರತಿಯೊಂದು ಭಾಗದಲ್ಲೂ ದೇವರುಗಳು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. ಅರಳಿ ಮರದ ಕೊಂಬೆಯಲ್ಲಿ ಬ್ರಹ್ಮ, ಕಾಂಡದಲ್ಲಿ ಭಗವಾನ್ ವಿಷ್ಣು ಮತ್ತು ಮೇಲಿನ ಭಾಗದಲ್ಲಿ ಭಗವಾನ್ ಶಿವನು ನೆಲೆಸಿದ್ದಾನೆ ಎನ್ನುವ ಧಾರ್ಮಿಕ ನಂಬಿಕೆ ಇದೆ. ಈ ಮರವನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುವ ವ್ಯಕ್ತಿಯು ಈ ಮೂರು ದೇವರುಗಳ ಆಶೀರ್ವಾದವನ್ನು ಪಡೆಯುತ್ತಾನೆ. ಶಾಸ್ತ್ರಗಳ ಪ್ರಕಾರ, ಅರಳಿ ಮರದ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಗಂಡು-ಹೆಣ್ಣು ಎರಡು ಈ ಸೃಷ್ಟಿಯ ಅವಿಭಾಗ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ. ಇಂತಹ ಒಂದು ಬಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗಿನ ಕಾಲದಲ್ಲಿ ಈ ಮದುವೆಗೆ ಅರ್ಥವೇ ಇಲ್ಲದಂತಾಗಿದೆ ಪ್ರೀತಿಸಿ ಮದುವೆಯಾದರು ಅಥವಾ ಅರೆಂಜ್ ಮ್ಯಾರೇಜ್ ಆದರೂ ಕೇವಲ ನಾಲ್ಕು ದಿನದ ಆಟ ಅನ್ನುವಂತಾಗಿದೆ. ಇದಕ್ಕೆ ಪೂರಕ ಎನ್ನುವ ಹಾಗೆ ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುತ್ತಾರೆ. ಈ ರೀತಿ ಆಗುವುದು ಯಾಕೆ ಗೊತ್ತಾ ಎನ್ನುವುದನ್ನು ನಾವಿಲ್ಲಿ ತಿಳಿಯೋಣ. ಜಗತ್ತು ಎನ್ನುವುದು ಒಂದು ವಿಸ್ಮಯ ಜಗತ್ತಿನ ಸೃಷ್ಟಿಯಲ್ಲಿ ಭಾಗವಾದ ಮಾನವ ಜನ್ಮ ಕೂಡ ಒಂದು ಅದ್ಭುತವೇ ಈ ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ನೈಸರ್ಗಿಕ…
ಬೆಂಗಳೂರು: ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಪರಿಚಯಿಸುತ್ತಿರುವುದರಿಂದ 2024ರ ಜುಲೈ 27, 2024ರ ಇಂದಿನಿಂದ ಜುಲೈ 29ರವರೆಗೆ ಮೂರು ದಿನ ಇ-ಸ್ವತ್ತು ತಂತ್ರಾಂಶವು ಕಾರ್ಯನಿರ್ವಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಸಾರ್ವಜನಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ತಂತ್ರಾಂಶ ಕಾರ್ಯಾರಂಭಿಸಿದ ನಂತರ ಇ-ಸ್ವತ್ತು ತಂತ್ರಾಂಶದ ಕಾರ್ಯಾವಧಿಯನ್ನು 2024ರ ಆಗಸ್ಟ್ 2ರವರೆಗೆ ಪ್ರತಿ ನಿತ್ಯ ಸಂಜೆ 8 ಗಂಟೆಯವರೆಗೂ ಸೇವೆ ಸಲ್ಲಿಸಲು ಕಾಲಾವಧಿ ವಿಸ್ತರಿಸಲಾಗುವುದು ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಅಭಿವೃದ್ದಿಪಡಿಸಲಾಗಿದ್ದು ಈ ತಂತ್ರಾಂಶದ ಹೊಸ ಅವತರಣಿಕೆಯನ್ನು ಸಾರ್ವಜನಿಕರ ಸೇವೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿರು ಸಚಿವರು ಇ-ಸ್ವತ್ತು ತಂತ್ರಾಂಶದ ಬಳಕೆದಾರರಿಗೆ ಅನುಕೂಲವಾಗುವಂತೆ ಸಮಗ್ರ ಆವೃತ್ತಿಯೊಂದಿಗೆ ಸಜ್ಜುಗೊಳಿಸಲಾಗಿರುವ ಈ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯನ್ನು ಗ್ರಾಮಠಾಣದ ಒಳಗೆ ಆಥವಾ ಹೊರಗೆ ಬರುವ ಬಗ್ಗೆ ಅಳತೆ ಮಾಡಿಸುವ…
ನವದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೀಟ್ ಯುಜಿ ಪರಿಷ್ಕೃತ ಸ್ಕೋರ್ ಕಾರ್ಡ್ 2024 ಅನ್ನು ಜುಲೈ 26, 2024 ರಂದು ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಜುಲೈ 23, 2024 ರಂದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್ ಯುಜಿ 2024 ರ ಪರಿಷ್ಕೃತ ಅಂತಿಮ ಫಲಿತಾಂಶಗಳು ಎರಡು ದಿನಗಳಲ್ಲಿ ಲಭ್ಯವಿರುತ್ತವೆ ಎಂದು ಘೋಷಿಸಿದ್ದರು ಅದರಂತೆ ಈಗ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ಈಗ ತಮ್ಮ ಪರಿಷ್ಕೃತ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ನಿಂದ ಪರಿಶೀಲಿಸಬಹುದು ಮತ್ತು ತಮ್ಮ ನೀಟ್ ಯುಜಿ ಮರು-ಪರಿಷ್ಕೃತ ಸ್ಕೋರ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡಬಹುದು. ನೀಟ್ ಯುಜಿ ಪರಿಷ್ಕೃತ ಸ್ಕೋರ್ ಕಾರ್ಡ್ 2024 ಚೆಕ್ ಮಾಡುವುದು ಹೇಗೆ? ನೀಟ್ ಯುಜಿ ಪರಿಷ್ಕೃತ ಸ್ಕೋರ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: ಹಂತ 1: exams.nta.ac.in/NEET ನಲ್ಲಿ ಅಧಿಕೃತ ಎನ್ಟಿಎ…
ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳನ್ನು ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 2024 ರ ಮಾಹೆಯಲ್ಲಿ ಆಗಸ್ಟ್ 1 ರಿಂದ 31ರ ವರೆಗೆ ವರೆಗೆ ಶೇಕಡ 50% ರಿಯಾಯಿತಿಯ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಆನ್ ಲೈನ್ ಮೂಲಕವೂ ಶೇ 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು, ಓದುಗರು www.kuvempubhashabharathi.karnataka.gov.in ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ರಾಮನ ಹೆಸರು ಯಾವುದೇ ಕಾರಣಕ್ಕೂ ತೆಗೆಯಲು ಸಾಧ್ಯವಿಲ್ಲ. ಅದರ ಮಹತ್ವ ಅವರಿಗೆ ತಿಳಿದಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ. ಅವರು ಇಂದು ನವದೆಹಲಿಯಲ್ಲಿ ಮಾತನಾಡುತ್ತ, ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುವುದರಿಂದ ಇವರಿಗೆ ಏನು ಸಿಗಲಿದೆ ಅಂತ ಪ್ರಶ್ನೆ ಮಾಡಿದ ಅವರು. ಈ ಹಿಂದೆ ಜಿಲ್ಲೆಯ ರಚನೆ ವೇಳೇಯಲ್ಲಿ ಯಾಕೆ ಯಾರು ಕೂಡ ವಿರೋಧ ಮಾಡಲಿಲ್ಲ. ಈಗ ಯಾಕೆ ರಾಜಕೀಯ ಮಾಡುತ್ತಿದ್ದಾರೆ ಅಂತ ಅವರು ಪ್ರಶ್ನೆ ಮಾಡಿದರು.