Subscribe to Updates
Get the latest creative news from FooBar about art, design and business.
Author: kannadanewsnow07
ನವದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೀಟ್ ಯುಜಿ ಪರಿಷ್ಕೃತ ಸ್ಕೋರ್ ಕಾರ್ಡ್ 2024 ಅನ್ನು ಜುಲೈ 26, 2024 ರಂದು ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಜುಲೈ 23, 2024 ರಂದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್ ಯುಜಿ 2024 ರ ಪರಿಷ್ಕೃತ ಅಂತಿಮ ಫಲಿತಾಂಶಗಳು ಎರಡು ದಿನಗಳಲ್ಲಿ ಲಭ್ಯವಿರುತ್ತವೆ ಎಂದು ಘೋಷಿಸಿದ್ದರು ಅದರಂತೆ ಈಗ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ಈಗ ತಮ್ಮ ಪರಿಷ್ಕೃತ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ನಿಂದ ಪರಿಶೀಲಿಸಬಹುದು ಮತ್ತು ತಮ್ಮ ನೀಟ್ ಯುಜಿ ಮರು-ಪರಿಷ್ಕೃತ ಸ್ಕೋರ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡಬಹುದು. ನೀಟ್ ಯುಜಿ ಪರಿಷ್ಕೃತ ಸ್ಕೋರ್ ಕಾರ್ಡ್ 2024 ಚೆಕ್ ಮಾಡುವುದು ಹೇಗೆ? ನೀಟ್ ಯುಜಿ ಪರಿಷ್ಕೃತ ಸ್ಕೋರ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: ಹಂತ 1: exams.nta.ac.in/NEET ನಲ್ಲಿ ಅಧಿಕೃತ ಎನ್ಟಿಎ…
ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳನ್ನು ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 2024 ರ ಮಾಹೆಯಲ್ಲಿ ಆಗಸ್ಟ್ 1 ರಿಂದ 31ರ ವರೆಗೆ ವರೆಗೆ ಶೇಕಡ 50% ರಿಯಾಯಿತಿಯ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಆನ್ ಲೈನ್ ಮೂಲಕವೂ ಶೇ 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು, ಓದುಗರು www.kuvempubhashabharathi.karnataka.gov.in ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ರಾಮನ ಹೆಸರು ಯಾವುದೇ ಕಾರಣಕ್ಕೂ ತೆಗೆಯಲು ಸಾಧ್ಯವಿಲ್ಲ. ಅದರ ಮಹತ್ವ ಅವರಿಗೆ ತಿಳಿದಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ. ಅವರು ಇಂದು ನವದೆಹಲಿಯಲ್ಲಿ ಮಾತನಾಡುತ್ತ, ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುವುದರಿಂದ ಇವರಿಗೆ ಏನು ಸಿಗಲಿದೆ ಅಂತ ಪ್ರಶ್ನೆ ಮಾಡಿದ ಅವರು. ಈ ಹಿಂದೆ ಜಿಲ್ಲೆಯ ರಚನೆ ವೇಳೇಯಲ್ಲಿ ಯಾಕೆ ಯಾರು ಕೂಡ ವಿರೋಧ ಮಾಡಲಿಲ್ಲ. ಈಗ ಯಾಕೆ ರಾಜಕೀಯ ಮಾಡುತ್ತಿದ್ದಾರೆ ಅಂತ ಅವರು ಪ್ರಶ್ನೆ ಮಾಡಿದರು.
ನವದೆಹಲಿ: ನವದೆಹಲಿ: ಕನ್ವರ್ ಯಾತ್ರಾ ಮಾರ್ಗದಲ್ಲಿನ ತಿನಿಸುಗಳು ತಮ್ಮ ಅಂಗಡಿಗಳ ಹೊರಗೆ ತಮ್ಮ ಮಾಲೀಕರ ಹೆಸರುಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದ ಕೆಲವು ರಾಜ್ಯ ಸರ್ಕಾರಗಳ ಅಧಿಕಾರಿಗಳು ಹೊರಡಿಸಿದ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ಮಧ್ಯಂತರ ಆದೇಶವನ್ನು ಉಳಿಸಿಕೊಂಡಿದೆ. ಈ ವಿಷಯದ ವಿಚಾರಣೆಯನ್ನು ಮುಂದೂಡಲಾಯಿತು, ಮಧ್ಯಂತರ ತಡೆಯಾಜ್ಞೆ ಜಾರಿಯಲ್ಲಿದೆ. ಸುಪ್ರೀಂ ಕೋರ್ಟ್ ತನ್ನ ನಿಲುವನ್ನು ಸ್ಪಷ್ಟಪಡಿಸಿ, “ನಮ್ಮ ಆದೇಶ ಸ್ಪಷ್ಟವಾಗಿದೆ. ಯಾರಾದರೂ ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿಯ ಹೊರಗೆ ತಮ್ಮ ಹೆಸರನ್ನು ಬರೆಯಲು ಬಯಸಿದರೆ, ನಾವು ಅವರನ್ನು ತಡೆಯಲಿಲ್ಲ. ಅವರ ಹೆಸರನ್ನು ಬರೆಯುವಂತೆ ಯಾರನ್ನೂ ಒತ್ತಾಯಿಸಬಾರದು ಎಂಬುದು ನಮ್ಮ ಆದೇಶವಾಗಿತ್ತು. ಈ ನಿರ್ದೇಶನಗಳನ್ನು ಹೊರಡಿಸಿದ ನಂತರ ಈ ವಿಷಯವು ವಿವಾದವನ್ನು ಹುಟ್ಟುಹಾಕಿತು, ಈ ಆದೇಶಗಳು “ಕೋಮುವಾದಿ ಮತ್ತು ವಿಭಜಕ” ಎಂದು ಪ್ರತಿಪಕ್ಷಗಳು ಆರೋಪಿಸಿವೆ, ಅವರು ಮುಸ್ಲಿಮರು ಮತ್ತು ಪರಿಶಿಷ್ಟ ಜಾತಿಗಳನ್ನು ತಮ್ಮ ಗುರುತನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವ ಮೂಲಕ ಅವರನ್ನು ಗುರಿಯಾಗಿಸುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಈ ನಿರ್ದೇಶನವನ್ನು ಸಮರ್ಥಿಸಿಕೊಂಡಿದ್ದು, ಕಾನೂನು ಮತ್ತು…
ನವದೆಹಲಿ: ಕನ್ವರ್ ಯಾತ್ರಾ ಮಾರ್ಗದಲ್ಲಿನ ಅಂಗಡಿಗಳು ಮತ್ತು ತಿನಿಸುಗಳ ನಾಮಫಲಕ ವಿವಾದವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. “ಶಿವಭಕ್ತ ಕನ್ವಾರಿಯಾಗಳ ಆಹಾರ ಆಯ್ಕೆಗಳನ್ನು ಸಹ ನಾವು ಗೌರವಿಸಬೇಕು” ಎಂದು ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್.ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. “ಯಾರಾದರೂ ತಮ್ಮ ಸ್ವಂತ ಇಚ್ಛೆಯಿಂದ ಅಂಗಡಿಯ ಹೊರಗೆ ತಮ್ಮ ಹೆಸರನ್ನು ಬರೆಯಲು ಬಯಸಿದರೆ, ನಾವು ಅವರನ್ನು ನಿಲ್ಲಿಸಿಲ್ಲ ಎಂದು ನಮ್ಮ ಆದೇಶ ಸ್ಪಷ್ಟವಾಗಿದೆ. ಹೆಸರುಗಳನ್ನು ಬರೆಯುವಂತೆ ಯಾರನ್ನೂ ಒತ್ತಾಯಿಸಬಾರದು ಆಂತ ಹೇಳಿದೆ. ಕನ್ವರ್ ಯಾತ್ರಾ ಮಾರ್ಗದಲ್ಲಿನ ಅಂಗಡಿಗಳಿಗೆ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಪರವಾಗಿ ಪ್ರತಿ ಅಫಿಡವಿಟ್ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.
ಬೆಂಗಳೂರು: ಡೆಂಗ್ಯೂಗೆ ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳ ವರೆಗೆ ನಿಗಾ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರಿನ ಯಲಹಂಕದ ದಲ್ಲಿ ಇಂದು ಡೆಂಗ್ಯೂ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು. ಯಲಹಂಕದ ಶಿಂಗೇನಹಳ್ಳಿಯಲ್ಲಿ ಇಂದು ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಸ್ಥಳೀಯ ಶಾಲೆಗಳಿಗೆ ತೆರಳಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಡೆಂಗ್ಯೂ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಇಲಾಖೆ ಸತತ ಪ್ರಯತ್ನಗಳನ್ನ ಮುಂದುವರಿಸಿದೆ. ಮುಂದಿನ ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳಲ್ಲಿ ಇಳಮುಖ ಕಾಣುವ ನೀರಿಕ್ಷೆ ಹೊಂದಿದ್ದೇವೆ ಎಂದರು. ಕೆಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಇಳಿಮುಖವಾಗಿವೆ. ರಾಜ್ಯದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿಯೇ ಶೇ 50 ರಷ್ಟು ಡೆಂಗ್ಯೂ ಪ್ರಕರಣಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು…
ಬೆಂಗಳೂರು: “ಹೊಸ ನಾಯಕರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಿಳಿಸಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಶುಕ್ರವಾರ ಈ ಮಾಹಿತಿ ನೀಡಿದರು. “ಜುಲೈ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಕಾರಣ ಈ ವಿಚಾರದ ಬಗ್ಗೆ ಮಾಧ್ಯಮಗೋಷ್ಠಿ ಮಾಡಿರಲಿಲ್ಲ. ಆಗಸ್ಟ್ 2ರವರೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ, ಆಗಸ್ಟ್ 3ರಿಂದ 8ರವರೆಗೆ ನಾಮಪತ್ರ ಪರಿಶೀಲನೆ ಮಾಡಲಾಗುವುದು. ಆಗಸ್ಟ್ 9ರಂದು ನಾಮಪತ್ರ ಅಂತಿಮ ಮಾಡಲಾಗುವುದು. ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುವುದು. ಈ ವೇಳೆ ಪಕ್ಷವು ಅಗ್ರ ಮೂರು ಸ್ಥಾನ ಪಡೆದವರ ಸಂದರ್ಶನವನ್ನು ಮಾಡಲಿದೆ” ಎಂದು ಮಾಹಿತಿ ನೀಡಿದರು. “ಸದಸ್ಯತ್ವ ನೋಂದಣಿಯನ್ನು ಆಗಸ್ಟ್…
ಬೆಂಗಳೂರು: ನನ್ನ ರಾಜಕೀಯ ಜೀವನ ತೆರೆದ ಪುಸ್ತಕ: ಪ್ರತಿ ಪುಟಗಳು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿರುವ ಮಾತಿನ ಹೈಲೆಟ್ಸ್ ಇಲ್ಲಿದೆ. ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡ್ತಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. *ಎರಡು ವಾರವೂ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಆಗಿದೆ. *ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಆಡಳಿತ ಪಕ್ಷದ ಶಾಸಕರು ರಾಜ್ಯದ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದರು. ಇದನ್ನೆಲ್ಲಾ ನೋಡಿದಾಗ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. *ನಾನು ಮಂತ್ರಿಯಾಗಿ 40 ವರ್ಷ ಆಯ್ತು.…
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಬಿಜಪಿ ಜೆಡಿಎಸ್ ಸದನದಲ್ಲಿ ಕಾನೂನು ಬಾಹಿರ ನಿಯಮದ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿತ್ತು ಅಂತ ಹೇಳಿದರು. ಇನ್ನೂ ಲೋಕಸಭೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕಡಿಮೆ ಸೀಟು ಗಳಿಸಿದ್ದು, ಇದನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಅಂತ ತಿಳಿಸಿದರು. ಯಾವುದೇ ಆಧಾರಗಳಿಲ್ಲದೇ ಇವರುಗಳು ಆರೋಪ ಮಾಡುತ್ತಿದ್ದಾರೆ ಅಂತ ತಿಳಿಸಿದರು. ಸಿಎಂಗೆ ಕಪ್ಪು ಚುಕ್ಕೆ ತರುವುದಕ್ಕೆ ಇವರೆಲ್ಲ ಪಿತೂರಿ ನಡೆಸುತ್ತಿದ್ದಾರೆ ಅಂಥ ತಿಳಿಸಿದರು. ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ಅವರು ಪಿಟಿಸಿಎಲ್ ಕಾಯ್ದೆ ಅನ್ವ ನನ್ನ ರಾಜಕೀಯ ಜೀವನ ತೆರೆದ ಪುಸ್ತಕ: ಪ್ರತಿ ಪುಟಗಳು ಪಾರದರ್ಶಕ ಮತ್ತು ಪ್ರಾಮಾಣಿಕ\ ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ಚರ್ಚಿಸಿದರು ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ…
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಬಿಜಪಿ ಜೆಡಿಎಸ್ ಸದನದಲ್ಲಿ ಕಾನೂನು ಬಾಹಿರ ನಿಯಮದ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿತ್ತು ಅಂತ ಹೇಳಿದರು. ಇನ್ನೂ ಲೋಕಸಭೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕಡಿಮೆ ಸೀಟು ಗಳಿಸಿದ್ದು, ಇದನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಅಂತ ತಿಳಿಸಿದರು. ಯಾವುದೇ ಆಧಾರಗಳಿಲ್ಲದೇ ಇವರುಗಳು ಆರೋಪ ಮಾಡುತ್ತಿದ್ದಾರೆ ಅಂತ ತಿಳಿಸಿದರು. ಸಿಎಂಗೆ ಕಪ್ಪು ಚುಕ್ಕೆ ತರುವುದಕ್ಕೆ ಇವರೆಲ್ಲ ಪಿತೂರಿ ನಡೆಸುತ್ತಿದ್ದಾರೆ ಅಂಥ ತಿಳಿಸಿದರು. ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ಅವರು ಪಿಟಿಸಿಎಲ್ ಕಾಯ್ದೆ ಅನ್ವಯ ಜಮೀನು ಇಲ್ಲ, ಇದು ಪಿತ್ರರ್ಜಿತ ಆಸ್ತಿಯಾಗಿದ್ದು, ಈ ಜಮೀನ ಮಾಲೀಕ ನಿಂಗ ಬಿನ್ ಜವರ 2-08-1935ರಲ್ಲಿ ಮೈಸೂರು ತಾಲೂಕು ಕಚೇರಿಗೆ ಒಂದು ಅರ್ಜಿಯನ್ನು ನೀಡಿದ್ದಾರೆ ಅದರ ಅನ್ವಯ ಹರಾಜು ನಡೆಯುತ್ತದೆ. ಆಗ ಹರಾಜಿನ ಮೊತ್ತು ಮೂರು ರೂ ಆಗಿರುತ್ತದೆ. ಹರಾಜಿನಲ್ಲಿ ಒಂದು ರೂಗೆ ನಿಂಗ…