Subscribe to Updates
Get the latest creative news from FooBar about art, design and business.
Author: kannadanewsnow07
ನವದೆಹಲಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಜಯಗಳಿಸಿದ ಸ್ವಲ್ಪ ಸಮಯದ ನಂತರ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು ಮತ್ತು ಕಾಶ್ಮೀರವು ಕೇವಲ 10 ಮಂತ್ರಿ ಸ್ಥಾನಗಳನ್ನು ಹೊಂದಿದೆ. “6.5 ವರ್ಷಗಳ ನಂತರ ಹೊಸ ಸರ್ಕಾರ ಬರುತ್ತಿದೆ. ಜನರ ಧ್ವನಿ ಎತ್ತಲು ದೇವರು ಒಮರ್ ಅಬ್ದುಲ್ಲಾ ಅವರಿಗೆ ಶಕ್ತಿ ನೀಡಲಿ” ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ವಕ್ತಾರ ಇಮ್ರಾನ್ ನಬಿ ದಾರ್ ಹೇಳಿದ್ದಾರೆ. https://twitter.com/ANI/status/1846432706592493810
ಕೆಎನ್ಎನ್ಡಿಜಿಟಲ್ಡೆಸ್ಕ್: ಶೀರ್ಷಿಕೆಯ ಕಾರಣದಿಂದ ಆರಂಭಿಕವಾಗಿ ಗಮನ ಸೆಳೆದಿದ್ದ ಚಿತ್ರ `ಪ್ರಕರಣ ತನಿಖಾ ಹಂತದಲ್ಲಿದೆ’. ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥಾನಕದ ಸುಳಿವು ಬಿಟ್ಟು ಕೊಟ್ಟಿದ್ದ `ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಈ ವಾರ ಅಂದರೆ, ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಒಟ್ಟಾರೆ ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರನ್ನೆಲ್ಲ ಟ್ರೈಲರ್ ಅಚ್ಚರಿಗೀಡುಮಾಡಿತ್ತು. ಹಾಗೆ ಮೂಡಿಕೊಂಡಿದ್ದ ನಿರೀಕ್ಷೆಗಳ ನಡುವೆ ಈ 95 ನಿಮಿಷಗಳ ವಿಶಿಷ್ಟ ಥ್ರಿಲ್ಲರ್ ತೆರೆಗಾಣಲು ದಿನಗಣನೆ ಶುರುವಾಗಿದೆ. ವಿಶೇಷವೆಂದರೆ, ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಪಳಗಿಕೊಂಡಿದ್ದವರೆಲ್ಲ ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ. ರಂಗಭೂಮಿಯ ವಾತಾವರಣದಲ್ಲಿಯೇ ಜೀವ ಪಡೆದಿದ್ದ ಈ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ. ಹೊಸತೇನನ್ನೋ ಸೃಷ್ಟಿಸಬೇಕೆಂಬ ತುಡಿತದೊಂದಿಗೆ ತಯಾರಾಗಿರುವ ಈ ಚಿತ್ರ ಈಗಾಗಲೇ ಟೈಟಲ್ ಟ್ರ್ಯಾಕ್, ಪೋಸ್ಟರ್, ಟ್ರೈಲರ್ ಮುಂತಾದವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆಯೇ ಇದೊಂದು ಕ್ರೈಂ ಜಾನರಿನ ಚಿತ್ರವೆಂಬಂತೆ…
ಕೆಎನ್ಎನ್ಡಿಜಿಟಲ್ಡೆಸ್ಕ್: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ನಟಿಸಿರುವ ಚಿತ್ರ `ಎಲ್ಲಿಗೆ ಪಯಣ ಯಾವುದೋ ದಾರಿ’. ಈ ಸಿನಿಮಾದ ಟ್ರೈಲರ್ ಅನ್ನು ಕಿಚ್ಚಾ ಸುದೀಪ್ ಪ್ರೀತಿಯಿಂದ ಬಿಡುಗಡೆಗೊಳಿಸಿದ್ದಾರೆ. ಅಚ್ಚುಕಟ್ಟಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಟ್ರೈಲರ್ ಲಾಂಚ್ ಆಗಿದೆ. ಬಿಗ್ ಬಾಸ್ ಶೋ ಹಾಗೂ ಸಿನಿಮಾ ಒತ್ತಡಗಳ ನಡುವೆಯೂ ಪ್ರೀತಿಯಿಂದ ಆಗಮಿಸಿದ ಸುದೀಪ್, ಕಾಶೀನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅವರಿಗೆ ಶುಭ ಕೋರುತ್ತಾ, ಟ್ರೈಲರ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಅಕ್ಟೋಬರ್ 25ರಂದು ತೆರೆಗಾಣಲಿದೆ. ಕನ್ನಡ ಚಿತ್ರರಂಗ ಎಂದಿಗೂ ಕಾಶಿನಾಥ್ ಅವರ ಕೊಡುಗೆಗಳನ್ನು, ಅವರಿಂದಾದ ಒಳಿತುಗಳನ್ನು ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ಅಭಿಮನ್ಯುಗೆ ನಾವು ಕೊಡುತ್ತಿರುವ ಬೆಂಬಲ ತೀರಾ ಚಿಕ್ಕದು’ ಎಂದಿರುವ ಸುದೀಪ್, ಈ ಟ್ರೈಲರಿನಲ್ಲಿ ಅಭಿಮನ್ಯು ಕಾಣಿಸಿಕೊಂಡಿರುವ ರೀತಿಯನ್ನೂ ಮೆಚ್ಚಿಕೊಂಡಿದ್ದಾರೆ. ಸದರಿ ಟ್ರೈಲರ್ ಭರವಸೆ ಮೂಡಿಸಿದೆ ಎನ್ನುತ್ತಲೇ ನಿರ್ದೇಶಕ ಕಿರಣ್ ಎಸ್ ಸೂರ್ಯ ಹಾಗೂ ತಂಡದ…
ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇಂದು ಮಧ್ಯಾಹ್ನ 3.30 ಕ್ಕೆ ಪ್ರಕಟಿಸಲಿದೆ. 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಳ್ಳಲಿದೆ, ಅಂದರೆ ಅದಕ್ಕೂ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯ ಅವಧಿ 2025 ರ ಜನವರಿ 5 ರಂದು ಕೊನೆಗೊಳ್ಳಲಿದೆ. ಸುಮಾರು 50 ಉಪಚುನಾವಣೆಗಳು ಬಾಕಿ ಇರುವುದರಿಂದ, ಚುನಾವಣಾ ಆಯೋಗವು ಅವುಗಳಿಗೆ ಚುನಾವಣಾ ದಿನಾಂಕಗಳನ್ನು ಸಹ ಘೋಷಿಸಬಹುದು. ಜೂನ್ನಲ್ಲಿ ಅಮೇಥಿ ಮತ್ತು ವಯನಾಡ್ ಎರಡರಿಂದಲೂ ಗೆದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ತೆರವಾದ ವಯನಾಡ್ ಲೋಕಸಭಾ ಸ್ಥಾನವೂ ಅವುಗಳಲ್ಲಿ ಒಂದಾಗಿದೆ. ವಯನಾಡ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೈತ್ರಿಕೂಟ ಮಹಾಯುತಿ – ಬಿಜೆಪಿ, ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ – ಮಹಾ ವಿಕಾಸ್ ಅಘಾಡಿ, ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ…
ಸುದ್ದಿ ಕೃಪೆ: ಪ್ರಜಾಕಹಳೆ, ಕನ್ನಡ ದಿನಪತ್ರಿಕೆ ತುಮಕೂರು, ಸಂಪಾದಕರು : ರಘು ಎ.ಎನ್ ತುಮಕೂರು: ನಗರದಲ್ಲಿ ಯುವಕರು ಮಾದಕ ವ್ಯಸನಕ್ಕೆ ಮಾರುಹೋಗುತ್ತಿದ್ದು, ಗಾಂಜಾ, ಮತ್ತಿನ ಮಾತ್ರೆಯ ನತೆಯಲ್ಲಿ ತೇಲುತ್ತಿದ್ದು, ಡ್ರಗ್ಸ್ ಮುಕ್ತ ತುಮಕೂರು ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವ ಡ್ರಗ್ಸ್ ಮುಕ್ತ ತುಮಕೂರು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದು ಘೋಷಣೆಯಾಗಿಯೇ ಉಳಿದುಕೊಂಡಿದೆ. ನಗರದಲ್ಲಿ ಗಾಂಜಾ ಸೇವನೆ ಪ್ರಕರಣಗಳು ಎಗ್ಗಿಲ್ಲದಂತೆ ನಡೆಯುತ್ತಿದ್ದು, ಅಲ್ಲಲ್ಲಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದರು ಸಹ ಡ್ರಗ್ಸ್ ಮುಕ್ತ ತುಮಕೂರು ನಿರ್ಮಾಣ ಸಾಧ್ಯವಾಗುತ್ತಿಲ್ಲ, ದೊರಕುತ್ತಿರುವ ಗಾಂಜಾ ಪ್ರಮಾಣವೂ ಕಡಿಮೆ ಇದ್ದು, ಗಾಂಜಾ ಪೂರೈಕೆ ಜಾಲಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡರು ಸಹ ಗಾಂಜಾ ಜಾಲ ವಿಸ್ತಾರವಾಗಿ ಹರಡಿಕೊಂಡಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮಹಾರಾಷ್ಟ್ರ, ಆಂಧ್ರದ ಗಾಂಜಾಕ್ಕೆ ಬೇಡಿಕೆ: ಮಹಾರಾಷ್ಟ್ರದ ನಾಗುರ, ಸತಾರ ಜಿಲ್ಲೆಗಳಲ್ಲಿ ಗಾಂಜಾವನ್ನು ಯತೇಚ್ಛವಾಗಿ ರೈತರೇ ಬೆಳೆಯುತ್ತಾರೆ, ಇನ್ನೂ ಆಂಧ್ರ ಪ್ರದೇಶ ಅರಕು ಅರಣ್ಯ ಪ್ರದೇಶದಲ್ಲಿ ದೊರೆಯುವ ಗಾಂಜಾಕ್ಕೆ ನಗರದಲ್ಲಿ ಬೇಡಿಕೆ ಹೆಚ್ಚಿದ್ದು, ಲಾರಿ ಹಾಗೂ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನೀವು ಜೀವನದಲ್ಲಿ ಸಂಪತ್ತು ಬರೆದ ವ್ಯಕ್ತಿಯಾಗಬೇಕು ಎಂದರೆ ಲಕ್ಷ್ಮಿ ದೇವಿಯ ಪೂಜೆಯನ್ನು ಮನೆಯಲ್ಲಿ ಮಾಡುವಾಗ ಈ ಒಂದು ವಸ್ತುಗಳನ್ನು ನೀವು ಬಳಸಿದರೆ ನಿಮಗೆ ಹಣದ ಲಾಭ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಹಣದ ಒಳಹರಿವು ನಮ್ಮ ಅನುಕೂಲಕ್ಕೆ ತಕ್ಕಹಾಗೆ ಇರಬೇಕು ಎಂದರೆ ಲಕ್ಷ್ಮಿ ದೇವಿಯ ಕೃಪೆ ಯಾವಾಗಲೂ ನಮ್ಮ ಮೇಲೆ ಇರಬೇಕು ಹಣದ ದೇವತೆ ಲಕ್ಷ್ಮೀದೇವಿಯ ಗ್ರೂಪ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಹ ಸಾಧ್ಯವಿಲ್ಲ ಒಂದು ವೇಳೆ ನೀವು ಆ ಕೆಲಸವನ್ನು ಮಾಡಿದರು ಆ ಕೆಲಸ ಮುಗಿದ ನಂತರ ನಷ್ಟ ಅಥವಾ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ಪ್ರತಿದಿನ ನೀವು ಮನೆಯಲ್ಲಿ ಪೂಜೆ ಮಾಡುವಾಗ ಲಕ್ಷ್ಮೀದೇವಿಯನ್ನು ಈ ರೀತಿ ಆರಾಧನೆ ಮಾಡಿದರೆ ನಾವು ಹೇಳುವ ಸರಳ ವಿಧಾನವನ್ನು ನೀವು 3 ವಾರಗಳು ಮಾಡಿದರೆ ಖಂಡಿತವಾಗಿಯೂ ಮಹಾಲಕ್ಷ್ಮಿಯ ಕೃಪೆ ನಿಮ್ಮ ಮೇಲೆ…
*ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ನಟ ದರ್ಶನ್ ತೂಗುದೀಪ ಜಾಮೀನು ಭವಿಷ್ಯ ಸೋಮವಾರ ಕೋರ್ಟ್ ನಿರ್ಧಾರ ಮಾಡಿದೆ. ದರ್ಶನ್ ಅವರ ಜಾರ್ಮಿನು ಅರ್ಜಿ ಸಂಬಂಧ ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಾದ – ಪ್ರತಿವಾದ ನಡೆದ ನ್ಯಾಯಾಧೀಶರು ನಟ ದರ್ಶನ್ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿ. ವಿ. ನಾಗೇಶ್ ಸ ರ್ಕಾರಿ ಪರ ವಕೀಲ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು. ಈ ನಡುವೆ ಜಾಮೀನು ಸಿಗದಿರುವ ಕಾರಣಕ್ಕೆ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿರುವ ದರ್ಶನ್ ಅವರಿಗೆ ಇದರಿಂದ ಬೇಸರವಾಗಿರುವುದು ಸುಳ್ಳಲ್ಲ. ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಆಗಸ್ಟ್ 29 ರಿಂದ ಬಳ್ಳಾರಿ ಕೇಂದ್ರ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್ನಲ್ಲಿ ಬಂಧನದಲ್ಲಿ ಇಡಲಾಗಿದೆ. ನಾಳೆಯೊಳಗೆ ಜಾಮೀನು ಸಂಬಂಧ ಪ್ರಕ್ರಿಯೆಗಳನ್ನು ದರ್ಶನ್ ಪತ್ನಿ ಮಾಡಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡತೆ ಆದರೆ ನಾಳೆ…
*ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಗೌಡ ಜಾಮೀನು ಅರ್ಜಿ ಕೂಡ ವಜಾ ಆಗಿದೆ. ಪವಿತ್ರಗೌಡ ಪರ ಟಾಮಿ ಸ್ಟಾಮಿನ್ ಅವರು ವಾದ ಮಂಡನೆ ಮಾಡಿದ್ದರು, ಪವಿತ್ರಗೌಡ ಅವರು ಕೊಲೆಯಲ್ಲಿ ಪಾತ್ರವಹಿಸಿಲ್ಲ ಎನ್ನುವುದನ್ನು ನ್ಯಾಯಾಧೀಶರಿಗೆ ತಿಳಿಸುವುದಕ್ಕೆ ಮುಂದಾದರು ಆದರೆ ಅದು ಯಶಸ್ವಿಯಾಗಿಲ್ಲ.
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರಿಗೆ ಜಾಮೀನು ನೀಡಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವು ಆದೇಶ ನೀಡಿದೆ. ನಾಳೆ ಅವರು ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೇ ಎನ್ನಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ನಾಗೇಂದ್ರಗೆ ಇಂದು ರಿಲೀಫ್ ಸಿಕ್ಕಿದೆ. ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಪ್ರಮುಖ ಆರೋಪಿ ಯಾಗಿ ಶಾಸಕ ಬಿ. ನಾಗೇಂದ್ರ ಗುರುತಿಸಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳಲು ರೂಪಿಸಿದ್ದ ಸಂಚಿನಲ್ಲಿ ಮಾಜಿ ಸಚಿವ ನಾಗೇಂದ್ರ ಪ್ರಧಾನ ಪಾತ್ರ ವಹಿಸಿದ್ದಾರೆ. ಅಕ್ರಮ ಬೆಳಕಿಗೆ ಬರುತ್ತಲೇ ಸಾಕ್ಷ್ಯಾಧಾರವಿದ್ದ ಮೂರು ಮೊಬೈಲ್ ನಾಶಪಡಿಸಿದ್ದಾರೆ ಎಂದು ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕೆಎನ್ಎನ್ಡಿಜಿಟಲ್ಡೆಸ್ಕ್: ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಗುಂಗು ಹತ್ತಿಸಿಕೊಂಡ ದೊಡ್ಡ ಪ್ರೇಕ್ಷಕ ವರ್ಗವೊಂದು ಕನ್ನಡದಲ್ಲಿದೆ. ಅದೇ ಧಾಟಿಯ ಚಿತ್ರವೊಂದು ಪಕ್ಕಾ ಕಮರ್ಶಿಯಲ್ ಪಥದಲ್ಲಿ ರೂಪುಗೊಂಡಿದೆಯೆಂದರೆ ಅದರ ಬಗೆಗೊಂದು ಕುತೂಹಲ ತಾನಾಗಿಯೇ ಮೂಡಿಕೊಳ್ಳುತ್ತೆ. ಸದ್ಯ ಅಂಥಾದ್ದೊಂದು ಕೌತುಕಕ್ಕೆ ಕಾರಣವಾಗಿರುವ ಚಿತ್ರ ‘ಬಿಳಿಚುಕ್ಕಿ ಹಳ್ಳಿಹಕ್ಕಿ’. ಈ ಹಿಂದೆ `ಮಹಿರಾ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದವರು ಮಹೇಶ್ ಗೌಡ. ಇದೀಗ ಅವರು ಸ್ವತಃ ನಿರ್ಮಾಣ, ನಿರ್ದೇಶನದ ಜವಾಬ್ದಾರಿ ಹೊತ್ತು ತಾವೇ ನಾಯಕನಾಗಿ ನಟಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’. ದಸರಾ ಹಬ್ಬಕ್ಕೆ ಶುಭ ಕೋರುವ ನಿಮಿತ್ತವಾಗಿ ಈ ಚಿತ್ರದ ಒಂದು ಪೋಸ್ಟರ್ ಅನಾವರಣಗೊಂಡಿದೆ. ಈ ಮೂಲಕ ಸದರಿ ಚಿತ್ರದತ್ತ ಪ್ರೇಕ್ಷಕರ ಚಿತ್ತ ಹೊರಳಿಕೊಂಡಿದೆ. ಇಡೀ ದೇಶದಲ್ಲಿಯೇ ಮೊದಲ ಬಾರಿ ಈ ಸಿನಿಮಾ ಮೂಲಕ ವಿಟಿಲಿಗೋ ಅಂದರೆ, ತೊನ್ನಿನ ಭೂಮಿಕೆಯಲ್ಲಿ ತಯಾರಾದ ಚಿತ್ರವೆಂಬ ಹೆಗ್ಗಳಿಕೆ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರಕ್ಕಿದೆ. ಸಾಮಾನ್ಯವಾಗಿ ಇಂಥಾ ಕಥಾ ಹಂದರದ ಯಾವುದೇ ಸಿನಿಮಾದಲ್ಲಿ ಪಾತ್ರಧಾರಿಗಳು ಮೇಕಪ್ ಮೂಲಕ ಅದಕ್ಕೆ ಜೀವ ತುಂಬುತ್ತಾರೆ. ಆದರೆ,…