Subscribe to Updates
Get the latest creative news from FooBar about art, design and business.
Author: kannadanewsnow07
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಣ್ಣಿನ ದೃಷ್ಟಿ ದೋಷವೂ ಒಂದು ಆರೋಗ್ಯದ ಸಮಸ್ಯೆ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಇದು ಸಾಮಾನ್ಯವಾಗಿಬಿಟ್ಟಿದೆ. ದೃಷ್ಟಿ ದೋಷ ಉಂಟಾಗಲು ಕಾರಣಗಳು ಅನೇಕ ಆದರೆ ಈ ಸಮಸ್ಯೆ ನಿವಾರಣೆಗೂ ಅನೇಕ ಪರಿಹಾರಗಳಿವೆ. ಅದರಲ್ಲಿ ಒಂದು ಸುಲಭವಾದ ಮನೆಮದ್ದನ್ನು ನವಿಂದು ತಿಳಸಿಕೊಡುತ್ತೇವೆ. ಇದಕ್ಕೆ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ನಾವು ಹೇಳುವ ಈ ಮನೆಮದ್ದನ್ನು ಟ್ರೈ ಮಾಡಿದರೆ ಕಣ್ಣಿ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಕನ್ಣಿನ ಸಮಸ್ಯೆ ನಿವಾರಣೆ ಮಾಡಲು ಬದಾಮಿ ತುಂಬಾ ಸಹಾಯ ಮಾಡುತ್ತದೆ. ಮೊದಲಿಗೆ ಒಂದು ಬಟ್ಟಲಿಗೆ ಹತ್ತು ಬದಾಮಿಯನ್ನು ಹಾಕಿ. ಬದಾಮಿಯಲ್ಲಿ ಒಮೆಗಾ 3 ಫ್ಲಾಟಿ ಆಸಿಡ್ ಹಾಗು ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಬದಾಮಿ ಜೊತೆಗೆ ಒಂದು ಚಮಚ ಜೀರಿಗೆ ತೆಗೆದುಕೊಳ್ಳಿ. ಜೀರಿಗೆಯಲ್ಲಿ ವಿಟಮಿನ್ ಎ ಹಾಗು ವಿಟಮಿನ್ ಸಿ ಇರುತ್ತದೆ. ಜೀರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆ ಕಾಲು ಚಮಚ ಬಿಳಿ ಕಾಳು ಮೆಣಸನ್ನು ಹಾಕಿ ಹಾಗು ಒಂದು…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಶತ್ರುಗಳ ಕಾಟದಿಂದ ಮುಕ್ತಿ ಸಿಗಲು ಈ ರೀತಿಯಾಗಿ ಸರಳ ಉಪಾಯವನ್ನು ಮಾಡಿ. ಈ ಉಪಾಯ ಮಾಡುವುದಕ್ಕೆ ಚೆನ್ನಾಗಿ ಇರುವ ಎಕ್ಕದ ಎಲೆ, ಪಚ್ಚ ಕರ್ಪೂರ, ಬೇವಿನ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಉಪಾಯ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳುವ ಪರಿಹರ. ನಿಮ್ಮ ಶತ್ರು ಯಾರು ಇರುತ್ತಾರೋ ಅವರ ಹೆಸರನ್ನು ಬೇವಿನ ಎಣ್ಣೆಯಿಂದ ಎಕ್ಕದ ಮೇಲೆ ಬರೆಯಬೇಕು. ನಂತರ ದೇವರ ಹತ್ತಿರ ನಮಸ್ಕಾರ ಮಾಡಿಕೊಂಡು ಇಂತವರು ನಮಗೆ ತೊಂದರೆ ಕೊಡುತ್ತಿದ್ದಾರೆ ಅವರಿಂದ ಮುಕ್ತಿ ಬೇಕು ಎಂದು ಕೇಳಬೇಕು . ನಂತರ ಎಕ್ಕದ ಎಲೆಯನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಬಂದು ಮತ್ತೊಮ್ಮೆ ಅವರ ಹೆಸರನ್ನು ಹೇಳಿ ಕರ್ಪೂರ ಇಟ್ಟು ಬೆಂಕಿ ಹಚ್ಚಬೇಕು. ಈ ಉಪಾಯವನ್ನು ಗುರುವಾರ ಭಾನುವಾರ ಮಾಡಬೇಕು. ಸಂಜೆ 5:00 ಗಂಟೆಯಿಂದ 6:09 ಗಂಟೆ ಒಳಗೆ ಮಾಡಬೇಕು.ಈ ರೀತಿ ಮಾಡಿದರೆ ಶತ್ರುಗಳು ಕಾಟ ಕೊಡುವುದು…
ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ, 16% ಕ್ಕೂ ಹೆಚ್ಚು ದಲಿತ ಮತಗಳನ್ನು ಸೆಳೆಯಲು ಬಿಜೆಪಿ ‘ಚಲೋ ದಲಿತ್ ಬಸ್ತಿ’ ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಡಿ ಬಿಜೆಪಿ ಮಾರ್ಚ್ 10 ರೊಳಗೆ ಒಂದು ಲಕ್ಷ ದಲಿತ ಜನವಸತಿಗಳನ್ನು ತಲುಪಲಿದೆ. ಮೋದಿ ಸರ್ಕಾರದ ಕೆಲಸಗಳನ್ನು ಹೇಳುವ ಮೂಲಕ ಮತದಾರರನ್ನು ಪಕ್ಷದೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತದೆ. ಈ ಬಗ್ಗೆ ಬಿಜೆಪಿ ವಕ್ತಾರ ಪ್ರೇಮ್ ಶುಕ್ಲಾ ಮಾಹಿತಿ ನೀಡಿದ್ದಾರೆ. https://kannadanewsnow.com/kannada/good-news-for-farmers-rs-2000-to-be-credited-to-your-account-tomorrow/ https://kannadanewsnow.com/kannada/pm-wishes-cricketer-mohammed-shami-a-speedy-recovery/ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಸಾಮಾಜಿಕ ಎಂಜಿನಿಯರಿಂಗ್ ಮೂಲಕ ತನ್ನ ರಾಜಕೀಯ ತಂತ್ರಗಾರಿಕೆ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ದೇಶದ 22 ಕೋಟಿಗೂ ಹೆಚ್ಚು ದಲಿತ ಮತ್ತು ಹಿಂದುಳಿದ ಮತದಾರರನ್ನು ತಲುಪಲು ಬಿಜೆಪಿ ದಲಿತ ವಸಾಹತುಗಳನ್ನು ತಲುಪುತ್ತಿದೆ. ಬಿಜೆಪಿ ‘ಚಲೋ ದಲಿತ್ ಬಸ್ತಿ’ ಅಭಿಯಾನವನ್ನು ಸಹ ಪ್ರಾರಂಭಿಸಿದೆ, ಇದರ ಅಡಿಯಲ್ಲಿ ದಲಿತ ಬಸ್ತಿ ದಲಿತ ವಸಾಹತುಗಳಿಗೆ ಹೋಗಿ ಸಂಪರ್ಕ ಅಭಿಯಾನವನ್ನು ನಡೆಸುತ್ತಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಭೀಮ್ ಸಮಾವೇಶಗಳು ನಡೆಯಲಿವೆ…
ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ. ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಮೊಹಮ್ಮದ್ ಶಮಿ, ತಮ್ಮ ಹಿಮ್ಮಡಿಯ ಅಚಿಲ್ಲೆಸ್ ಸ್ನಾಯುವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದರು. https://kannadanewsnow.com/kannada/breaking-aap-announces-list-of-candidates-for-delhi-and-haryana-lok-sabha-seats/ ಶಸ್ತ್ರಚಿಕಿತ್ಸೆಯ ನಂತರ ಶಮಿ ಎಕ್ಸ್ ನಲ್ಲಿ ಬರೆದಿದ್ದಾರೆ, “ನಾನು ನನ್ನ ಅಚಿಲ್ಲೆಸ್ ಸ್ನಾಯುವಿನ ಹಿಮ್ಮಡಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇನೆ. ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಆದರೆ ನಾನು ನನ್ನ ಸ್ವಂತ ಕಾಲ ಮೇಲೆ ನಿಲ್ಲಲು ತುಂಬಾ ಎದುರು ನೋಡುತ್ತಿದ್ದೇನೆ ಅಂತಹೇಳಿದ್ದರು. ಇನ್ನೂ ಮೊಹಮ್ಮದ್ ಶಮಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ನೀವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ, ನಿಮಗೆ ಬಹಳ ಮುಖ್ಯವಾದ ಈ ಗಾಯವನ್ನು ನೀವು ಧೈರ್ಯದಿಂದ ಜಯಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ” ಎಂದು ಬರೆದಿದ್ದಾರೆ. https://kannadanewsnow.com/kannada/one-and-a-half-year-old-boy-dies-after-falling-into-drain-due-to-negligence-of-koppal-municipal-corporation-officials/ 33 ವರ್ಷದ ಮೊಹಮ್ಮದ್ ಶಮಿ ಎಡಗೈ ಅಚಿಲ್ಲೆಸ್ ಸ್ನಾಯುವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಇಂಡಿಯನ್ ಪ್ರೀಮಿಯರ್…
ನವದೆಹಲಿ: ಚಿಕ್ಕ ಮಕ್ಕಳು ತಮ್ಮ ಹೆತ್ತವರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗೆ ಮಾಡುವುದರಿಂದ ಅವರ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಕೆಲವೊಮ್ಮೆ ಕೆಲವು ಒತ್ತಾಯಗಳಿಂದಾಗಿ, ಮಕ್ಕಳು ತಮ್ಮ ಹೆತ್ತವರಿಂದ ದೂರವಿರಬೇಕಾದ ಅಂತಹ ಸಂದರ್ಭಗಳು ಸಹ ಉದ್ಭವಿಸುತ್ತವೆ. https://kannadanewsnow.com/kannada/breaking-aap-announces-list-of-candidates-for-delhi-and-haryana-lok-sabha-seats/ ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳು ತಮ್ಮ ಹೆತ್ತವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. 12 ವರ್ಷದ ಅರ್ಚಿತಾ ಮತ್ತು ಅರ್ಚನಾ ಇಬ್ಬರು ಸಹೋದರಿಯರನ್ನು ಹೊಂದಿರುವ ಜೈಪುರದಿಂದ ಇದೇ ರೀತಿಯ ಕಥೆ ಹೊರಹೊಮ್ಮಿದೆ. ಈ ಇಬ್ಬರು ಸಹೋದರಿಯರು ತಮ್ಮ ಹೆತ್ತವರೊಂದಿಗೆ ಅಧ್ಯಯನ ಮಾಡಲು ಬಯಸುತ್ತಾರೆ, ಇದಕ್ಕಾಗಿ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. https://kannadanewsnow.com/kannada/good-news-for-farmers-rs-2000-to-be-credited-to-your-account-tomorrow/ ಸಹೋದರಿಯರಾದ ಅರ್ಚನಾ ಮತ್ತು ಅರ್ಚಿತಾ ಇಬ್ಬರೂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಗೌರವಾನ್ವಿತ ಪ್ರಧಾನಿ ಮೋದಿಜಿ, ನನ್ನ ಹೆಸರು ಅರ್ಚಿತಾ ಮತ್ತು ನನ್ನ ಸಹೋದರಿಯ ಹೆಸರು ಅರ್ಚನಾ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ನಾವಿಬ್ಬರೂ 12 ವರ್ಷ ವಯಸ್ಸಿನವರು ಮತ್ತು ನಾವಿಬ್ಬರೂ ಬಂಡಿಕುಯಿಯ…
ಬೆಂಗಳೂರು: ಋತುಮತಿಯರಿಗೆ ಕೈಗೆಟಕುವ ದರದಲ್ಲಿ ʼಮುಟ್ಟಿನ ಕಪ್ʼ ಲಭ್ಯವಿದೆ. ಆನ್‌ಲೈನ್‌ನಲ್ಲಿಯೂ ಸುಲಭವಾಗಿ ದೊರಕುತ್ತದೆ. ಈಗ ಸಿಲಿಕಾನ್ ಮತ್ತು ರಬ್ಬರ್‌ನಿಂದ ತಯಾರಿಸಲಾದ ಕಪ್‌ಗಳು ಸಿಗುತ್ತವೆ.ವಯೋಮಾನ, ದೇಹಗಾತ್ರ, ಸ್ರಾವದ ಪ್ರಮಾಣಕ್ಕೆ ಅನುಗುಣವಾದ, ಬೇರೆ ಬೇರೆ ಆಕಾರ, ಗಾತ್ರಗಳ ಮುಟ್ಟಿನ ಕಪ್‌ಗಳೂ ಲಭ್ಯ. ಈಗಷ್ಟೇ ಋತುಮತಿಯಾದವರಿಗೆ, ಇನ್ನೂ ಗರ್ಭ ಧರಿಸದವರಿಗೆ, ಬಾಣಂತನ ಪೂರೈಸಿದವರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಹೀಗೆ ಅವರವರ ಅಗತ್ಯಕ್ಕೆ ತಕ್ಕಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಮುಟ್ಟಿನ ಕಪ್‌ಗಳೂ ಲಭ್ಯ ಇವೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರವೇ ಉಚಿತವಾಗಿ ಮುಟ್ಟಿನ ಕಪ್‌ಗಳನ್ನು ವಿತರಿಸುತ್ತಿದೆ. https://kannadanewsnow.com/kannada/interesting-facts-shouldnt-people-with-thyroid-eat-rice-what-do-the-experts-say/ https://kannadanewsnow.com/kannada/breaking-aap-announces-list-of-candidates-for-delhi-and-haryana-lok-sabha-seats/ https://kannadanewsnow.com/kannada/nasa-shares-amazing-image-of-earth-taken-from-space-from-himalayas-to-bahamas/ ಇನ್ನೂ ದೇಶದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವ 75 ಸಾವಿರ ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ನೀಡಲು 600 ಕಂಪನಿಗಳು ಮುಂದಾಗಿವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಇದಲ್ಲದೇ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮುಖದ ಮೇಲೆ ಭಂಗು ಬರಲು ಮುಖ್ಯ ಕಾರಣ ಹಾರ್ಮೋನ್ಸ್ ಹೆಚ್ಚು ಕಡಿಮೆಯಾದಾಗ. ಹೀಗೆ ಅಕಾಲಿಕವಾಗಿ ಮುಖದ ಮೇಲೆ ಭಂಗು ಬಂದರೆ ಏನು ಮಾಡಬೇಕೆಂದು ತಿಳಿಸಿಕೊಡುತ್ತೇವೆ. ಭಂಗಿನ ಕಲೆಗೆ ನಿವಾರಣಗೆ ಕೆಲ ಸುಲಭವಾದ ಮನೆಮದ್ದು ಇದೆ. ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಮುಖದ ಭಂಗಿನ ನಿವಾರಣೆಗೆ ಬೇಕಾಗು ಪದಾರ್ಥಗಳು ಮತ್ತು ಅದರ ಗುಣಗಳ ವಿವರ ಹೀಗಿದೆ. ಆಲುಗಡ್ಡೆ: ಭಂಗಿನ ನಿವಾರಣೆಗೆ ಆಲುಗಡ್ಡೆ ಸೂಕ್ತ ಪರಿಹಾರ ನೀಡುತ್ತದೆ. ಆಲುಗಡ್ಡೆಯಲ್ಲಿ ಬ್ಲೇಮಿಷಿಂಗ್ ಎಂಬ ಗುಣವಿದ್ದು ಇದು ಬ್ಲೀಚಿಂಗ್ ರೂಪದಲ್ಲಿ ಕೆಲಸ ಮಾಡಿ ಬಣ್ಣ ತಿಳಿಗೊಳಿಸುವ ಕೆಲಸ ಮಾಡುತ್ತದೆ. ಬಣ್ಣವನ್ನು ಬದಲಾಯಿಸುವ ಗುಣ ಆಲುಗಡ್ಡೆಯಲ್ಲಿದೆ. ಕಸ್ತೂರಿ ಅರಿಶಿನ ಪುಡಿ: ಹೆಣ್ಣುಮಕ್ಕಳ ಚರ್ಮಕ್ಕೆ ಕಸ್ತೂರಿ ಅರಿಶಿಣ ಸೂಕ್ತವಾಗಿ ಒಗ್ಗುತ್ತದೆ. ಹೆಣ್ಣುಮಕ್ಕಳಿಗೆ ಪ್ರಾಯದಲ್ಲಿ ಬರುವ ಮೊಡವೆ ಕಲೆಗಳ ನಿವಾರಣೆಗೆ ಬಳಸಬಹುದು. ಚರ್ಮಕ್ಕೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮೃದುತ್ವವನ್ನೂ ಹೆಚ್ಚಿಸುತ್ತದೆ. ಕಡೆಲೆಹಿಟ್ಟು: ಇದು ಆಂಟಿ ಬ್ಯಾಕ್ಟಿರಿಯಲ್ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮದ ಕಾಂತಿ ಹೆಚ್ಚಿಸುತ್ತದೆ.…
ಬೆಂಗಳೂರು: ಪಂಚಗ್ಯಾರಂಟಿಗಳನ್ನು ಜಾರಿ ಮಾಡುವ ಆರ್ಥಿಕ ಹೊರೆಯ ನಡುವೆಯೂ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. https://kannadanewsnow.com/kannada/note-dont-consume-apple-seeds-for-this-reason/ https://kannadanewsnow.com/kannada/kpsc-and-bmtc-invites-applications-for-2884-vacancies-heres-the-complete-information/ ಕೇಂದ್ರ ಸರ್ಕಾರ ನಿರ್ಧರಿಸಿದಂತೆ ತುಟ್ಟಿಭತ್ಯೆಯನ್ನು ಯಾವುದೇ ವಿಳಂಬವಿಲ್ಲದೇ ರಾಜ್ಯದಲ್ಲಿ ನೀಡಲಾಗುತ್ತಿದೆ. ಎನ್ ಪಿ ಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಬಗ್ಗೆಯೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆಯೂ ಶೀಘ್ರದಲ್ಲಿ ತೀರ್ಮಾನಿಸಲಾಗುವುದು ಎಂದ ಮುಖ್ಯಮಂತ್ರಿಗಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯುತ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವ ಸರ್ಕಾರಿ ನೌಕರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಅಭಿವೃದ್ಧಿಯಲ್ಲಿ ಬಾಗಿಯಾಗಬೇಕು : ಕರ್ನಾಟಕದಲ್ಲಿ 7.50 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅದರಲ್ಲಿ 5.90 ಲಕ್ಷ ಜನ ಹಾಲಿ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದಿನಕ್ಕೊಂದು ಸೇಬಿನ ಸೇವನೆ ವೈದ್ಯರ ಭೇಟಿಯಿಂದ ದೂರವಿಸುತ್ತದೆ ಎಂಬ ಹೆಳೆಯ ಮಾತಿದೆ. ಅದು ನಿಜ ಕೂಡ ಹೌದು. ಸೇಬು ದೇಹದ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಸೇಬು ತಿನ್ನುವಾಗ ಅಪ್ಪಿತಪ್ಪಿಯೂ ಅದರ ಬೀಜವನ್ನು ಸೇವಿಸಬಾರದಂತೆ. ಹೌದು. ಸೇಬಿನ ಬೀಜ ಸೇವೆ ಕೆಲವೊಮ್ಮ ಜೀವಕ್ಕೆ ಕುತ್ತು ತರಬಹುದಂತೆ. ಇದರ ಬೀಜದಲ್ಲಿ ವಿಷಕಾರಿ ಅಂಶ ಸೂಸುವ ಶಕ್ತಿ ಇದೆ ಎಂದು ತಜ್ಞರು ಹೇಳುತ್ತಾರೆ. ಸೇಬಿನ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ಅಂಶವು ಮಾನವನ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್ ಉತ್ಪತ್ತಿಯಾಗುವ ಸಾಧ್ಯತೆ ಇದೆ ಅಂತೆ. ಸೈನೈಡ್ ಜೀವಕ್ಕೆ ಮಾರಣಾಂತಿಕ ಎಂಬ ಅಂಶ ಎಲ್ಲರಿಗೂ ಗೊತ್ತೇ ಇದೆ. ಸೈನೈಡ್ ಸಾವು ತರಬಲ್ಲದು ಎಂದು ತಜ್ಞರು ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ. ಸೈನೈಡ್ ಎಷ್ಟು ಅಪಾಯಕಾರಿ ಎಂದರೆ ಇದು ದೇಹಕ್ಕೆ ಆಕ್ಸಿಜನ್ ಪೂರೈಕೆಯನ್ನು ನಿಲ್ಲಿಸಿಬಿಡುತ್ತದೆ. ಇದರಿಂದಾಗ ಜೀವಕ್ಕೆ ಅಪಾಯ ಉಂಟಾಗುತ್ತದೆ. ಹೀಗೆ ಸೇಬು ಸೇವನೆ ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಸೇಬಿನಿಂದ…
JOB ALERT : ಕೆಪಿಎಸ್‌ಸಿ & ಬಿಎಂಟಿಸಿಯಿಂದ ಒಟ್ಟು 2,884 ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ!!
*ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) 2023-245 ಸಾಲಿನ `ಗೆಜೆಟೆಡ್ ಪ್ರೊಬೇಷನರಿ’ 384 (ಕೆಎಎಸ್) ಹುದ್ದೆಗಳಿಗೆ ಆಯೋಗ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 4 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಪ್ರಾರಂಭವಾಗಲಿದೆ. https://kannadanewsnow.com/kannada/gaganyaan-these-are-the-indigenous-astronauts-who-will-fly-from-india/ ಏಪ್ರಿಲ್ 3 ರಂದು ಅರ್ಜಿ ಸಲ್ಲಿಕೆ ಕೊನೆ ದಿನವಾಗಿದೆ. ಅರ್ಜಿ ಸಲ್ಲಿಸಲು ಶುಲ್ಕ ಸಾಮಾನ್ಯ ವರ್ಗದವರಿಗೆ 600 ರೂ.: ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ 300 ರೂ.; ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ.; ಎಸ್ಸಿ, ಎಸ್ಟಿ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಮೇ 5 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ.ಕ) ಸೇರಿದಂತೆ ಒಟ್ಟು 384 ಹುದ್ದೆಗಳಲ್ಲಿ ಗ್ರೂಪ್-ಎ’ 159, ಗ್ರೂಪ್-‘ಬಿ’ 225 ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದ ಒಟ್ಟು 77 ಹುದ್ದೆಗಳಿವೆ. ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಕನಿಷ್ಠ 21 ವರ್ಷ…