Subscribe to Updates
Get the latest creative news from FooBar about art, design and business.
Author: kannadanewsnow07
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೊಸರು ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಮೊಸರಿನಲ್ಲಿ ಅನೇಕ ಬ್ಯೂಟಿ ಟಿಪ್ಸ್ ಹಾಗು ಬ್ಯೂಟಿ ಸೀಕ್ರೇಟ್‌ಗಳಿವೆ. ಸೌಂಧರ್ಯವರ್ಧಕವಾಗಿ ಮೊಸರಿನ ಬಳಕೆ ಅಜ್ಜಿ ಕಾಲದಿಂದಲೂ ಇದೆ. ಹೆಚ್ಚು ಮೊಸರು ಸೇವನೆ ಮಾಡಿದರೆ ಚರ್ಮ ಹೊಳಯುತ್ತದೆ. ಇದರಲ್ಲಿರುವ ಉತ್ತಮ ಪೋಷಕಾಂಶಗಳು ಚರ್ಮದ ಆರೋಗ್ಯ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಮೊಸರಿನ ಸೇವನೆ ಜೊತೆ ಮೊಸರಿನ ಫೇಸ್ ಪ್ಯಾಕ್ ಬಳಕೆ ಹಾಗು ಅದರ ಉಪಯೋಗಗಳನ್ನು ಮುಂದೆ ತಿಳಿದುಕೊಳ್ಳೋಣ. ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ, ಲ್ಯಾಕ್ಟಿಕ್ ಆಮ್ಲ ಹೇರಳವಾಗಿದೆ ಹಾಗಾಗಿ ಇದನ್ನು ಸೌಂದರ್ಯವರ್ಧಕಗಳಲ್ಲಿ ಬಳಸಲು ತಜ್ಞರು ಸಲಹೆ ನೀಡುತ್ತಾರೆ ಈ ಎಲ್ಲ ಅಂಶಗಳು ಚರ್ಮಕ್ಕೆ ಹೊಳಪನ್ನು ನೀಡುತ್ತದೆ, ಸುಕ್ಕು, ಟ್ಯಾನ್ ಸ್ಕಿನ್ ನಿವಾರಣೆ ಮಾಡುತ್ತದೆ. ಮೊಡವೆಗಳಿಗೆ ರಾಮಬಾಣ ಇದಾಗಿದೆ. ಬ್ಯೂಟಿ ಪಾರ್ಲರ್‌ಗಳಲ್ಲಿ ಮೊಸರನ್ನು ಮಾಯಿಶ್ಚರೈಸರ್ ಆಗಿ ಹಾಗು ಕ್ಲೈಂಜರ್ ಆಗಿ ಬಳಸುತ್ತಾರೆ. ಮೊಸರಿನಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕ ತುಂಬಾ ಪೂರಕವಾಗಿವೆ. ಇದರಲ್ಲಿರುವ ಸತು, ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಬಿ ಚರ್ಮಕ್ಕೆ ಯವ್ವನ ನೀಡುತ್ತದೆ. ಹಾಗಾಗಿ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕೊರೊನಾ ಕೇಸ್ ಜಾಸ್ತಿಯಾಗ್ತಾ ಇದೆ ನಿಜ. ಆದರೆ ಇದರ ನಡುವೆ ಹವಾಮಾನದ ಬದಲಾವಣೆಯಿಂಗಾಗಿ ಸಾಮಾನ್ಯವಾಗಿ ಎಲ್ಲಲ್ಲಿ ಕೆಲವರಿಗೆ ಶೀತ ಕೆಮ್ಮು ಹಾಗು ಲೈಟ್ ಆಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗೆ ಆದರೆ ಸಾಕು ಎಲ್ಲರೂ ಭಯ ಬೀಳುತ್ತಾರೆ. ತಮಗೆ ಕೊರೊನಾ ಒಕ್ಕರಿಸಿತು ಎಂದು ಭಯ ಪಡುತ್ತಿದ್ದಾರೆ. ಆದರೆ ವೈದ್ಯರು ಹೇಳುವ ಪ್ರಕಾರ ಇದು ಸಾಮಾನ್ಯವಾಗಿ ಬಂದು ಹೋಗುವ ವೈರಲ್ ಫೀವರ್ ಎದು ಹೇಳುತ್ತಿದ್ದಾರೆ. ಹೀಗೆ ವೈರಲ್ ಫೀವರ್ ಬಂದರೆ ಈ ಕೆಳಗಿನ ಮನೆಮದ್ದನನ್ನು ಟ್ರೈ ಮಾಡಿ. ಇದರಿಂದ ನಿಮ್ಮ ಕಾಯಿಲೆ ವಾಸಿಯಾಗದೇ ಇದ್ದಾಗ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ. ಶುಂಠಿ: ಶುಂಠಿ ಚಹಾ ಸೇವಿಸಿ. ಒಂದು ಲೋಟ ನೀರು ಕಾಯಿಸಿ ಅದಕ್ಕೆ ಒಂದು ಚೂರಷ್ಟು ಶುಂಠಿ ಹಾಕಿ ಮತ್ತಷ್ಟು ಕುದಿಸಿ. ಇದನ್ನು ಸೋಸಿಕೊಂಡು ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ಮತ್ತು ಶೀತ ಬೇಗ ನಿವಾರಣೆಯಾಗುತ್ತದೆ. ಜೇನುತುಪ್ಪ: ಕೆಮ್ಮು ಹೆಚ್ಚಾಗಿದ್ದರೆ ನೀರಿಗೆ ತಿಳಸಿ ಪುದಿನಾ ಎಲೆ ಹಾಕಿ, ಬೇಕಿದ್ದರೆ ಇನ್ನು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಮಾನ್ಯವಾಗ ದಾಂಪತ್ಯ ಜೀವನ ಹೊಸದರಲ್ಲಿ ಇದ್ದ ಹಾಗೆ ಕಾಲ ಕಳೆದ ಹಾಗೆ ಇರುವುದಿಲ್ಲ. ಬರಬರುತ್ತಾ ದಾಂಪತ್ಯದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ. ಹಾಗೆಯೇ ಲೈಂಗಿಕ ಆಸಕ್ತಿಯಲ್ಲೂ ಕೂಡ ಅಷ್ಟೇ, ಮೊದಲಿದ್ದ ಆಸಕ್ತಿ ದಿನಕಳೆದಂತೆ ಇರುವುದಿಲ್ಲ. ಆ ಕಾರಣಗಳು ಈ ಮುಂದಿನಂತೆ ಇರಬಹುದು. ಲೈಂಗಿಕ ಆಸಕ್ತಿ ಕಡಿಮೆಯಾಗಲು ಮನಸ್ಸಿನ ಅಸಮಧಾವನೂ ಒಂದು ಕಾರಣವಾಗಬಹುದು. ಇದರ ಹಿಂದೆ ಕೆಲ ಕಾರಣಗಳಿರಬಹುದು. ಮೊದಲು ಆ ವಿಷಯಗಳನ್ನು ತಿಳಿದುಕೊಳ್ಳಿ. ನಿಮ್ಮ ಸಂಗಾತಿ ಲೈಂಗಿಕವಾಗಿ ಆಸಕ್ತಿ ತೋರಿಸುತ್ತಿಲ್ಲ ಎಂತಾದರೆ ಅದಕ್ಕೆ ಕಾರಣ ಹುಡುಕಿ. ಒಬ್ಬರಿಗೊಬ್ಬರು ಕೂತು ಮಾತನಾಡಿ. ಎಲ್ಲರೂ ಒಂದೇ ರೀತಿಯಾಗಿ ಲೈಂಗಿಕ ಆಸಕ್ತಿ ಹೊಂದಿರುವುದಿಲ್ಲ. ಎಲ್ಲ ಸಮಯದಲ್ಲೂ ಒಂದೇ ಬಗೆಯ ಲೈಂಗಿಕ ಆಸಕ್ತಿ ಹೊಂದಿರಲು ತುಸು ಕಷ್ಟ. ಕೆಲಸದ ಒತ್ತಡ. ಇನ್ನಾವುದೋ ಕಾರಣವಾಗಿರಬಹುದು. ಹಾಗಾಗಿ ನಿಮ್ಮ ಸಂಗಾತಿಯೊಂದಿಗೆ ಇದರ ಬಗ್ಗೆ ಮುಕ್ತವಾಗಿ ಚರ್ಚಿಸಿ. ಒತ್ತಾಯಪೂರ್ವಕವಾದ ಲೈಂಗಿಕ ಸಂಪರ್ಕ ಒಳ್ಳೆಯದಲ್ಲ. ಕೆಲವೊಮ್ಮೆ ಮಹಿಳೆಯರಿಗೆ ಲೈಂಗಿಕತೆಯ ಮೇಲೆ ಆಸಕ್ತಿ ಕುಗ್ಗುತ್ತಾ ಹೋಗುತ್ತದೆ. ಕಾರಣ ಆಕೆ ಮನೆ ಮತ್ತು ಆಫೀಸ್ ಎರಡನ್ನೂ…
ಅದೆಷ್ಟೋ ಜನ ತಮ್ಮ ದಿನವನ್ನು ಮೊಬೈಲ್ ಆನ್ ಮಾಡುವ ಮೂಲಕವೇ ಶುರು ಮಾಡುತ್ತಾರೆ. ಬೆಳಗ್ಗೆ ಎಚ್ಚರವಾದ ತಕ್ಷಣ ಮೊಬೈಲ್ ಹುಡುಕಾಟ ಶುರು. ಆದರೆ ಇದು ಎಷ್ಟರಮಟ್ಟಿಗೆ ಸರಿ ತಪ್ಪು ಎಂದು ಮುಂದೆ ತಿಳಿಯೋಣ. ಮೊಬೈಲ್ ಒಂದು ಅದ್ಭುತ ಬಳಕೆ. ಅದೆಷ್ಟೋ ಕೆಲಸ, ವ್ಯವಹಾರಗಳು ಕೂತಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಆದರೆ ಇದರ ಅತಿಯಾದ ಬಳಕೆ ಮತ್ತು ಇದರ ಮೇಲಿನ ಅತಿಯಾದ ಅವಲಂಬನೆ ನಿಮ್ಮ ದೇಹದ ಹಾಗು ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬೆಳಗ್ಗೆ ನಿದ್ರೆಯಿಂದ ಎದ್ದು ತಕ್ಷಣ ನಿಮ್ಮ ಮನಸ್ಸು ಮೆದುಳಿ ಸಂಪೂರ್ಣವಾಗಿ ವಿಶ್ರಾಂಗೊಂಡಿರುತ್ತದೆ. ಹಾಗು ನಿಮ್ಮ ಮೆದುಳಿಗೆ ಒಳ್ಳೆಯ ಕೆಲಸ ಅಥವಾ ಒಳ್ಳೆಯ ಆಲೋಚನೆಗಳನ್ನು ಕೊಡಿ. ಅದು ಬಿಟ್ಟು ಫೋನ್ ಹಿಡಿದರೆ ಫೋನ್‌ನಲ್ಲಿ ಬಂದ ಎಲ್ಲಾ ಆಲೋಚನೆಗಳು ನಿಮ್ಮ ಮೆದುಳಿಗೆ ಎದ್ದ ಕೂಡಲೇ ಒತ್ತಡವನ್ನುಂಟು ಮಾಡುತ್ತದೆ. ಇನ್ನು ಕೆಲವರು ಬೆಳಗ್ಗೆ ನ್ಯೂಸ್‌ಗಳನ್ನು ಮೊಬೈಲ್‌ನಲ್ಲಿಯೇ ಸ್ಕ್ರಾಲ್ ಮಾಡಿ ಓದಲು ಶುರು ಮಾಡುತ್ತಾರೆ. ಹೀಗೆ ಎದ್ದ ತಕ್ಷಣ ಮೊಬೈಲ್ ಸ್ಕ್ರಾಲ್…
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ ಮೊದಲ ದಿನದಿಂದ ಹಲವಾರು ಹೊಸ ನಿಯಮಗಳು ಜಾರಿಗೆ ಬರಲಿವೆ, ಜಿಎಸ್ಟಿ ನಿಯಮಗಳಲ್ಲಿ ಬದಲಾವಣೆಗಳು: ಮಾರ್ಚ್ 1 ರಿಂದ, 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳು ಎಲ್ಲಾ ಬಿ 2 ಬಿ ವಹಿವಾಟುಗಳಿಗೆ ಇ-ಇನ್ವಾಯ್ಸ್ ವಿವರಗಳನ್ನು ಸೇರಿಸದೆ ಇ-ವೇ ಬಿಲ್ ರಚಿಸಲು ಸಾಧ್ಯವಾಗುವುದಿಲ್ಲ. ಸರಕು ಮತ್ತು ಸೇವಾ ತೆರಿಗೆ ಆಡಳಿತದ ಅಡಿಯಲ್ಲಿ, ₹ 50,000 ಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳ ಅಂತರ-ರಾಜ್ಯ ಸಾಗಣೆಗೆ ಇ-ವೇ ಬಿಲ್ ಗಳು ಬೇಕಾಗುತ್ತವೆ. ಮಾರ್ಚ್ ತಿಂಗಳಲ್ಲಿ 12 ದಿನಗಳ ಕಾಲ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇವುಗಳಲ್ಲಿ ಶನಿವಾರ ಮತ್ತು ಭಾನುವಾರದ ಸಾಪ್ತಾಹಿಕ ರಜೆಗಳು ಸೇರಿವೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 11 ಮತ್ತು 25 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ – ಎರಡನೇ ಮತ್ತು ನಾಲ್ಕನೇ ಶನಿವಾರ. ಇದಲ್ಲದೆ, ಮಾರ್ಚ್ 5, 12, 19 ಮತ್ತು 26 ಭಾನುವಾರಗಳು ಸೇರಿದೆ. ಫಾಸ್ಟ್ಟ್ಯಾಗ್ಗಳನ್ನು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಿವಿ ನೋವು ಒಮ್ಮೆಯಾದರೂ ನಿಮಗೆ ಬಂದು ಹೋಗಿರುತ್ತದೆ. ಸಾಮಾನ್ಯವಾಗಿ ಈ ನೋವು ಹೆಚ್ಚು ರಾತ್ರಿಹೊತ್ತು ಕಾಟ ಕೊಡುತ್ತದೆ. ಕಿವಿ ಸ್ವಚ್ಛವಾಗಿ ಇಟ್ಟುಕೊಳ್ಳದೇ ಇದ್ದಾಗ, ಕಿವಿಯಲ್ಲಿ ನೀರು ತುಂಬಿಕೊಂಡಾಗ, ಅಥವಾ ಹೊರಗಿನ ಧೂಳು. ಹೊಗೆ ಸೇರಿಕೊಂಡು ಕಿವಿಯಲ್ಲಿ ಬ್ಯಾಕ್ಟೀರಿಯ ಉಂಟಾಗಿ ಅಥವಾ ಕೆಲವೊಮ್ಮೆ ಫಂಗಸ್ ಉಂಟಾಗಿ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿಗೆ ಸೊಂಕು ಉಂಟಾಗಿ ನಿಮಗೆ ಹೆಚ್ಚು ನೋವು ಕೊಟ್ಟಾಗೆ ಈ ಕೆಳಗಿನ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ. ನಾವು ಹೇಳುವ ಮನೆಮದ್ದನ್ನು ಟ್ರೈ ಮಾಡಿದ ಮೇಲೆಯೂ ನಿಮಗೆ ಇನ್ನೂ ಹೆಚ್ಚು ಕಿವಿ ನೋವು ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಸಾಸಿವೆ ಎಣ್ಣೆ: ಕೆವೊಮ್ಮೆ ಸಾಸಿವೆ ಎಣ್ಣೆ ಅಷ್ಟಾಗಿ ಲಭ್ಯ ಇರುವುದಿಲ್ಲ. ಒಂದು ವೇಳೆ ಸಾಸಿವೆ ಎಣ್ಣೆ ನಿಮ್ಮಗೆ ಲಭ್ಯವಿದ್ದರೆ, ನಿಮಗೆ ಕಿವಿ ನೋವು ಕಾಣಿಸಿಕೊಂಡಾಗ ಈ ಸಾಸಿವೆ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ಎರಡು ಹನಿ ನೋವಿದ್ದ ಕಿವಿ ಹೊಳ್ಳಕ್ಕೆ ಹಾಕಿದರೆ ಕಿವಿ ನೋವು…
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023- 2024 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಇಂದಿನಿಂದ ಆರಂಭವಾಗಲಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಖಜಾನೆಗಳಿಂದ ಪ್ರಶ್ನೆಪತ್ರಿಕೆ ಸ್ವೀಕರಿಸಿ, ಅವುಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮುಖ್ಯ ಅಧೀಕ್ಷಕ ನೇಮಿಸಲಾಗುವುದು. ಕೇಂದ್ರದ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಸೇರಿ ವಿದ್ಯನ್ಮಾನ ಉಪಕರ ಕಡ್ಡಾಯ ನಿಷೇಧಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕು. ವಿದ್ಯಾರ್ಥಿಗಳಿಗೆ ‘ಪ್ರವೇಶ ಪತ್ರ’ ತೋರಿಸಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇದಲ್ಲದೇ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆ, ಬ್ಯಾಗ್ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸುವುದು, ಮತ್ತಿತರ ಅಗತ್ಯ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದಕ್ಷಣ ಭಾರತದಲ್ಲಿ ಎಳನೀರಿನ ಉತ್ಪಾದನೆ ಹಾಗು ಎಳನೀರಿನ ಸೇವನೆ ಅಧಿಕ. ಇದು ನೈರ್ಗಿಕ ಶಕ್ತಿದಾಯಕವಾದ ಪಾನೀಯ. ಅಂದರೆ ನ್ಯಾಚ್ಯುರಲ್ ಎನರ್ಜಿ ಡ್ರಿಂಕ್. ಇದರ ಸೇವನೆಯಿಂದಾಗಿ ಆರೋಗ್ಯಕ್ಕೆ ಅನೇಕ ಲಾಭಗಳು ಇವೆ. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು ಇದರ ಸೇವನೆಯ ತಕ್ಷಣವೇ ದೇಹಕ್ಕೆ ನವಚೈತನ್ಯ ಉಂಟಾಗುತ್ತದೆ. ದೇಹಕ್ಕೆ ನಿಶಕ್ತಿ ಉಂಟಾದರೆ ಇದರ ಸೇವನೆಯಿಂದ ದೇಹ ಕೂಡಲೇ ಶಕ್ತಿಯುತವಾಗಿ ಚಟುವಟಿಕೆಯಿಂದಿರಬಹುದು. ಬಿಸಿಲಿಗೆ ಬಳಲಿದವರಿಗ ಎಳನೀರು ಜೀವಾಮೃತ ಎಂದರೆ ತಪ್ಪಿಲ್ಲ. ಎಳನೀರು ಸೇವನೆ ದೇಹದ ಒಳಗಲ್ಲ. ದೇಹದ ಹೊರಭಾಗಗಳಾದ ಚರ್ಮ, ಕೂದಲಿಗೂ ಉತ್ತಮ ಆರೈಕೆ ನೀಡುತ್ತದೆ. ಹಾಗು ಇದರ ಸೇವನೆಯಿಂದ ಕೆಲಸದ ಹಾಗು ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ. ಗರ್ಭಿಣಿಯರು ನಿಯಮಿತವಾಗಿ ಎಳನೀರು ಸೇವಿಸಿದರೆ ತಾಯಿ ಮಗು ಇಬ್ಬರ ಆರೋಗ್ಯ ವೃದ್ಧಿಯಾಗುತ್ತದೆ. ಇದರಲ್ಲಿ ಒಮೆಗಾ 3 ಅಂಶವಿದ್ದು, ಇದು ಮಗುವಿನ ಮೆದುಳಿನ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಹಾಗಾಗಿ ವೈದ್ಯರು ಗರ್ಭಿಣಿಯರಿಗೆ ನಿಯಮಿತವಾಗಿ ಎಳನೀರು ಸೇವಿಸಲು ಹೇಳುತ್ತಾರೆ. ಎಳನೀರು ಸೇವನೆ ಉತ್ತಮ ಜೀರ್ಣಕ್ರಿಯೆಗೆ ತುಂಬಾ ಪೂರಕವಾಗಿದೆ. ಇದರಲ್ಲಿ ಕ್ಯಾಟಲೇಸ್,…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಪೈನಾಪಲ್ ಅನ್ನು ಊಷ್ಣ ಅನಾನಸ್ ಎಂತಲೂ ಕರೆಯುತ್ತಾರೆ. ಹುಳಿ ಸಿಹಿ ಅಂಶವಿರುವ ಈ ಹಣ್ಣನ್ನು ಇಷ್ಟಪಟ್ಟು ತುನ್ನುವವರ ಸಂಖ್ಯೆ ಕಡಿಮೆ ಎನ್ನಬಹುದು. ಆದರೆ ಇದರಲ್ಲಿರುವ ಪ್ರೋಟೀನ್, ಪೋಷಕಾಂಶಗಳು ಮುಖದ ಮೇಲಿನ ಮೊಡವೆಯಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಡಲೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹೆಚ್ಚು ಹುಳಿ ಅಂಶವಿರುವ ಈ ಅನಾನಸ್ ಹಣ್ಣಿನಲ್ಲಿ ವಿಟಾಮಿನ್ ಎ,ಬಿ,ಸಿ, ಮ್ಯಾಗ್ನೀಸ್, ಪೊಟ್ಯಾಶಿಯಂ, ಸತು ಹಾಗು ದೇಹಕ್ಕೆ ಬೇಕಾದ ಅತ್ಯಗತ್ಯ ಖನಿಜಾಂಶಗಳು ಇದರಲ್ಲಿದೆ. ಅನಾನಸ್ ಅಥವಾ ಪೈನಾಪಲ್‌ನ ಮತ್ತೊಂದು ವಿಶೇಷತೆ ಏನೆಂದರೆ ಇದು ಜೋರೋ ಕೊಲೆಸ್ಟ್ರಾಲ್ ಹೊಂದಿದೆ. ಇದು ನಾಲಿಗೆಗೂ ರುಚಿ ಹಾಗು ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪೈನಾಪಲ್ ತಿನ್ನುವುದರಿಂದ ಮಾನಸಿಕ ಒತ್ತಡ ನಿವಾಣೆಯಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಸಮೃದ್ಧವಾದ ಆಂಟಿಆಕ್ಸಿಡೆಂಟ್‌ಗಳು ಒತ್ತಡವನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಫ್ಲೇವನಾಯ್ಡ್ಸ್ ಹಾಗು ಫೇನೋಲಿಕ್ ಆಸಿಡ್‌ಗಳು ಇದ್ದು ಇದರ ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘಕಾಲದ ಉತ್ತಮ ಪರಿಣಾಮ ಬೀರಲಿದೆ. ನಿರಂತವಾಗಿ ಹಾಗು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಆಲುಗಡ್ಡೆ ಜಾತಿಗೆ ಸೇರಿಸ ಸಿಹಿ ಗೆಣಸನ್ನು ಸಿಹಿ ಆಲುಗಡ್ಡೆ ಎಂತಲೂ ಕರೆಯುತ್ತಾರೆ. ಸಂಕ್ರಾತಿಯ ಹಬ್ಬದ ಸಮಯದಲ್ಲಿ ಸಿಹಿ ಗೆಣಸು ಹೇರಳವಾಗಿ ಸಿಗುತ್ತವೆ. ಈ ಸಮಯದಲ್ಲಿ ಗೆಣಸಿನ ಬಗೆ ಬಗೆಯ ಅಡುಗೆ ಮಾಡಿ ಸವಿದಿರುತ್ತೀರಿ ಆದರೆ ಚಳಿಗಾಲದಲ್ಲಿ ನೀವು ಸೇವಿಸುವ ಈ ಸಿಹಿ ಗೆಣಸಿನ ಪ್ರಯೋಜನೆಗಳು ಅನೇಕ ಅನ್ನೋ ವಿಷಯವೂ ನಿಮಗೆ ತಿಳಿದಿರಲಿ. ಸಿಹಿ ಗೆಣಸು ಅನೇಕ ಪೋಷಕಾಂಶಗಳನ್ನು ಹೊಂದಿದ್ದು. ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಿಹಿ ಗೆಣಸಿನಲ್ಲಿ ಫೈಬರ್, ಅನೇಕ ಜೀವಸತ್ವಗಳು, ಮತ್ತು ಖನಿಜಗಳು ಹೇರಳವಾಗಿವೆ. ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಸಹ ಇದರಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಇಷ್ಟೆಲ್ಲಾ ಪೋಷಕಾಂಶ ಇರುವ ಸಿಹಿ ಗೆಣಸಿನ ಸೇವನೆ ಮಾಡಿದರೆ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಯಸ್ಸಾದವರಿಗೆ ಸಿಹಿ ಗೆಣಸಿನ ಸೇವನೆ ತುಂಬಾ ಪ್ರಯೋಜನಕಾರಿ. ಇದು ವಯಸ್ಕರ ಹೃದ್ರೋಗ ಸಮಸ್ಯೆಗಳನ್ನು ತಡೆಹಿಡಿಯುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯ ಕಾಪಾಡುತ್ತದೆ. ಆಂಟಿ ಆಕ್ಸಿಡೆಂಟ್‌ಯುಕ್ತ ಆಹಾರ ಸೇವನೆ ನಿಮ್ಮ ಆರೋಗ್ಯಕ್ಕೆ ತುಂಬಾ ಉಪಕಾರಿಯಾಗಿದೆ. ಗೆಣಸಿನಲ್ಲಿರುವ…