Subscribe to Updates
Get the latest creative news from FooBar about art, design and business.
Author: kannadanewsnow07
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಾಂತಿಯುತ ಚರ್ಮ ಪಡೆಯಲು ಬರೀ ಫೇಸ್ ಪ್ಯಾಕ್, ಮಸಾಜ್‌ಗಳನ್ನು ಮಾಡಿಕೊಂಡರೆ ಸಾಲದು. ದೇಹಕ್ಕೆ ಕೆಲ ಪೋಷಕಾಂಶಗಳು ಅಗತ್ಯ. ದೇಹದ ಒಳಗಿನಿಂದ ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಬೇಕು. ಹಾಗಿದ್ದರೆ ಮಾತ್ರ ತ್ವಚೆ ದೀರ್ಘ ಕಾಲದವರೆಗೂ ಆರೋಗ್ಯವಾಗಿರುತ್ತದೆ. ಹೆಚ್ಚು ಹೆಚ್ಚು ನೀರು ಸೇವಿಸಿದರೆ ತ್ವಚೆ ತುಂಬಾ ಆರೋಗ್ಯವಾಗಿರುತ್ತದೆ. ದಿನವೂ ಸುಮಾರು ಐದು ಲೀಟರ್ ಕುಡಿಯಿರಿ. ನೀರು ಹೆಚ್ಚು ಸೇವಿಸಿದರೆ ತ್ವಚೆಯನ್ನು ಸದಾ ಮಾಯಿಶ್ಚರೈಸ್‌ನಲ್ಲಿರಿಸುತ್ತದೆ. ಇನ್ನು ಹೆಚ್ಚು ನೀರಿನ ಸೇವನೆ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ ಈ ಮೂಲಕ ಮೊಡವೆಗಳು ಆಗದಂತೆ ನೋಡಿಕೊಳ್ಳುತ್ತದೆ. ನೀರಿನ ಹೆಚ್ಚು ಸೇವನೆ ದೇಹವನ್ನು ಸದಾ ತೇವಾಂಶದಲ್ಲಿರಿಸುತ್ತದೆ. ಬದಾಮಿ ಸೇವಿಸಿದರೆ ಚರ್ಮ ಹೊಳೆಯುವ ರೂಪ ಪಡೆದುಕೊಳ್ಳುತದೆ. ಇದರಲ್ಲಿ ಒಮೆಗಾ3 ಅಂಶವಿದ್ದು ಚರ್ಮಕ್ಕೆ ಬೇಕಾದ ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲ ನೀಡುತ್ತದೆ. ನಿತ್ಯವೂ ನೆನಸಿಟ್ಟ ಎರಡು ಬದಾಮಿ ಸೇವನೆ ತ್ವಚೆಯನ್ನು ಮೃದುವಾಗಿಸುತ್ತದೆ. ಎಲ್ಲ ಬಗೆಯ ಹಸಿ ತರಕಾರಿ ಸೇವನೆ ದೀರ್ಘ ಕಾಲದವರೆಗೂ ದೇಹ ಹಾಗು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯವೂ ಒಂದಲ್ಲ ಒಂದು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮುಖದ ಅಂದ ಹೆಚ್ಚಿಸಿಕೊಳ್ಳಲು ಫೇಸ್ ಪ್ಯಾಕ್ ತುಂಬಾ ಉಪಯುಕ್ತ. ಆದರೆ ನೀವು ಹಾಕುವ ಫೇಸ್ ಪ್ಯಾಕ್ ಆದಷ್ಟು ಕೆಮಿಕಲ್ ಫ್ರೀ ಆಗಿರಲಿ. ಹಾಗು ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನೇ ಬಳಿಸಿ ಫೇಸ್ ಪ್ಯಾಕ್ ಮಾಡಿಕೊಂಡರೆ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ. ಮತ್ತು ನಿಮ್ಮ ತ್ವಚೆ ದೀರ್ಘಕಾಲದ ವರೆಗೂ ಆರೋಗ್ಯವಾಗಿರಿಸುತ್ತದೆ. ನಾವಿಂದು ಹೇಳಿಕೊಡುವ ಹೊಸ ಫೇಸ್ ಪ್ಯಾಕ್ ಎಲ್ಲಾ ವಯಸ್ಕರೂ ಹಾಕಿಕೊಳ್ಳಬಹುದು. ತುಂಬಾ ಚಿಕ್ಕ ಮಕ್ಕಳಿಗೆ ಇದು ಬೇಡ. ಟೀನೇಜ್ ಹುಡುಗಿಯರಿಂದ ಹಿಡಿದು ವಯಸ್ಕರೂ ಸಹ ಈ ಫೇಸ್ ಪ್ಯಾಕ್ ಬಳಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇಂದಿನ ಫೇಸ್ ಪ್ಯಾಕ್‌ನ ಮುಖ್ಯ ಪದಾರ್ಥ ಟೊಮೆಟೊ. ಟೊಮೆಟೊದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಬಳಕೆ ಚರ್ಮದ ಮೇಲಿನ ಸುಕ್ಕು, ಮೊಡವೆ, ಹಾಗು ಮೊಡವೆಯ ಕಲೆಗಳು ನಿವಾರಣೆಯಾಗಿ ಚರ್ಮಕ್ಕೆ ಕಾಂತಿಯನ್ನು ಹೆಚ್ಚಿಸುತ್ತದೆ. ಟೊಮೆಟೊ ಬಳಸಿ ಫೇಸ್ ಪ್ಯಾಕ್ ಮಾಡುವ ಬಗೆ ಹೇಗೆಂದರೆ, ಚಿಕ್ಕ ಅರ್ಧ ಲೋಟದಷ್ಟು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಮಾನ್ಯವಾಗಿ ತಲೆನೋವು ಆಗಾಗ ಬಂದು ಹೋಗುತ್ತದೆ. ತಲೆನೋವು ಬಾರದೇ ಇರುವ ವ್ಯಕ್ತಿಯೇ ಇಲ್ಲ ಎನ್ನಬಹುದು. ಎಲ್ಲರಿಗೂ ತಲೆನೋವು ಬಂದು ಹೋಗಿಯೇ ಇರುತ್ತದೆ. ಕೆಲಸದ ಒತ್ತಡ, ನಿದ್ರಾಹೀನತೆ, ಸುಸ್ತು, ಪಿತ್ತ, ಊಟ ಸರಿಯಾಗಿ ಆಗದೇ ಇದ್ದಾಗಲೂ ತಲೆನೋವು ಕಾಣಿಸಿಕೊಳ್ಳುತ್ತದೆ. ಹೀಗೆ ತಲೆನೋವು ಭಾದಿಸಿದಾಗ ಸಾಮಾನ್ಯವಾಗಿ ಮಾತ್ರೆಗಳನ್ನು ತೆಗೆದುಕೊಂಡುಬಿಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ತಲೆನೋವಿನ ಮಾತ್ರೆಗಳ ಅತಿಯಾದ ಸೇವನೆ ತಕ್ಷಣಕ್ಕೆ ನಿಮಗೆ ಪರಿಹಾರ ನೀಡಬಹುದೇ ಹೊರೆತು ಮುಂದಿನ ದೀರ್ಘಕಾಲದ ಆರೋಗ್ಯಕ್ಕೆ ಭಾರಿ ಕೊಡಲಿಪೆಟ್ಟು ಬೀಳುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ ಸಹ. ಇನ್ನು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ತಲೆಯ ನರಗಳು ಬಿಗಿದಂತೆ ಆಗುತ್ತದೆ. ತಲೆನೋವಿಗೆ ಎಲ್ಲದಕ್ಕಿಂತ ಸೂಕ್ತ ಹಾಗು ನೈಸರ್ಗಿಕ ಪರಿಹಾರವೆಂದರೆ ಒಂದೊಳ್ಳೆ ನಿದ್ರೆ. ತಲೆನೋವು ಬಂದಾಗ ಚೆನ್ನಾಗಿ ನಿದ್ದೆ ಮಾಡಿ ಎದ್ದು ಬಿಡಿ, ಆದ್ರೆ ಆ ನಿದ್ರೆ ಘಾಡವಾದ ನಿದ್ರೆಯಾಗಿರಬೇಕು. ನಿರಂತರವಾಗಿ ಏಳರಿಂದ ಏಂಟಿ ಗಂಟೆಗಳ ಕಾಲ ಸುಖನಿದ್ರೆ ಮಾಡಿದರೆ ತಲೆನೋವು ಮಂಗಮಾಯವಾಗುತ್ತದೆ. ಇನ್ನು ಕೆಲವರಿಗೆ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಹಜವಾಗಿ ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆಯಲ್ಲಿ ರೋಸ್ ವಾಟರ್ ಬಳಸುತ್ತಾರೆ. ಇದು ಒಂದು ನೈಸರ್ಗಿಕವಾದ ಕಾಸ್ಮೆಟಿಕ್ ಅಂದರೂ ತಪ್ಪಿಲ್ಲ. ಚರ್ಮದ ಆರೈಕೆಗೆ ಫೇಸ್ ಪ್ಯಾಕ್ ಮಾಡಿಕೊಳ್ಳುವಾಗ ರೋಸ್ ವಾಟರ್ ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಇದರ ನಿಯಮಿತವಾದ ಬಳಕೆಯಿಂದ ಚರ್ಮಕ್ಕೆ ಯಾವುದೇ ಹಾನಿ ಇಲ್ಲ ಎಂಬ ಮಾತಂತೂ ಸತ್ಯ. ಬನ್ನಿ ಹಾಗಿದ್ದರೆ ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಎಷ್ಟು ಪ್ರಾಮುಖ್ಯ ಹಾಗು ಇದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ. ಜಿಡ್ಡಿನ ಚರ್ಮ ಹಾಗು ಒಣ ಚರ್ಮಕ್ಕೂ ರೋಸ್ ವಾಟರ್ ಬಳಕೆ ಮಾಡಬಹುದು. ಇದಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲ. ಹೊರಗಡೆಯಿಂದ ಬಂದ ತಕ್ಷಣ ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಅದ್ದಿ ಮುಖವನ್ನು ಒರೆಸಿಕೊಂಡರೆ ಸೂಕ್ಷ್ಮವಾಗಿ ಅಂಟಿಕೊಂಡಿರು ಧೂಳಿನ ಚಿಕ್ಕ ಚಿಕ್ಕ ಕಣಗಳು ತೆಗೆಯಬಹುದು. ಮೇಕಪ್ ರಿಮೂವರ್ ಆಗಿ ರೋಸ್ ವಾಟರ್ ಬಳಸಬಹುದು. ಮೇಕಪ್ ಹಚ್ಚಿ ತೆಗೆಯುವಾಗ ಹತ್ತಿಯನ್ನು ಇದರಲ್ಲಿ ಅದ್ದಿ ಮೇಕಪ್ ಒರೆಸಿಕೊಂಡರೆ ಚರ್ಮಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಮುಖಕ್ಕೆ ರೋಸ್ ವಾಟರ್ ಹಚ್ಚಿದರೆ ಸಣ್ಣ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಜೋಳ ಇದನ್ನು ಮೆಕ್ಕೆ ಜೋಳ, ಎಂತಲೂ ಕರೆಯುತ್ತಾರೆ. ಸಿಟಿಗಳಲ್ಲಿ ಇದು ಪಾಪ್‌ಕಾರನ್ ಹಾಗು ಸ್ವೀಟ್ ಕಾರ್ನ್ ಎಂದು ಫೇಮಸ್. ಇಡೀ ಜಗತ್ತಿನಾದ್ಯಂತ ಇದನ್ನು ಬೇರೆ ಬೇರೆ ರೂಪದಲ್ಲಿ ಬಳಸುತ್ತಾರೆ. ಮಾಲ್ ಶಾಪಿಂಗ್ ಕಾಂಪ್ಲೆಕ್ಷ್‌ಗಳಲ್ಲಿ ಇದು ಹೆಚ್ಚಾಗಿ ಲಭ್ಯವಾಗುತ್ತದೆ. ಹೀಗೆ ಟೈಂಪಾಸ್‌ಗೆಂದು ತಿನ್ನುವ ಈ ಜೋಳದಿಂದ ದೇಹಕ್ಕೆ ಅನೇಕ ಪ್ರಯೋಜಗಳಿವೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ, ಜೋಳ ಸವಿಯಲು ತುಂಬಾ ರುಚಿ. ಅಷ್ಟೇ ಉತ್ತಮ ಪೋಷಕಾಂಶಗಳು ಇದರಲ್ಲಿ ಇವೆ. ಜೋಳದಲ್ಲಿ ನಾರಿನಾಂಶ ಹೇರಳವಾಗಿದೆ.ಪ್ರೋಟೀನ್, ಕಾರ್ಬೋಹೈಡ್ರೇಟ್, ಆರೋಗ್ಯಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳು, ಪೊಟಾಶಿಯಂ, ಮೆಗ್ನೀಸಿಯಂ, ಫೋಲೇಟ್ ವಿಟಮಿನ್ ಎ ಮತ್ತು ಸಿ ಈ ಎಲ್ಲ ಅಂಶಗಳು ಇದರಲ್ಲಿ ಹೇರಳವಾಗಿದೆ. ನಿಯಮಿತವಾಗಿ ಜೋಳ ಸೇವಿಸಿದರೆ ಮೂಲವ್ಯಾಧಿ, ರಕ್ತ ಹೀನತೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹಾಗು ಕೊಲೆಸ್ಟ್ರಾಲ್ ಪ್ರಾಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೇ ಇದರಲ್ಲಿ ಲುಟೀನ್, ಫೈಟಿಕ್ ಫೆರುಲಿಕ್ ಆಮ್ಲ, ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚು ಸಮೃದ್ಧವಾಗಿದೆ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ತುಂಬಾ…
ರಾಮನಗರ : ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ 6ನೇ ಗ್ಯಾರಂಟಿ ಘೋಷಣೆ ಈಡೇರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷಿö್ಮÃ ಹೆಬ್ಬಾಳ್ಕರ್ ಅವರು ತಿಳಿಸಿದರು. ಅವರು ಫೆ. 29ರ ಗುರುವಾರ ತಾಲ್ಲೂಕು ಅಡಳಿತ ಮತ್ತು ತಾಲ್ಲೂಕು ಪಂಚಾಯತ್ ವತಿಯಿಂದ ಮಾಗಡಿ ಕೋಟೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೃಹಲಕ್ಷಿö್ಮÃ ಯೋಜನೆಯಡಿ ಒಂದು ವರ್ಷದಲ್ಲಿ 24 ಸಾವಿರ ರೂ.ಗಳ ಹಣವನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಮಹಿಳೆಯರ ಖಾತೆಗೆ ನೇರವಾಗಿ ಬ್ಯಾಂಕಿನ ಮೂಲಕ ಹಣ ಜಮೆಯಾಗುತ್ತಿದೆ. ರಾಜ್ಯದ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಮಾಗಡಿ ತಾಲ್ಲೂಕಿನಲ್ಲಿ 56 ಸಾವಿರ ಕುಟುಂಬಗಳು ಗೃಹಲಕ್ಷಿö್ಮÃ ಯೋಜನೆಯಡಿ ನೋಂದಾಯಿಸಿಕೊAಡಿದ್ದು, ಒಟ್ಟು 51 ಸಾವಿರ ಕುಟುಂಬದ ಯಜಮಾನಿಗೆ ಹಣ ಜಮೆಯಾಗುತ್ತಿದೆ ಎಂದರು. ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಎಚ್.ಸಿ.…
ಬೆಂಗಳೂರು: 2024-25ನೇ ಸಾಲಿನ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸಭೆಯ ಅಧಿವೇಶನದಲ್ಲಿ ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ಫೆಬ್ರವರಿ 16 ರಂದು ಆಯವ್ಯಯವನ್ನು ಮಂಡಿಸಿದ್ದು, ಕಾಂಗ್ರೆಸ್ಸಿನ 9 ಸದಸ್ಯರು, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸದಸ್ಯರಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಭಾರತೀಯ ಜನತಾ ಪಕ್ಷದಿಂದ 13 ಜನ ಜೆ.ಡಿ.ಎಸ್‍ನಿಂದ 3 ಜನ ಸದಸ್ಯರು ಸೇರಿದಂತೆ ಒಟ್ಟು 25 ಜನ ಸದಸ್ಯರು ಚರ್ಚೆ ಮಾಡಿದ್ದಾರೆ. ಆದರೆ ಪ್ರತಿಪಕ್ಷದವರು ಆಯವ್ಯಯ ಮಂಡನೆ ಮಾಡುವಾಗ ಬಾಯ್‍ಕಟ್ ಮಾಡಿದ್ದು ಇತಿಹಾಸದಲ್ಲಿಯೆ ಮೊದಲು ಎಂದ ಮುಖ್ಯಮಂತ್ರಿಗಳು, 2024-25ನೇ ಆಯವ್ಯಯದಲ್ಲಿ ನಾನು ಮಂಡಿಸಿದ ಆಯವ್ಯಯ ಗಾತ್ರ 3,71,343 ಕೋಟಿ ರೂ.ಗಳು. ಇದರಲ್ಲಿ ರಾಜಸ್ವ ವೆಚ್ಚ 2 ಲಕ್ಷ 90 ಸಾವಿರ 531 ಕೋಟಿ ರೂ.ಗಳು, ಬಂಡವಾಳ ವೆಚ್ಚ 1 ಲಕ್ಷ 20 ಸಾವಿರ ಕೋಟಿ ರೂ. ಗಳಾಗಿದೆ. ನಮ್ಮ ಸರ್ಕಾರವು ಅಭಿವೃದ್ಧಿ…
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ 2024 ಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶುಕ್ರವಾರ ಪತ್ರಿಕಾಗೋಷ್ಠಿಯ ಮೂಲಕ ಪಟ್ಟಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ, ಅಲ್ಲಿ ಅಭ್ಯರ್ಥಿಗಳ ವಿವರಗಳನ್ನು ಬಹಿರಂಗಪಡಿಸಲಾಗುವುದು. https://kannadanewsnow.com/kannada/union-government-rejects-proposal-to-set-up-new-authority-to-protect-trees/ ಆರಂಭಿಕ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಇರಲಿದೆ ಎಂದು ಪಕ್ಷದ ಹತ್ತಿರದ ಮೂಲಗಳು ಎಬಿಪಿ ಲೈವ್ ಗೆ ತಿಳಿಸಿವೆ. ಇದಲ್ಲದೆ, ಗೃಹ ಸಚಿವ ಅಮಿತ್ ಶಾ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಇದೇ ಎನ್ನಲಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. https://kannadanewsnow.com/kannada/largest-wildfire-in-texas-over-1-million-acres-of-forest-burned/ https://kannadanewsnow.com/kannada/pro-pakistan-sloganeering-7-people-questioned-action-to-be-taken-after-fsl-report-is-received-g-parameshwara/ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತ್ನ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ಮೋಹನ್ ಯಾದವ್, ಛತ್ತೀಸ್ಗಢದ ವಿಷ್ಣು ದೇವ್ ಸಾಯಿ,…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೂದುಗುಂಬಳಕಾಯಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಅನೇಕ ಖನಿಜಾಂಶಗಳು ಅಡಗಿವೆ. ಇದು ಶುಭ ಸಮಾರಂಭಕ್ಕೆ ಎಷ್ಟು ಮುಖ್ಯವೋ ಆರೋಗ್ಯ ವೃದ್ಧಿಗೂ ಅಷ್ಟೇ ಮುಖ್ಯವಾಗಿದೆ. ಬೂದುಗುಂಬಳಕಾಯಿಯ ಜ್ಯೂಸ್ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ. ಬೂದುಗುಂಬಳಕಾಯಿಯ ಜ್ಯೂಸ್ ಮಾಡುವ ವಿಧಾನ: ಇದು ತುಂಬಾ ಸರಳವಾಗಿದೆ. ಒಂದು ಲೋಟ ಜ್ಯೂಸ್ ಪ್ರಮಾಣಕ್ಕೆ ಒಂದು ಜಾಮೂನ್ ಬಟ್ಟಲಷ್ಟು ಕತ್ತರಿಸಿದ ಬೂದುಗುಂಬಳಕಾಯಿಯನ್ನು ತೆಗೆದುಕೊಳ್ಳಿ. ಕತ್ತರಿಸಿದ ಬೂದುಗುಂಬಳಕಾಯಿ ಪೀಸ್‌ಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ಮುಕ್ಕಾಲು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಿ. ಇದನ್ನು ಸೋಸಿಕೊಂಡು ಹಾಗೆಯೇ ಕುಡಿಯಬಹುದು. ಅಥವಾ ಚಿಟಿಕೆ ಸೈಂದ್ರಲವಣ ಕಲಿಸಿಕೊಂಡು ಕುಡಿಯಬಹುದು. ಇನ್ನೂ ಬೇಕಿದ್ದರೆ ಒಂದೆರಡು ಹನಿ ನಿಂಬೆ ರಸ ಸೇರಿಸಿಕೊಳ್ಳಬಹುದು. ಆದಷ್ಟು ತಾಜಾ ಇದ್ದಾಗಲೇ ಈ ಜ್ಯೂಸ್ ಅನ್ನು ಸೇವಿಸಿ. ಬೂದುಗುಂಬಳಕಾಯಿಯಲ್ಲಿ ಕೊಬ್ಬು ಪ್ರೋಟೀನ್, ವಿಟಮಿನ್ ಎ, ಬಿ1, ಬಿ2, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ, ಫೈಬರ್, ಕಾರ್ಬೋಹೈಡ್ರೇಟ್, ಝಿಂಕ್ ಹೀಗೆ ಇನ್ನು ಅನೇಕ ಜೀವಸತ್ವಗಳು ಇದರಲ್ಲಿ ಇವೆ. ಕೇವಲ ಇದೊಂದರ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಅಡುಗೆ ಮನೆ ಕೆಲಸಕ್ಕೆ ಕೊನಯೇ ಇಲ್ಲ ಬಿಡಿ. ಇದೊಂತರ ನಿರಂತರವಾದ ಕೆಲಸ. ಒಂದು ಕೆಲಸ ಆಯ್ತು ಎನ್ನುವಾಗ ಮತ್ತೊಂದು ಕೆಲಸ ಬಂದೇ ಬಿಡುತ್ತದೆ. ಎಷ್ಟೇ ಕೆಲಸ ಮಾಡಿದರೂ ಮುಗಿಯುವುದೇ ಇಲ್ಲ ಎಂದು ಹೆಣ್ಣುಮಕ್ಕಳು ಹೇಳಿಕೊಂಡಿರುವುದನ್ನು ಅಲ್ಲಲ್ಲಿ ಕೇಳಿರುತ್ತೀರಿ. ಅಂತವರಿಗೆ ಕೆಲ ಉಪಯುಕ್ತ ಟಿಪ್ಸ್. ತಪ್ಪದೇ ಫಾಲೋ ಮಾಡಿ ಆಗ ನೋಡಿ ನಿಮ್ಮ ಅಡುಗೆ ಮನೆ ಕೆಲಸ ಮತ್ತಷ್ಟು ಸುಲಭ ಹಾಗು ಬೇಗನೆ ಆಗುತ್ತದೆ. ಹಾಲು ಕಾಯಿಸುವಾಗ ಕೆಲವೊಮ್ಮೆ ಎಷ್ಟೇ ಜಾಗರೂಕರರಾಗಿದ್ದೂ ಹಾಲು ಕ್ಷಣಾರ್ಧದಲ್ಲಿ ಉಕ್ಕಿ ಹೋಗುತ್ತದೆ. ಇದಕ್ಕೆ ಒಂದು ಬೆಸ್ಟ್ ಉಪಾಯವಿದೆ. ಹಾಲು ಕಾಯಿಸುವಾಗ ಅದರ ಮೇಲೆ ಒಂದು ಮರದ ಸೌಟು ಇಡಿ. ಆಗ ಹಾಲು ಉಕ್ಕಿ ಚೆಲ್ಲುವುದಿಲ್ಲ. ಈ ಟ್ರಿಕ್ ಮಹಿಳೆಯರಿಗೆ ತುಂಬಾ ಉಪಯುಕ್ತ. ಆಲುಗಡ್ಡೆ ಸಿಪ್ಪೆ ಸುಲಿಯಲು ಇನ್ನುಮುಂದೆ ಕಷ್ಟ ಪಡಬೇಕಿಲ್ಲ. ಆಲುಗಡ್ಡೆ ಬೇಯಿಸುವಾಗ ಒಂದರಲ್ಲಿ ಎರಡು ಭಾಗ ಮಾಡಿ ಕತ್ತರಿಸಿ ಬೇಯಿಸಲು ಇಡಿ. ಇನ್ನು ಆಲುಗಡ್ಡೆ ಬೆಂದ ನಂತರ ತಣ್ಣೀರಿಗೆ ಅದನ್ನು ವರ್ಗಾಯಿಸಿ ಹೀಗೆ ಮಾಡಿದರೆ…