Subscribe to Updates
Get the latest creative news from FooBar about art, design and business.
Author: kannadanewsnow07
ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ತೆರಳುವ ಭಕ್ತಾಧಿಗಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬಳ್ಳಾರಿ, ಮೋಕಾ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗುತ್ತಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಮಾ.04 ರಿಂದ 10 ರ ವರೆಗೆ ವಿಶೇಷ ಸಾರಿಗೆ ಸೌಕರ್ಯ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ-1ನೇ ಘಟಕದ ವ್ಯವಸ್ಥಾಪಕರ ಮೊ.7760992163, ಬಳ್ಳಾರಿ-2ನೇ ಘಟಕದ ವ್ಯವಸ್ಥಾಪಕರ ಮೊ.7760992164, ಸಿರುಗುಪ್ಪ ಘಟಕದ ವ್ಯವಸ್ಥಾಪಕರ ಮೊ.7760992165, ಕುರುಗೋಡು ಘಟಕದ ವ್ಯವಸ್ಥಾಪಕರ ಮೊ.9606483671 ಗೆ ಸಂಪರ್ಕಿಸಬಹುದು. ಈ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಕರಸಾ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ: ಜಿಲ್ಲೆ ವ್ಯಾಪ್ತಿಯಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 20215 ರ ಸೆಕ್ಷನ್ 41 ರಲ್ಲಿ ನೋಂದಾಣಿಯಾಗದೇ ಇರುವ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಾಯಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಾಯಿಸಿಕೊಳ್ಳಲು ನಗರದ ಕಂಟೋನ್‍ಮೆಂಟ್‍ನ ಶಾಂತಿಧಾಮ ಆವರಣದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಅವರ ಮೊ.9945254537 ಹಾಗೂ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಅವರ ಮೊ.7090376455 ಗೆ ಸಂಪರ್ಕಿಸಬಹುದು. ಒಂದು ವೇಳೆ ನೋಂದಾಯಿಸಿಕೊಳ್ಳದ ಅನಧೀಕೃತ ಮಕ್ಕಳ ಪಾಲನಾ ಸಂಸ್ಥೆಗಳ ವಿರುದ್ಧ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 20215 ರ ಸೆಕ್ಷನ್ 42 ರನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ: 2024 ರ ಲೋಕಸಭಾ ಲೋಕಸಭಾ ಚುನಾವಣೆಯ ಸಂಬಂಧ ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಮತ್ತು ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಹಾಗೂ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ನೈಜ ಮತದಾನದ ಅರಿವು ಮತ್ತು ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್ ಸಮಿತಿಯ ಪ್ರಮುಖ ಕರ್ತವ್ಯವಾಗಿದೆ. ಪ್ರಯುಕ್ತ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯವಸ್ಥಿಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸ್ವೀಪ್ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದು, ಕಾರ್ಯ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. *ಅಧಿಕಾರಿಗಳು ಮತ್ತು ಕಾರ್ಯಹಂಚಿಕೆ:* ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕರು, ಜಿಲ್ಲಾ ಸ್ವೀಪ್ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವುದು. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು…
ನವದೆಹಲಿ: ಬಾಲಿವುಡ್ ನ ಜನಪ್ರಿಯ ನಾಯಕಿ ಕಂಗನಾ ರಣಾವತ್ ಈ ಬಾರಿ ಎಂಪಿ ಟಿಕೆಟ್ ಸಿಕ್ಕಿದೆ. ಕೊನೆಗೂ ಬಾಲಿವುಡ್ ಕ್ವೀನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಕಣಕ್ಕಿಳಿಯುತ್ತಿದ್ದಾರೆ. ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, “ಪ್ರಧಾನಿ ಮೋದಿ ವಾರಣಾಸಿಯಿಂದ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ, ಬಿಜೆಪಿ ಸಂಸದ ಬಿಷ್ಣು ಪದಾ ರೇ ಅಂಡಮಾನ್ ಮತ್ತು ನಿಕೋಬಾರ್ ನಿಂದ, ಬಿಜೆಪಿ ಸಂಸದ ತಪಿರ್ ಗಾವೊ ಅರುಣಾಚಲ ಪೂರ್ವದಿಂದ, ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ದಿಬ್ರುಗಢದಿಂದ ಸ್ಪರ್ಧಿಸಲಿದ್ದಾರೆ” ಎಂದು ಹೇಳಿದರು. ಲೋಕಸಭಾ ಚುನಾವಣೆಗೆ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಶನಿವಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. https://kannadanewsnow.com/kannada/lok-sabha-elections-2024-bjp-releases-first-list-of-candidates/ https://kannadanewsnow.com/kannada/lok-sabha-elections-bjp-not-to-announce-tickets-for-karnataka-constituencies-in-first-list/ https://kannadanewsnow.com/kannada/state-govt-issues-guidelines-for-treatment-of-snakebite-cases-this-rule-is-mandatory/
ನವದೆಹಲಿ: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಪ್ರಕಟ ಮಾಡಲಾಗಿದೆ. ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. ಹಾಗಾದ್ರೇ ಯಾರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಈ ಕೆಳಕಂಡತಿದೆ. ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲು ಆಡಳಿತ ಪಕ್ಷವು ಗಣನೀಯ ಸಂಖ್ಯೆಯ ಅಭ್ಯರ್ಥಿಗಳನ್ನು ಘೋಷಿಸಲು ಬಯಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಗುರುವಾರ ರಾತ್ರಿ ಸಭೆ ನಡೆಸಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಂ ಮೋದಿ ಸೇರಿದಂತೆ ಪಾರ್ಟಿ ಸದಸ್ಯರು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಸಮಾಲೋಚನೆ ನಡೆಸಿದ್ದರು. ಅದಾದ ಬಳಿಕ ಇಂದು ಪಟ್ಟಿ ಬಿಡುಗಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ, ರಾಜ್ಯದಲ್ಲಿ ಅಭಿಪ್ರಾಯ ಸಮೀಕ್ಷೆಯ ನಂತರ ಹೆಸರುಗಳು ಕೇಂದ್ರಕ್ಕೆ ಬಂದಿವೆ, ಅದರ ಬಗ್ಗೆ ಚರ್ಚೆಯ ನಂತರ, ಕಳೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 16…
ನವದೆಹಲಿ: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಪ್ರಕಟ ಮಾಡಲಾಗಿದೆ. ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. ಹಾಗಾದ್ರೇ ಯಾರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಈ ಕೆಳಕಂಡತಿದೆ. https://twitter.com/ANI/status/1763920215211974678? ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳು ಉತ್ತರ ಪ್ರದೇಶ: 51 ಸ್ಥಾನಗಳು ಪಶ್ಚಿಮ ಬಂಗಾಳ: 20 ಮಧ್ಯಪ್ರದೇಶ: 24 ಗುಜರಾತ್: 15 ರಾಜಸ್ಥಾನ: 15 ಕೇರಳ: 12 ತೆಲಂಗಾಣ: 9 ಅಸ್ಸಾಂ: 11 ಜಾರ್ಖಂಡ್: 11 ಛತ್ತೀಸ್ ಗಢ: 11 ದೆಹಲಿ: 5 ಜಮ್ಮು ಮತ್ತು ಕಾಶ್ಮೀರ: 2 ಉತ್ತರಾಖಂಡ: 3 ಅರುಣಾಚಲ ಪ್ರದೇಶ: 2 ಗೋವಾ: 1 ತ್ರಿಪುರಾ: 1 ಅಂಡಮಾನ್ ಮತ್ತು ನಿಕೋಬಾರ್: 1 ದಮನ್ ಮತ್ತು ದಿಯು: 1 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.! ಗಾಂಧಿನಗರದಿಂದ ಅಮಿತ್ ಶಾ ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ ತಿರುವನಂತಪುರಂನ ರಾಜೀವ್ ಚಂದ್ರಶೇಖರ್ ಸಿಂಗ್ಭುಮ್ನ ಗೀತಾ ಕೋಡಾ ದುರ್ಗ್…
ನವದೆಹಲಿ: ಲೋಕಸಭಾ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿಪ್ರಕಟ ಮಾಡಲಾಗಿದೆ. ಇಂದು ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. ಇನ್ನೂ ಈ ಬಾರಿ ಕೂಡ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂಧ್ರ ಮೋದಿಯವರು ವಾರಣಾಸಿಯಿಂದ ಸ್ಪರ್ಧೆ ಮಾಡಲಾಗಿದ್ದಾರೆ. ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲು ಆಡಳಿತ ಪಕ್ಷವು ಗಣನೀಯ ಸಂಖ್ಯೆಯ ಅಭ್ಯರ್ಥಿಗಳನ್ನು ಘೋಷಿಸಲು ಬಯಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಗುರುವಾರ ರಾತ್ರಿ ಸಭೆ ನಡೆಸಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಂ ಮೋದಿ ಸೇರಿದಂತೆ ಪಾರ್ಟಿ ಸದಸ್ಯರು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಸಮಾಲೋಚನೆ ನಡೆಸಿದ್ದರು. ಅದಾದ ಬಳಿಕ ಇಂದು ಪಟ್ಟಿ ಬಿಡುಗಡೆಯಾಗಿದೆ.
ಬೆಂಗಳೂರು:ಕೆಫೆ ಸ್ಪೋಟಕಕ್ಕೂ ಮುನ್ನ ನಿರ್ಜನ ಪ್ರದೇಶ, ಕಾರಿನಲ್ಲಿ ಟ್ರಯಲ್ ಬ್ಲಾಸ್ಟ್ ನಡೆದಿದೆ ಎನ್ನಲಾಗುತ್ತಿದೆ. ನಿನ್ನೆ ನಡೆದ ಬಾಂಬ್ ಬ್ಲಾಸ್ಟ್ ಬಳಿಕ ಪೊಲೀಸರು ಅನೇಕ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಇದಲ್ಲದೇ ಆರೋಪಿಗಾಗಿ ಕೂಡ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಆರೋಪಿಯು ಓಡಾಡಿರುವ ಬಸ್ ಸೇರಿದಂತೆ ಇತರೆ ಸ್ಥಳಗಳನ್ನು ಹುಡುಕಾಡುತ್ತಿದ್ದಾರೆ. https://kannadanewsnow.com/kannada/maha-shivratri-2024-heres-the-date-history-significance-puja-timings-other-important-information/ https://kannadanewsnow.com/kannada/breaking-state-govt-orders-transfer-of-rameswara-cafe-bomb-blast-case-to-ccb/ ಈ ನಡುವೆ ರಾಮೇಶ್ವೇರ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಘಟನೆ ಸಂಬಂಧ ತನಿಖಾಧೀಕಾರಿಯಾಗಿ ಎಸ್‌ಐ ನವೀನ್ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಘಟನೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. https://kannadanewsnow.com/kannada/breaking-state-govt-orders-transfer-of-rameswara-cafe-bomb-blast-case-to-ccb/
ಬೆಂಗಳೂರು: ರಾಮೇಶ್ವೇರ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಘಟನೆ ಸಂಬಂಧ ತನಿಖಾಧೀಕಾರಿಯಾಗಿ ಎಸ್‌ಐ ನವೀನ್ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಘಟನೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. https://kannadanewsnow.com/kannada/good-news-for-poor-families-in-the-state-cm-to-launch-allotment-of-36789-houses-today/ https://kannadanewsnow.com/kannada/maha-shivratri-2024-heres-the-date-history-significance-puja-timings-other-important-information/ https://kannadanewsnow.com/kannada/good-news-for-job-seekers-bmtc-invites-applications-for-2500-vacancies/ https://kannadanewsnow.com/kannada/good-news-for-epfo-subscribers-you-will-get-rs-7-lakh-insurance-money-in-this-plan/ ಇನ್ನೂ ವಿಪಗಳು ಘಟನೆಯನ್ನು ಎನ್‌ಐಎಗೆ ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಈಗ ಇದನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಇನ್ನೂ ಸ್ಫೋಟವಾಗಿರುವುದು ನಿಜ. ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ , ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ನಾನೂ ಕೂಡ ಸ್ಥಳಕ್ಕೆ ತೆರಳಲಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರಾದ ಶಿವನನ್ನು ಸ್ಮರಿಸುವುದರಿಂದ ಮಹಾ ಶಿವರಾತ್ರಿ ಹಿಂದೂಗಳಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವು ಶಿವನ ಮಹಾನ್ ರಾತ್ರಿಯನ್ನು ಸಂಕೇತಿಸುತ್ತದೆ. ದೃಕ್ ಪಂಚಾಂಗದ ಪ್ರಕಾರ, ಮಹಾ ಶಿವರಾತ್ರಿ ಕೃಷ್ಣ ಪಕ್ಷದ ಚಾಂದ್ರಮಾನ ಹಂತದಲ್ಲಿ ಮಾಘ ತಿಂಗಳಲ್ಲಿ ಬರುತ್ತದೆ. ಇದು ವರ್ಷಕ್ಕೊಮ್ಮೆ, ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಈ ಹಬ್ಬ ಬರುತ್ತದೆ. ಈ ಹಬ್ಬದ ಸಮಯವು ಚಳಿಗಾಲದಿಂದ ವಸಂತಕಾಲ ಮತ್ತು ಬೇಸಿಗೆಗೆ ಪರಿವರ್ತನೆಯನ್ನು ಸೂಚಿಸುತ್ತದೆ. ಪ್ರೀತಿ, ಶಕ್ತಿ ಮತ್ತು ಏಕತೆಯನ್ನು ಪ್ರತಿನಿಧಿಸುವ ಶಿವ ಮತ್ತು ಆತನ ಶಕ್ತಿ ಈ ಸಮಯದಲ್ಲಿ ವಿಲೀನಗೊಳ್ಳುವುದರಿಂದ, ಆಚರಣೆಯು ರಾತ್ರಿಯಲ್ಲಿ ನಡೆಯುತ್ತದೆ. ದಿನಾಂಕ : 2024 ರಲ್ಲಿ, ಮಹಾ ಶಿವರಾತ್ರಿಯನ್ನು ಮಾರ್ಚ್ 8 ರಂದು ನಿಗದಿಪಡಿಸಲಾಗಿದೆ. ಮಹಾ ಶಿವರಾತ್ರಿಯ ರಾತ್ರಿಯನ್ನು ಅತ್ಯಂತ ಮಂಗಳಕರವೆಂದು ಪೂಜಿಸಲಾಗುತ್ತದೆ, ಇದು ಶಿವನ ದೈವಿಕ ತಾಂಡವ ನೃತ್ಯದೊಂದಿಗೆ ಸಂಬಂಧ ಹೊಂದಿದೆ, ಇದು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಶಾಶ್ವತ ಚಕ್ರವನ್ನು ಸಂಕೇತಿಸುತ್ತದೆ. ಭಕ್ತರು ಸಾಮಾನ್ಯವಾಗಿ ಶಿವ…