Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಾಮಾನ್ಯವಾಗಿ ಎಣ್ಣೆಯಲ್ಲಿ ಮಾಡಿದ ಪದಾರ್ಥಗಳನ್ನು ತಿಂದ ನಂತರ ಹೆಚ್ಚಿನವರಿಗೆ ಹೊಟ್ಟೆಯುಬ್ಬರ, ಹೊಟ್ಟೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಇಂತಹ ಸಮಸ್ಯೆಯಿಂದ ಪಾರಾಗಲು ಕೆಲವು ಟಿಪ್ಸ್ ಗಳಿವೆ . ಎಣ್ಣೆಯುಕ್ತ ಆಹಾರಗಳು ಅಥವಾ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸಲು ಹೆಚ್ಚಿನರು ತುಂಬಾ ಇಷ್ಟಪಡುತ್ತಾರೆ. ಆದರೆ ಅದನ್ನುತಿಂದ ನಂತರ ಅಜೀರ್ಣ, ಹೊಟ್ಟೆಭಾರ ಮತ್ತು ಹೊಟ್ಟೆಯಲ್ಲಿ ಸುಡುವ ಅನುಭವ ಉಂಟಾಗುತ್ತದೆ. ಇವೆಲ್ಲಾ ಅತಿಯಾದ ಎಣ್ಣೆ ಮತ್ತು ಮಸಾಲೆಗಳಿಂದ ಉಂಟಾಗುತ್ತದೆ. ಆಯುರ್ವೇದದ ಪ್ರಕಾರ, ಹುರಿದ ಜೀರಿಗೆಯೊಂದಿಗೆ ಮೊಸರು ಸೇರಿಸಿ ಊಟದ ನಂತರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರೋಬಯಾಟಿಕ್ಸ್ ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾ ಆಮ್ಲೀಯತೆಯನ್ನು ತಡೆಗಟ್ಟಲು ಮತ್ತು ಸರಿಯಾದ ಕರುಳಿನ ಚಲನೆಯನ್ನು ಹೆಚ್ಚಿಸಲು ಈ ಪ್ರಕ್ರಿಯೆ ಸಹಾಯ ಮಾಡುತ್ತದೆ. ಗ್ರೀನ್ ಟೀ ಸೇವನೆ ಮಾಡುವುದು ಒಳ್ಳೆಯದು ನೀರಿನ ಬದಲಾಗಿ ನೀವು ಆಯ್ಕೆ ಮಾಡಬಹುದಾದ ಮತ್ತೊಂದು ಪಾನೀಯವೆಂದರೆ ಅದು ಗ್ರೀನ್‌ ಟೀ. ಇದು ಫ್ಲೇವನಾಯ್ಡ್‌ನಲ್ಲಿ ಸಮೃದ್ಧವಾಗಿದ್ದು ಉತ್ಕರ್ಷಣ ನಿರೋಧಕಗಳನ್ನು ಸೇರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲಿನ ಆಕ್ಸಿಡೇಟಿವ್ ಲೋಡ್…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಾವು ಸೇವಿಸುವ ಆಹಾರದಲ್ಲಿರುವಂತಹ ತ್ಯಾಜ್ಯ ಹಾಗೂ ಕಲ್ಮಶವನ್ನು ಹೊರಗೆ ಹಾಕುವ ಪ್ರಕ್ರಿಯೆಯೇ ಮಲ ಹಾಗೂ ಮೂತ್ರ ವಿಸರ್ಜನೆ. ಇದು ಒಂದು ನೈಸರ್ಗಿಕ ಕ್ರಿಯೆಯಾಗಿದೆ ಬಂದಾಗ ಮಾಡಲೆಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಉಂಟಾಗಬಹುದು ಆದರೆ ಹೆಚ್ಚಿನವರು ಮೂತ್ರವನ್ನು ತುಂಬಾ ಹೊತ್ತು ಹಿಡಿದುಕೊಂಡು ಇಡುವರು ಇದ್ದಾರೆ. ನಿರಂತರವಾಗಿ ಮೂತ್ರ ಮಾಡದೆ ಹಾಗೆ ಇಟ್ಟುಕೊಂಡರೆ ಖಂಡಿತವಾಗಿಯೂ ಬೇರೆ ಸಮಸ್ಯೆಗಳು ಕಾಡಬಹುದು. ಆರೋಗ್ಯಕರ ವ್ಯಕ್ತಿಯ ಮೂತ್ರಕೋಶವು ಸುಮಾರು 400-500 ಮಿಲಿ ಲೀಟರ್ ತನಕ ಮೂತ್ರವನ್ನು ಹಿಡಿದಿಟ್ಟು ಕೊಳ್ಳಬಹುದು ಅಥವಾ. ಮೂತ್ರಕೋಶವು ಹಿಗ್ಗುವಂತಹ ಅಂಗಾಂಗವಾದರೂ ಅತಿಯಾಗಿ ಮೂತ್ರ ಹಿಡಿದಿಟ್ಟುಕೊಂಡರೆ ಅನೇಕ ಸಮಸ್ಯೆ ಎದುರಾಗುತ್ತದೆ. ಮೂತ್ರ ಬಂದಾಗ ಅದನ್ನು ಹೊರಹಾಕಿದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮೂತ್ರ ಹಿಡಿದಿಟ್ಟುಕೊಂಡರೆ ಅದು ಮೂತ್ರಕೋಶದ ಮೇಲೆ ಗಂಭಿರ ವಾದ ತೊಂದರೆ ಮಾಡಬಹುದು. ಮೂತ್ರವನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಂಡರೆ ಅದರಿಂದ ಮೂತ್ರಕೋಶದ ಸ್ನಾಯುಗಳು ದುರ್ಬಲವಾಗುತ್ತ ಹೋಗುತ್ತದೆ. ಮೂತ್ರವನ್ನು ಹಿಡಿದಿಟ್ಟು ಕೊಂಡರೆ ಮೂತ್ರಕೋಶದ ಸೋಂಕು ಉಂಟಾಗುತ್ತದೆ ನಿರಂತರವಾಗಿ ಮೂತ್ರ ವಿಸರ್ಜನೆ ಹಿಡಿದಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಹುಟ್ಟಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಧುಮೇಹ ಅಕಾಲಿಕ ಮಗು ಮತ್ತು ಗರ್ಭಪಾತದ ಅಪಾಯ ಹೆಚ್ಚಿಸುತ್ತದೆ. ಹೆಚ್ಚಿದ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವುದು ತುಂಬಾ ಮುಖ್ಯ. ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರಿಗೆ ರಕ್ತದ ಸಕ್ಕರೆ ಮಟ್ಟ ಅಧಿಕವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಆಹಾರ ಮತ್ತು ಪಾನೀಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಇರುತ್ತದೆ. ಇದನ್ನು ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯುತ್ತಾರೆ. ಈ ಮಧುಮೇಹವು ಹೆರಿಗೆಯ ನಂತರ ಕೊನೆಗೊಳ್ಳುತ್ತದೆ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ ಇದು ಹುಟ್ಟಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಧುಮೇಹ ಅಕಾಲಿಕ ಮಗು ಮತ್ತು ಗರ್ಭಪಾತದ ಅಪಾಯ ಹೆಚ್ಚಿಸುತ್ತದೆ. ಅಂತಹ ಸ್ಥಿತಿಯಲ್ಲಿ, ಹೆಚ್ಚಿದ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವುದು ತುಂಬಾ ಮುಖ್ಯ. ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ತಟ್ಟೆಗೆ ಸೇರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಅವುಗಳು ಯಾವವು ಎಂಬುದನ್ನು ಇಲ್ಲಿ ನೋಡೋಣ. ಮೊಟ್ಟೆ ತಿನ್ನುವುದು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌:ಅನೇಕ ಬಾರಿ ಕಣ್ಣುಗಳಲ್ಲಿ ಊತ ಉಂಟಾಗುತ್ತದೆ. ಇದು ಕಣ್ಣುಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಆಯಾಸ ಅಥವಾ ನಿದ್ರೆಯ ಕೊರತೆಯಿಂದಲೂ ಸಹ ಅನೇಕ ಬಾರಿ ಕಣ್ಣುಗಳ ಉಬ್ಬುವಿಕೆ ಉಂಟಾಗುತ್ತದೆ. ಉಬ್ಬಿದ ಕಣ್ಣುಗಳು ಮುಖದ ಅಂದವನ್ನು ಹಾಳು ಮಾಡುತ್ತದೆ. ಜೊತೆಗೆ ಕಣ್ಣಿನ ಸಮಸ್ಯೆಗೂ ಕಾರಣ ಆಗಬಹುದು. ಉಬ್ಬಿದ ಕಣ್ಣುಗಳಿಂದ ನೀವು ತೊಂದರೆಗೆ ಒಳಗಾಗಿದ್ದರೆ, ಕೆಲವು ವಿಷಯಗಳ ಬಗ್ಗೆ ಸೂಕ್ತ ಕಾಳಜಿ ವಹಿಸಿ. ಈ ಮೂಲಕ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಣೆ ಮಾಡಿಕೊಳ್ಳಬಹುದು. ಉಬ್ಬಿದ ಕಣ್ಣುಗಳು, ಕಣ್ಣುಗಳ ಕೆಳಗೆ ಊತ ಉಂಟಾಗಲು ಕಾರಣವಾಗಿವೆ. ಇದರಿಂದಾಗಿ ಮುಖ ಮತ್ತು ಚರ್ಮದ ಟೋನ್ ಚೆನ್ನಾಗಿ ಕಾಣಿಸುವುದಿಲ್ಲ. ಮುಖ ಅಸಮಂಜಸವಾಗಿ ಕಾಣುತ್ತದೆ. ಮೇಕ್ಅಪ್ ಮಾಡುವಾಗ ಸಹ ಉಬ್ಬಿದ ಕಣ್ಣುಗಳನ್ನು ಮರೆ ಮಾಡಲು ಹೆಚ್ಚುವರಿ ಪದರದ ಮೇಕಪ್ ಅನ್ವಯಿಸಬೇಕಾಗುತ್ತದೆ. ಈ ಉಬ್ಬಿದ ಕಣ್ಣುಗಳನ್ನು ಹೇಗೆ ಕಡಿಮೆ ಮಾಡುವುದು ಎಂದು ತಿಳಿಯೋಣ. ಅನೇಕ ಬಾರಿ ಕಣ್ಣುಗಳಲ್ಲಿ ಊತ ಉಂಟಾಗುತ್ತದೆ. ಇದು ಕಣ್ಣುಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಆಯಾಸ ಅಥವಾ ನಿದ್ರೆಯ ಕೊರತೆಯಿಂದಲೂ ಸಹ…

Read More

ಚಿತ್ರದುರ್ಗ: ಚಿತ್ರದುರ್ಗದ (Chitradurga) ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೊಬ್ಬರು ಪ್ರಿ-ವೆಡ್ಡಿಂಗ್ ವೀಡಿಯೋ ಶೂಟ್ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.  ಭರಮಸಾಗರ ಮೂಲದ ಜಿಲ್ಲಾಸ್ಪತ್ರೆಯ ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ , ರೋಗಿಯೊಬ್ಬರನ್ನು ಬೆಡ್‌ ಮೇಲೆ ಮಲಗಿಸಿ, ಆಪರೇಷನ್‌ ಮಾಡುವಂತೆ, ಇನ್ನೊಂದೆಡೆ ಭಾವಿ ಪತ್ನಿ ಅಭಿಷೇಕ್‌ಗೆ ಸಹಾಯ ಮಾಡುವಂತೆ ಚಿತ್ರೀಕರಿಸಿದ್ದಾರೆ. ಅಂತಿಮವಾಗಿ ಆಪರೇಷನ್‌ ಮುಗಿಯಿತು ಅಂದ ಬಳಿಕ ರೋಗಿ ಎದ್ದು ಕುಳಿತುಕೊಳ್ಳುವ ವಿಡಿಯೋ ಈಗ ವೈರಲ್ ಆಗಿದೆ.

Read More

ಕಾರವಾರ: ಕುಡಿವ ನೀರಿನ ಕೊರತೆ ನೀಗಿಸಲು ಶಿರಸಿಯ ಗೌರಿ ನಾಯ್ಕ ಮತ್ತೊಮ್ಮೆ ಏಕಾಂಗಿ ಸಾಹಸ ಮಾಡಿದ್ದು, ಈ ನಡುವೆ ಅವರು ಯಶಸ್ಸ ಅನ್ನು ಕೂಡ ಪಡೆದುಕೊಂಡಿದ್ದಾರೆ.  ಇಲ್ಲಿನ ಗಣೇಶನಗರದ ಅಂಗನವಾಡಿ ಮಕ್ಕಳಿಗೆ ನೀರಿಲ್ಲ. ಜೊತೆಗೆ ಆಸುಪಾಸಿನ ಮನೆಗಳಲ್ಲೂ ನೀರಿಗೆ ತತ್ವಾರ ಉಂಟಾಗಿತ್ತು, ಈ ನಡುವೆ ಸ್ವಪ್ರೇರಣೆಯಿಂದ ಗುದ್ದಲಿ, ಹಾರೆ ಹಿಡಿದುಕೊಂಡು ಬಾವಿ ತೋಡಿದ್ದಾರೆ. ಬಾವಿ ತೋಡುತ್ತಿರುವ ಜಲ ಸಾಧಕಿ ಗೌರಿ ನಾಯ್ಕ ಅವರ ಮುಖದಲ್ಲಿ ಬುಧವಾರ ಮಂದಹಾಸ ಮೂಡಿದೆ. ಕಳೆದ 10 ದಿನಗಳಿಂದ ಹಗಲಿಡೀ ದುಡಿದ ಪರಿಣಾಮ ಬಾವಿ ಸುಮಾರು 8 ಅಡಿ ಆಳ ತಲುಪಿದ್ದು, ಈಗ ಕೆಂಪನೆಯ ಮತ್ತು ತಂಪನೆಯ ಮಣ್ಣು ಲಭಿಸುತ್ತಿದೆ. ಜಲ ಸಮೀಪದಲ್ಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಈ ಬಾವಿ ಪೂರ್ಣಗೊಳಿಸಲು ಒಂದು ತಿಂಗಳು ಬೇಕಾಗಬಹುದು ಎಂದು ಮೊದಲು ಅಂದಾಜಿಸಿದ್ದೆ. ಬುಧವಾರ ತಂಪನೆಯ ಮಣ್ಣು ಲಭಿಸುತ್ತಿರುವುದರಿಂದ ಇನ್ನು ಹದಿನೈದು ದಿನಗಳು ಭಾವಿ ಕೆಲಸ ಪೂರ್ಣಗೊಳಿಸಲು ಸಾಕಾಗಬಹುದು ಎನ್ನುತ್ತಾರೆ ಗೌರಿ.

Read More

ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಹೈಕೋರ್ಟ್‌ ಬಿಗ್‌ಶಾಕ್‌ ನೀಡಿದೆ ತ್ಯಾಗರಾಜ ನಗರದಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ನಿಲುಗಡೆ ಮಾಡಲಾಗಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜ.31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯ…

Read More

ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಹಾರ್ಮೋನುಗಳ ಬದಲಾವಣೆ ಅಥವಾ ಇತರ ಕಾರಣಗಳಿಂದ ಉಂಟಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಮ್ಯಾಮೊಗ್ರಾಮ್ ಮತ್ತು ಎಂಆರ್ಐ ಮೂಲಕ ಕಂಡು ಹಿಡಿಯಲಾಗಿದೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಹಾರ್ಮೋನುಗಳ ಬದಲಾವಣೆ ಅಥವಾ ಇತರ ಕಾರಣಗಳಿಂದ ಉಂಟಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಮ್ಯಾಮೊಗ್ರಾಮ್ ಮತ್ತು ಎಂಆರ್ಐ ಮೂಲಕ ಕಂಡು ಹಿಡಿಯಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಲುಂಪೆಕ್ಟಮಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದು ಸ್ತನ ಕ್ಯಾನ್ಸರ್ನ ಗೆಡ್ಡೆ ತೆಗೆದು ಹಾಕುವ ವಿಧಾನವಾಗಿದೆ. ತೂಕವನ್ನು ನಿಯಂತ್ರಿಸುವ ಮೂಲಕ ಸ್ತನ ಕ್ಯಾನ್ಸರ್ ತಪ್ಪಿಸಬಹುದು. ಪುರುಷರು ಮತ್ತು ಮಹಿಳೆಯರಲ್ಲಿ ಬಹಳ ಸಾಮಾನ್ಯವಾದ ಕಾಯಿಲೆ ಹೃದ್ರೋಗ ಸಮಸ್ಯೆಯಾಗಿದೆ. ಮಹಿಳೆಯರು ಹೆಚ್ಚು ಹೃದಯ ಸಂಬಂಧಿ ಕಾಯಿಲೆ ಅಪಾಯವ ಹೊಂದಿರುತ್ತಾರೆ. ಮಧುಮೇಹ, ಮೂತ್ರಪಿಂಡದ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರು ಹೃದ್ರೋಗ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಕರಿದ ಪದಾರ್ಥ ಮತ್ತು ಉಪ್ಪಿನ ಸೇವನೆ ಕಡಿಮೆ…

Read More

ಕೆಎನ್‌ಎನ್‌ಸಿನಿಮಾಡೆಸ್ಕ್‌: ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ ಇಂದು ಬಿಡುಗಡೆಗೊಳ್ಳಲಿದೆ. ಅಂದ ಹಾಗೇ ಇಂದು ಬಿಡುಗಡೆಯ ಹೊಸ್ತಿಲಲ್ಲೇ ಪ್ರೇಕ್ಷಕರ ಕೌತಕ ಮೂಡಿಸು ಸಲುವಾಗಿ ಈ ಸಿನಿಮಾದಿಂದ ಹೊಸ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ‘ನಗುವಿನ ಹೂಗಳ ಮೇಲೆ’ ಒಂದಷ್ಟು ನಿರೀಕ್ಷೆ ಮೂಡಿಸಿದೆ. ಆ ನಿರೀಕ್ಷೆಗಳನ್ನು ಹೆಚ್ಚಿಸುವ ಸಲುವಾಗಿ ಈ ಹಾಡು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಪ್ರೀತಿ-ಪ್ರೇಮದ ಹಲವು ಮಜಲುಗಳು ಇವೆ. ಅವುಗಳಲ್ಲಿ ಒಂದು ಭಾವದ ಅಭಿವ್ಯಕ್ತಿಯ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಕಿರಣ್ ನಾಗರಾಜ್ ಸಾಹಿತ್ಯ ಮತ್ತು ರೋನಿ, ಮೇಘನಾ ಕಠಸಿರಿಯಲ್ಲಿ ಮುದ್ದಾಗಿ ರೂಪುಗೊಂಡಿರುವ ಈ ಹಾಡು ಫಲಿಸಿದ ಪ್ರೇಮದ ಎಲ್ಲ ಭಾವಗಳನ್ನೂ ಸಶಕ್ತವಾಗಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಜೀ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿರುವ ಮುದ್ದು ಬೇಬಿ ಹಾಡು ಬಹು ಬೇಗನೆ ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ಇನ್ನೇನು ಪ್ರೇಮಿಗಳ ದಿನ ಹತ್ತಿರದಲ್ಲಿದೆ. ಆ ಹೊತ್ತಿಗೆಲ್ಲ ಈ ಹಾಡು ಸಮಸ್ತ ಪ್ರೇಮಿಗಳ ಫೇವರಿಟ್ ಆಗಿ ಬದಲಾಗುವ ಲಕ್ಷಣಗಳಿವೆ. ಇದು ಪರಿಶುದ್ಧ…

Read More

ಕೆಎನ್‌ಎನ್‌ಸಿನಿಮಾಡೆಸ್ಕ್‌: ‘ತಾರಕಾಸುರ’ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ನಲ್ಲಿ ಭರವಸೆ ಮೂಡಿಸಿರುವ ಯಂಗ್ ಹೀರೋ ರವಿ ಈಗ ‘ಕೈಲಾಸ ಕಾಸಿದ್ರೆ’ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಅಂದ ಹಾಗೇ ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಸಿರುವ ಕೈಲಾಸ ಚಿತ್ರತಂಡದಿಂದ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥ ಟ್ರಾನ್ಸ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದು. ಪಡ್ಡೆ ಹುಡುಗರು ಇದನ್ನು ಮೆಚ್ಚಿಕೊಳ್ಳುತ್ತಿದ್ದಾರೆ.  ಅಂದ ಹಾಗೇ ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಸಿರುವ ಕೈಲಾಸ ಚಿತ್ರತಂಡದಿಂದ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥ ಟ್ರಾನ್ಸ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದು. ಪಡ್ಡೆ ಹುಡುಗರು ಇದನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಟ್ರಾನ್ಸ್ ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಲೇಖಕ್ ಎಂ ಸಿದ್ದಾರ್ಥ ಸಾಹಿತ್ಯ ಒದಗಿಸಿದ್ದಾರೆ. ಆಶಿಕ್ ಅರುಣ್ ಸಂಗೀತ ಸಂಯೋಜನೆಯೊಂದಿಗೆ ಈ ಟ್ರಾನ್ಸ್ ವೀಡಿಯೋ ಸಾಂಗ್ ಮೂಡಿ ಬಂದಿದೆ. ಇದು ಕ್ರೈಂ ಕಂ ಕಾಮಿಡಿ ಜಾನರಿಗೊಳಪಡುವ ಚಿತ್ರ. ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ…

Read More