Author: kannadanewsnow07

ಬೆಂಗಳೂರು : ಬರದಿಂದ ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗುಳೇ ಹೋಗದಂತೆ ತಡೆಯಲು ರಾಜ್ಯ ಸರ್ಕಾರದಿಂದ 860 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ದ್ದರಾಮಯ್ಯ ಮಾಹಿತಿ ನೀಡಿದ್ದು, ಜನರು ಗುಳೇ ಹೋಗದಂತೆ ತಡೆಯಲು ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ₹ 2000ದಂತೆ ಅಂದಾಜು 34 ಲಕ್ಷ ರೈತರಿಗೆ ₹ 650 ಕೋಟಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ ತಿಳಿಸಿದ್ದಾರೆ. ಇದೇ ವೇಳೆ ಅವರು ಬರದ ಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಕುಡಿಯುವ ನೀರು, ಮೇವು, ಉದ್ಯೋಗ ಒದಗಿಸಲಾಗುತ್ತಿದೆ. ರಾಜ್ಯದಿಂದ 860 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದ್ದು, ಇದನ್ನು ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Read More

ನವದೆಹಲಿ: ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಅನ್ನು ರಾಷ್ಟ್ರೀಯ ಆರೋಗ್ಯ ನೀತಿ 2017 ರ ಶಿಫಾರಸಿನಂತೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯ (ಯುಎಚ್ಸಿ) ದೃಷ್ಟಿಕೋನವನ್ನು ಸಾಧಿಸಲು ಪ್ರಾರಂಭಿಸಲಾಯಿತು. ಈ ಉಪಕ್ರಮವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿ) ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಪಿಎಂ-ಜೆಎವೈ ಅಡಿಯಲ್ಲಿ ಪ್ರಯೋಜನ ರಕ್ಷಣೆ : ಭಾರತದಲ್ಲಿನ ವಿವಿಧ ಸರ್ಕಾರಿ ಅನುದಾನಿತ ಆರೋಗ್ಯ ವಿಮಾ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಯಾವಾಗಲೂ ವಿವಿಧ ರಾಜ್ಯಗಳಲ್ಲಿನ ಪ್ರತಿ ಕುಟುಂಬಕ್ಕೆ ವಾರ್ಷಿಕ 30,000 ರೂ.ಗಳಿಂದ 3,00,000 ರೂ.ಗಳವರೆಗಿನ ಗರಿಷ್ಠ ಮಿತಿಯ ಮಿತಿಯಲ್ಲಿ ರಚಿಸಲಾಗಿದೆ, ಇದು ವಿಭಜಿತ ವ್ಯವಸ್ಥೆಯನ್ನು ಸೃಷ್ಟಿಸಿದೆ. ಪಿಎಂ-ಜೆಎವೈ ಪಟ್ಟಿ ಮಾಡಲಾದ ದ್ವಿತೀಯ ಮತ್ತು ತೃತೀಯ ಆರೈಕೆ ಪರಿಸ್ಥಿತಿಗಳಿಗಾಗಿ ಪ್ರತಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ 5,00,000 ರೂ.ಗಳವರೆಗೆ ನಗದುರಹಿತ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಕವರ್ ಚಿಕಿತ್ಸೆಯ ಈ ಕೆಳಗಿನ ಘಟಕಗಳಿಗೆ ಮಾಡಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿದೆ. ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಮತ್ತು ಸಮಾಲೋಚನೆ ಆಸ್ಪತ್ರೆಗೆ ದಾಖಲಾಗುವ ಮೊದಲುೃ ಔಷಧ ಮತ್ತು…

Read More

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ ತಿದ್ದುಪಡಿ ತರಲಾಗುವುದುಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂಪಾರ್ಕ್ ನಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಷವನ್ನು ಉದ್ಘಾಟಿಸಿದ ಬಳಿಕ ರೈತ ಪರ ಬಜೆಟ್ ರೂಪಿಸಲು ರೈಸ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು. ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಸರ್ಗದರ್ಶನ ನನಗೆ ಅನುಕೂಲವಾಯಿತು ಎಂದರು. ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಇವರು ಬೆಳೆಸಿದ ರೈತ ಚಳವಳಿ ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ…

Read More

ಬೆಂಗಳೂರು: ಈಶ್ವರಪ್ಪ ಅವರ ಮನೆಗೆ ನಾನೇ ಹೋಗ್ತೀನಿ. ಅವರೇ ನನಗೆ ಗುಂಡು ಹೊಡೆಯಲಿ ಅಂತ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್‌ ಅವರು ತಿರುಗೇಟು ನೀಡಿದ್ದಾರೆ.ೃ ಅವರು ಇಂದು ನಗರದಲ್ಲಿ ಸುದ್ದಿಗಾರರ ಜತೊಎಗೆ ಮಾತನಾಡುತ್ತ ಮಹಾತ್ಮ ಗಾಂಧಿ ಅವರನ್ನು ಕೊಂದ ಪಕ್ಷ ಅವರದ್ದು. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರ ಮಾತನಾಡಿದ್ದಕ್ಕೆ‌ ಹೀಗೆ ಹೇಳಿರಬಹುದು. ಬಡವರ ಮಕ್ಕಳನ್ನು ಯಾಕೆ ಬಾವಿಗೆ ತಳ್ಳಬೇಕು?. ಬಡವರ ಮಕ್ಕಳನ್ನು ಯಾಕೆ ರೊಚ್ಚಿಗೆ ಎಬ್ಬಿಸ್ತಿರಾ‌‌?. ಪಕ್ಷದಲ್ಲಿ ಅವರನ್ನು ಮೂಲೆ ಗುಂಪು ಮಾಡಿದ್ದಾರೆ ಅಂತ ವ್ಯಂಗ್ಯವಾಡಿದರು. ಇನ್ನೂ ನಾನೇ ಸಮಯ ಕೊಡ್ತೀನಿ. ಒಂದು ವಾರದಲ್ಲಿ ಯಾವಾಗ ಅಂತಲೂ ಹೇಳುವೆ. ನಾನೇ ಈಶ್ವರಪ್ಪ ಅವರ ಮನೆಗೆ ಹೋಗ್ತೀನಿ. ಅವರೇ ನನಗೆ ಗುಂಡು ಹೊಡೆಯಲಿ.‌ ಹೇಳಿಕೆ ಮೂಲಕ ಬಡವರ ಮಕ್ಕಳನ್ನು ರೊಚ್ಚಿಗೆಬ್ಬಿಸುವುದು ಬೇಡ‌. ಅವರೇ ಆ ಕೆಲಸ ಮಾಡಲಿ ಎಂದು ಹೇಳಿದರು.

Read More

ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಶನಿವಾರ ಲೋಕಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡಿ, ಅಯೋಧ್ಯೆಯ ರಾಮ ಮಂದಿರ ಸ್ಥಳದಲ್ಲಿ ಬಾಬರಿ ಮಸೀದಿ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ ಎಂದು ಘೋಷಿಸಿದರು. ಅವರು ತಮ್ಮ ಭಾಷಣವನ್ನು ‘ಬಾಬರಿ ಮಸ್ಜಿದ್ ಜಿಂದಾಬಾದ್’ ಘೋಷಣೆಯೊಂದಿಗೆ ಮುಕ್ತಾಯಗೊಳಿಸಿದರ ಘಟನೆ ನಡೆದಿದೆ. “ಮಸೀದಿ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಅದು ಒಂದು ಕಾಲದಲ್ಲಿ ಇದ್ದ ಸ್ಥಳದಲ್ಲಿಯೇ ಉಳಿಯುತ್ತದೆ ಎಂದು ನನ್ನ ನಂಬಿಕೆ. ಬಾಬರಿ ಮಸೀದಿ ಇತ್ತು, ಇದೆ ಮತ್ತು ಮುಂದುವರಿಯುತ್ತದೆ. ಬಾಬರಿ ಮಸೀದಿ ದೀರ್ಘಕಾಲ ಬಾಳಲಿ, ಭಾರತ ದೀರ್ಘಕಾಲ ಬಾಳಲಿ, ಜೈ ಹಿಂದ್ ಆಗಿರಲಿ” ಎಂದು ಅವರು ಹೇಳಿದರು. ಇದೇ ವೇಳೆ ಅವರು ಮಾತನಾಡುತ್ತ “ಮೋದಿ ಸರ್ಕಾರವು ಒಂದು ನಿರ್ದಿಷ್ಟ ಸಮುದಾಯ, ಧರ್ಮದ ಸರ್ಕಾರವೇ ಅಥವಾ ಇಡೀ ದೇಶದ ಸರ್ಕಾರವೇ ಎಂದು ನಾನು ಕೇಳಲು ಬಯಸುತ್ತೇನೆ. ಭಾರತ ಸರ್ಕಾರಕ್ಕೆ ಒಂದು ಧರ್ಮವಿದೆಯೇ? ಈ ದೇಶಕ್ಕೆ ಧರ್ಮವಿಲ್ಲ ಎಂದು ನಾನು ನಂಬುತ್ತೇನೆ. ಜನವರಿ 22 ರ ಮೂಲಕ, ಒಂದು ಧರ್ಮವು ಇನ್ನೊಂದರ ಮೇಲೆ ಗೆದ್ದಿದೆ…

Read More

ಬೆಂಗಳೂರು: ಕೋರ್ಟ್‌ಗೆ ಗೈರು ಹಿನ್ನಲೆ, ಸಾರಿಗೆ ಸಚಿವ ರಾಮಲಿಂಗರೆಡ್ಡಿಗೆ ಜಾಮೀನು ರಹಿತ ವಾರಂಟ್‌ ಜಾರಿ ಮಾಡಲಾಗಿದೆ ಅಂತ ತಿಳಿದುಬಂದಿದೆ. ಬೆಂಗಳೂರಿನ 44ಎಸಿಎಂಎಂ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೇ ಕೋವಿಡ್‌ನಿಯಮವನ್ನು ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಅವರ ವಿರುದ್ದ ಕೇಸ್‌ ದಾಖಲು ಮಾಡಲಾಗಿತ್ತು, ಆದರೆ ಅವರು ನ್ಯಾಯಾಲಯಕ್ಕೆ ಬಾರದ ಹಿನ್ನಲೆಯಲ್ಲಿ ಅವರ ವಿರುದ್ದ ಜಾಮೀನು ರಹಿತ ವಾರಂಟ್‌ ಅನ್ನು ನ್ಯಾಯಾಲಯವು ಹೊರಡಿಸಿದೆ.

Read More

ಕೆಎನ್‌ಎನ್‌ಸಿನಿಮಾಡೆಸ್ಕ್‌: ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿರುವ ‘ರವಿಕೆ ಪ್ರಸಂಗ’ ಸಿನಿಮಾ ಇದೇ ಫೆ. 16ಕ್ಕೆ ಬಿಡುಗಡೆಯಾಗಲಿದ್ದು, ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿಯಾಗಿ ಎಲ್ಲ ಕಡೆ ಸಖತ್ತು ಸೌಂಡ್‌ ಮಾಡುತ್ತಿದೆ. ಅಂದ ಹಾಗೇ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಸುತ್ತಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ, ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿ, ಹಲವಾರು ಹೊಸತನಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲು ಮುಂದಾಗಿದೆ. ಸದ್ಯ ಸಿನಿಮಾ ಮಂದಿ ಉಡುಪಿಯ ಪ್ರಸಿದ್ಧ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಮೀಟ್ ಆಂಡ್ ಗ್ರೀಟ್ ಕಾನ್ಸೆಪ್ಟಿನಲ್ಲೊಂದು ಚೆಂದದ ಪ್ರಚಾರ ಕಾರ್ಯ ಮಾಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ರವಿಕೆ ಪ್ರಸಂಗದ ಪ್ರಚಾರದ ನೆಪದಲ್ಲೊಂದು ಹಬ್ಬವೇ ನಡೆದು ಹೋಗಿದೆ. ಈ ಮಳಿಗೆಯ ಸರಿಸುಮಾರು ಒಂಬೈನೂರಕ್ಕೂ ಹೆಚ್ಚು ಸಿಬ್ಬಂದಿಗಳ ಸಮ್ಮುಖದಲ್ಲಿ ಚಿತ್ರ ತಂಡ ಮಾತನಾಡಿದೆ. ಇನ್ನೂ ಈ ಮಳಿಗೆಯ ಮಾಲೀಕರಾದ ವೀರೇಂದ್ರ ಹೆಗ್ಡೆ ಅವರ ಸಿನಿಮಾ ಪ್ರೀತಿಯಿಂದಾಗಿ. ಅವರು ಅತ್ಯಂತ…

Read More

ಬೆಂಗಳೂರು: ಈಗ ಕರ್ನಾಟಕದ ಸಿಎಂ ಯಾರು? ಈಗಲೂ ಬಸವರಾಜ ಬೊಮ್ಮಾಯಿ ಅಂತ ಹೇಳಿದ್ರೆ ನೀವು ನಮ್ಮ ವಿರುದ್ದ ತಿರುಗಿಬಿಳೋದು ಖಂಡಿತ. ಆದರೆ ಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಯುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ನಲ್ಲಿ ಈಗಲೂ ಕೂಡ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಅಂತ ಇರೋದು ನೀವು ಕಾಣಬಹುದಾಗಿದೆ. ಕಣಜ ಯೋಜನೆಯ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದರೆ ನೀವು ಈ ಬಗ್ಗೆ ಕಾಣಬಹದಾಗಿದೆ.  ಕರ್ನಾಟಕ ಸರ್ಕಾರದ ಬಹುತೇಕ ವೆಬ್‌ಸೈಟ್‌ಗಳು ಅಪ್‌ಡೇಟ್‌ ಆಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇನ್ನಾದ್ರೂ ಸಂಬಂಧಪಟ್ಟ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿದರೆ ಒಳಿತು ಎನ್ನುತ್ತಿದ್ದಾರೆ ಜನತೆ. ಇಲ್ಲಿ ಕ್ಲಿಕ್‌ ಮಾಡಿ:  https://kannadanewsnow.com/kannada/we-have-turned-vyapar-soudha-into-praja-soudha-priyank-kharge-to-opposition-leaders/ https://kannadanewsnow.com/kannada/namo-hatric-anurag/

Read More

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅಧಿಸೂಚನೆ ಹೊರಡಿಸಲಾಗುವುದು ಮತ್ತು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅಧಿಸೂಚನೆ ಹೊರಡಿಸಲಾಗುವುದು ಮತ್ತು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಈ ಕಾಯ್ದೆಯನ್ನು 2019 ರ ಡಿಸೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿತು. https://kannadanewsnow.com/kannada/kannada-news-now-invites-applications-for-the-post-of-deputy-editor/ ಸಿಎಎ ದೇಶದ ಕಾಯ್ದೆ, ಅದನ್ನು ಖಂಡಿತವಾಗಿಯೂ ತಿಳಿಸಲಾಗುವುದು… ಇದನ್ನು ಚುನಾವಣೆಗೆ ಮುಂಚಿತವಾಗಿ ತಿಳಿಸಲಾಗುವುದು… ಈ ಬಗ್ಗೆ ಯಾವುದೇ ಗೊಂದಲ ಇರಬಾರದು” ಎಂದು ದೆಹಲಿಯಲ್ಲಿ ನಡೆದ ಇಟಿ ನೌ-ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಶಾ ಹೇಳಿದರು. https://kannadanewsnow.com/kannada/breaking-philiphines-earthquake/ https://kannadanewsnow.com/kannada/breaking-good-news-for-subscribers-epf-interest-rate-hiked-to-8-25/

Read More

ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.15 ರಿಂದ ಶೇಕಡಾ 8.25 ಕ್ಕೆ ಹೆಚ್ಚಿಸಿದೆ. ಮಾರ್ಚ್ 2023 ರಲ್ಲಿ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇಪಿಎಫ್ ಮೇಲಿನ ಬಡ್ಡಿದರವನ್ನು 2021-22ರಲ್ಲಿ ಶೇಕಡಾ 8.10 ರಿಂದ 2022-23 ಕ್ಕೆ ಶೇಕಡಾ 8.15 ಕ್ಕೆ ಹೆಚ್ಚಿಸಿತ್ತು. ಮಾರ್ಚ್ 2022 ರಲ್ಲಿ, ಇಪಿಎಫ್ಒ ತನ್ನ ಆರು ಕೋಟಿ ಚಂದಾದಾರರಿಗೆ 2021-22ರ ಇಪಿಎಫ್ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಿತ್ತು. ಇದು 1977-78ರ ನಂತರದ ಅತ್ಯಂತ ಕಡಿಮೆ ಪ್ರಮಾಣವಾಗಿದ್ದು, ಇಪಿಎಫ್ ಬಡ್ಡಿದರವು ಶೇಕಡಾ 8 ರಷ್ಟಿತ್ತು. 2020-21ರ ಇಪಿಎಫ್ ಠೇವಣಿಗಳ ಮೇಲಿನ ಶೇಕಡಾ 8.5 ರಷ್ಟು ಬಡ್ಡಿದರವನ್ನು ಸಿಬಿಟಿ ಮಾರ್ಚ್ 2021 ರಲ್ಲಿ ನಿರ್ಧರಿಸಿತು. ಸಿಬಿಟಿ ನಿರ್ಧಾರದ ನಂತರ, 2023-24ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು ಎನ್ನಲಾಗಿದೆ. ಸರ್ಕಾರದ ಅನುಮೋದನೆಯ ನಂತರ, 2023-24ರ ಇಪಿಎಫ್ ಮೇಲಿನ ಬಡ್ಡಿದರವನ್ನು…

Read More