Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ದಕ್ಷಣ ಭಾರತದಲ್ಲಿ ಎಳನೀರಿನ ಉತ್ಪಾದನೆ ಹಾಗು ಎಳನೀರಿನ ಸೇವನೆ ಅಧಿಕ. ಇದು ನೈರ್ಗಿಕ ಶಕ್ತಿದಾಯಕವಾದ ಪಾನೀಯ. ಅಂದರೆ ನ್ಯಾಚ್ಯುರಲ್‌ ಎನರ್ಜಿ ಡ್ರಿಂಕ್‌. ಇದರ ಸೇವನೆಯಿಂದಾಗಿ ಆರೋಗ್ಯಕ್ಕೆ ಅನೇಕ ಲಾಭಗಳು ಇವೆ. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು ಇದರ ಸೇವನೆಯ ತಕ್ಷಣವೇ ದೇಹಕ್ಕೆ ನವಚೈತನ್ಯ ಉಂಟಾಗುತ್ತದೆ. ದೇಹಕ್ಕೆ ನಿಶಕ್ತಿ ಉಂಟಾದರೆ ಇದರ ಸೇವನೆಯಿಂದ ದೇಹ ಕೂಡಲೇ ಶಕ್ತಿಯುತವಾಗಿ ಚಟುವಟಿಕೆಯಿಂದಿರಬಹುದು. ಬಿಸಿಲಿಗೆ ಬಳಲಿದವರಿಗ ಎಳನೀರು ಜೀವಾಮೃತ ಎಂದರೆ ತಪ್ಪಿಲ್ಲ. ಎಳನೀರು ಸೇವನೆ ದೇಹದ ಒಳಗಲ್ಲ. ದೇಹದ ಹೊರಭಾಗಗಳಾದ ಚರ್ಮ, ಕೂದಲಿಗೂ ಉತ್ತಮ ಆರೈಕೆ ನೀಡುತ್ತದೆ. ಹಾಗು ಇದರ ಸೇವನೆಯಿಂದ ಕೆಲಸದ ಹಾಗು ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ. ಗರ್ಭಿಣಿಯರು ನಿಯಮಿತವಾಗಿ ಎಳನೀರು ಸೇವಿಸಿದರೆ ತಾಯಿ ಮಗು ಇಬ್ಬರ ಆರೋಗ್ಯ ವೃದ್ಧಿಯಾಗುತ್ತದೆ. ಇದರಲ್ಲಿ ಒಮೆಗಾ 3 ಅಂಶವಿದ್ದು, ಇದು ಮಗುವಿನ ಮೆದುಳಿನ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಹಾಗಾಗಿ ವೈದ್ಯರು ಗರ್ಭಿಣಿಯರಿಗೆ ನಿಯಮಿತವಾಗಿ ಎಳನೀರು ಸೇವಿಸಲು ಹೇಳುತ್ತಾರೆ. ಎಳನೀರು ಸೇವನೆ ಉತ್ತಮ ಜೀರ್ಣಕ್ರಿಯೆಗೆ ತುಂಬಾ ಪೂರಕವಾಗಿದೆ. ಇದರಲ್ಲಿ ಕ್ಯಾಟಲೇಸ್‌,…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪೈನಾಪಲ್‌ ಅನ್ನು ಊಷ್ಣ ಅನಾನಸ್‌ ಎಂತಲೂ ಕರೆಯುತ್ತಾರೆ. ಹುಳಿ ಸಿಹಿ ಅಂಶವಿರುವ ಈ ಹಣ್ಣನ್ನು ಇಷ್ಟಪಟ್ಟು ತುನ್ನುವವರ ಸಂಖ್ಯೆ ಕಡಿಮೆ ಎನ್ನಬಹುದು. ಆದರೆ ಇದರಲ್ಲಿರುವ ಪ್ರೋಟೀನ್‌, ಪೋಷಕಾಂಶಗಳು ಮುಖದ ಮೇಲಿನ ಮೊಡವೆಯಿಂದ ಹಿಡಿದು ಕ್ಯಾನ್ಸರ್‌ ವಿರುದ್ಧ ಹೋರಾಡಲೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹೆಚ್ಚು ಹುಳಿ ಅಂಶವಿರುವ ಈ ಅನಾನಸ್‌ ಹಣ್ಣಿನಲ್ಲಿ ವಿಟಾಮಿನ್‌ ಎ,ಬಿ,ಸಿ, ಮ್ಯಾಗ್ನೀಸ್‌, ಪೊಟ್ಯಾಶಿಯಂ, ಸತು ಹಾಗು ದೇಹಕ್ಕೆ ಬೇಕಾದ ಅತ್ಯಗತ್ಯ ಖನಿಜಾಂಶಗಳು ಇದರಲ್ಲಿದೆ. ಅನಾನಸ್‌ ಅಥವಾ ಪೈನಾಪಲ್‌ನ ಮತ್ತೊಂದು ವಿಶೇಷತೆ ಏನೆಂದರೆ ಇದು ಜೋರೋ ಕೊಲೆಸ್ಟ್ರಾಲ್‌ ಹೊಂದಿದೆ. ಇದು ನಾಲಿಗೆಗೂ ರುಚಿ ಹಾಗು ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪೈನಾಪಲ್‌ ತಿನ್ನುವುದರಿಂದ ಮಾನಸಿಕ ಒತ್ತಡ ನಿವಾಣೆಯಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಸಮೃದ್ಧವಾದ ಆಂಟಿಆಕ್ಸಿಡೆಂಟ್‌ಗಳು ಒತ್ತಡವನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಫ್ಲೇವನಾಯ್ಡ್ಸ್‌ ಹಾಗು ಫೇನೋಲಿಕ್‌ ಆಸಿಡ್‌ಗಳು ಇದ್ದು ಇದರ ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘಕಾಲದ ಉತ್ತಮ ಪರಿಣಾಮ ಬೀರಲಿದೆ. ನಿರಂತವಾಗಿ ಹಾಗು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಆಲುಗಡ್ಡೆ ಜಾತಿಗೆ ಸೇರಿಸ ಸಿಹಿ ಗೆಣಸನ್ನು ಸಿಹಿ ಆಲುಗಡ್ಡೆ ಎಂತಲೂ ಕರೆಯುತ್ತಾರೆ. ಸಂಕ್ರಾತಿಯ ಹಬ್ಬದ ಸಮಯದಲ್ಲಿ ಸಿಹಿ ಗೆಣಸು ಹೇರಳವಾಗಿ ಸಿಗುತ್ತವೆ. ಈ ಸಮಯದಲ್ಲಿ ಗೆಣಸಿನ ಬಗೆ ಬಗೆಯ ಅಡುಗೆ ಮಾಡಿ ಸವಿದಿರುತ್ತೀರಿ ಆದರೆ ಚಳಿಗಾಲದಲ್ಲಿ ನೀವು ಸೇವಿಸುವ ಈ ಸಿಹಿ ಗೆಣಸಿನ ಪ್ರಯೋಜನೆಗಳು ಅನೇಕ ಅನ್ನೋ ವಿಷಯವೂ ನಿಮಗೆ ತಿಳಿದಿರಲಿ. ಸಿಹಿ ಗೆಣಸು ಅನೇಕ ಪೋಷಕಾಂಶಗಳನ್ನು ಹೊಂದಿದ್ದು. ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸಿಹಿ ಗೆಣಸಿನಲ್ಲಿ ಫೈಬರ್‌, ಅನೇಕ ಜೀವಸತ್ವಗಳು, ಮತ್ತು ಖನಿಜಗಳು ಹೇರಳವಾಗಿವೆ. ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಸಹ ಇದರಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಇಷ್ಟೆಲ್ಲಾ ಪೋಷಕಾಂಶ ಇರುವ ಸಿಹಿ ಗೆಣಸಿನ ಸೇವನೆ ಮಾಡಿದರೆ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಯಸ್ಸಾದವರಿಗೆ ಸಿಹಿ ಗೆಣಸಿನ ಸೇವನೆ ತುಂಬಾ ಪ್ರಯೋಜನಕಾರಿ. ಇದು ವಯಸ್ಕರ ಹೃದ್ರೋಗ ಸಮಸ್ಯೆಗಳನ್ನು ತಡೆಹಿಡಿಯುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯ ಕಾಪಾಡುತ್ತದೆ. ಆಂಟಿ ಆಕ್ಸಿಡೆಂಟ್‌ಯುಕ್ತ ಆಹಾರ ಸೇವನೆ ನಿಮ್ಮ ಆರೋಗ್ಯಕ್ಕೆ ತುಂಬಾ ಉಪಕಾರಿಯಾಗಿದೆ. ಗೆಣಸಿನಲ್ಲಿರುವ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಮರ್ಪಕವಾದ ನೀರು ಸೇವನೆ ಉತ್ತಮ ಆರೋಗ್ಯದ ಗುಟ್ಟು. ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಟ ಎಂಟು ಗ್ಲಾಸ್‌ ನೀರು ಕುಡಿಯಲೇ ಬೇಕು. ನೀರು ಸೇವನೆ ದೇಹದ ವಿಷಕಾರಿ ಅಂಶಗಳು ಆಚೆದೂಡುತ್ತವೆ. ಇನ್ನು ಬೆಳಗಿನ ಜಾವ ನಿತ್ಯಕರ್ಮಗಳನ್ನು ಮುಸಿಕೊಂಡ ನಂತರ ಒಂದು ಗ್ಲಾಸ್‌ ಉಗುರುಬೆಚ್ಚಗಿನ ನೀರು ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೆ ಇನ್ನಿಲ್ಲದ ಚಮತ್ಕಾರ ಆಗುತ್ತದೆ. ಹೀಗೆ ನಿರಂತವಾಗಿ ಬೆಳಗ್ಗೆ ಒಂದು ಗ್ಲಾಸ್‌ ಬಿಸಿ ನೀರು ಸೇವಿಸುತ್ತಾ ಬನ್ನಿ, ನಿಮ್ಮ ದೇಹದ ಮೇಲಾಗುವ ಉತ್ತಮ ಪರಿಣಾಮಗಳನ್ನು ನೀವೇ ಕಂಡುಕೊಳ್ಳುವಿರಿ. ಬಿಸಿ ನೀರು ಸೇವಿಸಿದರೆ ನಿಮ್ಮ ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಲಭಗೊಳಿಸಿ ಮಲಬದ್ಧತೆ ಸಮಸ್ಯೆಯಿಂದ ದೂರ ಉಳಿಯುವಂತೆ ಮಾಡುತ್ತದೆ. ಬಿಸಿ ನೀರು ಕುಡಿದಾಗ ನೀವು ಬೆವರಲು ಶುರು ಮಾಡುತ್ತೀರಿ. ಈ ಬೆವರಿನ ಮೂಲಕ ದೇಹದ ಕಲ್ಮಷ ಹೊರ ಹೋಗುತ್ತದೆ. ಬೆಚ್ಚಗಿನ ನೀರನ್ನು ನಿತ್ಯವೂ ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹೀಗೆ ಬಿಸಿ ನೀರು ಸೇವಿಸಿದರೆ ರಕ್ತನಾಳದಲ್ಲಿ ಅತ್ಯಧಿಕ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೂದಲಿನ ಆರೈಕೆಯ ಬಗ್ಗೆ ಅದೆಷ್ಟೋ ಲೇಖನಗಳನ್ನು ಓದಿರುತ್ತೀರಿ. ಆದರೆ ನಾವಿಂದು ಹೇಳುವ ಕೂದಲಿನ ಆರೈಕೆಯ ಕೆಲ ಟಿಪ್ಸ್‌ ನಿಮ್ಮ ಜೀವನದುದ್ದಕ್ಕೂ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತವೆ. ನಾವು ಹೇಳುವ ಈ ಮುಂದಿನ ಟಿಪ್ಸ್‌ ಫಾಲೋ ಮಾಡಿ ಕೂದಲಿನ ಆರೋಗ್ಯ ಹೆಚ್ಚಿಸಿಕೊಳ್ಳಿ. ಕೂದಲು ಹೆಣ್ಣಿನ ಸೌಂದರ್ಯದ ಒಂದು ಭಾಗ. ಸೊಂಪಾದ, ನೀಳವಾದ, ಹಾಗು ಉದ್ದ, ದಟ್ಟವಾದ ಕೂದಲು ಹೊಂದಿದ್ದರೆ ಅವರನ್ನು ಯಾರಾದರೂ ಒಮ್ಮೆ ತಿರುಗಿ ನೋಡಿಯೇ ನೋಡುತ್ತಾರೆ. ಇಂತವರು ನೋಡಲು ಸಿಗುವುದು ತೀರಾ ಅಪರೂಪ. ಬದಲಾದ ಜೀವನಶೈಲಿ ಹಾಗು ಒತ್ತಡ ಜೀವನ ಕೂದಲನ್ನು ತುಂಡಾಗಿಸಿವೆ. ಹಾಗಾಗಿ ಆರೋಗ್ಯಕರ ಕೂದಲನ್ನು ಪಡೆಯಲು ಈ ಕೆಳಗಿನ ಟಿಪ್ಸ್‌ ಫಾಲೋ ಮಾಡಿ. ಕೂದಲಿನ ಆರೋಗ್ಯಕ್ಕೆ ಮುಖ್ಯವಾದ ಅಂಶ ಎಂದರೆ ನಾವು ಬಳಸುವ ಎಣ್ಣೆ. ಹಾಗಾಗಿ ನೆತ್ತಿಗೆ ಶುಭ್ರವಾದ ತೆಂಗಿನ ಎಣ್ಣೆಯಿಂದ ಮಸಾಜ್‌ ಮಾಡಿ. ಹೊರಗಡೆ ಸಿದ್ಧವಾಗಿ ಸಿಗುವ ಕೊಬ್ಬರಿಯಣ್ಣೆಗಿಂತ ಆದಷ್ಟು ಗಾಣದಲ್ಲಿ ಮಾಡಿದ ಗೊಬ್ಬರಿ ಎಣ್ಣೆ ಹಚ್ಚಿ ವಾರಕ್ಕೆ ಎರಡು ಬಾರಿ ಮಸಾಜ್‌…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ತಲೆಸೋವು ಆಗಾಗ ಬಂದ ಹೋಗುವ ಸಣ್ಣ ಕಾಯಿಲೆ ಆದರೆ ತಲೆನೋವು ಬಂತೆಂದರೆ ಅಷ್ಟಿಷ್ಟು ಹಿಂಸೆ ಅಲ್ಲ. ಹಾಗಾಗಿ ಕೆಲವರು ತಲೆನೋವಿಗೆ ಪರಿಹಾರವೆಂದು ಕೆಲ ಪಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇವು ತಕ್ಷಣಕ್ಕೆ ಪರಿಹಾರ ಕೊಟ್ಟರೂ ಮುಂದೆ ಈ ತಲೆನೋವು ಮಾತ್ರೆಗಳು ದೇಹಕ್ಕೆ ದೊಡ್ಡ ಕುತ್ತು ತರುವ ಚಾನ್ಸಸ್‌ ಇರುತ್ತದೆ. ಅಂದರೆ ಇವುಗಳಿಂದ ಅಡ್ಡ ಪರಿಣಾಮಗಳೇ ಜಾಸ್ತಿ. ಹಾಗಾಗಿ ವೈದ್ಯರು ಹೇಳುವ ಪ್ರಕಾರ ತಲೆನೋವು ತನ್ನಷ್ಟಕ್ಕೆ ಬಂದು ಹೋಗಲಿ ಬಿಡಿ ಎಂದು ಸಲಹೆ ನೀಡುತ್ತಾರೆ. ಸಾಂಪ್ರದಾಯಕ ಪದ್ಧತಿಯಲ್ಲಿ ತಲೆನೋವಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ಅಡುಗೆ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ತಲೆನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಪುದಿನಾದಲ್ಲಿ ಅನೇಕ ಔಷಧೀಯ ಗಿಡಮೂಲಿಕೆ ಇವೆ. ಇದನ್ನು ಅಡಿಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತಪರಿಚಲನೆ ಸುಲಭಗೊಳಿಸುತ್ತದೆ. ನರಗಳ ನೋವು ಮತ್ತು ತಲೆನೋವಿಗೆ ಪುದಿನಾ ಉತ್ತಮ ಉತ್ತಮ ಹಾಗು ಬೇಗನೆ ಪರಿಹಾರ ನೀಡುತ್ತದೆ. ನೈಸರ್ಗಿಕವಾದ, ಶುದ್ಧವಾದ ಪುದಿನಾ ಎಣ್ಣೆಯನ್ನು ಹಣೆಗೆ ಹಾಚ್ಚಿ ಮಸಾಜ್‌ ಮಾಡಿದರೆ ತಲೆನೋವು ಕೆಡಿಮೆಯಾಗುತ್ತದೆ.…

Read More

ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕ್ರಮವಾಗಿ ಅಮೇಥಿ ಮತ್ತು ರಾಯ್ ಬರೇಲಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ಗುರುವಾರ (ಫೆಬ್ರವರಿ 29) ತಿಳಿಸಿವೆ. ಒಂದು ವೇಳೆ ಪಕ್ಷವು ಪ್ರಿಯಾಂಕಾ ಗಾಂಧಿ ಅವರ ಹೆಸರನ್ನು ಲೋಕಸಭಾ ಚುನಾವಣೆಗೆ ಘೋಷಿಸಿದರೆ ಇದು ಅವರಿಗೆ ಚೊಚ್ಚಲ ಚುನಾವಣೆಯಾಗಲಿದೆ . 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋಲು ಅನುಭವಿಸಿದ್ದರು.    https://kannadanewsnow.com/kannada/man-arrested-for-duping-more-than-250-women/ https://kannadanewsnow.com/kannada/shivamogga-translation-is-necessary-for-great-ideas-to-cross-the-boundaries-of-country-and-languages-said-prof-k-sudhakar-rajendra-chenni/ 2004 ರಿಂದ ಸೋನಿಯಾ ಗಾಂಧಿ ಸಂಸದರಾಗಿರುವ ರಾಯ್ ಬರೇಲಿ ಮತ್ತೊಂದು ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ, ಆದಾಗ್ಯೂ, ಅವರ ಕುಟುಂಬದ ಇನ್ನೊಬ್ಬ ಸದಸ್ಯ ಲೋಕಸಭಾ ಸ್ಥಾನಕ್ಕೆ ಹೋಗಬಹುದು ಎಂದು ಅವರು ಸುಳಿವು ನೀಡಿದ್ದರು. ಅಮೇಥಿಯಿಂದ ಕೇಂದ್ರ ಸಚಿವೆ ಮತ್ತು ಬಿಜೆಪಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದರೆ ಅಮೇಥಿಯಲ್ಲಿ ಮತ್ತೊಂದು ಕುತೂಹಲಕಾರಿ ಸ್ಪರ್ಧೆ ಎದುರಾಗುವ ಸಾಧ್ಯತೆ…

Read More

ಬೆಂಗಳೂರು: ವೈವಾಹಿಕ ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಸ್ನೇಹ ಬೆಳೆಸಿದ 250 ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಬೆಂಗಳೂರು ರೈಲ್ವೆ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  https://kannadanewsnow.com/kannada/humans-are-better-than-intelligent-aliens-in-space-travel-study/ ಆರೋಪಿಯನ್ನು ರಾಜಸ್ಥಾನ ಮೂಲದ ನರೇಶ್ ಪೂಜಾರಿ ಗೋಸ್ವಾಮಿ ಎಂದು ಗುರುತಿಸಲಾಗಿದ್ದು, ಕಳೆದ 20 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೈವಾಹಿಕ ಸೈಟ್ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ನಕಲಿ ಪ್ರೊಫೈಲ್ಗಳನ್ನು ರಚಿಸಿ, ಮಹಿಳೆಯರು ಮತ್ತು ಅವರ ಕುಟುಂಬಗಳನ್ನು ಹಣ ಪಾವತಿಸುವಂತೆ ಆಮಿಷವೊಡ್ಡುತ್ತಿದ್ದನು ಎನ್ನಲಾಗಿದೆ. https://kannadanewsnow.com/kannada/eat-beetroot-regularly-for-health-balance/ ಆರೋಪಿಗಳು ಯುವಕರ ಫೋಟೋಗಳನ್ನು ಬಳಸಿಕೊಂಡು ಆನ್ಲೈನ್ನಲ್ಲಿ ಪ್ರೊಫೈಲ್ಗಳನ್ನು ರಚಿಸಿ ಕಸ್ಟಮ್ಸ್ ಅಧಿಕಾರಿ ಮತ್ತು ಸಾಫ್ಟ್ವೇರ್ ಎಂಜಿನಿಯರ್ ಎಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಒಟ್ಟು 259 ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಅವನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿ ಅಥವಾ ಸಾಫ್ಟ್ವೇರ್ ಎಂಜಿನಿಯರ್…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೀಟ್‌ರೂಟ್‌ನ್ನು ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೆಷ್ಟೋ ಜನ ಬೀಟ್‌ರೂಟ್‌ ಎಂದರೆ ಮಾರುದ್ದ ಸರೆಯುತ್ತಾರೆ. ಹೀಗೆ ಬೀಟ್‌ರೂಟ್‌ನಿಂದ ದೂರವಿದ್ದವರು ಅದೆಷ್ಟೋ ಪೋಷಕಾಂಶಗಳಿಂದ ವಂಚಿತರಾಗಿದ್ದಾರೆ ಅಂತ ಅರ್ಥ. ಬೀಟ್‌ರೂಟ್‌ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ ಎಂದು ಈ ಲೇಖನದ ಮೂಲಕ ತಿಳಿದುಕೊಂಡ ನೀವು ಇನ್ನು ಮುಂದೆ ಬೀಟ್‌ರೂಟ್‌ ಸೇವೆಯನ್ನು ಪ್ರಾರಂಭಿಸುತ್ತೀರಿ ಎಂದು ಆಶಿಸುತ್ತಾ ಈ ಲೇಖನವನ್ನು ಮುಂದುವರೆಸುತ್ತೇವೆ. ಬೀಟ್‌ರೂಟ್‌ನಲ್ಲಿ ವಿಟಮಿನ್‌ ಎ, ಸಿ ಕ್ಯಾಲ್‌ಶಿಯಮ್‌, ಪೊಟ್ಯಾಷಿಯಂ ಅಂಶವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಒಂದು ಸೂಪರ್‌ ಫುಡ್‌ ಎಂದರೂ ತಪ್ಪಾಗಲಾರದು. ಬೀಟ್‌ರೂಟ್‌ನಲ್ಲಿರುವ ಉತ್ತಮ ಪೋಷಕಾಂಶಗಳು ದೇಹವನ್ನು ಸದಾ ಸದೃಢವಾಗಿರಿಸುತ್ತದೆ. ಹಾಗಾಗಿ ವಾರದಲ್ಲಿ ಎರಡು ಬಾರಿಯಾದರೂ ಬೀಟ್‌ರೂಟ್‌ ಸೇವಿಸಬೇಕು ಅದು ಸಲಾಡ್‌ ರೂಪದಲ್ಲೇ ಆಗಿರಲಿ, ಅಥವಾ ಜ್ಯೂಸ್‌ ಇನ್ನಾವುದೇ ರೂಪದಲ್ಲಿ ಆಗಿರಲಿ. ಯಾರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೋ ಅಂತವರು ಬೀಟ್‌ರೂಟ್‌ ಅನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ. ಬೀಟ್‌ರೂಟ್‌ಅನ್ನು ಸೂಪರ್‌ ಫುಡ್‌ ಎಂದು ಹೇಳಲಾಗುತ್ತದೆ. ಹಾಗಾಗಿ ಬೆಳಗಿನ ಉಪಹಾರದ…

Read More

ಬೆಂಗಳೂರು: ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.‌ ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ, ಆದರೆ ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ ಎಂದರು. ಅನ್ನಭಾಗ್ಯ ಸೇರಿ ಬಡವರು, ಮಧ್ಯಮ ವರ್ಗದವರಿಗೆ ಕೊಟ್ಟ ಭಾಗ್ಯಗಳನ್ನು ಆಡಿಕೊಂಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದುರಂತ. ಇಂಥಾ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ, ಅನ್ನದಾತರು ದುಡಿದರೆ ದೇಶ ಬದುಕುತ್ತದೆ ಎಂದರು. ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂಪಾಯಿ ಕೊಡ್ತೀವಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಆದರೂ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ. ಬಿಜೆಪಿ ಬಡವರ,…

Read More