Author: kannadanewsnow07

ನವದೆಹಲಿ: ಬ್ಯಾಂಕ್ ವೇತನವನ್ನು ವಾರ್ಷಿಕವಾಗಿ ಶೇಕಡಾ 17 ರಷ್ಟು ಹೆಚ್ಚಿಸಲು ಭಾರತೀಯ ಬ್ಯಾಂಕುಗಳ ಸಂಘ ಮತ್ತು ಬ್ಯಾಂಕ್ ಸಿಬ್ಬಂದಿ ಒಕ್ಕೂಟಗಳು ಶುಕ್ರವಾರ ಒಮ್ಮತಕ್ಕೆ ಬಂದಿವೆ. ಇದರರ್ಥ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುಮಾರು 8,284 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದೆ. ನವೆಂಬರ್ 2022 ರಿಂದ, 8 ಲಕ್ಷ ಬ್ಯಾಂಕ್ ಉದ್ಯೋಗಿಗಳು ವೇತನ ಹೆಚ್ಚಳದಿಂದ ಲಾಭ ಪಡೆಯುವ ನಿರೀಕ್ಷೆಯಿದೆ.  ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಗುರುತಿಸಲು ಪಕ್ಷಗಳು ಜಂಟಿ ಟಿಪ್ಪಣಿಯನ್ನು ಒಪ್ಪಿಕೊಂಡಿವೆ. ಆದಾಗ್ಯೂ, ಇದು ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಮತ್ತು ಪರಿಷ್ಕೃತ ಕೆಲಸದ ಸಮಯವು ಅನುಮೋದನೆಯ ನಂತರವೇ ಜಾರಿಗೆ ಬರಲಿದೆ. 8088 ಅಂಕಗಳಿಗೆ ಅನುಗುಣವಾದ ತುಟ್ಟಿಭತ್ಯೆ ಮತ್ತು ಹೆಚ್ಚುವರಿ ಹೊರೆಯನ್ನು ವಿಲೀನಗೊಳಿಸುವ ಮೂಲಕ ಹೊಸ ವೇತನ ಶ್ರೇಣಿಗಳನ್ನು ರೂಪಿಸಲಾಗಿದೆ. ಹೊಸ ವೇತನ ಒಪ್ಪಂದವು ಮಹಿಳಾ ಉದ್ಯೋಗಿಗಳಿಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲದೆ ತಿಂಗಳಿಗೆ ಒಂದು ದಿನ ಅನಾರೋಗ್ಯ ರಜೆಯನ್ನು ನೀಡುತ್ತದೆ.

Read More

ನವದೆಹಲಿ: ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸೇನೆಯಲ್ಲಿ ಕೆಲಸ ಮಾಡಲು ಹಲವಾರು ಭಾರತೀಯ ಪ್ರಜೆಗಳನ್ನು ವಂಚಿಸಲಾಗಿದೆ ಮತ್ತು ಸುಳ್ಳು ನೆಪಗಳಲ್ಲಿ ಅವರನ್ನು ನೇಮಕ ಮಾಡಿದ ಏಜೆಂಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ. ಅಂತಹ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ರಷ್ಯಾದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ತಿಳಿಸಲಾಗಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. “ಸಿಬಿಐ (ಕೇಂದ್ರ ತನಿಖಾ ದಳ) ನಿನ್ನೆ ಹಲವಾರು ನಗರಗಳಲ್ಲಿ ಶೋಧ ನಡೆಸುತ್ತಿರುವ ಮತ್ತು ದೋಷಾರೋಪಣೆ ಪುರಾವೆಗಳನ್ನು ಸಂಗ್ರಹಿಸುವ ಪ್ರಮುಖ ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ. ಹಲವಾರು ಏಜೆಂಟರ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿದೆ. ರಷ್ಯಾದ ಸೇನೆಯಲ್ಲಿ ಬೆಂಬಲ ಉದ್ಯೋಗಗಳಿಗಾಗಿ ಏಜೆಂಟರು ನೀಡುವ ಕೊಡುಗೆಗಳಿಗೆ ಮಾರುಹೋಗದಂತೆ ನಾವು ಮತ್ತೊಮ್ಮೆ ಭಾರತೀಯ ಪ್ರಜೆಗಳಿಗೆ ಮನವಿ ಮಾಡುತ್ತೇವೆ. ಇದು ಅಪಾಯ ಮತ್ತು ಜೀವಕ್ಕೆ ಅಪಾಯದಿಂದ ಕೂಡಿದೆ” ಎಂದು ಜೈಸ್ವಾಲ್ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. “ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಸೇವೆ…

Read More

ನವದೆಹಲಿ:2020 ರಲ್ಲಿ ಭಾರತದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ನಿಜ್ಜರ್ನನ್ನು ಜೂನ್ 18, 2023 ರ ಸಂಜೆ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಸಿಬಿಎಸ್ ನೆಟ್ವರ್ಕ್ನಲ್ಲಿ ಪ್ರಸಾರವಾಗುವ ಕೆನಡಾದ ತನಿಖಾ ಸಾಕ್ಷ್ಯಚಿತ್ರ ಸರಣಿ ‘ದಿ ಫಿಫ್ತ್ ಎಸ್ಟೇಟ್’ ನಿಂದ ಸಿಬಿಎಸ್ ನ್ಯೂಸ್ ಈ ವೀಡಿಯೊವನ್ನು ಪಡೆದುಕೊಂಡಿದೆ. ಈ ತುಣುಕನ್ನು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಪರಿಶೀಲಿಸಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ವೀಡಿಯೊದಲ್ಲಿ ನಿಜ್ಜರ್ ತನ್ನ ಬೂದು ಬಣ್ಣದ ಡಾಡ್ಜ್ ರಾಮ್ ಪಿಕಪ್ ಟ್ರಕ್ನಲ್ಲಿ ಗುರುದ್ವಾರದ ಪಾರ್ಕಿಂಗ್ ಸ್ಥಳದಿಂದ ಹೊರಡುವುದನ್ನು ಕಾಣಿಸುತ್ತದೆ , ಇಬ್ಬರು ವ್ಯಕ್ತಿಗಳು ಟ್ರಕ್ ಬಳಿ ಓಡಿ ನಿಜ್ಜರ್ ಅವರನ್ನು ಗುಂಡಿಕ್ಕಿ ಕೊಂದು ಬೆಳ್ಳಿಯ ಟೊಯೊಟಾ ಕ್ಯಾಮ್ರಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. https://twitter.com/RiteshLakhiCA/status/1766313438601466097

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕೆಂಡ’ ಚಿತ್ರದ ಕಡೆಯಿಂದ ಹಂತ ಹಂತವಾಗಿ ಚಿತ್ರದ ಬಗೆಗಿನ ಹಲವು ಅಪ್‌ಡೇಟ್‌ಗಳ ಬಗ್ಗೆ ನಮಗೆ ತಿಳಿಯುತ್ತಲೇ ಬರುತ್ತಿವೆ. ಈ ನಡುವೆ ಇದೀಗ ಕೆಂಡದ ಆಡಿಯೋ ಹಕ್ಕುಗಳ ವಿಚಾರದಲ್ಲಿ ಖುಷಿಯ ಸಂಗತಿಯೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ `ಕೆಂಡ’. ಇದರ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಸಂಗೀತ ನೀಡಿರುವ ಹಾಡಿಗಳ ಆಡಿಯೋ ರೈಟ್ಸ್ ಅನ್ನು ಡಿ ಬೀಟ್ಸ್ ಪಡೆದುಕೊಂಡಿದೆ. ಸಿನಿಮಾ ಮ್ಯೂಸಿಕ್ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ಡಿ ಬೀಟ್ಸ್. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಅವರೇ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಹರಿಕೃಷ್ಣ ಅವರ ಕಡೆಯಿಂದ ಬಂದಿರುವ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ. ಎಲ್ಲ ರೀತಿಯಿಂದಲೂ ಈ ಹಾಡುಗಳು…

Read More

ಕೆಎನ್‌ಎನ್‌ಡಿಜಿಲ್‌ಡಟೆಸ್ಕ್‌: ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ತಂಡದವರಿಂದ ಚಂದನ್ ಶೆಟ್ಟಿಯ ವಿಆರ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅನ್ನು ನಿವೇದಿತಾ ಗೌಡ ಬಿಡುಗಡೆಗೊಳಿಸಿದ್ದಾರೆ. ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವುದು ನಮಗೆಲ್ಲ ತಿಳಿಸಿದೆ. ಈ ನಡುವೆ ವಿಆರ್ ಪೋಸ್ಟರ್ ಮೂಲಕ ಚಂದನ್ ಶೆಟ್ಟಿಯ ಪಾತ್ರ ಪರಿಚಯವಾಗಿದೆ. ಚಂದನ್ ಇಲ್ಲಿ ಕಾಣಿಸಿಕೊಂಡಿರುವ ಗೆಟಪ್ಪಿನ ಸುತ್ತ ಕುತೂಹಲ ಮನೆ ಮಾಡಿದೆ.  ಈ ವಿಆರ್ ಪೋಸ್ಟರ್ (ವರ್ಚುವಲ್ ರಿಯಾಲಿಟಿ ಪೋಸ್ಟರ್ ಅಂತೂ ಈಗಿನ ಜನರೇಷನ್ನಿನ ಹುಡುಗರಿಗೆ ನೇರಾನೇರ ಕನೆಕ್ಟಾಗುವಂತಿದೆ. ಚಂದನ್ ಶೆಟ್ಟಿಯ ಗೆಟಪ್ಪು ಕೂಡಾ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಜೊತೆಗೆ ಇದು ಸೈಬರ್ ಫಂಕ್ ಕಥೆಯನ್ನು ಒಳಗೊಂಡಿರಬಹುದಾ? ಈ ಹಿಂದೆ ಬಿಡುಗಡೆಗೊಂಡಿದ್ದ ಪೋಸ್ಟರಿನಲ್ಲಿ ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದಿದ್ದ ನಾಲಕ್ಕು ಪಾತ್ರಗಳು ಎದುರುಗೊಂಡಿದ್ದವು. ಚಂದನ್ ಪಾತ್ರ ಕೈಯಲ್ಲಿ ವಿಆರ್ ಅನ್ನು ಹಿಡಿದುಕೊಂಡಿದೆ. ಇದೆಲ್ಲವನ್ನೂ ಕಂಡ ಪ್ರೇಕ್ಷಕರಿಗೆ ಇದೊಂದು ಈ ಕಾಲಮಾನದ ಆವೇಗ ಬಚ್ಚಿಟ್ಟುಕೊಂಡಿರುವ ಕಥೆಯೆಂಬ ವಿಚಾರವನ್ನು ದಾಟಿಸಿದೆ. ಈ…

Read More

ಬೆಂಗಳೂರು: ಬೇಸಿಗೆ ಕಾಲ ಈಗ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಬೇಸಿಗೆ ಕಾಲ ಆರಂಭದಲ್ಲೇ ಅನಧಿಕೃತವಾಗಿ ವಿದ್ಯುತ್‌ ಕಡಿತದ ಕಾಟ ಶುರುವಾಗಿದೆ ಹೌದು, ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದ್ದು, ಈ ವರ್ಷ ಗರಿಷ್ಠ 8,128 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು, ಇದು ಬಿಸಿಲಿನಿಂದ ಜನತೆ ತಮ್ಮನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫ್ಯಾನ್‌, ಎಸಿ, ಫ್ರಿಡ್ಜ್‌ ಬಳಕೆಯನ್ನು ಹೆಚ್ಚು ಬಳಕೆ ಮಾಡುತ್ತಿರುವುದನ್ನು ತೋರಿಸಿದೆ. ಇದಲ್ಲದೇ ರಾಜ್ಯದ ನಾನಾಕಡೆಗಳಲ್ಲಿ ವಿದ್ಯುತ್‌ ಅನ್ನು ಸಮಯವಲ್ಲದ ಸಮಯದಲ್ಲಿ ಕಟ್‌ ಮಾಡುತ್ತಿರುವುದು ಕೂಡ ಹೆಚ್ಚು ಆಗುತ್ತಿದ್ದು, ಈಗಲೇ ಹೀಗೆ ಹೆಚ್ಚಿನ ಸಮಯದಲ್ಲಿ ಪವರ್ ಕಟ್‌ ಮಾಡುವುದರಿಂದ ಮುಂದೆ ಇನ್ನೇರಡು ತಿಂಗಳು ರಾಜ್ಯದ ಪರಿಸ್ಥಿತಿಯ ಯಾವ ರೀತಿಯಲ್ಲಿ ಇರಲಿದೆ ಎನ್ನುವುದನ್ನು ಈಗಲೇ ಗೊತ್ತು ಆಗುತ್ತಿದೆ. ಪ್ರತಿದಿನ 200 ರಿಂದ 250 ದಶಲಕ್ಷ ಯೂನಿಟ್ ನಷ್ಟಿದ್ದ ಬೇಡಿಕೆ 323 ದಶ ಲಕ್ಷಕ್ಕೆ ಹೆಚ್ಚಳವಾಗಿದೆ ಎನ್ನಲಾಗಿದೆ. ಇದಲ್ಲದೇ ರಾಜ್ಯದಲ್ಲಿನ ಜಲಶಾಯಗಳು ಕೂಡ ಬರಿದಾಗಿದ್ದು, ವಿದ್ಯುತ್‌ ಉತ್ಪದನದ ಮೇಲೆ ಕೂಡ ಗಂಭೀರವಾದ…

Read More

ಬೆಂಗಳೂರು: ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ ಮಾಡಲಾಗಿದೆ. ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿ, ಸುಧಾ ತಮ್ಮ ವೃತ್ತಿಪರ ಜೀವನವನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಹಾಗೂ ‘ಬಿಲ್ ಗೇಟ್ಸ್ ಪ್ರತಿಷ್ಠಾನ’ದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ ಇವರು 1950ರಲ್ಲಿ ಧಾರವಾಡ ಜಿಲ್ಲೆಯ ‘ಶಿಗ್ಗಾಂವ್‌’ (ಜಿಲ್ಲೆಯ) (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ 1950 ರ ಆಗಸ್ಟ್‌19, ರಂದು ಜನಿಸಿದರು. ಜಯಶ್ರೀ ದೇಶಪಾಂಡೆಸುಧಾಮೂರ್ತಿಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.

Read More

ನವದೆಹಲಿ: ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಭಾರತದ ಯಾವುದೇ ತೆರಿಗೆದಾರನಿಗೆ ಇರಬೇಕಾದ ಪ್ರಮುಖ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿರುವುದರಿಂದ ಪ್ಯಾನ್ ಹೊಂದಿರದ ಯಾವುದೇ ವ್ಯಕ್ತಿಗಳು ಅದನ್ನು ಪಡೆಯುವ ಬಗ್ಗೆ ಚಿಂತಿಸಬೇಕಾಗಿಲ್ಲ. ತೆರಿಗೆದಾರರು ಮಾನ್ಯ ಆಧಾರ್ ಕಾರ್ಡ್ ಮತ್ತು ಆಧಾರ್-ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೆ ಅವರು ಈಗ ಸರಳ, ವೆಚ್ಚ-ಪರಿಣಾಮಕಾರಿ ರೀತಿಯಲ್ಲಿ ಇ-ಪ್ಯಾನ್ಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ, ಆನ್ಲೈನ್ನಲ್ಲಿ ಇ-ಪ್ಯಾನ್ಗೆ ಅರ್ಜಿ ಸಲ್ಲಿಸುವ ಹಂತಗಳನ್ನು ನಾವು ತಿಳಿಸಿದ್ದೇವೆ. ಇ-ಪ್ಯಾನ್ ಡೌನ್ಲೋಡ್ ಮಾಡಲು ಸರಳ ಹಂತಗಳು https://www.incometax.gov.in/iec/foportal/ ನಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಭೇಟಿ ನೀಡಿ ಹೊಸ ಇ-ಪ್ಯಾನ್ ಪಡೆಯಿರಿ ಮೇಲೆ ಕ್ಲಿಕ್ ಮಾಡಿ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಕನ್ಫರ್ಮ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರಿಸಿ ನಿಮ್ಮ ಆಧಾರ್ ಅನ್ನು ಪ್ಯಾನ್ಗೆ ಲಿಂಕ್ ಮಾಡಿದ್ದರೆ, ನಿಮ್ಮ ನೋಂದಾಯಿತ ಮೊಬೈಲ್ಸಂ ಖ್ಯೆಗೆ ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ಬರುತ್ತದೆ ನಿಮ್ಮನ್ನು OTP ಪ್ರಮಾಣೀಕರಣ…

Read More

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ 04-03-2024 ರಿಂದ ಅರ್ಜಿ ಸಲ್ಲಿಸಬಹುದೆಂದು ದಿನಾಂಕ 21-02-2024 ರ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಶುಲ್ಕ ಪಾವತಿಯ ಇಂಟರ್‌ಫೇಸ್ ಅನ್ನು ಸಿದ್ದ ಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ, ಆದ್ದರಿಂದ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿರುತ್ತದೆ ಅಂತ ತಿಳಿಸಿದೆ. ಬೆಂಗಳೂರು: ಕರ್ನಾಟಕ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡರು ರಾಜ್ಯದಲ್ಲಿ ಖಾಲಿ ಇರುವ 1500 ಗ್ರಾಮ ಆಡಳಿತ ಅಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು…

Read More

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಮಿಲನಾ ನಾಗರಾಜ್ ತಾವು ತಾಯಿ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಢಿದ್ದಾರೆ. . 2024ರ ಸೆಪ್ಟೆಂಬರ್​ನಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಮಿಲನಾ ಹಾಗೂ ಕೃಷ್ಣ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದು ನಟ ದಂಪತಿಗಳಿಗೆ ಅವರು ಶುಭಕೋರುತ್ತಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಮಿಲನಾ ನಾಗರಾಜ್ (Milana Nagaraj) ಹಾಗೂ ನಟ ‘ಡಾರ್ಲಿಂಗ್’ 2021ರ ಫೆಬ್ರವರಿ 14ರಂದು ಮದುವೆ ಯಾಗಿದ್ದರು.  ಈ ನಡುವೆ ಜಾತಿ ಪದ್ಧತಿ, ಅಸ್ಪೃಶ್ಯತೆ, ಅಸಮಾನತೆ, ಶೋಷಣೆ ಹಾಗೂ ಧಾರ್ಮಿಕ ಢಂಬಾಚಾರದ ವಿರುದ್ಧ ಬಂಡೆದ್ದ ಬಸವಾದಿ ಶರಣರು ಜನರಲ್ಲಿ ಅರಿವುಮೂಡಿಸಲು ಆಯ್ದುಕೊಂಡ ಸಾಧನ “ವಚನ ಸಾಹಿತ್ಯ.” ವಚನಗಳಲ್ಲಿ ಬಸವೇಶ್ವರರಾದಿಯಾಗಿ ನೂರಾರು ಶರಣರ ಬದುಕಿನ ಅನುಭವದ ಸಾರವಿದೆ, ಅಂಧಶ್ರದ್ದೆ- ಮೌಢ್ಯದ ವಿರುದ್ಧದ ಆಕ್ರೋಶವಿದೆ, ಜ್ಞಾನದ ಬೆಳಕಿದೆ. ಶರಣರ ವಚನಗಳು ಹಾಳೆಗಳಿಗೆ ಸೀಮಿತವಾಗಬಾರದು, ವಚನಗಳ ಪ್ರತಿ ಅಕ್ಷರ ಜನರ ಎದೆಗೆ ಇಳಿಯಬೇಕು, ಆ ಮೂಲಕ ಬಸವಣ್ಣನವರ ಸಮಸಮಾಜದ ಕನಸು ಸಾಕಾರಗೊಳ್ಳಬೇಕು. ಈ ಉದ್ದೇಶದಿಂದ ಮುಂದಿನ ವರ್ಷ ‘ವಚನ ವಿಶ್ವವಿದ್ಯಾಲಯ’…

Read More