Author: kannadanewsnow07

ಬೆಂಗಳೂರು: ಸಾಹಸ (Stunt) ನಿರ್ದೇಶಕ ರವಿ ವರ್ಮಾ (Ravi Verma) ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಹಾಕಿರುವ ದೂರು ದಾಖಲಾಗಿದೆ.ಫಿಲಂ ಛೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿರುವ ಡ್ಯಾನಿ ಮಾಸ್ಟರ್, ಇಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.  https://kannadanewsnow.com/kannada/breaking-rajesh-kumar-gupta-priyansh-sharma-appointed-as-new-election-commissioners/ ಜಾಕಿ’ ಸಿನಿಮಾದಲ್ಲಿ ಬೆಂಕಿ ಫೈಟ್ ಒಂದಿದೆ. ಡ್ಯಾನಿ ಮಾಸ್ಟರ್ ಹೇಳಿರುವಂತೆ ಆ ಫೈಟ್ ಅನ್ನು ಕಂಪೋಸ್ ಮಾಡಿರುವುದು ಡ್ಯಾನಿ ಮಾಸ್ಟರ್ ಆದರೆ ಇದಕ್ಕೆ ಸಂಬಂಧಪಟ್ಟಂಥೆ  ನಾನೇ ಅದನ್ನು ಮಾಡಿರುವೆ ಅಂತ  ರವಿವರ್ಮಾ ಅವರು ಸುಳ್ಳುಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ ನನ್ನ ಕೆಲಸವನ್ನು ತನ್ನ ಕೆಲಸ ಎಂದು ಹೇಳಿಕೊಂಡು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ ಅಂತ ಹೇಳಿದ್ದರು. ಇದಲ್ಲದೇ ಡ್ಯಾನಿ ಮಾಸ್ಟರ್, ತಮ್ಮ ಹೆಸರು ಹೇಳಿಕೊಂಡು ಪರಭಾಷಾ ಸಿನಿಮಾ ರಂಗದಲ್ಲಿ ರವಿ ವರ್ಮಾ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಇನ್ನೂ ರವಿ ವರ್ಮಾ ತಮಗೆ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಡ್ಯಾನಿ ಆರೋಪ ಮಾಡಿದ್ದು, ಕುಡಿದು ಪೋನ್‌…

Read More

ದಾವಣಗೆರೆ: ದಾವಣಗೆರೆ ಜಿಲ್ಲೆಯ ಎಲ್ಲಾ ವೃತ್ತಿಪರ ಮೀನುಗಾರರಿಗೆ ಪ್ರಸಕ್ತ ಸಾಲಿನ ಮತ್ಸ್ಯವಾಹಿನಿ ಯೋಜನೆಯಡಿ ತ್ರಿ-ಚಕ್ರವಾಹನಗಳನ್ನು ಪರವಾನಿಗೆ ಆಧಾರದಲ್ಲಿ ನೀಡಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯವಾಗಿ ಮೀನು ಸೇವನೆಯನ್ನು ಪೆÇ್ರೀತ್ಸಾಹಿಸಲು ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ ದಾವಣಗೆರೆ ಜಿಲ್ಲೆಗೆ ಒಟ್ಟು 4 ಭೌತಿಕ ಗುರಿಗಳಿದ್ದು, ಆಯ್ಕೆಯಾಗುವ ಅರ್ಜಿದಾರರು ಇಲಾಖೆಗೆ ಭದ್ರತಾ ಠೇವಣಿ ಸಾಮಾನ್ಯ ವರ್ಗದವರಿಗೆ ರೂ.1 ಲಕ್ಷ, ಪ.ಜಾತಿ, ಪ.ಪಂಗಡ, ಮಹಿಳೆಯರು ರೂ.50 ಸಾವಿರ ನೀಡಬೇಕಿರುತ್ತದೆ. ಜೊತೆಗೆ ಮಾಸಿಕ ರೂ.3,000 ಬಾಡಿಗೆ ಪಾವತಿಸಬೇಕಿರುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 25 ಕೊನೆಯ ದಿನವಾಗಿರುತ್ತದೆ. ಆಸಕ್ತ ಮೀನುಗಾರರು, ಮೀನು ಕೃಷಿಕರು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು, ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

Read More

ಬಾಲ್ಯದಲ್ಲಿ ಪೋಲಿಯೊ ಸೋಂಕಿಗೆ ಒಳಗಾದ ನಂತರ ಏಳು ದಶಕಗಳ ಕಾಲ ಕಬ್ಬಿಣದ ಶ್ವಾಸಕೋಶದಲ್ಲಿ ವಾಸಿಸುತ್ತಿದ್ದ ಡಲ್ಲಾಸ್ನ ಪಾಲ್ ಅಲೆಕ್ಸಾಂಡರ್ ಸಾವನ್ನಪ್ಪಿದ್ದಾರೆ. ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ನ ಪಾಲ್ ಅಲೆಕ್ಸಾಂಡರ್ 1952 ರಲ್ಲಿ ತಮ್ಮ ಆರನೇ ವಯಸ್ಸಿನಲ್ಲಿ ವೈರಸ್ನಿಂದ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಯಾಂತ್ರಿಕ ಶ್ವಾಸಕೋಶದೊಳಗೆ ಎಚ್ಚರಗೊಂಡರು. ‘ಕಬ್ಬಿಣದ ಶ್ವಾಸಕೋಶವನ್ನು ಹೊಂದಿರುವ ವ್ಯಕ್ತಿ’ ಎಂಬ ಹೆಸರನ್ನು ಪಡೆದ ಅಲೆಕ್ಸಾಂಡರ್ ತನ್ನ ಉಳಿದ ಜೀವನವನ್ನು ಅದರೊಳಗೆ ವಾಸಿಸುತ್ತಿದ್ದರು. ಅಲೆಕ್ಸಾಂಡರ್ ಅವರ ಆರೈಕೆಗೆ ಪಾವತಿಸಲು ಸಹಾಯ ಮಾಡಲು ಸ್ಥಾಪಿಸಲಾದ ಗೋಫಂಡ್ಮಿ ಪುಟದ ಪ್ರಕಾರ, ಅವರು ಸೋಮವಾರ ನಿಧನರಾದರು.  ನಿಧಿಸಂಗ್ರಹದ ಸಂಘಟಕ ಕ್ರಿಸ್ಟೋಫರ್ ಉಲ್ಮರ್ ಹೀಗೆ ಬರೆದರು: “ಪಾಲ್, ನಿಮ್ಮನ್ನು ಮಿಸ್ ಮಾಡಿಕೊಳ್ಳಲಾಗುತ್ತದೆ ಆದರೆ ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ. ನಿಮ್ಮ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Read More

ಮುಂಬೈ: ಮಾರ್ಚ್ 13, 2024 ರ ಬುಧವಾರ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದ್ದರಿಂದ ಹೂಡಿಕೆದಾರರು ಭಾರಿ ನಷ್ಟವನ್ನು ಅನುಭವಿಸಿದರು. ಮಧ್ಯಾಹ್ನದ ಅವಧಿಯಲ್ಲಿ ಸೆನ್ಸೆಕ್ಸ್ 1109 ಪಾಯಿಂಟ್ ಕುಸಿದು 72,558 ಕ್ಕೆ ತಲುಪಿದೆ, ಮಧ್ಯಮ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಿಭಾಗಗಳಲ್ಲಿ ಗಮನಾರ್ಹ ಮಾರಾಟವಾಗಿದೆ.  https://kannadanewsnow.com/kannada/good-news-for-outsourced-contract-staff-state-govt-orders-release-of-fifth-instalment-of-funds/ ಮಾರುಕಟ್ಟೆಯ ಕುಸಿತದಿಂದಾಗಿ ನಿಫ್ಟಿ ಕೂಡ ಪರಿಣಾಮ ಬೀರಿತು, 422 ಪಾಯಿಂಟ್ಗಳಷ್ಟು ಕುಸಿದು 21,913 ಕ್ಕೆ ತಲುಪಿತು, ದಿನದ ಆರಂಭದಲ್ಲಿ ಗಳಿಸಿದ ಲಾಭವನ್ನು ಅಳಿಸಿಹಾಕಿತು ಮತ್ತು ದಲಾಲ್ ಸ್ಟ್ರೀಟ್ನಲ್ಲಿ ಹೂಡಿಕೆದಾರರಲ್ಲಿ ಚಾಲ್ತಿಯಲ್ಲಿರುವ ನಿರಾಶಾವಾದವನ್ನು ಎತ್ತಿ ತೋರಿಸಿತು. https://kannadanewsnow.com/kannada/d-v-shivakumar-writes-an-emotional-letter-on-twitter-says-he-missed-ticket-for-lok-sabha-elections-sadananda-gowda/ ಹೂಡಿಕೆದಾರರು 14 ಲಕ್ಷ ಕೋಟಿ ರೂ.ಗಳ ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಒಟ್ಟು ಹೂಡಿಕೆದಾರರ ಸಂಪತ್ತು ಹಿಂದಿನ ಅಧಿವೇಶನದ ಮೌಲ್ಯಮಾಪನ 385.64 ಲಕ್ಷ ಕೋಟಿ ರೂ.ಗಳಿಂದ 371.69 ಲಕ್ಷ ಕೋಟಿ ರೂ.ಗೆ ಇಳಿದಿದೆ. ಪವರ್ ಗ್ರಿಡ್, ಎನ್ಟಿಪಿಸಿ, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್, ಟೈಟಾನ್ ಕಂಪನಿ ಮತ್ತು ಟಾಟಾ ಮೋಟಾರ್ಸ್ನಂತಹ ಷೇರುಗಳು ಸೆನ್ಸೆಕ್ಸ್ನಲ್ಲಿ ಸಂಭವಿಸಿದ ನಷ್ಟಕ್ಕೆ ಪ್ರಮುಖ ಕೊಡುಗೆ…

Read More

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕಟ್‌ ಮಿಸ್‌ ಆಗಿದೆ. ಅವರು ಈ ಬಾರಿ ಬೆಂಗಳೂರು ಉತ್ತರದಿಂದ ಕಣಕ್ಕೆ ಇಳಿಯಲು ಬೇರೆಯವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಇವರ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಬಹುದು ಎನ್ನಲಾಗಿದೆ. ಈಗಾಗಲೇ ಡಿ.ವಿ. ಸದಾನಂದ ಗೌಡ ಅವರಿಗೆ ಕಾಲ್‌ ಮಾಡಿ ಹೈಕಮಾಂಡ್‌ ಮಾಹಿತಿ ನೀಡಿದೆ ಎನ್ನಲಾಗಿದೆ. ಈ ನಡುವೆ ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7…

Read More

ನವದೆಹಲಿ: ಇಂದು ಲೋಕಸಭಾ ಚುನಾವಣೆ 2024 ಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ, ಕೇಸರಿ ಪಕ್ಷವು ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬಹುದು ಎನ್ನಲಾಗಿದೆ. ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಧಾರವಾಡದಿಂದ ಪ್ರಹ್ಲಾದ್ ಜೋಶಿ, ಬೆಂಗಳೂರು ಗ್ರಾಮಾಂತರದಿಂದ ಸಿ.ಎನ್.ಮಂಜುನಾಥ್ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿ.ಸೋಮಣ್ಣ ಅವರನ್ನು ತುಮಕೂರಿನಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ. ಎನ್ನಲಾಗಿದೆ. ಇದಲ್ಲದೇ ಹಲವು ಮಂದಿ ಹಾಲಿ ಸಚಿವರಿಗೆ ಟಿಕೆಟ್‌ ಮಿಸ್‌ ಆಗಲಿದೆ ಎನ್ನಲಾಗಿದೆ.

Read More

ಶಿವಮೊಗ್ಗ: ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ. 25 ನ್ನು ಪರಿಗಣಿಸಿ ಪರಿಷ್ಕರಣೆ ಮಾಡಲಾಗಿದೆ. ಏ.01 ರಿಂದ 30ರೊಳಗಾಗಿ ಆಸ್ತಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರು ಹಾಗೂ ಅನುಭೋಗದಾರರಿಗೆ ಶೇ.5 ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಮೇ 01 ರಿಂದ ಜೂ.30ರ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿಸುವವರು ದಂಡ ರಹಿತವಾಗಿ ಪಾವತಿಸಬಹುದು. ಜು.01 ರಿಂದ ಆಸ್ತಿ ತೆರಿಗೆಯ ಮೇಲೆ ಮಾಸಿಕ ಶೇ.2 ರಷ್ಟು ದಂಡ ವಿಧಿಸಲಾಗುವುದು ಎಂದು ಶಿರಾಳಕೊಪ್ಪ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಬುಧವಾರ ಅಧಿಕೃತ ಹೇಳಿಕೆ ನೀಡಿದ್ದು, ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರಿಗೆ ಹೊಸ ಫಾಸ್ಟ್ಟ್ಯಾಗ್ ಖರೀದಿಸಲು ಸಲಹೆ ನೀಡಿದೆ. ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತೊಂದರೆಯನ್ನು ತಪ್ಪಿಸಲು ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರು ಮಾರ್ಚ್ 15 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ ಫಾಸ್ಟ್ಟ್ಯಾಗ್ ಪಡೆಯಬೇಕು ಎಂದು ಎನ್ಎಚ್ಎಐ ಹೇಳಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವಾಗ ದಂಡ ಅಥವಾ ದುಪ್ಪಟ್ಟು ಶುಲ್ಕವನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಸಂಬಂಧಿಸಿದ ನಿರ್ಬಂಧಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಅನುಸರಿಸಿ, ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರು ಮಾರ್ಚ್ 15, 2024 ರ ನಂತರ ತಮ್ಮ ಬ್ಯಾಲೆನ್ಸ್ ಅನ್ನು ರೀಚಾರ್ಜ್ ಮಾಡಲು ಅಥವಾ ಟಾಪ್-ಅಪ್ ಮಾಡಲು ಆಯ್ಕೆಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ನಿಗದಿತ ದಿನಾಂಕದ ನಂತರವೂ ಟೋಲ್ ಪಾವತಿಸಲು ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಅನ್ನು ಬಳಸುವುದನ್ನು ಮುಂದುವರಿಸಬಹುದು ಎಂದು ಅವರು ಹೇಳಿದೆ.

Read More

ಬೆಂಗಳೂರು: 2023-24ನೇ ಸಾಲಿಗೆ ಜಿಲ್ಲಾ ಮತ್ತು ಬ್ಲ್ಯಾಕ್ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ/ಗುತ್ತಿಗೆ ಸಿಬ್ಬಂದಿ ಸಂಭಾವನೆಯನ್ನು ಭರಿಸಲು ಈ ಕೆಳಕಂಡ ವಿವರಗಳಂತೆ ಐದನೇ ಕಂತಿನ ಅನುದಾನವನ್ನು ಎಂ.ಎಂ.ಎಂ.ಇ.ಆರ್ (ಆಡಳಿತಾತ್ಮಕ ವೆಚ್ಚ) ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಆದೇಶವನ್ನುಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ 2023-24ನೇ ಸಾಲಿನ ಐದನೇ ಕಂತಿನ ಅನುದಾನವನ್ನು ಜಿಲ್ಲಾ ಕಛೇರಿಗಳಲ್ಲಿ ಮತ್ತು ಬ್ಲಾಕ್ ಕಛೇರಿಗಳಲ್ಲಿ (ಬಿ.ಆರ್.ಸಿ ಕೇಂದ್ರಗಳಲ್ಲಿ ಇರುವ 03 ಹೊರಗುತ್ತಿಗೆ ಹುದ್ದೆಗಳನ್ನು ಹೊರತುಪಡಿಸಿ) ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ (ಕರ್ನಾಟಕ ಕನಿಷ್ಟ ವೇತನ ಕಾಯ್ದೆ ಹಾಗು ವಲಯ 1,2,3 ರ ಅನ್ವಯ) ಮತ್ತು ಗುತ್ತಿಗೆ ಸಿಬ್ಬಂದಿಗಳ ಸಂಭಾವನೆ (ಫೆಬ್ರವರಿ-2024 ಮತ್ತು ಮಾರ್ಚ್-2024 ತಿಂಗಳಿಗೆ), ಸಾದಿಲ್ವಾರು ವೆಚ್ಚ, ಜಾಹಿರಾತು ವೆಚ್ಚ, ವಾಹನದ ಇಂಧನ/ರಿಪೇರಿ/ಬಾಡಿಗೆ ಮತ್ತು ಕಟ್ಟಡದ ಬಾಡಿಗೆ ಭರಿಸಲು ಒಟ್ಟು ರೂ. 207.78ಲಕ್ಷಗಳನ್ನು ಬಿಡುಗಡೆ ಮಾಡಿದೆ ಹೊರಗುತ್ತಿಗೆ/ ಗುತ್ತಿಗೆ ಸಿಬ್ಬಂದಿ ಸಂಭಾವನೆ (ಫೆಬ್ರವರಿ-2024 ಮತ್ತು ಮಾರ್ಚ್-2024 ತಿಂಗಳಿಗೆ), ಸಾದಿಲ್ವಾರು ವೆಚ್ಚ, ಟೆಂಡರ್ ಜಾಹಿರಾತು ವೆಚ್ಚ ವಾಹನದ ಇಂಧನ/ರಿಪೇರಿ/ಬಾಡಿಗೆ ಮತ್ತು ಕಟ್ಟಡದ…

Read More

ಉಡುಪಿ: ಕೇಂದ್ರ ಸರಕಾರವು ಕೇವಲ ಚುನಾವಣೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ ಮತ್ತು ಇದು ಬಿಜೆಪಿಯ ಚುನಾವಣಾ ಗಿಮಿಕ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಂದು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.ಇದೇ ವೇಳೆ ಅವರು ಮಾತನಾಡಿ ರಾಜ್ಯದಲ್ಲಿ ಪೌರತ್ವ ಕಾಯ್ದೆಯ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳ ನಿಲುವಿನ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಇಷ್ಟು ವರ್ಷಗಳ ಕಾಲ ಅದರ ಬಗ್ಗೆ ಮೌನವಾಗಿತ್ತು ಈಗ ಅದು ಚುನಾವಣೆ ಸಲುವಾಗಿ ಜಾರಿಗೆತರಲು ಮುಂದಾಗಿದೆ ಅಂಥ ಹೇಳಿದರು. ಪಕ್ಷಕ್ಕೆ ಶಕ್ತಿ : ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕರಾವಳಿಯಲ್ಲಿ ಪಕ್ಷಕ್ಕೆ ಬಲ ತುಂಬಿದೆ ಎಂದು ಸಿಎಂ ಹೇಳಿದರು.ಈ ಬಾರಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದೆ ಯದುವೀರ್ ಅವರಿಗೆ ಟಿಕೆಟ್ ನೀಡುವ ಬಿಜೆಪಿ ನಿರ್ಧಾರದ ಹಿಂದಿನ ಕಾರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಎಂ ಹೇಳಿದರು.

Read More