Author: kannadanewsnow07

ಬೆಂಗಳೂರು: ನಗರ ಪೊಲೀಸ್‌ ಆಯಕ್ತ ಬಿ.ದಯಾನಂದ ಅವರು ನೇತ್ರದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಪೊಲೀಸ್‌ ಇಲಾಖೆಯ ಇತರೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ನಾರಾಯಣ ನೇತ್ರಾಲಯದ ಡಾ.ರಾಜ್ ಕುಮಾರ್ ನೇತ್ರದಾನಕ್ಕೆ ದಯಾನಂದ ಅವರು ತಮ್ಮ ಕಣ್ಣು ದಾನ ಮಾಡಿದ್ದಾರೆ. ಈ ಹಿನ್ನೆಲೆ ನಾರಾಯಣ ನೇತ್ರಾಲಯದಿಂದ ಆಯುಕ್ತರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ. ಜೊತೆಗೆ ‘ಹೊಸ ವರ್ಷದ ಶುಭ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್​ನ ಅಧಿಕಾರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ’ ಎಂದು ಆಯುಕ್ತರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Read More

ಬೆಂಗಳೂರು: ನಾಲ್ಕು ವರೆ ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಭಾರತೀಯ ಜನತಾ ಪಕ್ಷಕ್ಕೆ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ,ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ. ಪತ್ರಿಕಾ ಹೇಳಿಕೆಯ ಪ್ರಮುಖ ಮಾಹಿತಿಗಳು ಇಲ್ಲಿವೆ. ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ? ರಾಮ ಭಕ್ತ ಯಾರಿದ್ದಾರೆ? ಹಾಗಿದ್ದರೆ ಆಗಿನ ಸರ್ಕಾರ ಹಿಂದು ವಿರೋಧಿಯೇ? ಬಿಜೆಪಿ ಬಿಟ್ಟು ಬಿಡಿ, ಅದರ ಪರಿವಾರದ ನಾಯಕರು ಕೂಡಾ ಹಿಂದೂ ಯಡಿಯೂರಪ್ಪನವರನ್ನು ಬಂಧಿಸಿದ ಸರ್ಕಾರ ಹಿಂದು ವಿರೋಧಿ ಎಂದು ಕೂಗಾಡಲಿಲ್ಲವಲ್ಲ? ಈಗ ಯಾಕೆ ಈ ಕೂಗಾಟ? ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ…

Read More

ನವದೆಹಲಿ: ಅದಾನಿ-ಹಿಂದರ್ಬರ್ಗ್ ವಿವಾದದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾದ ತಿಂಗಳ ನಂತರ ಭಾರತದ ಸುಪ್ರೀಂ ಕೋರ್ಟ್ ಇಂದು ಬಹುನಿರೀಕ್ಷಿತ ತೀರ್ಪನ್ನು ನೀಡಲಿದೆ. ಕಳೆದ ವರ್ಷ ನವೆಂಬರ್ನಲ್ಲಿ ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್ಪಿ) ಮತ್ತು ಹಿಂಡೆನ್ಬರ್ಗ್ ರಿಸರ್ಚ್ನಂತಹ ಸಂಸ್ಥೆಗಳಿಂದ ಪಡೆದ ಮಾಹಿತಿಯ ಮೇಲೆ ಅರ್ಜಿದಾರರು ಅವಲಂಬಿತರಾಗಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಶ್ವಾಸಾರ್ಹ ಮಾಹಿತಿಗಾಗಿ ಭಾರತೀಯ ತನಿಖಾ ಸಂಸ್ಥೆಗಳನ್ನು ಅವಲಂಬಿಸುವ ನ್ಯಾಯಾಲಯದ ಅಗತ್ಯವನ್ನು ಅವರು ಒತ್ತಿ ಹೇಳಿದರು.

Read More

ಟೋಕಿಯೋ: 7.5 ತೀವ್ರತೆಯ ಭೂಕಂಪ ಸೇರಿದಂತೆ ಜಪಾನ್ನಲ್ಲಿ ಸರಣಿ ಪ್ರಬಲ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 57 ಕ್ಕೆ ಏರಿದೆ ಎಂದು ಇಶಿಕಾವಾ ಪ್ರಾಂತ್ಯದ ಅಧಿಕಾರಿಗಳನ್ನು ಉಲ್ಲೇಖಿಸಿ ಎನ್ಎಚ್ಕೆ ವರ್ಲ್ಡ್ ವರದಿ ಮಾಡಿದೆ. ನೋಟೋ ಪರ್ಯಾಯ ದ್ವೀಪದ ವಾಜಿಮಾ ಮತ್ತು ಸುಜುನಲ್ಲಿ ಹೆಚ್ಚಿನ ಸಾವುನೋವುಗಳು ದೃಢಪಟ್ಟಿವೆ. ಬ್ಲೂಮ್ಬರ್ಗ್ ಪ್ರಕಾರ, ಎಷ್ಟು ಜನರು ಕಾಣೆಯಾಗಿದ್ದಾರೆ ಎಂಬುದನ್ನು ಖಚಿತಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿರುವುದರಿಂದ 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕುಸಿದ ಮನೆಗಳ ಅಡಿಯಲ್ಲಿ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಶಿಕಾವಾ ಕೇಂದ್ರ ಪ್ರಾಂತ್ಯದ ನೊಟೊ ಪರ್ಯಾಯ ದ್ವೀಪದಲ್ಲಿ ಸೋಮವಾರ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕುಸಿದಿವೆ ಮತ್ತು ಸುನಾಮಿ ಎಚ್ಚರಿಕೆಗಳನ್ನು ಪೂರ್ವ ರಷ್ಯಾದವರೆಗೆ ಕಳುಹಿಸಲಾಗಿದೆ. ದೇಶದ ಹವಾಮಾನ ಕಚೇರಿಯ ಪ್ರಕಾರ, ದಿನ ದೇಶದಲ್ಲಿ ಒಟ್ಟು 155 ಭೂಕಂಪಗಳು ವರದಿಯಾಗಿವೆ ಅಂತ ವರದಿ ಮಾಡಿದೆ. https://twitter.com/accuweather/status/1742259550034579537

Read More

ಬೆಂಗಳೂರು: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರಕ್ಕೊಮ್ಮೆ ಕಡ್ಡಾಯವಾಗಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು. ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಚಿವರು ಇಂದು (2024 ಜನವರಿ 02) ವಿಡಿಯೊ ಸಭೆ ನಡೆಸಿ ಜಿಲ್ಲೆಗಳಲ್ಲಿ ಆಗಿರುವ ಪ್ರಗತಿ ಪರಿಶೀಲಿಸಿ ಸೂಚನೆ, ಸಲಹೆಗಳನ್ನು ನೀಡಿದರು,. ಗ್ರಾಮೀಣ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರವಹಿಸಿರುವ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಆಶಯ ಹಾಗೂ ಅವುಗಳ ಅಗತ್ಯತೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದಲ್ಲಿ ಕಾರ್ಯಕ್ರಮಗಳನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸಲು ಅನುಕೂಲವಾಗಬಲ್ಲದು ಎಂದು ಸಚಿವರು ಹೇಳಿದರು. ಕೆಲವು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರದ ಆದೇಶ ಸೂಚನೆಗಳಿಗೆ ಮಹತ್ತ್ವ ನೀಡದೆ, ತಮ್ಮದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸರ್ಕಾರದ ಆದೇಶಗಳನ್ನು ಪಾಲಿಸದೇ ಇರುವ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ…

Read More

ಬೆಂಗಳೂರು: ಹೊಸ ವರ್ಷಾಚರಣೆಯ ಮರುದಿನವೇ ಮದ್ಯದ ಮೇಲಿನ ದರವನ್ನು ಶೇ. 20ರಷ್ಟು ಹೆಚ್ಚಳ ಮಾಡಿ ಉತ್ಪಾದನ ಕಂಪೆನಿಗಳು ಹೆಚ್ಚಳ ಮಾಡಿದ್ದು, ಈ ಮೂಲಕ ಮದ್ಯಪ್ರಿಯರ ಗಂಟಲು ಇನ್ನೂ ಸುಡುವಂತೆ ಮಾಡಿದೆ. ಈ ನಡುವೆ ಇದ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಸರಕಾರ ಯಾವುದೇ ಮದ್ಯದ ದರ ಹೆಚ್ಚಿಸಿಲ್ಲ. ನಾವೇನಿದ್ದರೂ ತೆರಿಗೆಯಲ್ಲಿ ಪರಿಷ್ಕರಣೆ ಮಾಡುತ್ತೇವೆ. ಅಬಕಾರಿ ಶುಲ್ಕ ಹೆಚ್ಚಿಸುವುದಿದ್ದರೆ ಮೊದಲೇ ತಿಳಿಸುತ್ತೇವೆ ಅಂತ ಹೇಳಿದ್ದಾರೆ. ಆದರೆ ಮದ್ಯಪ್ರಿಯರು ಮಾತ್ರ ಬೆಲೆ ಹೆಚ್ಚಳದಿಂದ ಕಿಕ್‌ ಇಳಿಸಿಕೊಳ್ಳುತ್ತಿದ್ದು, ಸರ್ಕಾರ ವಿರುದ್ದ ಕಿಡಿಕಾರುತ್ತಿದ್ದಾರೆ. ಹಾಗಾದ್ರೇ ; ಯಾವ ಬ್ರಾಂಡ್ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ 1. ಓಟಿ 180 ಎಂಎಲ್ ಸದ್ಯದ ದರ : 90 ರೂಪಾಯಿ ಜನವರಿ 1ರಿಂದ 111 ರೂಪಾಯಿ 2. ಬಿಪಿ 180 ಎಂಎಲ್ ಸದ್ಯದ ದರ: 110 ರೂಪಾಯಿ ಜನವರಿಯಿಂದ 145 ರೂಪಾಯಿ 3. 8PM (180 ಎಂಎಲ್) ನಿನ್ನೆಯ ದರ : 90 ರೂಪಾಯಿ…

Read More

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಸಿರಿಧಾನ್ಯ ಹಬ್ಬದ ಅಂಗವಾಗಿ ನಡೆದ ನಾಟಿಕೋಳಿ ಸಾರು–ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ನುಂಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ 62 ವರ್ಷದ ಈರೇಗೌಡ 10 ಮುದ್ದೆಗಳನ್ನು (2 ಕೆ.ಜಿ. 716 ಗ್ರಾಂ) ನುಂಗಿ ಪ್ರಥಮ ಸ್ಥಾನ ಪಡೆದರು. ದಿಲೀಪ್ ಎಂಬುವವರು 6 ಮುದ್ದೆ (1 ಕೆಜಿ 682 ಗ್ರಾಂ) ತಿಂದು ದ್ವಿತೀಯ ಸ್ಥಾನ ಪಡೆದರೆ, ರವೀಂದ್ರ ಎಂಬವರು 5.5 ಮುದ್ದೆ ತಿಂದು (1 ಕೆಜಿ 544 ಗ್ರಾಂ) ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಗೆ 30 ನಿಮಿಷಗಳ ಕಾಲಾವಕಾಶ ನಿಗದಿ ಪಡಿಸಲಾಗಿತ್ತು. ಈ ವೇಳೆಯಲ್ಲಿ ಯಾರು ಹೆಚ್ಚು ಮುದ್ದೆ ತಿನ್ನುತ್ತಾರೆಯೋ ಅವರೇ ವಿಜಯಶಾಲಿ ಎಂದಾಗಿತ್ತು. ಇನ್ನು ಸ್ಪರ್ಧಿಗೆ ನೀಡುವ ಪ್ರತಿ ಮುದ್ದೆಯನ್ನೂ ತೂಕ ಹಾಕಿ ಬಡಿಸಲಾಗಿತ್ತು. 20ಕ್ಕೂ ಹೆಚ್ಚು ಮಂದಿ ಸ್ಪರ್ಧೆ ಮಾಡಿದ್ದರು.

Read More

ಬೆಳಗಾವಿ: ರಾಜ್ಯದಲ್ಲಿ ಶೇಕಡಾ 70ರಷ್ಟು ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಎಲ್ಲರನ್ನೂ ಖಾಯಂಗೊಳಿಸಲಾಗುವುದು ಎಂದು ಸಚಿವ ರಹೀಂ ಖಾನ್​ ಭರವಸೆ ನೀಡಿದ್ದಾರೆ. ಅವರು ಇಂದು ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ 368 ಪೌರಕಾರ್ಮಿಕರ ನೇಮಕಾತಿ ಆದೇಶಪತ್ರಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು, ಇದೇ ವೇಳೇ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಹಂತ ಹಂತವಾಗಿ ಎಲ್ಲರನ್ನು ಖಾಯಂಗೊಳಿಸಿ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಅಂತ ತಿಳಿಸಿದರು.

Read More

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಸಿವಾಗಿದೆ ಎಂದು ತಿಂದರೂ ಮತ್ತೆ ಒಂದು ಗಂಟೆಯಲ್ಲಿ ಹಸಿವಾಗುತ್ತಾ.? ಆದ್ರೆ, ತಕ್ಷಣ ಎಚ್ಚರವಾಗಿರಿ. ತಿಂದ ಸ್ವಲ್ಪ ಸಮಯದ ಬಳಿಕ ನಿಮ್ಗೆ ಮತ್ತೆ ಮತ್ತೆ ಹಸಿವಾದ್ರೆ ನಿಮ್ಮ ದೇಹದಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಿ. ಹೌದು, ಬ್ಲಡ್ ಶುಗರ್ ಇದಕ್ಕೆ ಕಾರಣವಾಗಿರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಅಸಮರ್ಪಕ ಕಾರ್ಯಗಳು ಇದಕ್ಕೆ ಕಾರಣ ಎಂದು ಅರ್ಥಮಾಡಿಕೊಳ್ಳಬೇಕು. ಊಟ ಮಾಡಿದ ಮೂರ್ನಾಲ್ಕು ಗಂಟೆಗಳ ಕಾಲ ಹಸಿದಿರುವುದು ಸಾಮಾನ್ಯ. ಆದ್ರೆ, ಎಷ್ಟೇ ತಿಂದರೂ.. ಇನ್ನೂ ಏನಾದ್ರೂ ತಿನ್ನಬೇಕು ಅಂತ ಅನಿಸಿದರೆ ಇದು ಮಾಮೂಲಿಯಾಗಿ ತೆಗೆದುಕೊಳ್ಳಬೇಕಾದುದಲ್ಲ. ಈ ಅಧ್ಯಯನವನ್ನ ಇತ್ತೀಚೆಗೆ 1,000 ಜನರ ಮೇಲೆ ನಡೆಸಲಾಯಿತು. ಪ್ರತಿ ಮೂವರಲ್ಲಿ ಒಬ್ಬರು ಈ ರೀತಿ ಬಳಲುತ್ತಿರುವುದು ಕಂಡುಬಂದಿದೆ. ಈ ವಿಷಯವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅಂತಹ ಜನರು ಹೆಚ್ಚುವರಿ ಆಹಾರವನ್ನ ಸೇವಿಸುವ ಮೂಲಕ ತೂಕ ಹೆಚ್ಚಾಗಬಹುದು. ಆದಾಗ್ಯೂ, ಕೆಲವು ಸಲಹೆಗಳನ್ನ ಅನುಸರಿಸುವ ಮೂಲಕ ಈ ಸಮಸ್ಯೆಯನ್ನ…

Read More

ಬೆಂಗಳೂರು: ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ. 60 ವರ್ಷ ಹಾಗೂ ದೀರ್ಘ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬುಧವಾರದಿಂದ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. 1 ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ನೀಡಲಾದ ಲಸಿಕೆಗಳನ್ನೇ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಇದೇ ವೇಳೆ ಅವರು ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಅನಗತ್ಯವಾಗಿ ಆತಂಕಕ್ಕೇ ಒಳಪಡದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ನೀಡಿದ್ದಾರೆ.

Read More