Subscribe to Updates
Get the latest creative news from FooBar about art, design and business.
Author: kannadanewsnow07
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ. ಕೇಪ್ಟೌನ್ನಲ್ಲಿ ನಡೆದ ಟೆಸ್ಟ್ ಇತಿಹಾಸದಲ್ಲಿ ಭಾರತೀಯ ತಂಡದ ವಿರುದ್ಧ ಆತಿಥೇಯರು ತಮ್ಮ ಕನಿಷ್ಠ ಮೊತ್ತವನ್ನು ದಾಖಲಿಸಿದ್ದರಿಂದ ಭಾರತವು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್ಅಪ್ ಅನ್ನು ಕೇವಲ 55 ರನ್ಗಳಿಗೆ ಆಲೌಟ್ ಮಾಡಿತು. ಭಾರತದ ಪರ ಮೊಹಮ್ಮದ್ ಸಿರಾಜ್ 15ಕ್ಕೆ 6 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ಮುಖೇಶ್ ಕುಮಾರ್ ತಲಾ 2 ವಿಕೆಟ್ ಪಡೆದರು. ಸೆಂಚೂರಿಯನ್ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ನಲ್ಲಿ ಭಾರತವು ಇನ್ನಿಂಗ್ಸ್ ಮತ್ತು 32 ರನ್ಗಳ ಹೀನಾಯ ಸೋಲಿನ ನಂತರ ಬಂದಿತು ಆದರೆ ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ನಾಲ್ಕನೇ ಓವರ್ನಲ್ಲಿ ಐಡೆನ್ ಮಾರ್ಕ್ರಮ್ ಎರಡು ರನ್ಗಳಿಗೆ ಔಟಾಗಿದ್ದರಿಂದ ಬ್ಯಾಟಿಂಗ್ ಕುಸಿತ ಪ್ರಾರಂಭವಾಯಿತು. ಮೊದಲ ಟೆಸ್ಟ್ನಲ್ಲಿ 185 ರನ್ ಗಳಿಸಿದ್ದ ಸ್ಟ್ಯಾಂಡ್-ಇನ್ ನಾಯಕ ಡೀನ್ ಎಲ್ಗರ್ ಅವರನ್ನು ಸಿರಾಜ್ ನಾಲ್ಕು ರನ್ಗಳಿಗೆ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್:ಶ್ರವಣ ಸಾಧನಗಳನ್ನು ಬಳಸದವರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಯುಎಸ್ಸಿಯ ಕೆಕ್ ಮೆಡಿಸಿನ್ ಅವರ ದಿ ಲ್ಯಾನ್ಸೆಟ್ ಹೆಲ್ತಿ ಲಾಂಗ್ಯುಯಿಟಿಯಲ್ಲಿ ಇಂದು ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ. ಅಂಕಿಅಂಶಗಳ ಪ್ರಕಾರ, ಸುಮಾರು 40 ಮಿಲಿಯನ್ ಅಮೇರಿಕನ್ ವಯಸ್ಕರು ಶ್ರವಣ ನಷ್ಟದಿಂದ ಬಳಲುತ್ತಿದ್ದಾರೆ, ಆದರೂ ಶ್ರವಣ ಸಾಧನಗಳ ಅಗತ್ಯವಿರುವ ಹತ್ತು ಜನರಲ್ಲಿ ಒಬ್ಬರು ಮಾತ್ರ ಅವುಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಶ್ರವಣ ನಷ್ಟದ ಪ್ರಮಾಣ (ಸೌಮ್ಯದಿಂದ ತೀವ್ರದವರೆಗೆ), ವಯಸ್ಸು, ಜನಾಂಗೀಯತೆ, ಆದಾಯ, ಶಿಕ್ಷಣ ಮತ್ತು ಇತರ ಜನಸಂಖ್ಯಾಶಾಸ್ತ್ರದಂತಹ ವ್ಯತ್ಯಾಸಗಳನ್ನು ಲೆಕ್ಕಿಸದೆ, ನಿಯಮಿತ ಶ್ರವಣ ಸಾಧನ ಬಳಕೆದಾರರು ಮತ್ತು ಎಂದಿಗೂ ಬಳಸದವರ ನಡುವಿನ ಸಾವಿನ ಅಪಾಯದಲ್ಲಿ ಸುಮಾರು 25 ಪ್ರತಿಶತದಷ್ಟು ವ್ಯತ್ಯಾಸವು ಸ್ಥಿರವಾಗಿ ಉಳಿದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಶ್ರವಣ ಸಾಧನಗಳನ್ನು ನಿಯಮಿತವಾಗಿ ಬಳಸುವ ಶ್ರವಣದೋಷ ಹೊಂದಿರುವ ವಯಸ್ಕರು ಅವುಗಳನ್ನು ಎಂದಿಗೂ ಧರಿಸದವರಿಗೆ ಹೋಲಿಸಿದರೆ ಸಾವಿನ ಅಪಾಯವನ್ನು ಶೇಕಡಾ 24 ರಷ್ಟು ಕಡಿಮೆ ಹೊಂದಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಕೆಕ್ ಮೆಡಿಸಿನ್ನ ಒಟೊಲಾರಿಂಗಲಜಿಸ್ಟ್ ಮತ್ತು…
BREAKING: ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ‘ಡ್ರೋನ್ ಪ್ರತಾಪ್’? ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನಡುವೆ ಪ್ರತಾಪ್ ಅವರಿಗೆ ಫುಡ್ ಫಾಯ್ಸನ್ ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. ಕಳೆದ ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಇಂದು ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ಆದರೆ ಕೆಲವು ಮಂದಿ ಸಾಮಾಜಿಕ ಬಳಕೆದಾರರು ಪ್ರತಾಪ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಸುಳ್ಳು ಸುದ್ದಿ ಹರಡಿಸುತ್ತಿದ್ದು, ಇದು ಸತ್ಯಕ್ಕೆ ವಿರುದ್ದವಾಗಿದೆ ಅಂತ ಬಿಗ್ ಬಾಸ್ ನಡೆಸಿಕೊಡುವವರು ತಿಳಿಸಿದ್ದಾರೆ. ಕೆಲವು ಮಂದಿ ಪ್ರತಾಪ್ ಅವರು ವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ನಮ್ಮ ಮಗನಿಗೆ ಫುಡ್ ಪಾಯ್ಸನ್ ಆಗಿದೆ ಅಂತ ತಿಳಿಸಿದ್ದಾರೆ ಅಂತ ಪ್ರತಾಪ್ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸದ್ಯ ಅವರು ಜ್ವರದಿಂದ ಕೂಡ ಬಳಲುತ್ತಿದ್ದಾರೆ ಅಂತ ಹೇಳಿದ್ದಾರೆ. ಪ್ರತಾಪ್ ಬಗ್ಗೆ ಕೇಳಿ ಬರುತ್ತಿರುವ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಮಾಧ್ಯಮದಿಂದ…
ಬೆಂಗಳೂರು: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಲಿಫ್ಟ್ ಕೈಕೊಟ್ಟ ಕಾರಣ ಬಿಜೆಪಿ ಸಂಸದ ಸೇರಿದಂತೆ ಮೂವರು ಸಿಲುಕಿಕೊಂಡ ಘಟನೆ ನಡೆದಿದೆ. ವಿದ್ಯುತ್ ಚಕ್ತಿ ಹೋದ ಸಮಯದಲ್ಲಿ ಜನರೇಟರ್ ಸರಿಯಾಗಿ ಆನ್ ಆಗದ ಹಿನ್ನಲೆಯಲ್ಲಿ ಲಿಫ್ಟ್ ಕೈಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಬೆಂಬಲಿಗರ ಜೊತೆಗೆ ಉಮೇಶ್ ಜಾಧವ್ ಅವರು ಲಿಫ್ಟ್ ಒಳಗೆ ಹೋಗಿದ್ದಾರೆ ಈ ವೇಳೆ ವಿದ್ಯುತ್ ಕೈಕೊಟ್ಟಿದೆ. ಕೂಡಲೇ ಲಿಫ್ಟ್ ಆಪರೇಟರ್‌ಗಳನ್ನು ಕರೆಸಿದರು, ನಂತರ ತಾಂತ್ರಿಕ ವರ್ಗದವರು ಕಾರ್ಯಚರಣೆ ನಡೆಸಿ ಲಿಫ್ಟ್ ಒಳಗೆ ಸಿಲುಕಿಕೊಂಡವರನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್) ಸಲ್ಲಿಸುವ ಪ್ರತಿ ಅರ್ಜಿಗೆ ನಿಗದಿ ಪಡಿಸಿದ ಪರಿಷ್ಕೃತ ಶುಲ್ಕ ಈ ಕೆಳಗಿನಂತಿದೆ. 11-ಇ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ ಪೂರ್ವನಕ್ಷೆ 2 ಎಕರೆವರೆಗೆ 2,500 ರೂ. (ನಗರ), 1,500 ರೂ. (ಗ್ರಾಮೀಣ) 2 ಎಕರೆ ನಂತರ ಪ್ರತಿ ಎಕರೆಗೆ 1,000 ರೂ. (ನಗರ), 400 ರೂ. (ಗ್ರಾಮೀಣ) ಜಮೀನು ಹದ್ದುಬಸ್ತು 2 ಎಕರೆವರೆಗೆ ₹ 2,000 (ನಗರ), ₹ 500 (ಗ್ರಾಮೀಣ) 2 ಎಕರೆ ನಂತರ ಪ್ರತಿ ಎಕರೆಗೆ 400 ರೂ. (ನಗರ), 300 ರೂ. (ಗ್ರಾಮೀಣ)
ಬೆಂಗಳೂರು: ಬಿಜೆಪಿಯಿಂದ ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನ ಶುರುವಾಗಿದ್ದು, ಈ ಮೂಲಕ ರಾಜ್ಯ ಸರ್ಕಾರದ ವಿರುದ್ದ ಸಮರ ಸಾರಿದ್ದಾರೆ ಬಿಜೆಪಿ ನಾಯಕರುಗಳು. ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಏಕಾಂಗಿ ಪ್ರತಿಭಟನೆ ನಡೆಸಿದರು. ಅವರು ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ಮಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗದುಕೊಂಡ ಘಟನೆ ಕೂಡ ನಡೆಯಿತು. ಶ್ರೀಕಾಂತ್ ಪೂಜಾರಿ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ ಬುಧವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ. ಇದಲ್ಲದೇ ಚಿಕ್ಕಮಗಳೂರಿನಲ್ಲಿ ಕೂಡ ಠಾಣೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಶಾಸಕ ಸಿಟಿ ರವಿಯವರನ್ನು ಕೂಡ ಪೊಲೀಸರು ಮುಂಜಾಗ್ರತ ಕ್ರಮವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. https://twitter.com/karkalasunil/status/1742761255931433142
ಬೆಂಗಳೂರು : ಅಲೆಮಾರಿ ಸಮುದಾಯಕ್ಕೆ ಸರ್ಕಾರ 2 ಲಕ್ಷ ಸಾಲ ಸೌಲಭ್ಯ ನೀಡಲಿದ್ದು, ಈ ಬಗ್ಗೆ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮಹಾದೇವಪ್ಪ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿರುವ ಹೇಳಿಕೆಯಂತೆ, ‘ಆಧುನಿಕ ಸಂದರ್ಭವು ಬೆಳೆದಂತೆ, ತಮ್ಮ ಬದುಕಲ್ಲಿ ನಿರೀಕ್ಷಿತ ಸುಧಾರಣೆ ಕಾಣದ ಅಲೆಮಾರಿ ಸಮುದಾಯಗಳು ಒಂದಿಲ್ಲೊಂದು ಕಾರಣಕ್ಕೆ ಅಭದ್ರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತವೆ ಅವರಿಗೆ ಘನತೆಯ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅಲೆಮಾರಿಗಳಿಗೆ 2 ಲಕ್ಷದವರೆಗೆ ಉದ್ಯಮಶೀಲತಾ ಸಾಲವನ್ನು ನಮ್ಮ ಸರ್ಕಾರ ಕಲ್ಪಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ. https://twitter.com/CMahadevappa/status/1742747265138315751
ಮೂರು ದಶಕಗಳಷ್ಟು ಹಳೆಯದಾದ ರಾಮ ಮಂದಿರ ಪ್ರಕರಣಕ್ಕೆ ಸಂಬಂಧಿಸಿದ ಹಿಂದೂ ಕಾರ್ಯಕರ್ತನ ಬಂಧನದ ವಿರುದ್ಧ ಕರ್ನಾಟಕದ ತೀವ್ರ ಪ್ರತಿಭಟನೆಯ ಮಧ್ಯೆ, ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು “ಹಿಂದೂ ವಿರೋಧಿ” ಎಂದು ಟೀಕಿಸಿದೆ. ಈ ನಡುವೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿ, ರಾಮಮಂದಿರಕ್ಕೆ ಒಂದು ರೂ. ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ. ಸಿಎಂ ಸಿದ್ದರಾಮಯ್ಯ ಅವರೇ ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ..? ಅಂತ ಪ್ರಶ್ನೆ ಮಾಡಿದೆ. https://twitter.com/BJP4Karnataka/status/1742375172559212986
ಬೆಂಗಳೂರು: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕ್ಷೇತ್ರದ ಜನರು ಹುಡುಕಿ ಹುಡುಕಿ ಸುಸ್ತಾಗಿದ್ದು, ಓಟು ಹಾಕಿದ ತಪ್ಪಿಗೆ ನಾವೇ ನಮ್ಮದನ್ನು ಹೊಡೆದುಕೊಳ್ಳಬೇಕು ಎನ್ನುವ ಆಕ್ರೋಶ ಭರಿತ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ. ಈ ಬಾರಿಯ ವಿಧಾನಸಭೆಯಲ್ಲಿ ತಮ್ಮ ತಂದೆಯವರ ಸಾವಿನ ಸಿಂಪತಿಯನ್ನು ಗಿಟ್ಟಿಸಿಕೊಂಡು ಗೆಲುವು ಕಂಡಿರುವ ದರ್ಶನ್ ಪುಟ್ಟಣ್ಣಯ್ಯ ತಮ್ಮ ಶಾಸಕ ಸ್ಥಾನವನ್ನು ಸರಿಯಾಗಿ ನಿಭಾಸುತ್ತಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ಮೇಲುಕೋಟೆ ಕ್ಷೇತ್ರಕ್ಕಿಂತ ಅಮೇರಿಕಾದಲ್ಲಿರುವ ತಮ್ಮ ವ್ಯವಹಾರದ ಮೇಲೆಯೇ ಹೆಚ್ಚು ಪ್ರೀತಿ ಅಂಥ ಹೇಳುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾದ ಏಳೇ ತಿಂಗಳಲ್ಲಿ ನಾಲ್ಕನೇ ಬಾರಿ ಅಮೇರಿಕಕ್ಕೆ ತೆರಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ವಿಧಾನಸಭೆ ಚುನಾವಣೆಗೂ ಮೊದಲು ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಾಟ ಮಾಡಿ ಹುಟ್ಟೂರಲ್ಲೇ ಇರುವುದಾಗಿ ದರ್ಶನ್ ಪುಟ್ಟಣಯ್ಯ ಭರವಸೆ ನೀಡಿದ್ದರು. ಆದಾದ ಬಳಿಕ ಅವರು ಅಮೇರಿಕಾಕ್ಕೆ ಹೋಗಿದ್ದರು, ಬಳಿಕ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದರು, ಆದಾದ ಬಳಿಕ ಅವರು ತಮ್ಮ ಜನತೆ ಬಳಿಕ ಇನ್ಮುಂದೆಹೀಗೆ ಆಗುವುದಿಲ್ಲ…
ಚಿಕ್ಕಮಗಳೂರು: ಪೊಲೀಸ್ ಠಾಣೆ ಮುಂದೆ ಧರಣಿ ಮಾಡುತ್ತಿದ್ದ ಬಿಜೆಪಿ ಮಾಜಿ ಶಾಸಕ ಸಿಟಿ ರವಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ರಾಜ್ಯದಲ್ಲಿ ರಾಮನ ಕರ ಸೇವಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಅಂಥ ಆರೋಪಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಬಿಜೆಪಿಯವರು ರಾಜ್ಯ ಸರ್ಕಾರ ವಿರುದ್ದ ಕಿಡಿಕಾರಿ, ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ನಡುವೆ ಇಂದು ಕೂಡ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಚಿಕ್ಕಮಗಳೂರಿನ ಪೊಲೀಸ್ ಠಾಣೆ ಅವರಣದಲ್ಲಿ ನನ್ನ ಕೂಡ ಬಂಧಿಸಿ ಎನ್ನುವ ಫಲಕವನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಮುಂಜಾಗ್ರತ ಕ್ರಮವಾಗಿ ಪೊಲೀಸರು ಸಿಟಿ ರವಿಯವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ಸ್ಥಳದಲ್ಲಿ ಕೆಲ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ಕೂಡ ನಡೆದಿದೆ.












