Subscribe to Updates
Get the latest creative news from FooBar about art, design and business.
Author: kannadanewsnow07
ಬಾಗಿಲಲ್ಲಿ ಭತ್ತದ ತೋರಣ :ಪ್ರತಿಯೊಬ್ಬರ ಮನೆಯ ಬಾಗಿಲಲ್ಲೂ ಕೂಡ ಭತ್ತದ ತೋರಣಗಳನ್ನ ಕಾಣುತ್ತೇವೆ. ಅಲಂಕಾರಿಕವಾಗಿಯೂ ಕೂಡ ಅದನ್ನ ಬಳಸುತ್ತಾರೆ. ಹಳ್ಳಿ ಕಡೆಯ ಪ್ರತಿಯೊಂದು ಮನೆಯಲ್ಲೂ ಕೂಡ ಭತ್ತದ ತೋರಣಗಳನ್ನ ನೋಡುತ್ತೇವೆ. ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ತುಂಬಾ ಅನುಕೂಲಕರವಾದ ವಾತಾವರಣವನ್ನ ಸೃಷ್ಟಿಸುತ್ತದೆ. ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ತಂತ್ರಿ 9686268564. ನಿಮಗೆ…
ಬೆಂಗಳೂರು: ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ-2024 ಕಾರ್ಯಕ್ರಮವನ್ನು ಜನವರಿ 05 ರಿಂದ 07 ರವರೆಗೆ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಜನವರಿ 05 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಆಗಮಿಸುವರು. ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಪ್ರಲ್ಹಾದ ಜೋಶಿ ಅವರು ಅಂತರರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆಯನ್ನು ನೆರವೇರಿಸುವರು. ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸುವರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ರೈತರ ಕಾರ್ಯಾಗಾರ ಉದ್ಘಾಟಿಸುವರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಎಲೆಕ್ಟಾçನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಆಗಮಿಸುವರು. ಕೃಷಿ ಸಚಿವರು ಹಾಗೂ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ-2024ರ ಉಸ್ತುವಾರಿ…
ಬೆಂಗಳೂರು: ರಾಜ್ಯ ಸರ್ಕಾರ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ10% ರಷ್ಟು ಶುಲ್ಕ ಏರಿಕೆ ಮಾಡುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆದೇಶವನ್ನು ಕೂಡ ಹೊರಡಿಸಿದೆ. ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆಗೆ ಅವಕಾಶ ನೀಡಿದ್ದು, ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ10% ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ. ಆದೇಶದಲ್ಲಿ (1) ರ ದಿನಾಂಕ: 25.05.2023ರ ಪತ್ರದಲ್ಲಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಇವರು ಕಾಲೇಜು ಶಿಕ್ಷಣ ಇಲಾಖೆಗೆ ವ್ಯಾಪ್ತಿಗಳೊಪಡುವ ಕೆಲವು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿರುವ ವಿವಿಧ ಸ್ನಾತಕೋತ್ತರ ಪದವಿ ತರಗತಿಗಳಿಗೆ ಶುಲ್ಕ ನಿಗಧಿಪಡಿಸುವ ಕುರಿತಂತೆ (ಎಂ.ಬಿ.ಎ ಮತ್ತು ಎಂ.ಸಿ.ಎ ಕೋರ್ಸ್‌ಗಳನ್ನೊಳಗೊಂಡತೆ) 2021-22ನೇ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಲಾದ ಶುಲ್ಕವನ್ನೆ ಮುಂದುವರಿಸಲು ನಿರ್ದೇಶಿಸಲಾಗಿದ್ದು, ಅದರಂತೆ 2022-23ನೇ ಸಾಲಿನಲ್ಲಿಯು ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ. ಪಸ್ತುತ, 2023-24ನೇ ಶೈಕ್ಷಣಿಕ…
ಬೆಂಗಳೂರು: 023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET 2023) ಯ ಫಲಿತಾಂಶವನ್ನು ದಿನಾಂಕ:23/11/2023 ರಂದು ಪ್ರಕಟಿಸಲಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ OR Code ಹೊಂದಿರುವ ಗಣಕೀಕೃತ ಪ್ರಮಾಣ ಪತ್ರವನ್ನು ಇಲಾಖಾ ವೆಬ್‌ಸೈಟ್ https://schooleducation.karnataka.gov.in/ ನಲ್ಲಿ ಲಭ್ಯಗೊಳಿಸಲಾಗಿದೆ. ಪ್ರಮಾಣ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅಂತ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಟಿಇಟಿ 2023ನೇ ಸಾಲಿನ ಫಲಿತಾಂಶವನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2023 ರಲ್ಲಿ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು schooleducation.kar.nic.in ಅಧಿಕೃತ ವೆಬ್ಸೈಟ್ನಿಂದ ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಶಿಕ್ಷಣ ಇಲಾಖೆಯು ಅಭ್ಯರ್ಥಿಗಳಿಗೆ KARTET 2023 ಪ್ರಮಾಣಪತ್ರ ಪಿಡಿಎಫ್ ಡೌನ್ಲೋಡ್ ಮಾಡುವ ಆಯ್ಕೆಯನ್ನು ಸಕ್ರಿಯಗೊಳಿಸಿದೆ, ಆದಾಗ್ಯೂ, ಕರ್ನಾಟಕ ಟಿಇಟಿ ಪ್ರಮಾಣಪತ್ರ ಡೌನ್ಲೋಡ್ ಸೌಲಭ್ಯವು ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಲಭ್ಯವಿದೆ.
ಬೆಂಗಳೂರು: ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ದಿನಾಂಕ 31-12-2023ರ ಒಳಗೆ ತಮ್ಮ ಅಡುಗೆ ಅನಿಲ ಗ್ರಾಹಕರ ಸಂಖ್ಯೆಗೆ ಇ-ಕೆವೈಸಿಯನ್ನು ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ಯಾಸ್ ಏಜೆನ್ಸಿಯಲ್ಲಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಅಂತಹ ಗ್ರಾಹಕರಿಗೆ ಸಹಾಯಧನ ನಿಲ್ಲಿಸಲಾಗುತ್ತದೆ. ಗೃಹ ಬಳಕೆ ಅಡುಗೆ ಅನಿಲ ವಾಣಿಜ್ಯ ಬಳಕೆಯಾಗಿ ಪರಿವರ್ತನೆಯಾಗುತ್ತದೆ ಮತ್ತು ಅನಿಲ ಸಂಪರ್ಕ ಕಡಿತವಾಗುತ್ತದೆ ಹಾಗೂ ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕೆಂಬ ವದಂತಿ ಸಾರ್ವಜನಿಕರ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿರುತ್ತದೆ. ಅಡುಗೆ ಅನಿಲ ಗ್ರಾಹಕರಿಗೆ ತಿಳಿಯಪಡಿಸುವುದೇನೆಂದರೆ ಈ ವಿಷಯಗಳು ಕೇವಲ ವದಂತಿಯಾಗಿದ್ದು, ಗ್ರಾಹಕರು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರವು/ ಅನಿಲ ಕಂಪನಿಗಳು ಯಾವುದೇ ಕೊನೆಯ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ ಹಾಗೂ ಇ-ಕೆವೈಸಿ ಮಾಡಿಸುವುದಕ್ಕೆ ಯಾವುದೇ ಶುಲ್ಕ ನಿಗಧಿಯಾಗಿರುವುದಿಲ್ಲ. ಇಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ. ಇ-ಕೆವೈಸಿ ಮಾಡಿಸುವುದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವವರು ಮತ್ತು ಸಹಾಯಧನ ಪಡೆಯುವ ಗ್ರಾಹಕರು ಮಾತ್ರ ಇ-ಕೆವೈಸಿಯನ್ನು ಆದ್ಯತೆ ಮೇಲೆ ನೀಡುವಂತೆ ಆಹಾರ,…
ಬೆಂಗಳೂರು: ಜ.13 ರಂದು ಕೆ-ಸೆಟ್ ಪರೀಕ್ಷೆ ನಡೆಯಲಿದ್ದು, ಈ ಹಿಂದೆ ವಿವಾದತ್ಮಕ ಆದೇಶಗಳನ್ನು ಹೊರಡಿಸಿ ವಿವಾದಕ್ಕೆ KEA ಒಳಗಾಗಿದ್ದನ್ನು ಸ್ಮರಿಸಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೆ-ಸೆಟ್ (KSET) ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲು ರಾಜ್ಯ ಸರ್ಕಾರದಿಂದ ಆದೇಶಿಸಲಾಗಿರುವುದರಿಂದ ಜನವರಿ 13ರ ಶನಿವಾರದಂದು ಪರೀಕ್ಷೆ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮೊದಲ ಪ್ರಶ್ನೆ ಪತ್ರಿಕೆ ಪರೀಕ್ಷೆ ಇರಲಿದ್ದು, ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಎರಡನೇ ಪ್ರಶ್ನೆಪತ್ರಿಕೆಯ ಪರೀಕ್ಷೆ ನಡೆಯಲಿದೆ. ದಿನಾಂಕ:13-01-2024 ರಂದು ನಡೆಯುವ ಕೆ-ಸೆಟ್ 2023(K-SET-2023) ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯ ವಸ್ತ್ರಸಂಹಿತೆ ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ: ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ | ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ.…
ಬೆಂಗಳೂರು : ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರವು ಶುಭ ಸುದ್ದಿಯನ್ನು ನೀಡಿದ್ದು, ಅರ್ಜಿ ಸಲ್ಲಿಸಿದ 7 ಸಾವಿರ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಕೃಷಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಜನವರಿ ಒಳಗಾಗಿ 7 ಸಾವಿರ ಜನರಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಬೆಂಗಳೂರು: ಎಬಿ-ಪಿಎಮ್‍ಜೆಎವೈ-ಸಿಎಮ್ ಆರ್‍ಕೆ (ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ) ಎಂಬ ಹೆಸರಿನೊಂದಿಗೆ ದೊರಕುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಆಯುಷ್ಮಾನ್ ಕಾರ್ಡ್‍ಗಳನ್ನು ಸಾರ್ವಜನಿಕರು ತಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಕಾರ್ಡ್‍ಗಳಿಂದ 1650 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದಂತೆÀ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಸುಸಜ್ಜಿತ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ವೆಚ್ಚ ಸೌಲಭ್ಯ ಪಡೆದುಕೊಳ್ಳಬಹುದು. ಕಾರ್ಡ್‍ಗಳನ್ನು ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಮತ್ತು ಆಧಾರ್‍ಕಾರ್ಡ್‍ನೊಂದಿಗೆ ತಮ್ಮ ಮೊಬೈಲ್‍ನಲ್ಲಿಯೇ (ಆಂಡ್ರಾಯ್ಡ್ ಮೊಬೈಲ್) ನೋಂದಣಿ ಮೂಲಕ ಕಾರ್ಡ್‍ಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ. *ನೋಂದಣಿ ಮಾಡಿಕೊಳ್ಳುವ ವಿಧಾನ:* ತಮ್ಮ ಮೊಬೈಲ್‍ನ ಗೂಗಲ್ ವೆಬ್‍ಸೈಟ್‍ನಲ್ಲಿ hಣಣಠಿ://beಟಿeಜಿiಛಿiಚಿಡಿಥಿ.ಟಿhಚಿ.gov.iಟಿ ಎಂದು ಟೈಪ್ ಮಾಡಿದ ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೋರ್ಟಲ್ ಕಂಡು ಬರುತ್ತದೆ. ಪೋರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ…
ಇರಾನಿನ ಜನರಲ್ ಖಾಸಿಮ್ ಸೊಲೈಮಾನಿ ಅವರ ಸಮಾಧಿಯ ಬಳಿ ನಡೆದ ಎರಡು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ಬುಧವಾರ ವರದಿ ಮಾಡಿದೆ. ಸರ್ವೋಚ್ಚ ನಾಯಕನ ನಂತರ ಇರಾನ್ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿರುವ ಸುಲೈಮಾನಿ 2020 ರಲ್ಲಿ ನೆರೆಯ ಇರಾಕ್ನಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇಂದಿನ ಸ್ಫೋಟದಲ್ಲಿ 171 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಪ್ರಸಾರಕ ಇರಿಬ್ ವರದಿ ಮಾಡಿದೆ. ದಕ್ಷಿಣ ನಗರ ಕೆರ್ಮನ್ ನ ಸಾಹೇಬ್ ಅಲ್-ಜಮಾನ್ ಮಸೀದಿಯ ಬಳಿ ನಡೆದ ಮೆರವಣಿಗೆಯಲ್ಲಿ ಸ್ಫೋಟಗಳು ಸಂಭವಿಸಿವೆ. ಜನರಲ್ ಸೊಲೈಮಾನಿ ಅವರ ಸ್ಮರಣಾರ್ಥ ಸಮಾರಂಭದ ಭಾಗವಾಗಿ ನೂರಾರು ಜನರು ಸಮಾಧಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು ಎಂದು ವರದಿಯಾಗಿದೆ.
ಬೆಂಗಳೂರು: ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ. ಮಾಸಲು ಬಟ್ಟೆಯಲ್ಲಿ ಚಡ್ಡಿಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ 2024ನೇ ಸಾಲಿನ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಸವೆದ ಚಪ್ಪಲಿ, ಹರಕಲು ಚೆಡ್ಡಿ, ಮಾಸಿದ ಬಟ್ಟೆ, ಅವಿದ್ಯಾವಂತರ ಪರವಾಗಿ ನಿಮ್ಮಗಳ ಹೃದಯ ಮಿಡಿಯಬೇಕು. ನೀವು ಒಳ್ಳೆ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಚೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ ಎಂದರು. ನಾವು ನೀವು ರಾಜ್ಯದ 7 ಕೋಟಿ ಜನರ ಹಿತ ಕಾಯುವುದಕ್ಕಾಗಿ ಇದ್ದೇವೆ. ರಾಜಕಾರಣಿಗಳು ಜನರಿಂದ ರಿನೀವಲ್ ಆದರೆ ಮಾತ್ರ ಐದು ವರ್ಷದ ಬಳಿಕವೂ ಜನ ಸೇವೆಯಲ್ಲಿ ಇರ್ತಾರೆ. ಆದರೆ ಕೆಎಎಸ್ ಅಧಿಕಾರಿಗಳು 30 ವರ್ಷಗಳ ಕಾಲ ನಿರಂತರ ಜನ ಸೇವೆಯಲ್ಲಿ ಇರುತ್ತೀರಿ. ಆದ್ದರಿಂದ ಹೆಚ್ಚು…














