Author: kannadanewsnow07

ಹುಬ್ಬಳ್ಳಿ: ಪ್ರಹ್ಲಾದ್‌ ಜೋಶಿಯಿಂದ ಸ್ವಾಮೀಜಿಗಳಿಗೆ ಪಾಕೆಟ್ ರಾಜಕೀಯ ಮಾಡುತ್ತಿದ್ದು ಈ ಬಗ್ಗೆ ನನ್ನ ಬಳಿ ವಿಡಿಯೋ ಇದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪೋಟಕ ಮಾಹಿತಿಯನ್ನು ಹೇಳಿದ್ದಾರೆ. ಅವರು ಇಂದು ಹುಬ್ಬಳ್ಳಿಯಲ್ಲಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಜೋಶಿ ಸೋಲಿಸೋದೆ ನಮ್ಮ ಗುರಿ. ಮಠಗಳ ನಡುವೆ ಜೋಶಿ ಒಡೆದಾಳೋ ನೀತಿ ಅನುಸರಿಸುತ್ತಿದ್ದಾರೆ. ಜೋಶಿ ಅವಲ ಸೋಲು ಖಚಿತ, ಸರ್ವೆಯಲ್ಲಿ ಇದು ಬಹಿರಂಗವಾಗಿದೆ ಎಂದು ಹೇಳಿದರು. ಇದಲ್ಲದೇ ಚುನಾವಣೆ ಬಂದಾಗ ಮಾತ್ರ ಸ್ವಾಮೀಜಿಗಳು ಬೇಕು. ನನ್ನ ಹಿರಿಯ ಸ್ವಾಮೀಜಿಗಳಿಂದ ನನ್ನ ಮೇಲೆ ಒತ್ತಡ ಹಾಕಿಸಿದರು. ನಮ್ಮ ಹಿರಿಯ ಸ್ವಾಮೀಜಿ ಶಿವಯೋಗಿ ಸಿದ್ದರಾಮ ಮಹಾಸ್ವಾಮಿಗಳನ್ನ ಪದೆ ಪದೇ ಭೇಟಿ ಮಾಡ್ತಿದ್ದಾರೆ. ನಮ್ಮ ಗುರು ಶಿಷ್ಯರುನ್ನು ಅಗಲಿಸೋ ಕೆಲಸ ಮಾಡ್ತಿದ್ದಾರೆ. ನೀವು ನಮ್ಮ ಗುರು ಶಿಷ್ಯರನ್ನು ಅಗಲಿಸಿದ್ರೆ,ನಾವು ನಿಮ್ಮ ದಂಪತಿ ಅಗಲಿಸುತ್ತೇವೆ ಎಂದು ಹೇಳಿದರು.

Read More

ಝಾನ್ಸಿ: ರೋಗಿಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊಟ್ಟೆಯಲ್ಲಿರುವ ಟವೆಲ್, ಉಪಕರಣಗಳನ್ನು ಮರೆತುಬಿಡುವ ಸಾಕಷ್ಟು ಕಥೆಗಳನ್ನು ನೀವು ಕೇಳಿರಬಹುದು. ಈಗ ಝಾನ್ಸಿಯಲ್ಲಿ ವೈದ್ಯರ ನಿರ್ಲಕ್ಷ್ಯದ ದೊಡ್ಡ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಯುವತಿಯ ಕೈಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ವೈದ್ಯರಿಗೆ ಹಸಿವಾಯಿತು ಎನ್ನುವ ಕಾರಣಕ್ಕೆ ಆಪರೇಶನ್‌ ಮಾಡುವುದನ್ನು ಬಿಟ್ಟು ಮಸಾಲೆ ದೋಸೆ ತಿನ್ನಲು ಹೋದ ಘಟನೆ ನಡೆದಿದೆ. ಇದಾದ ನಂತರ, ಬಾಲಕಿ ಆಪರೇಷನ್ ಥಿಯೇಟರ್ನಲ್ಲಿ ಮಲಗಿದ್ದಳು, ಸುಮಾರು 2 ಗಂಟೆಗಳ ನಂತರ ಹಿಂದಿರುಗಿದ ನಂತರ, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ ಎನ್ನಲಾಗಿದೆ. ಇನ್ನೂ ವೈದ್ಯರ ಈ ನಿರ್ಲಕ್ಷ್ಯದಿಂದಾಗಿ ತನ್ನ ಬೆರಳುಗಳು ವಕ್ರವಾಗಿವೆ ಎಂದು ಬಾಲಕಿ ಆರೋಪಿಸಿದ್ದಾರೆ. ನಂತರ, ಅವಳು ವೈದ್ಯರನ್ನು ಭೇಟಿಯಾಗಲು ಹೋದಾಗ, ಅವನು ಬಾಲಕಿಯನ್ನು ಭೇಟಿಯಾಗಲು ನಿರಾಕರಿಸಿದ್ದಾರೆ ಎನ್ನಾಗಿದೆ. . ಮಹಿಳೆ ಗುರ್ಗಾಂವ್ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವೇಳೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಘಟನೆ ಸಂಬಂಧ ಪೊಲೀಸ್ ಮತ್ತು ಸಿಎಂಒಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅವರು ಈಗ…

Read More

ಬೆಂಗಳೂರು: 2023ರ ಕರ್ನಾಟಕ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರದಿಂದ 34 ಲಕ್ಷ ರೂ.ಗೂ ಅಧಿಕ ಪರಿಹಾರ ಬಿಡುಗಡೆ ಮಾಡುವಂತೆ ಆದೇಶಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯವು ತನ್ನ ಹಕ್ಕುಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ಗೆ ಹೋಗಬೇಕಾಯಿತು ಎಂದು ಅವರು ಹೇಳಿದರು. ಸತತ ಪ್ರಯತ್ನ ಮತ್ತು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ನಂತರ, ನಾವು ಕೇಂದ್ರ ಸರ್ಕಾರದಿಂದ ಬರ ಪರಿಹಾರವಾಗಿ 3,498.82 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದೇವೆ. ನಾನು ಗೌರವಾನ್ವಿತ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದ ಇತಿಹಾಸದಲ್ಲಿ ಒಂದು ರಾಜ್ಯವು ತನ್ನ ಹಕ್ಕುಗಳನ್ನು ಜಾರಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿರುವುದು ಬಹುಶಃ ಇದೇ ಮೊದಲು. ಪ್ರತಿಕ್ರಿಯೆಗಾಗಿ ನಾವು ಸೆಪ್ಟೆಂಬರ್ 2023 ರಿಂದ ಕಾಯಬೇಕಾಯಿತು ಎಂಬುದು ವಿಷಾದನೀಯ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Read More

ಬೆಂಗಳೂರು: ಬರ ಪರಿಹಾರದಲ್ಲಿ ಬಿಡುಗಡೆಮಾಡಬೇಕಾಗಿರುವ ಹಣದಲ್ಲಿ ಕಡಿತ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ನಾಳೆ ಬೆಂಗಳೂರಿನ ವಿಧಾನಸೌಧದ ಮುಂದಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ರಾಯಚೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೇ ಅವರು ಮಾತನಾಡಿ ಬಿಜೆಪಿಯ ಸಂಸದರು ಒಬ್ಬರು ಕೂಡ ಸಂಸತ್ತಿನಲ್ಲಿ ಮಾತನಾಡಿಲ್ಲ, ಇವರು ಪ್ರಧಾನಿ ಮೋದಿ ಮುಂದೆ ಒಂದು ದಿನವೂ ಮತಾನಾಡಿಲ್ಲ ಅಂಥ ಹೇಳಿದರು. ಇನ್ನೂ ಪ್ರಧಾನಿ ಮೋದಿಯವರು ತಮ್ಮ ಅಧಿಕಾರವಾಧಿಯಲ್ಲಿ ಹೇಳಿದ್ದ ಯಾವುದೇ ಜನ ಪರ ಕೆಲಸಗಳನ್ನುಮಾಡಿಲ್ಲ ಅಂತ ಹೇಳಿದರು. ಇನ್ನೂ ಕಪ್ಪು ಹಣವನ್ನು ವಾಪಸ್ಸು ತರುವ ಬಗ್ಗೆ ಇಲ್ಲಿ ತನಕ ಅವರು ಮಾತೇ ಆಡಿಲ್ಲ ಅಂಥ ಹೇಳಿದರು. ಇನ್ನೂ ರೈತರ ಅದಾಯವನ್ನು ದುಪಟ್ಟು ಮಾಡುತ್ತೇವೆ ಅಂತ ಹೇಳಿದರು, ಅದು ಕೂಡ ಆಗಿಲ್ಲ. ಪೆಟ್ರೋಲ್‌, ಡಿಸೇಲ್‌ ಬೆಲೆ, ಗೊಬ್ಬರ, ಅಡುಗೆ ಅನಿಲ ಬೆಲೆ ಕಡಿಮೆ ಆಗಿಲ್ಲ ಅಂತ ಹೇಳಿದರು.

Read More

ಗುವಾಹಟಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭರವಸೆಗಳಲ್ಲಿ ಒಂದನ್ನೂ ಜಾರಿಗೆ ತಂದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಎಂದಿಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ, ಆದರೆ ಕಾಂಗ್ರೆಸ್ ಭಾರತವನ್ನು ಸ್ವತಂತ್ರಗೊಳಿಸಿದವರ ಪಕ್ಷವಾಗಿದೆ ಅಂಥ ಹೇಳಿದರು. “ಅವರು (ಪ್ರಧಾನಿ ಮೋದಿ) ಅವರು ಹೇಳಿದ್ದರಲ್ಲಿ ಒಂದನ್ನೂ (ಚುನಾವಣಾ ಭರವಸೆಗಳನ್ನು) ಜಾರಿಗೆ ತಂದಿಲ್ಲ. ಆದರೂ, ಮೋದಿ ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ. ಕಾಂಗ್ರೆಸ್ ಭಾರತವನ್ನು ಸ್ವತಂತ್ರಗೊಳಿಸಿದವರ ಪಕ್ಷ. ಬಿಜೆಪಿ ಎಂದಿಗೂ ಭಾರತದ ಸ್ವಾತಂತ್ರ್ಯಕ್ಕಾಗಿ, ಭಾರತದ ಅಭಿವೃದ್ಧಿಗಾಗಿ ಹೋರಾಡಲಿಲ್ಲ. ನಾವು ಈ ದೇಶವನ್ನು ನಿರ್ಮಿಸಿದ್ದೇವೆ. ಅವರು (ಬಿಜೆಪಿ) ದೇಶಭಕ್ತಿಯ ಬಗ್ಗೆ ಎಷ್ಟು ಮಾತನಾಡುತ್ತಾರೆ ಎಂದರೆ ನೆಹರೂ ಅವರಿಗಿಂತ ಮೊದಲು ಏನೂ ಅಲ್ಲ, ಇಂದಿರಾ ಗಾಂಧಿ ಅವರಿಗಿಂತ ಮೊದಲು ಏನೂ ಅಲ್ಲ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮುಂದೆ ಏನೂ ಅಲ್ಲ – ಮೋದಿಯೇ ಎಲ್ಲವೂ. ಭಾರತವು 2014 ರ…

Read More

ಬೆಂಗಳೂರು: ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದ ಮೋಸದ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದೆ, ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸಿದಂತೆಯೂ ಇರಬೇಕು, ಕರ್ನಾಟಕಕ್ಕೆ ಅನ್ಯಾಯ ಆಗುವಂತೆಯೂ ಇರಬೇಕು ಎಂಬ ಚಾಣಾಕ್ಷತನ ತೋರಿದೆ ಅಂಥ ರಾಜ್ಯ ಕಾಂಗ್ರೆಸ್‌ ಟ್ವಿಟ್‌ ಮಾಡಿ ಕಿಡಿಕಾರಿದೆ. ಇದೇ ವೇಳೆ ಕರ್ನಾಟಕ ಬೇಡಿಕೆ ಇಟ್ಟಿದ್ದು 18,172 ಕೋಟಿ, ಆದರೆ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಕೇವಲ 3,454 ಕೋಟಿ ಮಾತ್ರ ಬಿಡುಗಡೆ ಮಾಡಿ ತನ್ನ ಕರ್ನಾಟಕ ದ್ವೇಷ ಮುಂದುವರೆಸಿದೆ ಅಂಥ ತಿಳಿಸಿದೆ. ಕರ್ನಾಟಕ ದ್ರೋಹಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡಿಗರಿಗೆ ವಂಚನೆ ಮಾಡಿದೆ.ಬರದಿಂದ ಕರ್ನಾಟಕಕ್ಕೆ 35,000 ಕೋಟಿಗೂ ಅಧಿಕ ನಷ್ಟವಾಗಿದೆ. NDRF ನಿಯಮದ ಪ್ರಕಾರವೇ ನಮ್ಮ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು 18,172 ಕೋಟಿಗೆ, ಆದರೆ ಸುಪ್ರೀಂ ಕೋರ್ಟಿನಿಂದ ತಪರಾಕಿ ಬರಿಸಿಕೊಂಡು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 3,454 ಕೋಟಿ ಮಾತ್ರ.ಇದು ನಮಗೆ ಅಗತ್ಯವಿರುವ ಮೊತ್ತದ ಕಾಲು ಬಾಗಕ್ಕಿಂತ ಕಡಿಮೆ. ನ್ಯಾಯಾಲಯದ ಕಣ್ಣಿಗೂ ಮಣ್ಣೆರಚುವ ಕೇಂದ್ರ ಸರ್ಕಾರದ ಕುತಂತ್ರದ…

Read More

ದುರ್ಗಾಪುರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್ ಏರುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಗಾಯಗೊಂಡಿದ್ದಾರೆ. ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಅವರ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರನ್ನು ಅಸನ್ಸೋಲ್ ಗೆ ಕರೆದೊಯ್ಯಲಾಗಿದೆ.  https://twitter.com/ANI/status/1784139791212454305

Read More

ಕಲಬುರಗಿ: 5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಲಬುರಗಿ ನಗರದ ಗ್ರ್ಯಾಂಡ್ ಹೋಟೆಲ್ ನಲ್ಲಿ 2024ರ ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದರು. ಮೊದಲ ಹಂತದ ಚುನಾವಣೆ ಮುಗಿದಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವರದಿ ಬಂದಿದೆ. ಎಲ್ಲಾ ಅಭ್ಯರ್ಥಿಗಳು ಹಾಗೂ ಜಿಲ್ಲಾ ಸಚಿವರೊಂದಿಗೆ ಮಾತನಾಡಿದ್ದೇನೆ. ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಿದ್ದಾರೆಂದು ಹೇಳಿದ್ದಾರೆ ಎಂದರು. ಪ್ರಧಾನ ಮಂತ್ರಿ ಸುಳ್ಳಗಳ ಮಾರುಕಟ್ಟೆ ತೆರೆದಿದ್ದಾರೆ : ಚುನಾವಣೆಯಲ್ಲಿ ಕೇಂದ್ರ ಸರ್ಕಾರದ 10 ವರ್ಷಗಳ ವೈಫಲ್ಯ ನಮ್ಮ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪ ಮಾಡುತ್ತಿದ್ದೇವೆ. ಜನರು ಆಸಕ್ತಿಯಿಂದ ನಮ್ಮ ಮಾತುಗಳನ್ನು ಆಲಿಸಿ, ಉತ್ಸಾಹವನ್ನು ತೋರುತ್ತಿದ್ದಾರೆ ಎನ್ನುವುದು ಪ್ರಚಾರದಲ್ಲಿ ಎದ್ದು ಕಾಣುತ್ತಿದೆ. ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿ ಸುಳ್ಳಗಳ ಮಾರುಕಟ್ಟೆ ತೆರೆದಿದ್ದಾರೆ. ಹಿಂದುಳಿದವರಿಗೆ ಮೀಸಲಾತಿ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು. ಮಂಡಲ್…

Read More

ಬಾಲ್ಕ: ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊನೆಗೂ 3454 ಕೋಟಿ ರೂ. ಬರ ಪರಿಹಾರ ಘೋಷಿಸಿದೆ, ಇದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ನಡೆಸಿದ ಹೋರಾಟಕ್ಕೆ ಸಂದ ಮೊದಲ ಜಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಭಾಲ್ಕಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು, ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ರಾಜ್ಯದಲ್ಲಿ ಬರದಿಂದ ಆಗಿರುವ ಬೆಳೆ ನಷ್ಟಕ್ಕೆ ಹಾಗೂ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಪರಿಹಾರ ಕಲ್ಪಿಸಲು ಎನ್.ಡಿ.ಆರ್.ಎಫ್. ನಿಯಮಾವಳಿಗಳ ರೀತ್ಯ 18,171 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ತೋರಿ, ಅನಗತ್ಯ ವಿಳಂಬ ಮಾಡಿ, ರಾಜ್ಯ ಜನತೆಗೆ ಘೋರ ಅನ್ಯಾಯ ಮಾಡಿತ್ತು ಎಂದರು. ಪರಿಹಾರ ನೀಡಲು ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಳಿಕ ಆಗಬಹುದಾದ ಮುಖಭಂಗ ತಪ್ಪಿಸಿಕೊಳ್ಳಲು ಒಂದು ವಾರದೊಳಗೆ…

Read More

ಕಲಬುರಗಿ: ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಅಪ್ರಸ್ತುತ ವಿಷಯಗಳನ್ನು ಹೇಳುವುದು, ಜನರ ಭಾವನೆಗಳನ್ನು ಕೆರಳಿಸುವುದು, ಧ್ರುವೀಕರಣ ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದರಿಂದ ನಮಗೇನೂ ಹಾನಿಯಿಲ್ಲ. ಜನರು ಸುಳ್ಳ ಹೇಳಿದರೆ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದಾರೆ ಅಂಥ ಹೇಳಿದರು. ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೀಸಲಾತಿ ಮತ್ತು ಮಂಗಳಸೂತ್ರದ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇನ್ನೂ ಕ್ರಮ ಕೈಗೊಂಡಿಲ್ಲ. ಅವರಿಗೆ ನೋಟೀಸು ಕೊಟ್ಟಿದ್ದಾರೆ. ನಾವು ಕ್ರಮ ಕೈಗೊಳ್ಳುವ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಬೇರೆ ವಿಚಾರದಲ್ಲಿ ಮೋದಿಯವರಿಗೂ ನೋಟೀಸು ನೀಡಿದ್ದಾರೆ ಎಂದು ತಿಳಿಸಿದರು. ನಾವು ಸ್ಪಷ್ಟವಾಗಿ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ಪ್ರಸ್ತಾಪ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಹೇಳಿದ್ದರು, ಏನು ಮಾಡಿದ್ದಾರೆ ಎಂಬುದನ್ನೆಲ್ಲ ಹೇಳಿದ್ದೇವೆ. ಜನರು ನೀಡುವ ತೀರ್ಪು ಅಂತಿಮ. ನಮ್ಮ ಐದು ಗ್ಯಾರಂಟಿಗಳು…

Read More