Subscribe to Updates
Get the latest creative news from FooBar about art, design and business.
Author: kannadanewsnow07
ಬೆಂಗಳೂರು: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ದಿವ್ಯಾ ಅಂತ ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಮೋನಿಕಾ (24) ಅಂತ ಗುರುತಿಸಲಾಗಿದ್ದು, ಸದ್ಯ ಈಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈ ನಡುವೆ ದಿವ್ಯಾ ಮನೆಯಲ್ಲಿದ್ದ ವೇಳೆಯಲ್ಲಿ ವೇಳೆ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಮೋನಿಕಾ ಕೊಲೆ ಮಾಡಿದ್ದಳು. ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ ಕಸಿದುಕೊಂಡುತ್ತಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಉದ್ಘಾಟಿಸಿದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವಾ ಶೇವಾ ಅಟಲ್ ಸೇತು ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ಇದು ಮುಂಬೈನ ಸಾರಿಗೆ ಜಾಲಕ್ಕೆ ಗೇಮ್ ಚೇಂಜರ್ ಆಗಿದೆ ಎಂದು ಅವರು ಹೇಳಿದರು. ಪ್ರಧಾನಿಯನ್ನು ಶ್ಲಾಘಿಸಿದ ಅವರು ‘ಭಾರತ ಎಲ್ಲಿಯೂ ನಿಲ್ಲುವುದಿಲ್ಲ’ ಎಂದು ಹೇಳಿದರು. ಅಟಲ್ ಸೇತು ಬಗ್ಗೆ ಮಾತನಾಡಿದ ರಶ್ಮಿಕಾ, “ಎರಡು ಗಂಟೆಗಳ ಪ್ರಯಾಣವನ್ನು 20 ನಿಮಿಷಗಳಲ್ಲಿ ಮಾಡಬಹುದು. ಇದು ನನಗೆ ಹೆಮ್ಮೆ ತಂದಿದೆ ಅಂಥ ಹೇಳಿದರು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಪ್ರತಿಯೊಬ್ಬರಿಗೂ ಕೂಡ ಉದ್ಯೋಗ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ನೀವು ಇಚ್ಛೆ ಪಟ್ಟಂತ ಉದ್ಯೋಗ ಅಥವಾ ಸರ್ಕಾರಿ ಉದ್ಯೋಗವನ್ನು ಬಯಸುವುದು ಸಾಮಾನ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯೋಗ ದೊರೆಯದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದರೆ ನೀವು ಇಚ್ಛೆ ಪಟ್ಟಂತಹ ಅಥವಾ ಸರ್ಕಾರಿ ಉದ್ಯೋಗ ಬೇಕು ಎಂದರೆ ಈ ತಂತ್ರವನ್ನು ಮಾಡುವುದು ಉತ್ತಮ. ಉದ್ಯೋಗ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತುಂಬಾ ಮುಖ್ಯವಾಗಿರುತ್ತದೆ ಆದರೆ ನಾವು ಇಷ್ಟಪಟ್ಟ ಉದ್ಯೋಗ ದೊರೆಯದೆ ನಮಗೆ ಸಮಸ್ಯೆ ಎಂಬುದು ನಮ್ಮ ಹಿಂದೆಯೇ ಸುತ್ತುತ್ತಾ ಇರುತ್ತದೆ ಆದರೆ ನಾವು ಇಚ್ಛೆ ಪಟ್ಟಂತಹ ಉದ್ಯೋಗ ಸಿಗಬೇಕು ಎಂದರೆ ಅದ್ಭುತವಾದ ಪರಿಹಾರ ಮಾಡುವುದರಿಂದ ಖಂಡಿತ ನಿಮಗೆ ತುಂಬಾ ಒಳಿತಾಗುತ್ತದೆ. ನಿಮಗೆ ಉದ್ಯೋಗ ಇಲ್ಲ ಎಂದರೆ ಅಥವಾ ಸರ್ಕಾರಿ ಉದ್ಯೋಗ ಸಿಗಬೇಕಂದುಕೊಂಡಿದ್ದರೆ ನೀವು ಉದ್ಯೋಗ ಮಾಡುತ್ತಿದ್ದು, ಉದ್ಯೋಗದಲ್ಲಿ ಸಂಬಳ ಹೆಚ್ಚಾಗಬೇಕು ಎಂದುಕೊಂಡಿದ್ದರೆ ಅಥವಾ…
ನವದೆಹಲಿ: ಮೆಟಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ವಿಶ್ವಾದ್ಯಂತ ಸಾವಿರಾರು ಬಳಕೆದಾರರಿಗೆ ಸ್ಥಗಿತಗೊಂಡಿವೆ ಎಂದು ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ಡೆಟೆಕ್ಟರ್ ತಿಳಿಸಿದೆ. ವಿಶೇಷವೆಂದರೆ, ಈ ವರ್ಷದ ಮಾರ್ಚ್ನಲ್ಲಿ ಸಾವಿರಾರು ಬಳಕೆದಾರರು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಿಂದ ಲಾಗ್ ಔಟ್ ಆಗಿರುವ ಬಗ್ಗೆ ದೂರು ನೀಡಿದಾಗ ಮೆಟಾ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿತು. ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಪ್ರವೇಶಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿರುವ 18 ಸಾವಿರಕ್ಕೂ ಹೆಚ್ಚು ವರದಿಗಳಿವೆ ಎಂದು ಡೌನ್ಡೆಟೆಕ್ಟರ್ ಡೇಟಾ ತೋರಿಸಿದೆ. ಈ ಬಳಕೆದಾರರಲ್ಲಿ 59% ಜನರು ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರೆ, 34% ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಹೊಂದಿದ್ದಾರೆ ಮತ್ತು 7% ಅಪ್ಲಿಕೇಶನ್ಗೆ ಲಾಗಿನ್ ಮಾಡುವಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆ. ಬಳಕೆದಾರರು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ವೆಬ್ಸೈಟ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುತ್ತದೆ. ಫೇಸ್ಬುಕ್ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡುತ್ತಿರುವ 70% ಕ್ಕೂ ಹೆಚ್ಚು ಬಳಕೆದಾರರು ವೆಬ್ಸೈಟ್ ಅನ್ನು…
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರೈಲ್ವೆ ಇಲಾಖೆ, ಕೇಂದ್ರ ಲೋಕಸೇವಾ ಆಯೋಗವು ನಡೆಸುತ್ತಿರುವ ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿ ಸಲ್ಲಿವುದಕ್ಕೆ ಇಂದು ಕೊನೆ ದಿನಾಂಕವಾಗಿದ್ದು, ಈ ನಿಟ್ಟಿನಲ್ಲಿ ಈಗ ನಾವು ನಿಮಗಾಗಿ ಮಹತ್ವದ ಮಾಹಿತಿಯನ್ನು ನೀಡುತ್ತಿದ್ದೇವೆ. ಕೂಡಲೇ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಿಮಗಾಗಿ ಇಲ್ಲಿದೆ ಮಾಹಿತಿ. ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದಾದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ -247 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ನಡುವೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15, 2024 ರ ರಾತ್ರಿ 23-೦೦ ಗಂಟೆವರೆಗೆ ಅವಕಾಶ ಇರುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚಿಸಿ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳಿಗೆ ಮೇ 15, 2024 ಅರ್ಜಿ ಸಲ್ಲಿಸಲು…
ಬೆಂಗಳೂರು ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯು 2024-25 ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಟೆಕ್ಸ್ಟೈಲ್ ಟೆಕ್ನಾಲಜಿ ಕೋರ್ಸಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಉಷಾ ಎಸ್. ಪ್ರಾಂಶುಪಾಲರು ಮೊಬೈಲ್ ಸಂಖ್ಯೆ 9481101049 ಹಾಗೂ ವಿಭಾಗದ ಮುಖ್ಯಸ್ಥರಾದ ವಿ. ಶ್ರೀನಿವಾಸಯ್ಯ ಮೊ.ಸಂ. 9448705205 ಇವರನ್ನು ಸಂಪರ್ಕಿಸಬಹುದು ಅಥವಾ ಸಂಸ್ಥೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಾದ ಚೇತನ್ ಹಾಗೂ ಲಿಖಿತ್ ಗೌಡ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.ಹಾಸನದ ಒಂದನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ (Court) ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇರೆಗೆ ವಿಶೇಷ ತನಿಖಾ ದಳ (SIT) ಮೇ 12ರಂದು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರಾದ ಚೇತನ್ ಹಾಗೂ ಲಿಖಿತ್ ಗೌಡನನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ತಮ್ಮ ಬಂಧನವನ್ನು ಪ್ರಶ್ನಿಸಿ ಇಬ್ಬರು ಕೂಡ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ ಬಸಪ್ಪ ಮೊದಲನೇ ಸ್ಥಾನಗಳಿಸಿದ್ದಾರೆ.ಈ ನಡುವೆ ಇಂದು ಅಂಕಿತ ಬಸಪ್ಪ ಅವರು ಡಿ.ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಬೇಟಿಯಾದರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್ ಅವರು ಮಾಹಿತಿಯನ್ನು ಹಂಚಿಕೊಂಡರು. SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ಕನ್ನಲಿ ಗ್ರಾಮದ ನವನೀತ್ ಅವರನ್ನು ಇಂದು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದೆ. ಹಾಗೆಯೇ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ಗೆ 2 ಲಕ್ಷ ರೂ. ಚೆಕ್ ವಿತರಿಸಿದೆ. ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ಈ ಇಬ್ಬರೂ ಮಕ್ಕಳು ನಿರೂಪಿಸಿದ್ದಾರೆ. ಮುಂದೆ ಕೂಡ ಇದೇ ರೀತಿ ಓದಿ ನಿಮ್ಮ ಶಾಲೆ, ಶಿಕ್ಷಕರು, ಪೋಷಕರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದೆ ಅಂತ ಹೇಳಿದ್ದಾರೆ. https://twitter.com/DKShivakumar/status/1790295082090000824
ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಣ ಮಾಡಲು ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ನಡುವೆ ಜಾಮೀನು ಪ್ರಕ್ರಿಯೆಗಳುಯ ಎಲ್ಲವೂ ಕೂಡ ಆದ ಬಳಿಕ ಇಂದು ಹೆಚ್.ಡಿ ರೇವಣ್ಣನವರು ಪರಪ್ಪನ ಅಗ್ರಹಾರದಲ್ಲಿರುವ ಜೈಲನಲ್ಲಿನಿಂದ ಹೊರ ಬಂದರು. ಈ ನಡುವೆ ಅವರ ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಸ್ವಾಗತಿಸಿದರು. ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ರೇವಣ್ಣಗೆ ಸೂಚಿಸಿರುವ ಕೋರ್ಟ್ ಸಾಕ್ಷಿ ನಾಶಕ್ಕೆ ಮುಂದಾಗಬಾರದು, ಮಂಡ್ಯ ಜಿಲ್ಲೆಯ ಕೆಆರ್ ನಗರ ತಾಲೂಕಿಗೆ ಹೋಗಬಾರದು, ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು. ಎಸ್ಐಟಿ ತನಿಖೆಗೆ ಸಹಕರಿಸಬೇಕು ಷರತ್ತುಗಳ ಮೇಲೆ ಜಾಮೀನು ನೀಡಿದೆ. ಈ ನಡುವೆ ಸ್ಥಳದಲ್ಲಿ ರೇವಣ್ಣನವರನ್ನು ಬರಮಾಡಿಕೊಳ್ಳುವ ಸಲುವಾಗಿ ನೂರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮುಂಜಾಗ್ರತ ಕ್ರಮವಾಗಿ ಪೋಲಿಸರು ಸ್ಥಳದಲ್ಲಿದ್ದ ಕಾರ್ಯಕರ್ತರನ್ನು…
ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೋಮವಾರ ರಾತ್ರಿ ನಿಧನರಾದರು. ಸುಶೀಲ್ ಮೋದಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಅವರನ್ನು ಕೆಲವು ದಿನಗಳ ಹಿಂದೆ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. . ಕೆಲವು ದಿನಗಳಿಂದ ಸುಶೀಲ್ ಮೋದಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರು ಅವನ ಜೀವವನ್ನು ಉಳಿಸಲು ಶ್ರಮಿಸಿದರು, ಆದರೆ ಯಶಸ್ವಿಯಾಗಲಿಲ್ಲ ಎನ್ನಲಾಗಿದೆ. ಮೂತ್ರಕೋಶದ ಕ್ಯಾನ್ಸರ್ ಎಂದರೇನು? ಮೂತ್ರಕೋಶವು ಮೂತ್ರನಾಳದ ಮೇಲೆ ಮತ್ತು ಮೂತ್ರಪಿಂಡಗಳ ಕೆಳಗೆ ಇದೆ ಎಂದು ಆಂಕೊಲಾಜಿಸ್ಟ್ ಡಾ.ಅನುರಾಗ್ ಕುಮಾರ್ ವಿವರಿಸುತ್ತಾರೆ. ಮೂತ್ರಪಿಂಡದಿಂದ ಮೂತ್ರವು ಮೂತ್ರಕೋಶದಲ್ಲಿ ಮಾತ್ರ ಬರುತ್ತದೆ. ಮೂತ್ರವು ಸ್ವಲ್ಪ ಸಮಯದವರೆಗೆ ಮೂತ್ರಕೋಶದಲ್ಲಿ ಉಳಿಯುತ್ತದೆ ಮತ್ತು ನಂತರ ದೇಹವನ್ನು ಬಿಡುತ್ತದೆ. ಮೂತ್ರಕೋಶದಲ್ಲಿರುವ ಜೀವಕೋಶಗಳು ವೇಗವಾಗಿ ಬೆಳೆಯಲು ಪ್ರಾರಂಭಿಸಿದಾಗ ಮೂತ್ರಕೋಶದ ಕ್ಯಾನ್ಸರ್ ಉಂಟಾಗುತ್ತದೆ. ಈ ಕ್ಯಾನ್ಸರ್ ಸಾಮಾನ್ಯವಾಗಿ 50 ವರ್ಷದ ನಂತರ ಸಂಭವಿಸುತ್ತದೆ. ಈ ಕ್ಯಾನ್ಸರ್ನ ರೋಗಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ, ಚಿಕಿತ್ಸೆ ಮಾಡಬಹುದು, ಆದರೆ ಈ ಕ್ಯಾನ್ಸರ್ ಮುಂದುವರಿದ ಹಂತಕ್ಕೆ ಹೋದರೆ ಚಿಕಿತ್ಸೆಯು…









