Subscribe to Updates
Get the latest creative news from FooBar about art, design and business.
Author: kannadanewsnow07
ಶಿವಮೊಗ್ಗ : ಆ್ಯಂಬುಲೆನ್ಸ್ ಗೆ ಬೈಕ್ ಡಿಕ್ಕಿಯಾದ ಪರಿಣಾಮ ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ನಡೆದಿದೆ. ಮೃತರನ್ನು ಪ್ರಸನ್ನ (25) ಕಾರ್ತಿಕ್ (27) ಅಜಯ್ (25) ಅಂಥ ತಿಳಿದು ಬಂದಿದೆ. ವಮೊಗ್ಗದಿಂದ ಹಾವೇರಿ ಕಡೆಗೆ ಆ್ಯಂಬುಲೆನ್ಸ್ ತೆರಳುತ್ತಿತ್ತು ಎನ್ನಲಾಗಿದೆ. ಈ ವೇಳೆ ಆಂಬುಲೆನ್ಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ ಅಂಥ ತಿಳಿದು ಬಂದಿದೆ. ಘಟನೆ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಚಂದಾದಾರರಿಗೆ ಇತ್ಯರ್ಥ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಈ ಬದಲಾವಣೆ ಜುಲೈ 1 ರಿಂದ ಜಾರಿಗೆ ಬರಲಿದೆ. ಈ ನಿಯಂತ್ರಕ ಬದಲಾವಣೆಯು ಟಿ + 0 ಇತ್ಯರ್ಥಕ್ಕೆ ಅನುವು ಮಾಡಿಕೊಡುತ್ತದೆ. ಪಿಎಫ್ಆರ್ಡಿಎಯ ಈ ಬದಲಾವಣೆಯು ಟ್ರಸ್ಟಿ ಬ್ಯಾಂಕುಗಳು ಅದೇ ದಿನ ಬೆಳಿಗ್ಗೆ 11 ಗಂಟೆಯೊಳಗೆ ಸ್ವೀಕರಿಸಿದ ಎನ್ಪಿಎಸ್ ಕೊಡುಗೆಯನ್ನು ಹೂಡಿಕೆ ಮಾಡುವುದನ್ನು ಖಚಿತಪಡಿಸುತ್ತದೆ. ಇದರೊಂದಿಗೆ, ಎನ್ಪಿಎಸ್ ಚಂದಾದಾರರು ಅದೇ ದಿನ ಎನ್ಎವಿ (ನಿವ್ವಳ ಆಸ್ತಿ ಮೌಲ್ಯ) ಪ್ರಯೋಜನವನ್ನು ಪಡೆಯುತ್ತಾರೆ. ಈ ಹಿಂದೆ, ಟ್ರಸ್ಟಿ ಬ್ಯಾಂಕ್ ಸ್ವೀಕರಿಸಿದ ಕೊಡುಗೆಗಳನ್ನು ಮರುದಿನ (ಟಿ + 1) ಹೂಡಿಕೆ ಮಾಡಲಾಗುತ್ತಿತ್ತು. ಪರಿಷ್ಕೃತ ಮಾರ್ಗಸೂಚಿಗಳು ಬೆಳಿಗ್ಗೆ 11 ಗಂಟೆಯೊಳಗೆ ಸ್ವೀಕರಿಸಿದ ಡಿ-ರೆಮಿಟ್ ಕೊಡುಗೆಗೂ ವಿಸ್ತರಿಸುತ್ತವೆ, ಅದನ್ನು ಈಗ ಅದೇ ದಿನ ಹೂಡಿಕೆ ಮಾಡಲಾಗುತ್ತದೆ. ಚಂದಾದಾರರಿಗೆ ತಕ್ಷಣದ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಈ ಹೊಸ ಸಮಯವನ್ನು ಅನುಸರಿಸುವಂತೆ ಪಿಎಫ್ಆರ್ಡಿಎ ಪಾಯಿಂಟ್ ಆಫ್ ಪ್ರೆಸೆನ್ಸ್…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳ ತೊಂದರೆ ಇದ್ದೇ ಇರುತ್ತದೆ ಕೆಲವೊಂದು ಬಾರಿ ನಾವು ಮಾಡುವಂತಹ ವ್ಯಾಪಾರ ವ್ಯವಹಾರ ಆಗಿರಬಹುದು ಅಥವಾ ಉದ್ಯೋಗದಲ್ಲಾಗಿರಬಹುದು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನ ನೀಡುತ್ತಾ ಇದ್ದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಈ ಪರಿಹಾರ ಕ್ರಮವನ್ನ ಅನುಸರಿಸುವುದರಿಂದ ನಿಮಗೆ ನಿಮ್ಮ ಶತ್ರುಗಳು ಏನಾದರೂ ತೊಂದರೆ ನೀಡುತ್ತಿದ್ದಾರೆ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ. ಶತ್ರು ಭಾದೆಗಳ ತೊಂದರೆಗಳನ್ನು ನೀವು ದೂರ ಮಾಡಿಕೊಳ್ಳಬೇಕು ಎಂದರೆ ಹನುಮಂತ, ಹನುಮಾನ್ ದೇವರು ದೈವದ ಬೆಂಬಲ ಎಂಬುದು ಇದ್ದರೆ ಶತ್ರುಗಳಿಂದ ಸಾಕಷ್ಟು ರೀತಿಯಲ್ಲಿ ನಮ್ಮ ದೂರ ಇರಲು ಸಾಧ್ಯವಾಗುತ್ತದೆವಿರೋಧಿಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ನೀವು ಈ ತಂತ್ರವನ್ನು ಮಾಡಬೇಕು ಎಂದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ. ತೆಂಗಿನ ಮರಕ್ಕೆ ಪೂಜೆ ಮಾಡಿ ಅಲ್ಲಿಂದ ನೀವು ತೆಂಗಿನ ಗರಿಯನ್ನು ತೆಗೆದುಕೊಳ್ಳಬೇಕು.…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಉಪ್ಪು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಅಡುಗೆಯಲ್ಲಿ ಉಪ್ಪಿನ ಅಂಶವು ಕಡಿಮೆಯಾದರೆ ಆಹಾರವೇ ಸಾರಸ್ವತ ಇರುವುದಿಲ್ಲ ಉಪ್ಪಿನ ಸಂಶೋಧನೆ ಯಾವಾಗ ಆಯಿತು ಅಂದಿನಿಂದ ಇದರಲ್ಲಿ ನಕಾರಾತ್ಮಕ ಶಕ್ತಿಯ ಗುಣವನ್ನು ದೂರ ಮಾಡುವ ಶಕ್ತಿಯಿದೆ ಎಂದು ನಂಬಲಾಗಿದೆ ವಸ್ತುವಿನ ಮೂಲಕ ಹೇಳುವುದಾದರೂ ಉಪ್ಪಿನಿಂದ ನಕಾರಾತ್ಮಕ ಶಕ್ತಿಗೆ ಬೇಗವಾಗಿ ಹೊರಟುಹೋಗುತ್ತದೆ ಉಪ್ಪು ಎಲ್ಲಿ ಇರುವುದಿಲ್ಲವೋ ಆ ಜಾಗದಲ್ಲಿ ಭೂತಪ್ರೇತ ವಾಸ ವಾಗಿರುತ್ತದೆ ಮತ್ತು ಆ ಮನೆಯಲ್ಲಿ ಯಾವುದೇ ರೀತಿಯ ಸುಖ ಸಂಭ್ರಮವು ಇರುವುದಿಲ್ಲ ವಾಸ್ತುಶಾಸ್ತ್ರದ ಅನುಸಾರವಾಗಿ ಉಪ್ಪಿನಲ್ಲಿ ಒಂದು ರೀತಿಯ ಭಿನ್ನವಾದ ಅಂಶವಿರುತ್ತದೆ ಈ ಒಂದು ಕಾರಣದಿಂದ ಮಂತ್ರ ತಂತ್ರಗಳಲ್ಲಿ ಜನರು ಅನ್ನು ಬಳಸುತ್ತಾರೆ ಈ ರೀತಿ ಹೇಳಲಾಗುತ್ತದೆ ಉಪ್ಪು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಕೆಲವು ಜನರು ವಶೀಕರಣ ದಲ್ಲಿ ಉಪ್ಪನ್ನು ಹೆಚ್ಚಾಗಿ ಬಳಸುತ್ತಾರೆ ಇದೇ ರೀತಿ ಉಪ್ಪನ್ನು ನಾವು…
ಭೋಪಾಲ್: ಮಹಿಳೆಯರು ತಮ್ಮ ಗಂಡಂದಿರಿಗೆ ಮನೆಯಲ್ಲಿ ಮದ್ಯ ತಂದು ಕುಡಿಯುವಂತೆ ಹೇಳಬೇಕು ಎಂದು ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ನಾರಾಯಣ್ ಸಿಂಗ್ ಕುಶ್ವಾಹ ಸಲಹೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ವಿಕಲಚೇತನರ ಸಬಲೀಕರಣ ಸಚಿವ ನಾರಾಯಣ್ ಸಿಂಗ್ ಕುಶ್ವಾಹ ಅವರು ರಾಜ್ಯ ರಾಜಧಾನಿ ಭೋಪಾಲ್ನಲ್ಲಿ ನಡೆದ ನಶಾ ಮುಕ್ತಿ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. “ಹೊರಗಿನಿಂದ ಮದ್ಯ ಸೇವಿಸಿ ಮನೆಗೆ ಬರುವ ಪುರುಷರು, ಅವರ ಹೆಂಡತಿಯರು ಮದ್ಯವನ್ನು ಮನೆಗೆ ತಂದು ಕುಡಿಯಲು ಹೇಳಬೇಕು. ಅವರು ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮುಂದೆ ಮದ್ಯ ಸೇವಿಸಿದರೆ, ಅವರು ನಾಚಿಕೆಪಡುತ್ತಾರೆ ಮತ್ತು ಅದು ಕ್ರಮೇಣ ಕುಡಿತದ ಚಟವನ್ನು ತೊಡೆದುಹಾಕಲು ಅನುವು ಮಾಡಿಕೊಡುತ್ತದೆ” ಎಂದು ಸಚಿವರು ಹೇಳಿದರು.
ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಾಮಾನ್ಯ ಕೋರ್ಸ್‌ಗಳ ಜೊತೆಗೆ ಒಂದು ಕೌಶಲ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ (ಎರಡು ಸೆಮಿಸ್ಟರ್) ಪ್ರತಿ ತಿಂಗಳು ₹11 ಸಾವಿರದಿಂದ ₹17 ಸಾವಿರದವರೆಗೆ ಶಿಷ್ಯವೇತನ ಸಿಗಲಿದೆ. ರಾಜ್ಯದ ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಪದವಿ ಕೋರ್ಸ್‌ಗಳ ಜೊತೆಗೆ ಕೌಶಲಾಧಾರಿತ ವಿಷಯಗಳ ಅಧ್ಯಯನಕ್ಕೂ ಅವಕಾಶ ಮಾಡಿಕೊಡಲಾಗಿದ್ದು, ಇದೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕೊನೆಯ ಐದು ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಶಿಷ್ಯ ವೇತನದ ಸೌಲಭ್ಯ ದೊರಕಲಿದೆ. ಹತ್ತು ಮಂದಿ ನಿವೃತ್ತ ಐಎಎಸ್ ಅಧಿಕಾರಿಗಳು ಸ್ಥಾಪಿಸಿರುವ ಕ್ರಿಸ್ಪ್ ಜೊತೆ ಉನ್ನತ ಶಿಕ್ಷಣದಲ್ಲಿ ಕೌಶಲಾಧಾರಿತ ಕೋರ್ಸ್‌ಗಳನ್ನು ಪರಿಚಯಿಸುವ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ಮೊದಲ ವರ್ಷ 60 ಕಾಲೇಜುಗಳಲ್ಲಿ 3,600 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಮೂರು ವರ್ಷಗಳಲ್ಲಿ 239 ಕಾಲೇಜುಗಳಿಗೆ ಯೋಜನೆ ವಿಸ್ತರಿಸಲಾಗುವುದು. 2026-27ರ ವೇಳೆಗೆ 14,340 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ ಹೊಂದಲಾಗಿದೆ ಅಂಥ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿರುವ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾವೇರಿಯ ಶ್ರೀ ಗುರುಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಜೂ.30ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಏರ್ಪಡಿಸಿರುವ ಕಾರ್ಯಕ್ರಮವನ್ನು ಎಪಿಎಂಸಿ, ಸಕ್ಕರೆ ಮತ್ತು ಜವಳಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಉದ್ಘಾಟಿಸಲಿದ್ದು, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮತ್ತು ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯ ಸಚೇತಕ ಸಲೀಂ ಅಹಮದ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಹಿಸಲಿದ್ದಾರೆ. ಶಾಸಕರಾದ ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಪ್ರಕಾಶ್ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನಮೂರ್ತಿ,…
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022 ರನ್ವಯ ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು 70 (ಆರ್‍ಪಿಸಿ) ಮತ್ತು 06 (ಹೈ.ಕ.) ಹುದ್ದೆಗಳ ನೇಮಕಾತಿ ಸಂಬಂಧ 2024ನೇ ಮಾರ್ಚ್ 14 ರಂದು ವೃಂದವಾರು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿ ಆನ್‍ಲೈನ್ ಮುಖಾಂತರ 2024ನೇ ಮೇ 30 ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Have you passed Kannada Language Test? ಕಾಲಂನಲ್ಲಿ ಓo ಎಂದು ನಮೂದಿಸಿದಲ್ಲಿ ಮೋಟಾರು ವಾಹನ ನಿರೀಕ್ಷಕರು 70 + 06 (ಹೈಕ) ಹುದ್ದೆಗಳ ನೇಮಕಾತಿ ಸಂಬಂಧ ನಡೆಸುವ ಕನ್ನಡ ಭಾμÁ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸ್ಟಾಫ್ ಮತ್ತು ಹವಾಲ್ದಾರ್ ಹವಾಲ್ದಾರ್ (ಸಿಬಿಐಸಿ ಮತ್ತು ಸಿಬಿಎನ್) ನೇಮಕಾತಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ssc.gov.in ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಡ್ರೈವ್ 8326 ಎಂಟಿಎಸ್ ಮತ್ತು ಹವಾಲ್ದಾರ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಎಂಟಿಎಸ್ 4887 ಮತ್ತು ಹವಾಲ್ದಾರ್ (ಸಿಬಿಐಸಿ ಮತ್ತು ಸಿಬಿಎನ್) 3439 ಹುದ್ದೆಗಳು ಖಾಲಿ ಇವೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಜುಲೈ 31, ಆನ್ ಲೈನ್ ಶುಲ್ಕ ಪಾವತಿಗೆ ಆಗಸ್ಟ್ 1 ಕೊನೆಯ ದಿನವಾಗಿದೆ. ಪರೀಕ್ಷೆಯ ದಿನಾಂಕವನ್ನು ಇನ್ನೂ ತಿಳಿಸಲಾಗಿಲ್ಲ. ಆದಾಗ್ಯೂ, ಅಧಿಕೃತ ಅಧಿಸೂಚನೆಯ ಪ್ರಕಾರ, ಎಸ್ಎಸ್ಸಿ ಎಂಟಿಎಸ್, ಹವಾಲ್ದಾರ್ ನೇಮಕಾತಿ ಪರೀಕ್ಷೆಯನ್ನು ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಎಸ್ಎಸ್ಸಿ ಎಂಟಿಎಸ್, ಹವಾಲ್ದಾರ್ 2024: ಅರ್ಜಿ ಸಲ್ಲಿಸಲು ಹಂತ ಹಂತದ ಮಾರ್ಗದರ್ಶಿ ಹಂತ 1: ssc.gov.in ಗಂಟೆಗೆ ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.…
ಮಂಗಳೂರು: ಗೂಗಲ್ ಭಾಷಾಂತರದಲ್ಲಿ ತುಳು ಭಾಷೆಯನ್ನು ಸೇರಿಸಿರುವುದು ಕರ್ನಾಟಕದ ಕರಾವಳಿಯ ಜನರಲ್ಲಿ ಸಂತಸ ಮೂಡಿಸಿದೆ. ಈ ಕ್ರಮವು ಜಾಗತಿಕ ಮಟ್ಟದಲ್ಲಿ ಭಾಷೆಯ ಜನಪ್ರಿಯತೆ ಮತ್ತು ಮಾನ್ಯತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಗೂಗಲ್ ಭಾಷಾಂತರಕ್ಕೆ ತುಳುವನ್ನು ಸೇರಿಸಿರುವುದು ಭಾಷೆ ಮತ್ತು ಅದರ ಭಾಷಿಕರಿಗೆ ಮಹತ್ವದ ಮೈಲಿಗಲ್ಲು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. https://twitter.com/kuntadynithesh/status/1806689678051143958