Author: kannadanewsnow07

ಬಳ್ಳಾರಿ: ಸಾರ್ವಜನಿಕರ ಸುಸ್ಥಿರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಶುದ್ಧೀಕರಣಗಳ ಘಟಕಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಸೂಚಿಸಿದರು. ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕ್ಷೇತ್ರ ಪರೀಕ್ಷಾ ಕಿಟ್(ಎಫ್‍ಟಿಕೆ) ಮತ್ತು ಹೆಚ್2ಎಸ್ ವಿಐಎಎಲ್‍ಎಸ್ ಸಾಧನಗಳನ್ನು ಉಪಯೋಗಿಸಿ ನೀರಿನ ಪರೀಕ್ಷೆ ಕೈಗೊಳ್ಳುವ ವಿಷಯವಾಗಿ ಗ್ರಾಪಂನ ಪಿಡಿಓಗಳಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕಲುಷಿತ ನೀರು ಸೇವನೆಯಿಂದ ಜನ ಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ನೀರಿನ ಮೂಲಗಳನ್ನು ಪರಿಶೀಲನೆ ಕೈಗೊಂಡು ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು. ಮಳೆಗಾಲ ಆರಂಭವಾಗಿದ್ದು, ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳು ಬೀರುವ ಸಾಧ್ಯತೆಗಳಿರುವುದರಿಂದ, ಗ್ರಾಮ ಪಂಚಾಯಿತಿ…

Read More

ಬೆಂಗಳೂರು ಛ ಪ್ರತೀ SP-DCP-IG ಗಳು ಪೊಲೀಸ್ ಮ್ಯಾನ್ಯುಯಲ್ ತಮ್ಮ ವ್ಯಾಪ್ತಿಯ ಪ್ರಕಾರ ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಷವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ SP ಮತ್ತು‌ IG ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. SP-IG ಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಎಚ್ಚರಿಸಿದರು. ನಾಳೆಯಿಂದಲೇ SP, IG ಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಸಿದರು. ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ: ಇಲ್ಲಾಂದ್ರೆ ಕ್ರಮ ಎದುರಿಸಿ: ಫೇಕ್ ನ್ಯೂಸ್ ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು…

Read More

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಕೆಲ ಹೊತ್ತು ಸಮಯ ಕಳೆದ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಗ್ಗೆ ವಿಡಿಯೋ ಟ್ವಿಟ್‌ ಮಾಡಿರುವ ಅವರು ಥಮಿಕ ಶಾಲೆಯಲ್ಲಿ ನಾನು ಕಲಿತ ಕನ್ನಡ ವ್ಯಾಕರಣ ಪಾಠಗಳು ಉಸಿರಿರುವವ ವರೆಗೆ ಹಸಿರಾಗಿರಲಿದೆ. ಕನ್ನಡ ಭಾಷೆಯ ಸೌಂದರ್ಯವನ್ನು ಬಣ್ಣಿಸುವ, ವ್ಯಾಕರಣದ ಬಗ್ಗೆ ವಿವರಿಸುವ ಅವಕಾಶ ಸಿಕ್ಕಾಗಲೆಲ್ಲ ಸಂಧಿಗಳು, ಸಮಾಸಗಳು, ಸ್ವರ, ವ್ಯಂಜನಗಳು ಥಟ್ಟನೆ ನೆನಪಾಗುತ್ತವೆ. ಅದು ಶಾಲಾ ಕೊಠಡಿಯೇ ಇರಲಿ, ವಿಧಾನಸಭೆಯೇ ಆಗಿರಲಿ. ಮುತ್ತು ಪೋಣಿಸಿದಂತೆ ಬಿಡಿ ಬಿಡಿಯಾಗಿ ಕಣ್ಣಮುಂದೆ ಬರುತ್ತದೆ. ಯಾವುದೇ ಭಾಷೆಯಾಗಿರಲಿ ಅದು ಹೃದಯಕ್ಕೆ ಹತ್ತಿರವಾದಾಗ ಮಾತ್ರ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿಯೇ ಕನ್ನಡ ನನಗೆ ಆಡು ಭಾಷೆಯೂ ಹೌದು, ನಾಡಭಾಷೆಯೂ ಹೌದು,\ ನನ್ನ ಹೆತ್ತ ತಾಯಿಭಾಷೆಯೂ ಹೌದು. ಅಂಥ ತಿಳಿಸಿದ್ದಾರೆ. SC/ST ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುತ್ತಿರುವುದು ನಮ್ಮ ಸರ್ಕಾರ ಮಾತ್ರ ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ…

Read More

ಲುಧಿಯಾನ: ಪಂಜಾಬ್ ಶಿವಸೇನೆ ಮುಖಂಡ ಸಂದೀಪ್ ಥಾಪರ್ ಅವರ ಮೇಲೆ ಲುಧಿಯಾನ ಸಿವಿಲ್ ಆಸ್ಪತ್ರೆಯ ಹೊರಗೆ ನಿಹಾಂಗ್ ಗಳ ಗುಂಪೊಂದು ಶುಕ್ರವಾರ ಮಧ್ಯಾಹ್ನ ಕತ್ತಿಗಳಿಂದ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಥಾಪರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅಲ್ಲಿ ನಿಹಾಂಗ್ ರಸ್ತೆಯ ಮಧ್ಯದಲ್ಲಿ ಸಹಾಯಕ್ಕಾಗಿ ಕೂಗುತ್ತಿದ್ದಾಗ ಕತ್ತಿಯಿಂದ ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು. ಇನ್ನೊಬ್ಬ ನಿಹಾಂಗ್ ದ್ವಿಚಕ್ರ ವಾಹನದಲ್ಲಿ ಕಾಯುತ್ತಿದ್ದನು ಮತ್ತು ನಾಯಕನ ಮೇಲೆ ಹಲ್ಲೆ ನಡೆಸಿದ ನಂತರ ಇಬ್ಬರೂ ಪರಾರಿಯಾಗಿದ್ದಾರೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಇಡೀ ಘಟನೆಯು ಹಗಲಿನ ಬೆಳಕಿನಲ್ಲಿ, ಸಂಪೂರ್ಣ ಸಾರ್ವಜನಿಕ ದೃಷ್ಟಿಯಲ್ಲಿ ಅನಾವರಣಗೊಂಡಿತು ಆದರೆ ಯಾರೂ ಅವನನ್ನು ಉಳಿಸಲು ಮುಂದೆ ಬರಲಿಲ್ಲ ಎನ್ನಲಾಗಿದೆ. https://twitter.com/RealBababanaras/status/1809151239588073563

Read More

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಶೇಷಚೇತನರಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ವಿಶೇಷಚೇತನರು ಪಡೆದುಕೊಳ್ಳಲು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಯುಡಿಐಡಿ ಕಾರ್ಡ್ ಕಡ್ಡಾಯವಾಗಿದೆ. ಯುಡಿಐಡಿ ಕಾರ್ಡ್ ಪಡೆಯಲು ಯುಡಿಐಡಿ ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ನೋಂದಾಯಿಸಿ ಯುಡಿಐಡಿ ಕಾರ್ಡ್‍ಗಳನ್ನು ಪಡೆದುಕೊಳ್ಳಬೇಕಿದೆ. ಯುಡಿಐಡಿ ಕಾರ್ಡ್ (ಗುರುತಿನ ಚೀಟಿ) ಹೊಂದಿರುವ ವಿಶೇಷಚೇತನರು ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಯುಡಿಐಡಿ ಕಾರ್ಡ್ ಪಡೆಯದೇ ಇರುವ ವಿಶೇಷಚೇತನರು ಸರ್ಕಾರದ ಯೋಜನೆಗಳನ್ನು ಪಡೆಯಲು ಅರ್ಹರಲ್ಲ. ಆದ್ದರಿಂದ ಜಿಲ್ಲೆಯ ವಿಶೇಷಚೇತನರು ಕಡ್ಡಾಯವಾಗಿ ಯುಡಿಐಡಿ ಕಾರ್ಡ್‍ಗಳನ್ನು ಪಡೆದುಕೊಂಡು ವಿಶೇಷಚೇತನರಿಗೆ ಸರ್ಕಾರ ರೂಪಿಸಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಆರ್‍ಡಬ್ಲ್ಯು ಹಾಗೂ ತಾಲ್ಲೂಕು ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‍ಡಬ್ಲ್ಯುಗಳಾದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನವರು ಹರೀಶ್ ಟಿ.ಆರ್ ಮೊ.ಸಂ.8861428931, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನವರು ಪ್ರಥನ್ ಕುಮಾರ್ ಸಿ.ಬಿ. ಮೊ.ಸಂ. 9900883654…

Read More

ಶಿವಮೊಗ್ಗ: ಭಾರತೀಯ ವಾಯುಪಡೆಯಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಸೇವೆಗೆ ಆಯ್ಕೆ ಪರೀಕ್ಷೆಗಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ/ತತ್ಸಮಾನ, ಡಿಪ್ಲೋಮಾ, ವೃತ್ತಿಪರ ಕೋರ್ಸ್ ವಿದ್ಯಾರ್ಹತೆ ಹೊಂದಿರುವ, 03, ಜುಲೈ-2004 ರಿಂದ 03, ಜನವರಿ 2008ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಮತ್ತು ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಆನ್‍ಲೈನ್ https://agnipathvayu.cdac.in ರಲ್ಲಿ ನೊಂದಾಯಿಸಿಕೊಂಡು, ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಖಲಂದರ್ ಖಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-255293/ 9108235132 ಗಳನ್ನು ಸಂಪರ್ಕಿಸುವುದು.

Read More

ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ನಗರ ಕೇಂದ್ರೀಯ ವಿಭಾಗದಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗದವರಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ನಿಗಮದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅರಿವು ವಿಧ್ಯಾಭ್ಯಾಸ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಇ, ವಿಐಎ, ಸಿಇಟಿ/ ನೀಟ್ ಮುಖಾಂತರ ಎಂಬಿಬಿಎಸ್, ಬಿಡಿಎಸ್, ಆಯುಷ್, ಬ್ಯಾಚುಲರ್ ಆಫ್ ಆರ್ಚ್, ಇಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಫಾರ್ಮಸಿ, ಅಕ್ರಿಕಲ್ಚರ್ ಸೈನ್ಸ್, ವೆಟರಿನರಿ, ಫಾರ್ಮಾ ಸೈನ್ಸ್, ಎಲ್‍ಎಲ್‍ಬಿ ವ್ಯಾಸಂಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ “ಅರಿವು” ಯೋಜನೆಯಡಿಯಲ್ಲಿ ಶೈಕ್ಷಣಿಕ ಸಾಲವನ್ನು ಪಡೆಯಲು ಆನ್‍ಲೈನ್‍ನಲ್ಲಿ ನಿಗಮದ ಜಾಲತಾಣ http://kmdconline.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‍ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿ ಪ್ರಿಂಟ್ ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ ಜಾತಿ ಮತ್ತು…

Read More

ಬೆಂಗಳೂರು: ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಬಹುಕಾರ್ಯಕ ತಾಂತ್ರಿಕೇತರ ಸಿಬ್ಬಂದಿ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯಲೇಶನ್ ಪರೀಕ್ಷೆ, ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ. ಅರ್ಜಿಯನ್ನು https://ssc.gov.in ಲಿಂಕ್‍ನಲ್ಲಿ ಜುಲೈ 31 ರೊಳಗೆ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-25502520 ನ್ನು ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು. ಅಥವಾ ಎಸ್‍ಎಸ್‍ಸಿ ಮುಖ್ಯ ಕಚೇರಿ ನವದೆಹಲಿಯ ವೆಬ್‍ಸೈಟ್ https://ssc.gov.in ಮತ್ತು ಎಸ್‍ಎಸ್‍ಸಿ ಸ್ಥಳೀಯ ಕಚೇರಿ ಬೆಂಗಳೂರಿನ (ಕರ್ನಾಟಕ – ಕೇರಳ, ಲಕ್ಷ ದ್ವೀಪ ಪ್ರದೇಶದ ಪರೀಕ್ಷಾ ಕೇಂದ್ರಗಳು) ವೆಬ್‍ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ಬೆಂಗಳೂರು: ಆರ್ಯ ವೈಶ್ಯ ನಿಗಮದ ಮೂಲಕ ಕಳೆದ ವರ್ಷ 2023-24ರಲ್ಲಿ 800 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ ಸಾಲ-ಸಹಾಯಧನ ನೀಡಲಾಗಿತ್ತು. ಈ ವರ್ಷವೂ ಸಹ ಈ ಎಲ್ಲಾ ಯೋಜನೆಗಳೂ ಮುಂದುವರೆಯಲಿದ್ದು, ಇಂದು ನಡೆದ ಸಭೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಲಾಗಿದ್ದು, ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ನಿಗಮದ ಸಹಾಯದ ಅಗತ್ಯವಿರುವ ಅರ್ಹ ಸಣ್ಣ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಆರ್ಯ ವೈಶ್ಯ ನಿಗಮದ ವಿವಿಧ ಯೋಜನೆಗಳು:ಆರ್ಯ ವೈಶ್ಯ ನಿಗಮದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ. ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 03 ಯೋಜನೆಗಳಾದ ಸ್ವಯಂ-ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ / ವಾಹಿನಿ ಯೋಜನೆ ಮತ್ತು ವಾಸವಿ ಜಲಶಕ್ತಿ ಯೋಜನೆಗಳಿಗೆ ಅರ್ಜಿಗಳನ್ನು ಜುಲೈ 12 ರಿಂದ ಆನ್‍ಲೈನ್ ಮೂಲಕವೇ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್…

Read More

Talcum powder ‘probably carcinogenic’ for humans: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಕ್ಯಾನ್ಸರ್ ಏಜೆನ್ಸಿ ಶುಕ್ರವಾರ (ಜುಲೈ 5) ಟಾಲ್ಕ್ ಅನ್ನು ಮಾನವರಿಗೆ “ಬಹುಶಃ ಕ್ಯಾನ್ಸರ್ ಕಾರಕ” ಎಂದು ವರ್ಗೀಕರಿಸಿದೆ. ಟಾಲ್ಕಂ ಪೌಡರ್ ಬಳಕೆ ಮತ್ತು ಅಂಡಾಶಯದ ಕ್ಯಾನ್ಸರ್ ನಡುವೆ ಸಂಬಂಧವನ್ನು ಸ್ಥಾಪಿಸಿದೆ ಎಂದು ಸಂಶೋಧನೆಯೊಂದು ಹೇಳಿಕೊಂಡ ಕೆಲವು ವಾರಗಳ ನಂತರ  ಈ ವರದಿ ಬಂದಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಈ ನಿರ್ಧಾರವು ಮಾನವರಲ್ಲಿ ಅಂಡಾಶಯದ ಕ್ಯಾನ್ಸರ್ಗೆ ಕಾರಣವಾಗಬಹುದು ಎಂಬುದಕ್ಕೆ “ಸೀಮಿತ ಪುರಾವೆಗಳು” ಆಧರಿಸಿದೆ, ಇದು ಇಲಿಗಳಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದೆ ಎಂಬುದಕ್ಕೆ “ಸಾಕಷ್ಟು ಪುರಾವೆಗಳು” ಮತ್ತು ಇದು ಮಾನವ ಜೀವಕೋಶಗಳಲ್ಲಿ ಕ್ಯಾನ್ಸರ್ ಚಿಹ್ನೆಗಳನ್ನು ತೋರಿಸುತ್ತದೆ ಎಂಬುದಕ್ಕೆ ಬಲವಾದ ಯಾಂತ್ರಿಕ ಪುರಾವೆಗಳನ್ನು ಆಧರಿಸಿದೆ ಎಂದು ಹೇಳಿದೆ. ತಮ್ಮ ಜನನಾಂಗಗಳ ಮೇಲೆ ಟಾಲ್ಕ್ ಬಳಸುವ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ದರದಲ್ಲಿ ಹೆಚ್ಚಳವನ್ನು ನಿರಂತರವಾಗಿ ತೋರಿಸುವ ಹಲವಾರು ಅಧ್ಯಯನಗಳಿವೆ ಎಂದು ಕ್ಯಾನ್ಸರ್…

Read More