ನವದೆಹಲಿ : ಕೇಂದ್ರ ಹಣಕಾಸು ಸಚಿವಾಲಯವು ಆನ್ಲೈನ್ ವಂಚನೆಯನ್ನ ತಡೆಯಲು ಡಿಜಿಟಲ್ ಪಾವತಿಗಳನ್ನ ಹೆಚ್ಚು ಸುರಕ್ಷಿತಗೊಳಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಶೀಘ್ರದಲ್ಲೇ 5,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಡಿಜಿಟಲ್ ಪಾವತಿಗಳನ್ನ ಮಾಡುವ ಮೊದಲು ಅವ್ರನ್ನ ಎಚ್ಚರಿಸುವ ವ್ಯವಸ್ಥೆ ಜಾರಿಗೆ ತರಲು ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿವೆ. ಅಂದ್ರೆ, ಖಾತೆಯಿಂದ ಹಣ ಕಡಿತಗೊಳಿಸೋಕು ಮುನ್ನ ಕರೆ ಅಥ್ವಾ ಸಂದೇಶದ ಮೂಲಕ ಎಚ್ಚರಿಕೆ ಸ್ವೀಕರಿಸುತ್ತೀರಿ. ನಂತ್ರ ನೀವಿದ್ದಕ್ಕೆ ಒಪ್ಪಿಗೆ ನೀಡಿದ್ರೆ ಮಾತ್ರ ಹಣ ಕಡಿತಗೊಳಿಸಲಾಗುತ್ತೆ. 5000 ಮತ್ತು ಹೆಚ್ಚಿನ ಮೌಲ್ಯದ ಡಿಜಿಟಲ್ ಪಾವತಿಗಾಗಿ ಎಚ್ಚರಿಕೆ ವ್ಯವಸ್ಥೆ: ಈ ಎಚ್ಚರಿಕೆ ವ್ಯವಸ್ಥೆಯು ಹೊಸ ಬಳಕೆದಾರರು ಮತ್ತು ಮಾರಾಟಗಾರರ ಹಣಕಾಸಿನ ವಹಿವಾಟುಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆನ್ಲೈನ್ ಮತ್ತು ಡಿಜಿಟಲ್ ಪಾವತಿಗಳಲ್ಲಿ ವಂಚನೆಗಳನ್ನ ತಡೆಯಲು ಇದು ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಉದಾಹರಣೆಗೆ, ನೀವು UPI ನಂತಹ ಪಾವತಿ ವ್ಯವಸ್ಥೆಯ ಮೂಲಕ 5000 ರೂಪಾಯಿ ಮೌಲ್ಯದ ಸರಕುಗಳನ್ನ ಖರೀದಿಸಲು ಬಯಸುತ್ತೀರಿ. ನಂತ್ರ 5,000…
Read More