ಮೈಸೂರು: ರೈಲ್ವೆ ಕಾಮಗಾರಿ ಸೇರಿದಂತೆ ವಿವಿಧ ಕಾರಣದಿಂದಾಗಿ ಸ್ಥಗಿತಗೊಂಡಿದ್ದಂತ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭಿಸುತ್ತಿರುವುದಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ತಿಳಿಸಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು, ಹಬ್ಬನಗಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಮೊದಲು ರದ್ದುಪಡಿಸಲಾದ, ಭಾಗಶಃ ರದ್ದುಪಡಿಸಲಾದ ಹಾಗೂ ನಿಯಂತ್ರಿಸಲಾದ ಕೆಳಕಂಡ ರೈಲುಗಳು ಈಗ ನಿಗದಿತ ವೇಳಾಪಟ್ಟಿ ಹಾಗೂ ಮಾರ್ಗದಂತೆ ಪುನಃ ಚಾಲನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.
1.ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.
2.ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಎಕ್ಸ್ಪ್ರೆಸ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.
3.ರೈಲು ಸಂಖ್ಯೆ 16205 ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ.
4.ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗಿದ್ದು, ಇದೀಗ ಪೂರ್ಣ ಮಾರ್ಗದಲ್ಲಿ ಚಾಲನೆಗೊಳ್ಳಲಿದೆ.
5.ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ಮಾರ್ಗಮಧ್ಯದಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
Watch Video: ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಹಡಗಿನಲ್ಲಿ ಭೀಕರ ಸ್ಪೋಟ | Kerala coast