ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಸಂಚರಿಸುತ್ತಿದ್ದಂತ ಎರಡು ದಿನ ರೈಲುಗಳ ರದ್ದತಿ ಮತ್ತು ಭಾಗಶಃ ರದ್ದತಿ ಮಾಡಿರುವುದಾಗಿ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಾಲಗೊಂಡ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕೋರವಂಗಲ ಯಾರ್ಡ್ನಲ್ಲಿ ನಡೆಯುವ ಸುರಕ್ಷಾ ಮತ್ತು ಟ್ರ್ಯಾಕ್ ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಕೆಳಕಂಡ ರೈಲು ಸೇವೆಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಸಂಪೂರ್ಣ ರದ್ದತಿ
ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಜೂನ್ 20 ಮತ್ತು 22, 2025 ರಂದು ರದ್ದುಗೊಳಿಸಲಾಗುತ್ತದೆ.
ಭಾಗಶಃ ರದ್ದತಿ
ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಗೊಳಿಸಲಾಗುತ್ತದೆ. ಜೂನ್ 20 ಮತ್ತು 22, 2025 ರಂದು ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್ವರೆಗೆ ಮಾತ್ರ ಓಡಿಸಲಾಗುತ್ತದೆ ಮತ್ತು ಅರಸೀಕೆರೆಯಿಂದ ನಿಗದಿತ ವೇಳೆಯಲ್ಲಿ ಹೊರಡುತ್ತದೆ.