ಬೆಂಗಳೂರು : ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಹೊಂದಿರುವ ಜಮೀನು ಸೇರಿಸಿದಾಗ 7 ಎಕರೆಗೂ ಹೆಚ್ಚು ಜಮೀನು ಇದ್ದಲ್ಲಿ ಅಂತಹವರು ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು ಎಂದು ತಿಳಿಸಲಾಗಿದೆ.
ಪಡಿತರ ಚೀಟಿಯ ಯಾವುದೇ ಸದಸ್ಯ 4 ಚಕ್ರ ವಾಹನ ಹೊಂದಿದ್ದಲ್ಲಿ ಅಂತಹವರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು(ತಂದೆ/ ತಾಯಿ/ ಹೆಂಡತಿ / ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಸರ್ಕಾರಿ ನೌಕರಿ ಮಾಡುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ತಾಯಿ/ಹೆಂಡತಿ/ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂಧಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ವೃತ್ತಿಪರ ನೌಕರರು (ವೈದ್ಯರು, ಎಂಜಿನಿಯರ್, ವಕೀಲರು, ಇತರರು) ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು” ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಗತಳು, ಕಮಿಷನ್ ಏಜಂಟರು, ಬೀಜ ಮತ ಗೊಬ್ಬರ ಡೀಲರ್ಗಳು ಇತ್ಯಾದಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀ ಹೊಂದಲು ಅನರ್ಹರು.
ಅನುದಾನಿತ ಶಾಲಾ ಕಾಲೇಜುಗಳ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.
ಸರ್ಕಾರಿ ಸ್ವಾಮ್ಯದ ಉದ್ಯಮಗಳು/ ಮಂಡಳಿಗಳು /ನಿಗಮಗಳ ಖಾಯಂ ನೌಕರರು, ಸ್ವಾಯ ಸಂಸ್ಥೆ/ ಮಂಡಳಿಯ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.