ಶಿವಮೊಗ್ಗ: ನಾಡಿದ್ದು ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆ ನಿವಾರಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದೇ ನವೆಂಬರ್.12ರ ನಾಡಿದ್ದು ಬೆಳಗ್ಗೆ 11 ಗಂಟೆಯಿಂದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರು ಜನಸಂಪರ್ಕ ಸಭೆಯನ್ನು ನಡೆಸಲಿದ್ದಾರೆ. ಈ ಜನಸಂಪರ್ಕ ಸಭೆಯಲ್ಲಿ ಸಾಗರ ತಾಲ್ಲೂಕಿನ ಜನತೆಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವಂತ ಕೆಲಸವನ್ನು ಮಾಡಲಿದ್ದಾರೆ.
ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ: 12-11-2025ರ ನಾಡಿದ್ದು ಬೆಳಿಗ್ಗೆ 11 ಗಂಟೆಗೆ ಕಲ್ಮನೆ ಗ್ರಾಮ ಪಾಂಚಾಯಿತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎದುರು ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದೆ.
ಕಂದಾಯ ಇಲಾಖೆಯಿಂದ ಪೌತಿ ಖಾತೆ ಆಂದೋಲನ ಮಾಡಿ, ಪೌತಿ ಖಾತೆ ಅರ್ಜಿ ಸ್ವೀಕೃತಿ ಹಾಗೂ ಕಡತಗಳ ತಯಾರಿಕೆ ಕಾರ್ಯ ಮಾಡಲಾಗುತ್ತದೆ. 94ಸಿ ಮನೆ ಹಕ್ಕುಪತ್ರ ಅರ್ಜಿಗಳ ಪರಿಶೀಲನೆ ಮಾಡಲಾಗುವುದು. ಸಾಗರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾ ಸಿಬ್ಬಂದಿಗಳು ಹಾಜರಿರಲಿದ್ದಾರೆ ಎಂದಿದೆ.
ತಾಲ್ಲೂಕು ಪಂಚಾಯಿತಿ ಇಲಾಖೆಯಡಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿ ಪರಿಹಾರವನ್ನು ಕೈಗೊಳ್ಳಲಾಗುವುದು. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಯವರು ಹಾಗೂ ಸಿಬ್ಬಂದಿಗಳು ಹಾಜರಿರಲಿದ್ದಾರೆ ಎಂದು ಹೇಳಿದೆ.
ಈ ಸಭೆಗೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರು, ಕಲ್ಮನೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿ.ಡಿ.ಓ. ಹಾಗೂ ಎಲ್ಲಾ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವರು ಎಂಬುದಾಗಿ ಮಾಹಿತಿ ನೀಡಿದೆ.
1. ಇ-ಪೌತ್ ಕಾತೆ ಆಂದೋಲನ :
ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿ ಪಡಿಸಲು ಸಾಲ ಸೌಕರ್ಯಗಳು ದೊರೆಯುವುದಿಲ್ಲ. ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ.
ಪರಿಹಾರದ ಮೊಬಲಗನ್ನು ಪಡೆಯುವುದು ದುಸ್ಥರವಾಗಿರುತ್ತದೆ. ರೈತಾಪಿ ವರ್ಗದವರ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರವು ಕಂದಾಯ ಯೋಜನೆಯಡಿ ಇ-ಪೌತಿ ಖಾತೆ/ವಾರಸಾ ಖಾತೆ ಆಂದೋಲನವನ್ನು ಜಾರಿಗೆ ತಂದಿರುತ್ತದೆ.
ಸಾರ್ವಜನಿಕರು ಪೌತಿ ಖಾತೆಗೆ ಹಾಜರುಪಡಿಸಬೇಕಾದ ದಾಖಲಾತಿಗಳ ವಿವರ :
1) ಖಾತೆದಾರರ ವಾರಾಸುದಾರರುಗಳ ಆಧಾರ್ ಕಾರ್ಡ್
2) ಖಾತೆದಾರರ ವಾರಸುದಾರರು ಮರಣ ಹೊಂದಿದ್ದಲ್ಲಿ ಮರಣ ಹೊಂದಿದ ಸದಸ್ಯರ ಮರಣ ದಾಖಲೆ
3) ಮರಣ ದಾಖಲೆ ಲಭ್ಯವಿಲ್ಲದಿದ್ದಲ್ಲಿ ಸಂಬಂಧಪಟ್ಟ ಗ್ರಾಮಾಡಳಿತ ಅಧಿಕಾರಿಗಳಿಂದ ಪಡೆದ ಮಹಜರ್
4) ವಂಶವೃಕ್ಷ ಅರ್ಜಿ ದಾಖಲೆಗಳ ನಿಗಧಿತ ಶುಲ್ಕ ರೂ.40/-
5) ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ರೂ.100/- ಛಾಪ ಕಾಗದ
94ಸಿ
ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ 94ಸಿ ಮನೆ ಹಕ್ಕು ಪತ್ರ ಅರ್ಜಿಗಳ ಪರಿಶೀಲನೆ ಮತ್ತು ಸ್ಥಳದಲ್ಲಿ ಕಡತಗಳ ತಯಾರಿಕೆ ಕಾರ್ಯ ನಡೆಸುವುದು.
ಸಾರ್ವಜನಿಕ ಅಹವಾಲುಗಳ ಸ್ವೀಕಾರ
ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಅಹವಾಲುಗಳ ಸ್ವೀಕಾರ ಮಾಡಿ ಸ್ಥಳದಲ್ಲಿ ಪರಿಹಾರವನ್ನು ಕೈಗೊಳ್ಳಲಾಗುವುದು.
ನವೆಂಬರ್.12ರ ನಾಡಿದ್ದು ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಲಿರುವಂತ ಜನ ಸಂಪರ್ಕ ಸಭೆಗೆ ಹೆಚ್ಚಿನ ಜನರು ಪಾಲ್ಗೊಂಡು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ರಾಜ್ಯದ ಜನರೇ ಗಮನಿಸಿ: ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸಲು ಇಂದೇ ಕೊನೆಯ ಅವಕಾಶ
ಗುಂಡ್ಲು ಪೇಟೆಯಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ, 3 ಮರಿ ರಕ್ಷಣೆ: ಸಚಿವ ಈಶ್ವರ್ ಖಂಡ್ರೆ








