ಬೆಂಗಳೂರು: ರಾಜ್ಯದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಎನ್ನುವಂತೆ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿ ವೇತನಕ್ಕೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದ್ದು, ವಿದ್ಯಾರ್ಥಿ ವೇತನಕ್ಕೆ ಆಧಾರ್ ಜೋಡಣೆ ಕಡ್ಡಾಯ! ಪರಿಶಿಷ್ಟ ಜಾತಿಯ 9 ಮತ್ತು 10ನೇ ತರಗತಿ (ಮೆಟ್ರಿಕ್ ಪೂರ್ವ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು ಎಂದಿದೆ.
ಅರ್ಜಿ ಸಲ್ಲಿಸಿದ ನಂತರ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ನೀವು ಓದುತ್ತಿರುವ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಆಧಾರ್ ಕಾರ್ಡ್‌ನೊಂದಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿರಬೇಕು.
ಅರ್ಜಿ ಸಲ್ಲಿಸಲು https://ssp.postmatric.karnataka.gov.in/ssppre/ ಈ ಕೆಳಗಿನ ಲಿಂಕ್ ಬಳಸುವಂತೆ ಸಮಾಜ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ವಿದ್ಯಾರ್ಥಿ ವೇತನಕ್ಕೆ ಆಧಾರ್ ಜೋಡಣೆ ಕಡ್ಡಾಯ!
ಪರಿಶಿಷ್ಟ ಜಾತಿಯ 9 ಮತ್ತು 10ನೇ ತರಗತಿ (ಮೆಟ್ರಿಕ್ ಪೂರ್ವ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.
ಅರ್ಜಿ ಸಲ್ಲಿಸಿದ ನಂತರ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ನೀವು ಓದುತ್ತಿರುವ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಆಧಾರ್… pic.twitter.com/7LHqQ4XMSu
— ಸಮಾಜ ಕಲ್ಯಾಣ ಇಲಾಖೆ (@SWDGoK) September 9, 2025
ಕೇಂದ್ರದಿಂದ ‘ಬಸ್ ಖರೀದಿ’ ಅಲ್ಲ, ಖಾಸಗಿ ಸಂಸ್ಥೆಗಳ ಮೂಲಕ ‘ಬಸ್ ಬಾಡಿಗೆಗೆ’: ಕರ್ನಾಟಕ ಕಾಂಗ್ರೆಸ್ ಸ್ಪಷ್ಟನೆ