ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಕೇಂದ್ರೀಯ ಬೋಧನಾ ಅರ್ಹತಾ ಪರೀಕ್ಷೆ (CTET)ಗಾಗಿ ನೋಂದಣಿಯನ್ನ ಪ್ರಾರಂಭಿಸಿದೆ. ಲಿಂಕ್’ನ್ನ ಇಂದು (ನವೆಂಬರ್ 27) ಸಕ್ರಿಯಗೊಳಿಸಲಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 18, 2025. ಪರೀಕ್ಷೆಯನ್ನ ಫೆಬ್ರವರಿ 8, 2026ರಂದು ನಡೆಸಲಾಗುವುದು. ಇದು CTETಯ 21ನೇ ಆವೃತ್ತಿ (ಪೇಪರ್-I ಮತ್ತು ಪೇಪರ್-II) ಆಗಿರುತ್ತದೆ ಮತ್ತು ಭಾರತದಾದ್ಯಂತ 132 ನಗರಗಳಲ್ಲಿ ಇಪ್ಪತ್ತು ಭಾಷೆಗಳಲ್ಲಿ ನಡೆಸಲಾಗುವುದು.
CBSE ಬಿಡುಗಡೆ ಮಾಡಿದ ಅಧಿಕೃತ ಸೂಚನೆಯ ಪ್ರಕಾರ, “ಆಕಾಂಕ್ಷಿ ಅಭ್ಯರ್ಥಿಗಳು CTET ವೆಬ್‌ಸೈಟ್ https://ctet.nic.in ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು 27/11/2025 ರಿಂದ ಪ್ರಾರಂಭವಾಗುತ್ತದೆ. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 18/12/2025 (ರಾತ್ರಿ 11.59) ಆಗಿದೆ”.
ಪರೀಕ್ಷೆಯ ದಿನಾಂಕ ಪತ್ರಿಕೆ ಕೋಡ್ ಶಿಫ್ಟ್ ಸಮಯ.!
08.02.2026 ಪತ್ರಿಕೆ-II ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 12:00 ರವರೆಗೆ
08.02.2026 ಪತ್ರಿಕೆ-I ಸಂಜೆ 02:30 ರಿಂದ ಸಂಜೆ 05:00 ರವರೆಗೆ
CBSE CTET ಅರ್ಹತೆ.!
ಪೇಪರ್ I (ತರಗತಿಗಳು 1–5) : ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ ಅಥವಾ ತತ್ಸಮಾನ ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಅಥವಾ ಅಂತಿಮ ವರ್ಷದಲ್ಲಿರಬೇಕು.
ಪೇಪರ್ II (ತರಗತಿಗಳು 6–8) : ಸ್ನಾತಕೋತ್ತರ ಪದವಿ
ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಅಥವಾ ಅಂತಿಮ ವರ್ಷದಲ್ಲಿರಬೇಕು.
ಕನಿಷ್ಠ 18 ವರ್ಷ ವಯಸ್ಸು, ಮತ್ತು ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲ.
10,000 ರೂಪಾಯಿ ಹೂಡಿಕೆ ಮಾಡಿ, 19 ಕೋಟಿ ಮಾಲೀಕನಾದ ; ಈ 10 ಷೇರುಗಳು ಆತನನ್ನ ಶ್ರೀಮಂತನಾಗಿ ಮಾಡಿದವು!
ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ನಕಲಿ IAS ಅಧಿಕಾರಿ ಮಹಾರಾಷ್ಟ್ರದಲ್ಲಿ ಬಂಧನ








