ಬೆಂಗಳೂರು : ದೇಶದಾದ್ಯಂತ ನಡೆಯಲಿರುವ ನವೋದಯ ವಿದ್ಯಾಲಯ 6 ನೇ ತರಗತಿಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳು ಬಿಡುಗಡೆ ಮಾಡಲಾಗಿದೆ.
ಇದೇ ಡಿಸೆಂಬರ್, 13 ರಂದು ದೇಶದಾದ್ಯಂತ ನಡೆಯಲಿರುವ ನವೋದಯ ವಿದ್ಯಾಲಯ 6 ನೇ ತರಗತಿಯ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳು ನವೋದಯ ವೆಬ್ಸೈಟ್ https://cbseitms.rcil.gov.in/nvs/. ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.








