ಬೆಂಗಳೂರು : 2025-26 ಸಾಲಿನ D.El.Ed, D.P.Ed & D.P.S.E ಕೋರ್ಸ್ ಗಳಿಗೆ ಸರ್ಕಾರಿ ಕೋಟಾದ ಸೀಟುಗಳಿಗೆ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
2025-26 ಸಾಲಿನ D.El.Ed, D.P.Ed & D.P.S.E ಕೋರ್ಸಿನ (ವಿವಿಧ ಮಾಧ್ಯಮಗಳು) ಪ್ರಥಮ ವ್ಯಾಸಂಗಕ್ಕಾಗಿ ರಾಜ್ಯದಲ್ಲಿನ ಅಂಗೀಕೃತ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‌ಸೈಟ್ www.schooleducation.kar.nic.in ಅನ್ನು ಸಂಪರ್ಕಿಸಿ, ವೆಬ್‌ಸೈಟ್‌ನಲ್ಲಿ ಕಾಣುವ APPLICATION FOR D.El.Ed / D.P.S.E / D.P.Ed / ADMISSIONS FOR GOVERNMENT QUOTA SEATS: 2025-26ರ ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು, ಸದರಿ ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕ (DIET) ಕೇಂದ್ರಗಳಲ್ಲಿ ಅಂತಿಮ ದಿನಾಂಕದೊಳಗೆ ಸಲ್ಲಿಸುವುದು.
ಸೂಚನೆ: ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ (SBI) ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ Joint Director’ CAC, BANGALORE, ಇವರ ಹೆಸರಿಗೆ ಬ್ಯಾಂಕ್ ಹುಂಡಿ ಪಡೆದು ಭರ್ತಿ ಮಾಡಿದ ಆಫ್‌ಲೈನ್ ಅರ್ಜಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕ ಕೇಂದ್ರಕ್ಕೆ (DIET) ಸಲ್ಲಿಸುವುದು. ಮೇಲಿನ ಶುಲ್ಕ ವಿವರಗಳು ರಾಜ್ಯದ ಎಲ್ಲಾ ಸರ್ಕಾರಿ/ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಡಿ D.EL.Ed / D.P.S.E/D.P.Ed ಕೋರ್ಸುಗಳಿಗೆ ದಾಖಲಾಗುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಅರ್ಜಿಗಳನ್ನು ಭರ್ತಿ ಮಾಡುವಾಗ ಅಪೂರ್ಣ ಮಾಹಿತಿ, ತಪ್ಪು ಮಾಹಿತಿಗಳನ್ನು ನೀಡುವುದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಕ್ಕೆ ಅಭ್ಯರ್ಥಿಗಳೇ ನೇರ ಜವಾಬ್ದಾರರಾಗಿರುತ್ತಾರೆ. ಇಂತಹ ಅಭ್ಯರ್ಥಿಗಳ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
II. D.EL.Ed ಮತ್ತು D.P.S.E ಕೋರ್ಸಿಗೆ ಅರ್ಹತೆಗಳು :-
ಸರ್ಕಾರಿ ಕೋಟಾದ ಸೀಟುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಅಭ್ಯರ್ಥಿಯಾಗಿರಬೇಕು.
“ಕರ್ನಾಟಕದ ಅಭ್ಯರ್ಥಿ ಎಂದರೆ” ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ 1ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ಅಥವಾ 12 ನೇ ತರಗತಿ ಅಥವಾ ಅರ್ಹತಾ ಪರೀಕ್ಷೆಯವರೆಗೆ ಕನಿಷ್ಟ 7 ವರ್ಷಗಳ ವ್ಯಾಸಂಗವನ್ನು ಕರ್ನಾಟಕದಲ್ಲಿ ಮಾಡಿರಬೇಕು.
ಹಾಗೂ
ಎಸ್.ಎಸ್.ಎಲ್.ಸಿ./10ನೇ ತರಗತಿ ಅಥವಾ ದ್ವಿತೀಯ ಪಿ.ಯು.ಸಿ./12ನೇ ತರಗತಿ ಪರೀಕ್ಷೆಯನ್ನು ಕರ್ನಾಟಕದಲ್ಲಿಯೇ ಉತ್ತೀರ್ಣರಾಗಿರಬೇಕು.
ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಪರೀಕ್ಷೆಗಳಿಗೆ ನೇರವಾಗಿ ನೋಂದಣಿಯಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಮುಕ್ತ ಶಾಲೆಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳು 7 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ. ಆದರೆ ಈ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕನಿಷ್ಠ 7 ವರ್ಷಗಳು ವಾಸಿಸಿರುವ ಬಗ್ಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳದ ಪ್ರಮಾಣ ಪತ್ರವನ್ನು ದಾಖಲಾತಿಯ ಸಮಯದಲ್ಲಿ ಜಿಲ್ಲಾ ವ್ಯವಸ್ಥಾಪಕ ಕೇಂದ್ರ (DIET) ದಲ್ಲಿ ಸಲ್ಲಿಸಬೇಕು.
ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಪರೀಕ್ಷೆಗಳಿಗೆ ನೇರವಾಗಿ ನೋಂದಣಿಯಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಮುಕ್ತ ಶಾಲೆಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾದ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ / ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯದಿಂದ “ಖಾಸಗಿ ಅಭ್ಯರ್ಥಿ” ಎಂದು ನಮೂದಿಸಿರುವ ಅಂಕಪಟ್ಟಿಯನ್ನಾಗಲಿ ಅಥವಾ ದೃಢೀಕರಣ ಪತ್ರವನ್ನಾಗಲೀ ದಾಖಲಾತಿಯ ಸಮಯದಲ್ಲಿ ಅಯಾ ಜಿಲ್ಲಾ ವ್ಯವಸ್ಥಾಪಕ ಕೇಂದ್ರ (DIET) ದಲ್ಲಿ ಸಲ್ಲಿಸಬೇಕು.
(ಅಭ್ಯರ್ಥಿಯು ಒಂದು ತರಗತಿ ಅಥವಾ ವರ್ಗದಲ್ಲಿ ಉತ್ತೀರ್ಣರಾಗಲು ಒಂದಕ್ಕಿಂತ ಹೆಚ್ಚು ವರ್ಷಗಳನ್ನು ತೆಗೆದುಕೊಂಡಿದ್ದಲ್ಲಿ ಅಂತಹ ಶೈಕ್ಷಣಿಕ ವರ್ಷಗಳ ವ್ಯಾಸಂಗವನ್ನು ಒಂದು ವರ್ಷ ಎಂದು ಗಣನೆಗೆ ತೆಗೆದುಕೊಳ್ಳಲಾಗುವುದು).
ಕೇಂದ್ರ ಸರ್ಕಾರ ಅಥವಾ ಕೇಂದ್ರಾಡಳಿತಕ್ಕೊಳಪಟ್ಟ ಅಥವಾ ಕರ್ನಾಟಕ ಸರ್ಕಾರದ ಅಧೀನಕ್ಕೊಳಪಟ್ಟ ಅಥವಾ ಜಾಯಿಂಟ್ ಸೆಕ್ಟರ್ ಅಂಡರ್‌ಟೇಕಿಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಂತಹ ಅಭ್ಯರ್ಥಿಯು ಅವರ ಉದ್ಯೋಗದಲ್ಲಿರುವ ಷರತ್ತುಗಳನ್ವಯ ಭಾರತದ ಯಾವುದೇ ಭಾಗಕ್ಕೆ ವರ್ಗಾಯಿಸಲ್ಪಡುತ್ತಿರುವ ಹಾಗೂ ದಾಖಲಾತಿ ಬಯಸುವ ವರ್ಷದ ಜುಲೈ-1ಕ್ಕೆ ಸರಿಯಾಗಿ ಕರ್ನಾಟಕದಲ್ಲಿ ಸತತವಾಗಿ ಒಂದು ವರ್ಷ ಸೇವೆ ಸಲ್ಲಿಸಿರುವ ಉದ್ಯೋಗಿಗಳ ಮಗ ಅಥವಾ ಮಗಳು ಅರ್ಹರಾಗಿರುತ್ತಾರೆ. ಈ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಮೇಲ್ಕಂಡ ಕೋರ್ಸುಗಳಿಗೆ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯನ್ನು ಪಾಸು ಮಾಡಿರಬೇಕು.