ಬೆಂಗಳೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ನೌಕರರಿಗೆ ರಾಜ್ಯ ಮಟ್ಟದ ಜನಪದ / ಕನ್ನಡ ಗೀತೆಗಳ ನೃತ್ಯ (ಗುಂಪು ಸ್ಪರ್ಧೆ ) ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.
ಸ್ಪರ್ಧೆಗಳು ನಡೆಯುವ ಸ್ಥಳ ಮತ್ತು ಕಾರ್ಯಕ್ರಮದ ವಿವರಗಳನ್ನು ನೋಂದಣಿಯ ಅಂತಿಮ ದಿನಾಂಕದ ನಂತರ ತಿಳಿಸಲಾಗುವುದು. ಆನ್ ಲೈನ್ ಲಿಂಕ್- https://forms.gle/8pR3m5nXowwQzccs9
ತಂಡಗಳ ಆನ್ಲೈನ್ ನೋಂದಣಿಗೆ ಅಂತಿಮ ದಿನಾಂಕ 02-11-2025 ರ ಸಂಜೆ 5 ಗಂಟೆಯವರೆಗೆ
ಜನಪದ / ಕನ್ನಡ ಗೀತೆಗಳ ನೃತ್ಯ (ಗುಂಪು ಸ್ಪರ್ಧೆ ) –ಷರತ್ತು ಮತ್ತು ನಿಬಂಧನೆಗಳು
1. ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ನೌಕರರು ಮಾತ್ರ ಭಾಗವಹಿಸುವುದು.
2. ಒಂದು ತಂಡದಲ್ಲಿ ಮಹಿಳಾ ಮತ್ತು ಪುರುಷ ನೌಕರರು ಒಳಗೊಂಡಂತೆ ಕನಿಷ್ಟ 8 ಗರಿಷ್ಟ 12 ಜನರಿಗೆ ಮಾತ್ರ ಅವಕಾಶ.
3. ತಂಡದ ನಾಯಕರು ತಮ್ಮ ತಂಡದಲ್ಲಿ ಭಾಗವಹಿಸುವ ನೌಕರರ ಮಾಹಿತಿಯನ್ನು ಆನ್ಲೈನ್ ಮೂಲಕ ನೋಂದಣಿ ಮಾಡುವುದು. ಒಂದು ಬಾರಿ ಮಾತ್ರ ಆನ್ಲೈನ್ ನೋಂದಣಿ ಮಾಡುವುದು.
4. ಜನಪದ / ಕನ್ನಡ ಭಾಷಾಭಿಮಾನದ ಗೀತೆಗಳಿಗೆ ಮಾತ್ರ ನೃತ್ಯಕ್ಕೆ ಅವಕಾಶ. ನೃತ್ಯವು 15 ನಿಮಿಷ ಮೀರಬಾರದು.
5. ಗುಂಪು ನೃತ್ಯದ ಆಡಿಯೋ ಅನ್ನು Pendrive ಅಥವಾ ಮೊಬೈಲ್ನಲ್ಲಿ MP3 Formatನಲ್ಲಿ ತಂಡದ ನಾಯಕರು ಮ್ಯೂಸಿಕ್ ಆಪರೇಟರ್ಗೆ ಸ್ಪರ್ಧೆ ನಡೆಯುವ ಮುಂಚೆಯೇ ನೀಡುವುದು.
6. ಗುಂಪು ನೃತ್ಯಕ್ಕೆ ಸಂಬಂಧಿಸಿದ ವೇಷ-ಭೂಷಣಗಳನ್ನು ಹಾಗೂ ಪರಿಕರಗಳನ್ನು ಸ್ವತಃ ತಂಡದವರೇ ತರಬೇಕಾಗುತ್ತದೆ.
7. ಅಂತಿಮ ದಿನಾಂಕದ ನಂತರ ಯಾವುದೇ ನೋಂದಣಿಗೆ ಅವಕಾಶವಿರುವುದಿಲ್ಲ.
8. ತಂಡಗಳಿಗೆ ನಿಗದಿಪಡಿಸಿರುವ ಸ್ಪರ್ಧೆಯ ಸ್ಥಳಗಳಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಹಾಜರಿರಬೇಕು, ತಪ್ಪಿದಲ್ಲಿ ತಂಡಗಳಿಗೆ ಸ್ಪರ್ಧೆಗೆ ಅವಕಾಶವಿರುವುದಿಲ್ಲ.
9. ಸ್ಪರ್ಧೆಗಳ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.