ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.01 ರಿಂದ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಯೋಜನೆಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಯಾವುದೇ ರೀತಿಯ ಸಹಾಯ/ಮಾಹಿತಿಗಾಗಿ.. ಸರ್ಕಾರಿ ನೌಕರರು ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವುದು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ಯೋಜನೆಗೆ ಸಂಬಂಧಪಟ್ಟಂತೆ ಆಸ್ಪತ್ರೆ ಮತ್ತು ಫಲಾನುಭವಿಗಳಿಂದ ಕುಂದು ಕೊರತೆ ಮತ್ತು ಮಾಹಿತಿ ಪಡೆಯಲು ಸಹಾಯವಾಣಿ ಚಾಲ್ತಿಯಲ್ಲಿರುತ್ತದೆ.
ಅದರಂತೆ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಿದೆ.
ವಿವರಗಳು
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು
ಸಹಾಯವಾಣಿ ಸಂಖ್ಯೆ (24/7)
18004258330
Whats App ಮುಖಾಂತರ ಸಂದೇಶ/ದೂರುಗಳನ್ನ ದಾಖಲಿಸಲು
9480819777
ಆಸ್ಪತ್ರೆಗಳ ನೋಂದಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಸಂಪರ್ಕಿಸಲು
080-22536210
ಆಸ್ಪತ್ರೆಗಳಿಂದ ತುರ್ತು ರೋಗಿಗಳಿಗೆ ಚಿಕಿತ್ಸೆಗೂ ಮುನ್ನ । ಅನುಮತಿ ಪಡೆಯಲು ಸಂಪರ್ಕಿಸಬೇಕಾದ ಸಂಖ್ಯೆ
9480819732
ಸಹಾಯವಾಣಿ ಇ-ಮೇಲ್ ಐಡಿ
kasshelpdesk@gmail.com
ಚಿಕಿತ್ಸೆಗೆ ಸಂಬಂಧಪಟ್ಟಂತಹ ಕುಂದು ಕೊರತೆಗಳ ಬಗ್ಗೆ ಸಂಪರ್ಕಿಸಲು ಇ-ಮೇಲ್ ಐಡಿ
cvosast@gmail.com








