ಬೆಂಗಳೂರು : HRMS ತಂತ್ರಾಂಶದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಗೆ ಹೊರ ಉಳಿಯಲು ಇಚ್ಛಿಸುವ ಸರ್ಕಾರಿ ನೌಕರರಿಗೆ/ ಡಿಡಿಒ ಗಳಿಗೆ ಸರಳೀಕರಿಸಿಲಾದ ನೂತನ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಉಲ್ಲೇಖಿತ ಪತ್ರದಲ್ಲಿ ಸರ್ಕಾರದ ಆದೇಶದನ್ವಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯಿಂದ ಸರ್ಕಾರಿ ನೌಕರರು ಹೊರಗುಳಿಯಲು ಇಚ್ಚಿಸಿದ್ದಲ್ಲಿ, ಹೊರಗುಳಿಯಲು ಫೆಬ್ರವರಿ ಮಾಹೆಯ ಅಂತ್ಯದವರೆವಿಗೂ ಮಾತ್ರವೇ HRMS-1 KASS ತಂತ್ರಾಂಶದಲ್ಲಿ ಈ ಅವಕಾಶ ಕಲ್ಪಿಸಿಕೊಡಲಾಗಿವುದರಿಂದ ಸದರಿ DDO ರವರುಗಳು ತಮ್ಮ ಕಛೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ/ ಅಧಿಕಾರಿಗಳ ಫಬ್ರವರಿ ವೇತನದ ಬಿಲ್ಲುಗಳನ್ನು HRMS-2 ತಂತ್ರಾಂಶದಲ್ಲಿ ಸೃಜಿಸುವ ಮೊದಲೇ ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸುವುದು.
HRMS-1 (KASS) KASS ಆಯ್ಕೆ-ಹೊರಗು (KASS ವೆಬ್ ಅಪ್ಲಿಕೇಶನ್ ಯೋಜನೆಯಿಂದ ಹೊರಗುಳಿಯಲು) ಅನುಮೋದನೆ ಪ್ರಕ್ರಿಯೆ:
1. ಲಾಗಿನ್ ಮತ್ತು ಸಂಚರಣೆ
HRMS & 2: https://hrms.karnataka.gov.in
DDO ತನ್ನ ಲಾಗಿನ್ ವಿವರಗಳನ್ನು ಬಳಸಿ HRMS-1 ಗೆ ಲಾಗಿನ್ ಮಾಡುತ್ತಾರೆ.
: ಸೇವಾ ನೋಂದಣಿ > ಕುಟುಂಬ ಅವಲಂಬಿತ ಪ್ರವೇಶ ನಮೂನೆ – KASS
ಅಧಿಕಾರಿಯ/ ಸಿಬ್ಬಂದಿಯ KGID ನಮೂದಿಸಿ→ GET ಕ್ಲಿಕ್ ಮಾಡಿ.










