ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿಗಾಗಿ ಲೈನ್ ಬ್ಲಾಕ್ ಲಭ್ಯವಿಲ್ಲದ ಕಾರಣ, ಈ ಹಿಂದೆ ಮರುನಿಗದಿಪಡಿಸಲಾದ, ನಿಯಂತ್ರಿಸಲಾದ ಹಾಗೂ ಭಾಗಶಃ ರದ್ದುಗೊಳಿಸಲಾದ ಕೆಳಗಿನ ರೈಲು ಸೇವೆಗಳು ಎಂದಿನಂತೆ ಅದೇ ಮಾರ್ಗ ಮತ್ತು ಸಮಯದಲ್ಲಿ ಪುನರಾರಂಭ ಆಗಲಿವೆ.
ರೈಲು ಸಂಖ್ಯೆ. 66579 ಕೆ.ಎಸ್.ಆರ್. ಬೆಂಗಳೂರು – ಅಶೋಕಪುರಂ ಮೆಮೂ ಮತ್ತು ರೈಲು ಸಂಖ್ಯೆ. 66554 ಅಶೋಕಪುರಂ – ಕೆ.ಎಸ್.ಆರ್. ಬೆಂಗಳೂರು ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಈ ಹಿಂದೆ ಭಾಗಶಃ ರದ್ದುಗೊಳಿಸಲಾಗಿತ್ತು, ಈಗ ಅದೇ ಮಾರ್ಗದಲ್ಲಿ ಮತ್ತು ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.
ರೈಲು ಸಂಖ್ಯೆ. 16552 ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸಪ್ರೆಸ್, ಈ ಹಿಂದೆ ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 40 ನಿಮಿಷಗಳ ಮರುನಿಗದಿಪಡಿಸಲಾಗಿತ್ತು, ಈಗ ಈ ರೈಲು ಅಶೋಕಪುರಂನಿಂದ 29 ಮತ್ತು 31 ಅಕ್ಟೋಬರ್ 2025 ರಂದು ಮಾತ್ರ 40 ನಿಮಿಷಗಳ ಮರುನಿಗದಿಯೊಂದಿಗೆ ಸಂಚರಿಸುತ್ತದೆ.
ರೈಲು ಸಂಖ್ಯೆ. 16586 ಮುರ್ಡೇಶ್ವರ – ಕೆ.ಎಸ್.ಆರ್. ಬೆಂಗಳೂರು ಎಕ್ಸಪ್ರೆಸ್ ಮತ್ತು ರೈಲು ಸಂಖ್ಯೆ. 06270 ಎಸ್.ಎಂ.ವಿ.ಟಿ. ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲು, ಈ ಹಿಂದೆ 28, 30 ಅಕ್ಟೋಬರ್, 18, 20, 25, 27 ನವೆಂಬರ್ ಮತ್ತು 16, 18 ಡಿಸೆಂಬರ್ 2025 ರಂದು ನಿಯಂತ್ರಿಸಲಾಗಿತ್ತು, ಇದೀಗ ಇವುಗಳು ಅದೇ ಮಾರ್ಗದಲ್ಲಿ ಮತ್ತು ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.
ವಿಶೇಷ ರೈಲು ಸೇವೆಗಳ ಪುನರಾರಂಭ
ಕಡಿಮೆ ಪ್ರಯಾಣಿಕರ ದಟ್ಟಣೆಯ ಕಾರಣದಿಂದಾಗಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಕೆಳಕಂಡ ವಿಶೇಷ ರೈಲು ಸೇವೆಗಳನ್ನು, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಪುನಃ ಆರಂಭಿಸಲು ನಿರ್ಧರಿಸಲಾಗಿದೆ. ಈ ರೈಲುಗಳು ತಮ್ಮ ಮೂಲ ವೇಳಾಪಟ್ಟಿಯ ಪ್ರಕಾರವೇ ಸಂಚರಿಸಲಿವೆ.
1. ರೈಲು ಸಂಖ್ಯೆ 06243 ಮೈಸೂರು-ಕರೈಕುಡಿ ವಿಶೇಷ ಎಕ್ಸಪ್ರೆಸ್ ರೈಲು ನವೆಂಬರ್ 8, 2025 ರಂದು ತನ್ನ ಸೇವೆಯನ್ನು ಪುನರಾರಂಭಿಸಲಿದೆ ಮತ್ತು ಮೂಲ ವೇಳಾಪಟ್ಟಿಯಂತೆ ಸಂಚರಿಸಲಿದೆ.
2. ರೈಲು ಸಂಖ್ಯೆ 06244 ಕರೈಕುಡಿ-ಮೈಸೂರು ವಿಶೇಷ ಎಕ್ಸಪ್ರೆಸ್ ರೈಲು ನವೆಂಬರ್ 9, 2025 ರಂದು ತನ್ನ ಸಂಚಾರವನ್ನು ಪುನಃ ಆರಂಭಿಸಲಿದೆ.
BREAKING: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ
BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!








