ಮೈಸೂರು: ಗದಗ–ಹೊಟಗಿ ವಿಭಾಗದ ನಡುವೆ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಕೆಳಕಂಡ ರೈಲು ಸೇವೆಗಳು ಭಾಗಶಃ ರದ್ದುಪಡಿಸಲಾಗಿದೆ ಹಾಗೂ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ, ವಿವರಗಳು ಕೆಳಗಿನಂತಿವೆ:
ಭಾಗಶಃ ರದ್ದುಪಡಿಸಲಾದ ರೈಲುಗಳು
ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ರೈಲು 19 ಮಾರ್ಚ್ ರಿಂದ 24 ಮಾರ್ಚ್ 2026ರವರೆಗೆ ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು ಈ ರೈಲು ಬಾಗಲಕೋಟೆವರೆಗೆ ಮಾತ್ರ ಸಂಚರಿಸಲಿದೆ.
ರೈಲು ಸಂಖ್ಯೆ 17377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು 20 ಮಾರ್ಚ್ ರಿಂದ 25 ಮಾರ್ಚ್ 2026ರವರೆಗೆ ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ವಿಜಯಪುರ ಬದಲು ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
ರೈಲು ಸಂಖ್ಯೆ 16547 ಯಶವಂತಪುರ – ವಿಜಯಪುರ ಎಕ್ಸ್‌ಪ್ರೆಸ್ ರೈಲು 23 ಮತ್ತು 24 ಮಾರ್ಚ್ 2026 ರಂದು ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು ಈ ರೈಲು ಬಾಗಲಕೋಟೆವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 16548 ವಿಜಯಪುರ – ಯಶವಂತಪುರ ಎಕ್ಸ್‌ಪ್ರೆಸ್ ರೈಲು 24 ಮತ್ತು 25 ಮಾರ್ಚ್ 2026 ರಂದು ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು, ವಿಜಯಪುರ ಬದಲು ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟೆ ಎಕ್ಸ್‌ಪ್ರೆಸ್ ರೈಲು 23 ಮತ್ತು 24 ಮಾರ್ಚ್ 2026 ರಂದು ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು ಈ ರೈಲು ವಿಜಯಪುರವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಎಕ್ಸ್‌ಪ್ರೆಸ್ ರೈಲು 24 ರಿಂದ 25 ಮಾರ್ಚ್ 2026ರವರೆಗೆ ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದ್ದು ಈ ರೈಲು ಬಾಗಲಕೋಟೆ ಬದಲಾಗಿ ವಿಜಯಪುರದಿಂದ ತನ್ನ ಪ್ರಯಾಣ ಆರಂಭಿಸಲಿದೆ.
ರೈಲುಗಳ ನಿಯಂತ್ರಣ
ರೈಲು ಸಂಖ್ಯೆ 16548 ವಿಜಯಪುರ – ಯಶವಂತಪುರ ಎಕ್ಸ್‌ಪ್ರೆಸ್ ರೈಲು 20 ಮಾರ್ಚ್ 2026 ರಂದು ಮಾರ್ಗಮಧ್ಯೆ 20 ನಿಮಿಷಗಳ ಕಾಲ ಹಾಗೂ 23 ಮಾರ್ಚ್ 2026 ರಂದು 40 ನಿಮಿಷಗಳ ಕಾಲ ವಿಳಂಬವಾಗಿ ಹೊರಡಲಿದೆ.
ಬೆಂಗಳೂರಿನ ಆಗಸ ಮತ್ತಷ್ಟು ವಿಸ್ತಾರ: 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ದಿಟ್ಟ ಹೆಜ್ಜೆ!
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ ಭಾಗಶಃ ರದ್ದು ಗೊಂಡ ಈ ರೈಲು ಸಂಚಾರ ಪುನರಾರಂಭ








