ಬೆಂಗಳೂರು: ಬೆಂಗಳೂರು ದಂಡು ನಿಲ್ದಾಣದಲ್ಲಿ ಹಳಿ ನಿರ್ವಹಣಾ ಕಾಮಗಾರಿಯ ನಡೆಯುವುದರಿಂದ ಕೆಳಗಿನ ರೈಲು ಸೇವೆಯನ್ನು ಒಂದು ದಿನ 11ನೇ ಅಕ್ಟೋಬರ್ 2025 ರಂದು ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲು ಸಂಖ್ಯೆ 06243 ಮೈಸೂರು – ಕಾರೈಕುಡಿ ಎಕ್ಸ್ಪ್ರೆಸ್, 11.10.2025 ರಂದು ಮೈಸೂರಿನಿಂದ ಹೊರಡುವ ಈ ರೈಲು ಕೆಎಸ್ಆರ್ ಬೆಂಗಳೂರು – ಯಶವಂತಪುರ – ಲೊಟ್ಟೆಗೊಲ್ಲಹಳ್ಳಿ – ಬಾನಸವಾಡಿ – ಎಸ್ಎಂವಿಟಿ ಬೆಂಗಳೂರು – ಬೈಯ್ಯಪನಹಳ್ಳಿ – ಕೃಷ್ಣರಾಜಪುರಂ ಮಾರ್ಗವಾಗಿ ಸಂಚರಿಸಲಿದೆ.
ಈ ರೈಲು ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.
ರೈಲು ಸೇವೆಯ ಮಾರ್ಗ ಬದಲಾವಣೆ
ರೈಲು ಸಂಖ್ಯೆ 06281 ಮೈಸೂರು–ಅಜ್ಮೀರ್ ವಿಶೇಷ ಎಕ್ಸ್‌ಪ್ರೆಸ್, 11.10.2025 ರಂದು ಕರ್ಜಟ್ (ಮುಂಬೈ ವಿಭಾಗ) ನಿಲ್ದಾಣ ಹಾಗೂ ಯಾರ್ಡ್ ಪುನರ್‌ವ್ಯವಸ್ಥೆ ಕಾಮಗಾರಿಯಿಂದಾಗಿ ಮೀರಜ್ ಜಂ, ಪಂಢರಾಪುರ, ಕುರ್ಡುವಾಡಿ ಜಂ, ದೌಂಡ್ ಜಂ, ಅಹಮದ್‌ನಗರ ಜಂ, ಮನ್ಮಡ್ ಜಂ, ಜಲಗಾಂ ಜಂ, ನಂದರ್ಬರ್ ಹಾಗೂ ಸೂರತ್ ನಿಲ್ದಾಣಗಳ ಮೂಲಕ ಓಡಿಸಲಾಗುತ್ತದೆ ಎಂದು ಮಧ್ಯ ರೈಲ್ವೆ ತಿಳಿಸಿದೆ.
‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್
ಸುಪ್ರೀಂ ಕೋರ್ಟ್ ಸಿಜೆ ಬಿಆರ್ ಗವಾಯಿ ಮೇಲೆ ಶೋ ಎಸೆತ: ಸಾಗರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಖಂಡನೆ